ಅಮೆರಿಕಾಗೆ ಕಾಡ್ತಿದ್ಯಾ 'ವಿಯೆಟ್ನಾಂ ಸಿಂಡ್ರೋಮ್'? ಪ್ರತಿದಿನ 2 ಬಿಲಿಯನ್ ಡಾಲರ್ ಉಡೀಸ್, ದೊಡ್ಡಣ್ಣ ಜೇಬಿಗೇ ಕನ್ನ!

ಅಮೆರಿಕಾಗೆ ಕಾಡ್ತಿದ್ಯಾ 'ವಿಯೆಟ್ನಾಂ ಸಿಂಡ್ರೋಮ್'? ಪ್ರತಿದಿನ 2 ಬಿಲಿಯನ್ ಡಾಲರ್ ಉಡೀಸ್, ದೊಡ್ಡಣ್ಣ ಜೇಬಿಗೇ ಕನ್ನ!

Published : Mar 19, 2026, 11:23 PM IST

ಮಧ್ಯಪ್ರಾಚ್ಯದಲ್ಲಿ ಅಮೆರಿಕಾದ 'ಬಂಕರ್ ಬಸ್ಟರ್' ದಾಳಿಗೆ ಪ್ರತಿಯಾಗಿ, ಇರಾನ್ ಅಮೆರಿಕಾದ ಕರಾಳ ಇತಿಹಾಸವಾದ 'ವಿಯೆಟ್ನಾಂ ಯುದ್ಧ'ವನ್ನು ನೆನಪಿಸಿ ಎಚ್ಚರಿಕೆ ನೀಡಿದೆ. ಈ ದುಬಾರಿ ಯುದ್ಧವು ಅಮೆರಿಕಾವನ್ನು ವಿಯೆಟ್ನಾಂನಂತಹ ಮತ್ತೊಂದು ಸುಳಿಯಲ್ಲಿ ಸಿಲುಕಿಸುತ್ತಿದೆಯೇ ಎಂಬ ಆತಂಕ ಮನೆಮಾಡಿದೆ.

ಬೆಂಗಳೂರು (ಮಾ.19): ಮಧ್ಯಪ್ರಾಚ್ಯದಲ್ಲಿ ಅಮೆರಿಕಾ ತನ್ನ 'ಬಂಕರ್ ಬಸ್ಟರ್' ಕ್ಷಿಪಣಿಗಳ ಮೂಲಕ ಇರಾನ್ ಕೋಟೆಯನ್ನು ಧ್ವಂಸ ಮಾಡುತ್ತಿದ್ದರೆ, ಅತ್ತ ಇರಾನ್ ಮಾತ್ರ ಅಮೆರಿಕಾಗೆ ಅದರ ಕರಾಳ ಇತಿಹಾಸವಾದ 'ವಿಯೆಟ್ನಾಂ ವಾರ್' ನೆನಪಿಸಿ ಎಚ್ಚರಿಕೆ ನೀಡಿದೆ.

ಅಮೆರಿಕಾದ F-35 ಯುದ್ಧ ವಿಮಾನಕ್ಕೂ ಹೊಡೆಯಿತಾ ಇರಾನ್: ಅಮೆರಿಕಾ ಹೇಳಿದ್ದೇನು?

ಒಂದೇ ರಾತ್ರಿಯಲ್ಲಿ 300ಕ್ಕೂ ಹೆಚ್ಚು ಸೈನಿಕರ ಸಾವು ಹಾಗೂ ಭೂಗತ ಕ್ಷಿಪಣಿ ತಾಣಗಳ ನಾಶದಿಂದ ಇರಾನ್ ಬೆನ್ನೆಲುಬು ಮುರಿದಿದ್ದರೂ, ಖಮೇನಿ ಪಡೆಯ ಹಠ ಮಾತ್ರ ಕಡಿಮೆಯಾಗಿಲ್ಲ. ಅಮೆರಿಕಾ ಪ್ರತಿದಿನ ಬರೋಬ್ಬರಿ 2 ಬಿಲಿಯನ್ ಡಾಲರ್ ಹಣವನ್ನು ಈ ಯುದ್ಧಕ್ಕಾಗಿ ಸುರಿಯುತ್ತಿದ್ದು, ಇದು ಅಮೆರಿಕಾದ ಆರ್ಥಿಕತೆಗೆ ದೊಡ್ಡ ಹೊಡೆತ ನೀಡುತ್ತಿದೆ. ಹಾರ್ಮುಜ್ ಜಲಸಂಧಿಯನ್ನು ವಶಪಡಿಸಿಕೊಳ್ಳುವ ಟ್ರಂಪ್ ಅವರ 'ಬಿಗ್ ಪ್ಲಾನ್' ನಡುವೆಯೇ, ಇರಾನ್ ಕೆದಕಿರುವ ವಿಯೆಟ್ನಾಂ ಯುದ್ಧದ ನೆನಪು ವೈಟ್ ಹೌಸ್‌ನಲ್ಲಿ ನಡುಕ ಹುಟ್ಟಿಸಿದೆ.

ಅಂದು ವಿಯೆಟ್ನಾಂನಲ್ಲಿ ಸೋತು ಸುಣ್ಣವಾಗಿದ್ದ ಅಮೆರಿಕಾ, ಇಂದು ಇರಾನ್ ನೆಲದಲ್ಲಿ ಅಂತಹದ್ದೇ ಸುಳಿಗೆ ಸಿಲುಕುತ್ತಿದೆಯೇ ಎಂಬ ಅನುಮಾನ ಮೂಡಿದೆ. ಈ ಮಹಾಯುದ್ಧವು ಅಮೆರಿಕಾದ ಅಂತ್ಯಕ್ಕೆ ಮುನ್ನುಡಿ ಬರೆಯಲಿದೆಯೇ ಅಥವಾ ಮಧ್ಯಪ್ರಾಚ್ಯದ ಭೂಪಟವನ್ನೇ ಬದಲಿಸಲಿದೆಯೇ ಎಂಬುದು ಸದ್ಯದ ಕುತೂಹಲ.

 

26:13Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
19:46108 ದಿನಗಳ ಅಮೆರಿಕ ಇರಾನ್ ಯುದ್ಧ ಅಂತ್ಯ, ತೈಲ ಬೆಲೆ , ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಆಗುತ್ತಾ?
24:36ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ
24:26ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
21:11ಇರಾನ್ ಬತ್ತಳಿಕೆಯಲ್ಲಿ ಮತ್ತೊಂದು ಮಹಾ ಬ್ರಹ್ಮಾಸ್ತ್ರ: ಅಮೆರಿಕ‌ ಮಾತ್ರವಲ್ಲ.. ಜಗತ್ತನ್ನೇ ಸೋಲಿಸುವ ಜಲಾಸ್ತ್ರ!
20:37ಬೆಂಕಿ ಹಚ್ಚಿದವರೇ.. ಆರಿಸೋಕೆ ಬರ್ತಾರೆ.. ಅಮೆರಿಕದ ಅಸಲಿ ಮುಖ! ಯುದ್ಧ ಬೂದಿಯಲ್ಲಿ ಚಿನ್ನ ಹುಡುಕುವ ತಂತ್ರ
22:5750 ದಿನಗಳಾದರೂ ನಡೆದಿಲ್ಲ ಅಲಿ ಖಮೇನಿ ಅಂತ್ಯಸಂಸ್ಕಾರ: ಶೋಕಾಚರಣೆ ಮುಗಿದರೂ ದಫನ್ ಮಾಡಿಲ್ಲ‌ವೇಕೆ?
26:11ಸೋಲದ ಸಿಂಹ ಇರಾನ್, ದಿಕ್ಕು ತಪ್ಪಿದ ದೊಡ್ಡಣ್ಣನ ಸೈನ್ಯ; ರಕ್ತಸಿಕ್ತ ಇತಿಹಾಸದ ಪುಟಗಳಲ್ಲಿದೆ ಅಮೆರಿಕದ ಘೋರ ವೈಫಲ್ಯ
46:03ಅಮೆರಿಕ ಅತ್ಯಾಧುನಿಕ ಯುದ್ಧ ವಿಮಾನಗಳೇ ಉಡೀಸ್; ಇರಾನ್ ಹೊಡೆತಕ್ಕೆ ಪತರಗುಟ್ಟಿದ ವಿಶ್ವದ ದೊಡ್ಡಣ್ಣ
Read more