ಭಿಕ್ಷೆ ಬೇಡುವುದು, ವಿದೇಶಿ ಸಾಲ ಕೇಳುವುದು ನಾಚಿಕೆಗೇಡಿನ ಸಂಗತಿ: ಪಾಕ್‌ ಪ್ರಧಾನಿ; ನಿಜವಾದ ಮೋದಿ ಭವಿಷ್ಯ..!

By BK Ashwin  |  First Published Jan 17, 2023, 1:39 PM IST

ಪಾಕಿಸ್ತಾನದ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ವಿದೇಶಿ ಸಾಲಗಳನ್ನು ಹುಡುಕುವುದು ಸರಿಯಾದ ಪರಿಹಾರವಲ್ಲ. ಏಕೆಂದರೆ ಸಾಲವನ್ನು ಅಂತಿಮವಾಗಿ ಹಿಂತಿರುಗಿಸಬೇಕಾಗುತ್ತದೆ ಎಂದು ಶೆಹಬಾಜ್‌ ಷರೀಫ್‌ ಹೇಳಿದರು. 


ಲಾಹೋರ್ (ಜನವರಿ 17, 2023): ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿಯು ತೀವ್ರ ಹದಗೆಟ್ಟಿದೆ. ಈ ಬಗ್ಗೆ ಸ್ವತ: ಪಾಕ್‌ ಪ್ರಧಾನ ಮಂತ್ರಿ ಪ್ರತಿಕ್ರಿಯೆ ನೀಡಿದ್ದು, ಪರಮಾಣು ಶಕ್ತಿಯಾಗಿರುವ ದೇಶವು ಭಿಕ್ಷೆ ಬೇಡುವುದು ಮತ್ತು ಹಣಕಾಸಿನ ನೆರವು ಪಡೆಯುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಹೇಳಿದ್ದಾರೆ. ಸ್ನೇಹಪರ ದೇಶಗಳಿಂದ ಹೆಚ್ಚಿನ ಸಾಲವನ್ನು ಕೇಳುವುದು ನನಗೆ ಮುಜುಗರದ ಸಂಗತಿ ಎಂದು ಶೆಹಬಾಜ್‌ ಷರೀಫ್‌ ಹೇಳಿದ್ದು, ನಗದು ಕೊರತೆಯ ದೇಶದ ಆರ್ಥಿಕ ಬಿಕ್ಕಟ್ಟಿಗೆ ಇದು ಶಾಶ್ವತ ಪರಿಹಾರವಲ್ಲ ಎಂದೂ ಹೇಳಿಕೊಂಡಿದ್ದಾರೆ. ಶನಿವಾರ ಪಂಜಾಬ್ ಪ್ರಾಂತ್ಯದ ರಾಜಧಾನಿ ಲಾಹೋರ್‌ನಲ್ಲಿ ಪಾಕಿಸ್ತಾನ ಆಡಳಿತ ಸೇವೆಯ (ಪಿಎಎಸ್) ಪ್ರೊಬೇಷನರಿ ಅಧಿಕಾರಿಗಳ ಪಾಸಿಂಗ್ ಔಟ್ ಸಮಾರಂಭವನ್ನು ಉದ್ದೇಶಿಸಿ ಅವರು ಈ ಹೇಳಿಕೆ ನೀಡಿದ್ದಾರೆ.

ಕಳೆದ 75 ವರ್ಷಗಳಲ್ಲಿ, ರಾಜಕೀಯ ನಾಯಕತ್ವ ಅಥವಾ ಮಿಲಿಟರಿ ಸರ್ವಾಧಿಕಾರಿಗಳ ನೇತೃತ್ವದ ವಿವಿಧ ಸರ್ಕಾರಗಳು (Government) ಆರ್ಥಿಕ ಸವಾಲುಗಳನ್ನು (Economic Challenges) ಎದುರಿಸಲು ಸಾಧ್ಯವಾಗದಿರುವುದು ನಿಜಕ್ಕೂ ವಿಷಾದನೀಯ ಎಂದು ಪಾಕಿಸ್ತಾನದ ಪ್ರಧಾನಿ (Pakistan Prime Minister) ಹೇಳಿದ್ದಾರೆ ಎಂದು ಪಾಕ್‌ ಮೂಲದ ಜಿಯೋ ನ್ಯೂಸ್ ವರದಿ ಮಾಡಿದೆ. ಅಲ್ಲದೆ, ಪಾಕಿಸ್ತಾನದ (Pakistan) ಆರ್ಥಿಕ ಸಮಸ್ಯೆಗಳನ್ನು (Economic Problems) ಪರಿಹರಿಸಲು ವಿದೇಶಿ ಸಾಲಗಳನ್ನು ಹುಡುಕುವುದು ಸರಿಯಾದ ಪರಿಹಾರವಲ್ಲ. ಏಕೆಂದರೆ ಸಾಲವನ್ನು (Loan) ಅಂತಿಮವಾಗಿ ಹಿಂತಿರುಗಿಸಬೇಕಾಗುತ್ತದೆ ಎಂದೂ ಅವರು ಹೇಳಿದರು. 

Tap to resize

Latest Videos

ಇದನ್ನು ಓದಿ: ನಾವು ಪಾಠ ಕಲಿತಿದ್ದೇವೆ: ಪ್ರಧಾನಿ ಮೋದಿ ಜತೆ ಪ್ರಾಮಾಣಿಕ ಮಾತುಕತೆ ನಡೆಸಬೇಕು ಎಂದ ಪಾಕ್‌ ಪಿಎಂ ಶೆಹಬಾಜ್‌..!

ಪ್ರಸ್ತುತ ಹಣಕಾಸು ವರ್ಷದ (2022 - 23) ಮೊದಲ ನಾಲ್ಕು ತಿಂಗಳಲ್ಲಿ (ಜುಲೈ-ಅಕ್ಟೋಬರ್) ಹಣದುಬ್ಬರವು ಶೇಕಡಾ 21-23 ರ ನಡುವೆ ಇದ್ದು ಮತ್ತು ದೇಶದ ವಿತ್ತೀಯ ಕೊರತೆಯು ಶೇಕಡಾ 115 ಕ್ಕಿಂತ ಹೆಚ್ಚು ಏರಿಕೆಯಾಗುವ ಮುನ್ಸೂಚನೆ ಇದೆ. ಈ ಹಿನ್ನೆಲೆ ಪಾಕಿಸ್ತಾನವು ತನ್ನ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಪಿಟಿಐ ವರದಿ ಮಾಡಿದೆ. 350 ಶತಕೋಟಿ ಆರ್ಥಿಕತೆಯನ್ನು ಹೊಂದಿರುವ ದೇಶವು ಮುಖ್ಯವಾಗಿ ಎರಡು ಪ್ರಮುಖ ರಾಷ್ಟ್ರಗಳಾದ ಸೌದಿ ಅರೇಬಿಯಾ ಮತ್ತು ಯುಎಇಯಿಂದ ಹಣಕಾಸಿನ ನೆರವು ಪಡೆಯುತ್ತಿದೆ.
ಕಳೆದ ವಾರ, ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅವರು ಶೆಹಬಾಜ್‌ ಷರೀಫ್ ಅವರು ಯುಎಇಗೆ ಭೇಟಿ ನೀಡಿದ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಮತ್ತೆ 1 ಶತಕೋಟಿ ಅಮೆರಿಕ ಡಾಲರ್‌ ಸಾಲವನ್ನು ನೀಡುವುದಾಗಿ ಘೋಷಿಸಿದ್ದರು. 

ರಾಜಕೀಯ ಬಿಕ್ಕಟ್ಟು, ಕುಸಿಯುತ್ತಿರುವ ರೂಪಾಯಿ ಮೌಲ್ಯ, ಹಣದುಬ್ಬರ, ಜಾಗತಿಕ ಇಂಧನ ಬಿಕ್ಕಟ್ಟು, ಕಳೆದ ವರ್ಷದ ವಿನಾಶಕಾರಿ ಪ್ರವಾಹ ಸೇರಿದಂತೆ ಹಲವಾರು ಅಂಶಗಳು ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ.

ಇದನ್ನೂ ಓದಿ: ಪಾಕ್‌ನಲ್ಲಿ ಆಹಾರಕ್ಕೆ ತೀವ್ರ ಹಾಹಾಕಾರ: ಗನ್‌ ಹಿಡಿದು ಸರ್ಕಾರದಿಂದ ಆಹಾರ ವಿತರಣೆ

ನಿಜವಾಯ್ತು ಮೋದಿ ಭವಿಷ್ಯ..!
ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ 2019 ರ ಲೋಕಸಭೆ ಚುನಾವಣೆಯ ಪ್ರಚಾರದ ವೇಳೆ ಪ್ರಧಾನಿ ಮೋದಿ ಮಾತನಾಡಿರುವ ವಿಡಿಯೋವೊಂದು ವೈರಲ್‌ ಆಗುತ್ತಿದೆ. ನಾವು ಪಾಕಿಸ್ತಾನದ ದುರಹಂಕಾರವನ್ನು ನಾಶಪಡಿಸಿದ್ದೇವೆ, ಅವರನ್ನು ಭಿಕ್ಷಾಟನೆಯ ಬಟ್ಟಲಿನೊಂದಿಗೆ ಜಗತ್ತಿನಾದ್ಯಂತ ಸುತ್ತುವಂತೆ ಮಾಡಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದರು.

رجیم چینج کے سہولت کارو۔
سنو انڈیا کا مودی پاکستان کے بارے میں کیا کہہ رہا ہے؟ اگر غیرت نام کی کوئ چیز تم میں نہیں تو شرم تو کرو؟ پاکستان کے لوگو: اس لئے اپنے اس ملک کو بچانے کا واحد راستہ عمران خان کے سنگ حقیقی آزادی ہے. pic.twitter.com/yvRIsoTKPf

— Senator Azam Khan Swati (@AzamKhanSwatiPk)

ಅಲ್ಲದೆ, ಪಾಕಿಸ್ತಾನದ ಪರಮಾಣು ದಾಳಿಯ ಬೆದರಿಕೆಗಳನ್ನು ಉಲ್ಲೇಖಿಸಿದ್ದ ಅವರು, "ನಾವು ಪಾಕಿಸ್ತಾನದ ಬೆದರಿಕೆಗಳಿಗೆ ಹೆದರುವುದನ್ನು ನಿಲ್ಲಿಸಿದ್ದೇವೆ ಎಂದೂ ಹೇಳಿದ್ದರು. ಪಾಕಿಸ್ತಾನದಲ್ಲಿ ಪ್ರಸ್ತುತ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಪ್ರಸ್ತುತ ಸರ್ಕಾರದ ಮೇಲೆ ದಾಳಿ ನಡೆಸಲು ಇಮ್ರಾನ್‌ ಖಾನ್‌ ನೇತೃತ್ವದ ಪಿಟಿಐ ಪಕ್ಷದ ಬೆಂಬಲಿಗರು ವಿಡಿಯೋವನ್ನು ಶೇರ್‌ ಮಾಡುತ್ತಿದ್ದಾರೆ. ಇಮ್ರಾನ್ ಖಾನ್ ಅವರು ಅಧಿಕಾರದಲ್ಲಿದ್ದಾಗ ಪ್ರಧಾನಿ ಮೋದಿ ಈ ಹೇಳಿಕೆ ನೀಡಿದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳದೆ ಅವರೇ ಶೇರ್‌ ಮಾಡಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಅವಿಶ್ವಾಸ ನಿರ್ಣಯದ ನಂತರ ಇಮ್ರಾನ್‌ ಖಾನ್ ಅವರನ್ನು ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸಲಾಗಿತ್ತು.

ಇದನ್ನೂ ಓದಿ: ಪಾಕ್‌ನಲ್ಲಿ 1 ಕೆಜಿಗೆ ಗೋಧಿಹಿಟ್ಟಿಗೆ 1500 ರುಪಾಯಿ: ಅಗ್ಗದ ಗೋಧಿಹಿಟ್ಟು ವಿತರಣೆ ವೇಳೆ ಕಾಲ್ತುಳಿತಕ್ಕೆ ನಾಲ್ವರ ಬಲಿ

click me!