
ಭಾರತಕ್ಕೆ ಬೇಕಿರುವ ಮೋಸ್ಟ್ ವಾಂಟೆಡ್ ಭಯೋತ್ಪಾದಕ ದಾವೂದ್ ಇಮ್ರಾಹಿಂ ಬಗ್ಗೆ ಅವರ ಸೋದರಳಿಯ ಅಲಿಶಾ ಪಾರ್ಕರ್ ರಾಷ್ಟ್ರೀಯ ತನಿಖಾ ಸಂಸ್ಥೆಯ ಮುಂದೆ ಹೇಳಿಕೆಯೊಂದನ್ನು ನೀಡಿದ್ದಾರೆ. ಅಲಿಶಾ ಪಾರ್ಕರ್ ದಾವೂದ್ ಇಬ್ರಾಹಿಂ ಸಹೋದರಿ ಹಸೀನಾ ಪರ್ಕರ್ ಅವರ ಪುತ್ರ. ದೇಶದಿಂದ ಪರಾರಿಯಾಗಿರುವ ಹಾಗೂ ಪಾಕ್‌ನಲ್ಲಿದ್ದಾನೆ ಎಂದು ಹೇಳಲಾದ ಭೂಗತ ಪಾತಕಿ ತನ್ನ ಮೊದಲ ಪತ್ನಿ ಮೈಜಾಬಿನ್ ಅವರನ್ನು ಮದುವೆಯಾಗಿರುವಾಗಲೇ ಪಾಕಿಸ್ತಾನಿ ಪಠಾಣ್ ಮಹಿಳೆಯನ್ನು ಮರುಮದುವೆ ಮಾಡಿಕೊಂಡಿದ್ದಾನೆ ಎಂದು ಹೇಳಿದ್ದಾರೆ .ದಾವೂದ್ ಇಬ್ರಾಹಿಂನ ಕುಟುಂಬ ವೃಕ್ಷದ ಬಗ್ಗೆ ಮಾಹಿತಿ ನೀಡಿದ ಅಲಿಶಾ ಪಾರ್ಕರ್, ಗ್ಯಾಂಗ್‌ಸ್ಟರ್ ದಾವೂದ್ ಇಬ್ರಾಹಿಂನ ಮೊದಲ ಪತ್ನಿ ವಾಟ್ಸಾಪ್ ಕಾಲ್‌ಗಳ ಮೂಲಕ ಜನರೊಂದಿಗೆ ಸಂಪರ್ಕದಲ್ಲಿರುತ್ತಾರೆ ಎಂದೂ ಹೇಳಿದರು.
ಭಯೋತ್ಪಾದಕ ನಿಧಿ ಪ್ರಕರಣದಲ್ಲಿ (Terrorism Funding Case) ಎನ್‌ಐಎ (NIA) ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ (Charge Sheet), ದಾವೂದ್‌ನ ಕುಟುಂಬ ವೃಕ್ಷವನ್ನು (Dawood Family Tree) ಅಲಿಶಾ ಪಾರ್ಕರ್ (Alisha Parkar) ತನ್ನ ಹೇಳಿಕೆಯಲ್ಲಿ ವಿವರಿಸಿದ್ದಾರೆ. ಅಲ್ಲದೆ, ಗ್ಯಾಂಗ್‌ಸ್ಟರ್ (Gangster) ಪಾಕಿಸ್ತಾನದ (Pakistan) ಕರಾಚಿಯಲ್ಲಿ (Karachi) ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸ್ಥಳಾಂತರವಾಗಿದ್ದಾನೆ ಎಂದೂ ಹೇಳಿದ್ದಾರೆ. ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ ದಾವೂದ್ ಇಬ್ರಾಹಿಂ ಮತ್ತು ಆತನ ಆಪ್ತ ಸಹಾಯಕರ ವಿರುದ್ಧ ಎನ್‌ಐಎ ಪ್ರಕರಣ ದಾಖಲಿಸಿದ್ದು, ಈ ಪೈಕಿ ಕೆಲವರನ್ನು ಬಂಧಿಸಿತ್ತು.
ಇದನ್ನು ಓದಿ: ಪ್ರಧಾನಿ ಮೋದಿ ಹತ್ಯೆಗೆ ಸ್ಕೆಚ್, ದಾವುದ್ ಹೆಸರಿನಲ್ಲಿ ಪೊಲೀಸರಿಗೆ ಬಂತು ಆಡಿಯೋ ಕ್ಲಿಪ್ ಬೆದರಿಕೆ!
ಭಾರತದ ದೊಡ್ಡ ನಾಯಕರು ಮತ್ತು ಉದ್ಯಮಿಗಳ ಮೇಲೆ ದಾಳಿ ನಡೆಸಲು ದಾವೂದ್ ಇಬ್ರಾಹಿಂ ವಿಶೇಷ ತಂಡವನ್ನು ರಚಿಸುತ್ತಿದ್ದಾನೆ, ಹಾಗೂ ದೊಡ್ಡ ನಗರಗಳಲ್ಲಿ ಹಿಂಸೆ ಸೃಷ್ಟಿಸಬಹುದು ಎಂದೂ ಎನ್ಐಎಗೆ ಮಾಹಿತಿ ಸಿಕ್ಕಿತ್ತು. ಈ ಪ್ರಕರಣದ ತನಿಖೆಯ ವೇಳೆ ದಾವೂದ್ ಇಬ್ರಾಹಿಂ ಸಹೋದರಿ ಹಸೀನಾ ಪರ್ಕರ್ ಅವರ ಪುತ್ರ ಅಲಿಶಾ ಪಾರ್ಕರ್ ಹೇಳಿಕೆಯನ್ನು ಎನ್ಐಎ ದಾಖಲಿಸಿಕೊಂಡಿದೆ.
ಅಲಿಶಾ ಪಾರ್ಕರ್ ಹೇಳಿಕೆಯ ಪ್ರಕಾರ, ದಾವೂದ್‌ಗೆ ನಾಲ್ಕು ಸಹೋದರರು ಮತ್ತು ನಾಲ್ಕು ಸಹೋದರಿಯರಿದ್ದಾರೆ. ದಾವೂದ್ ಇಬ್ರಾಹಿಂ ಮರುಮದುವೆಯಾಗಿದ್ದು, ಆತನ ಎರಡನೇ ಪತ್ನಿ ಪಾಕಿಸ್ತಾನಿ ಪಠಾಣ್ ಎಂದು ಅಲಿಶಾ ತನಿಖೆಯ ವೇಳೆ ಎನ್ಐಎಗೆ ತಿಳಿಸಿದ್ದಾರೆ. ಅಲ್ಲದೆ, ದಾವೂದ್ ಇಬ್ರಾಹಿಂ ಎರಡನೇ ಮದುವೆಯಾಗಲು ತನ್ನ ಮೊದಲ ಪತ್ನಿ ಮೈಜಾಬಿನ್‌ಗೆ ವಿಚ್ಛೇದನ ನೀಡಿದ್ದಾರೆ ಎಂದು ಜನರಿಗೆ ಹೇಳುತ್ತಿದ್ದರೂ, ಇದು ನಿಜವಲ್ಲ. ಇದಲ್ಲದೇ ದಾವೂದ್ ಇಬ್ರಾಹಿಂ ವಿಳಾಸ ಬದಲಾಗಿದೆ. ಈಗ ಕರಾಚಿಯ ಅಬ್ದುಲ್ಲಾ ಗಾಜಿ ಬಾಬಾ ದರ್ಗಾದ ಹಿಂದೆ ರಹೀಮ್ ಫಕಿ ಬಳಿಯ ರಕ್ಷಣಾ ಪ್ರದೇಶದಲ್ಲಿ ವಾಸಿಸುತ್ತಿದ್ದಾನೆ ಎಂದೂ ಅಲಿಶಾ ಪಾರ್ಕರ್ ಹೇಳಿದ್ದಾನೆ.
ಇದನ್ನೂ ಓದಿ: ಭಾರತದ ವಿರುದ್ಧ ರೆಡಿಯಾಗಿದೆ ನಿಗೂಢ ವ್ಯೂಹ: ಚೀನಾ-ಪಾಕಿಸ್ತಾನ ಸೃಷ್ಟಿಸುತ್ತಿವೆ ವೈರಸ್ ಬಾಂಬ್!
.
ತಾನು ದಾವೂದ್ ಇಬ್ರಾಹಿಂನ ಪತ್ನಿ ಮೈಜಾಬಿನ್ ಅವರನ್ನು ಕೆಲವು ತಿಂಗಳ ಹಿಂದೆ ಜುಲೈ 2022 ರಲ್ಲಿ ದುಬೈನಲ್ಲಿ ಭೇಟಿಯಾಗಿದ್ದೆ ಎಂದೂ ಅಲಿಶಾ ಪಾರ್ಕರ್ ಹೇಳಿದ್ದಾನೆ. ದುಬೈನಲ್ಲಿರುವ ಜೈತೂನ್ ಹಮೀದ್ ಅಂತುಲೆ ಎಂಬುವವರ ಮನೆಯಲ್ಲಿ ಅವರು ತಂಗಿದ್ದರು ಎಂದೂ ಹೇಳಲಾಗಿದೆ. ದಾವೂದ್ ಪತ್ನಿ ಮೈಜಾಬಿನ್ ಹಬ್ಬ ಹರಿದಿನಗಳಲ್ಲೂ ನನ್ನ ಪತ್ನಿಗೆ ಕರೆ ಮಾಡುತ್ತಾರೆ, ವಾಟ್ಸಾಪ್ ಕರೆಗಳ ಮೂಲಕ ನನ್ನ ಪತ್ನಿಯೊಂದಿಗೆ ಮಾತನಾಡುತ್ತಾಳೆ ಎಂದೂ ಅಲಿಶಾ ಪಾರ್ಕರ್ ಹೇಳಿದ್ದಾರೆ.
ಪ್ರಸ್ತುತ ದಾವೂದ್ ಇಬ್ರಾಹಿಂ ಕಸ್ಕರ್, ಹಾಜಿ ಅನೀಸ್ ಅಲಿಯಾಸ್ ಅನೀಸ್ ಇಬ್ರಾಹಿಂ ಶೇಖ್ ಮತ್ತು ಮುಮ್ತಾಜ್ ರಹೀಮ್ ಫಕಿ ತಮ್ಮ ಕುಟುಂಬಗಳೊಂದಿಗೆ ಪಾಕಿಸ್ತಾನದ ಕರಾಚಿಯ ಡಿಫೆನ್ಸ್ ಕಾಲೋನಿಯಲ್ಲಿರುವ ಅಬ್ದುಲ್ಲಾ ಘಾಜಿ ಬಾಬಾ ದರ್ಗಾದ ಹಿಂದೆ ವಾಸಿಸುತ್ತಿದ್ದಾರೆ. ಹಾಗೂ, ದಾವೂದ್ ಇಬ್ರಾಹಿಂ ಯಾರೊಂದಿಗೂ ಸಂಪರ್ಕದಲ್ಲಿರುವುದಿಲ್ಲ ಎಂದೂ ಅಲಿಶಾ ಪಾರ್ಕರ್ ಹೇಳಿದ್ದಾರೆ.
ಇದನ್ನೂ ಓದಿ: Dawood ಕುರಿತ ಪ್ರಶ್ನೆಗೆ ಪಾಕ್ ತನಿಖಾ ಸಂಸ್ಥೆ ಮುಖ್ಯಸ್ಥ ತಬ್ಬಿಬ್ಬು: ಉತ್ತರ ನೀಡದೆ ಜಾರಿಕೊಂಡ ಮೊಹ್ಸೀನ್ ಬಟ್
ಎನ್‌ಐಎಗೆ ನೀಡಿದ ಹೇಳಿಕೆಯ ಪ್ರಕಾರ, ದಾವೂದ್ ಇಬ್ರಾಹಿಂ ಕಸ್ಕರ್ ಅವರ ಪತ್ನಿಯ ಹೆಸರು ಮೈಜಾಬಿನ್ ಮತ್ತು ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಒಬ್ಬರ ಹೆಸರು ಮಾರುಖ್ (ಜಾವೇದ್ ಮಿಯಾಂದಾದ್ ಅವರ ಮಗ ಜುನೈದ್ ಅವರನ್ನು ವಿವಾಹವಾದರು), ಇನ್ನೊಬ್ಬರು ಮೆಹ್ರಿನ್, ಮೂರನೆಯವರು ಮಜಿಯಾ (ಅವಿವಾಹಿತರು) ಮತ್ತು ಮಗ ಮೊಹಿನ್ ನವಾಜ್. ದಾವೂದ್ ಇಬ್ರಾಹಿಂನ ಎರಡನೇ ಪತ್ನಿ ಪಾಕಿಸ್ತಾನಿ ಪಠಾಣ್. "ದಾವೂದ್ ಇಬ್ರಾಹಿಂ ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡಿರುವುದನ್ನು ತೋರಿಸುತ್ತಾರೆ, ಆದರೆ ಅದು ತಪ್ಪು" ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ