90 ಸೆಕೆಂಡುಗಳ ಬದುಕು..ಇಸ್ರೇಲ್, ಇರಾನ್‌ ಜನರ ಅನುಕ್ಷಣದ ತಳಮಳ!

90 ಸೆಕೆಂಡುಗಳ ಬದುಕು..ಇಸ್ರೇಲ್, ಇರಾನ್‌ ಜನರ ಅನುಕ್ಷಣದ ತಳಮಳ!

Published : Mar 14, 2026, 10:04 PM IST

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್-ಇರಾನ್ ನಡುವಿನ ಸೇಡಿನ ಸಮರವು ಜಾಗತಿಕ ಆತಂಕಕ್ಕೆ ಕಾರಣವಾಗಿದೆ. ಕೋಟಿಗಟ್ಟಲೆ ಹಣವನ್ನು ಕ್ಷಿಪಣಿ ಮತ್ತು ಭದ್ರತೆಗೆ ಸುರಿಯಲಾಗುತ್ತಿದ್ದರೆ, ಸಾಮಾನ್ಯ ಜನರು ಹಸಿವು ಮತ್ತು ಆರ್ಥಿಕ ಸಂಕಷ್ಟದಿಂದ ನರಳುತ್ತಿದ್ದಾರೆ. 

ಬೆಂಗಳೂರು (ಮಾ.14): ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದಿರುವ ಯುದ್ಧದ ಜ್ವಾಲೆ ಇಡೀ ವಿಶ್ವವನ್ನೇ ಆತಂಕಕ್ಕೆ ತಳ್ಳಿದೆ. ಒಂದು ಕಡೆ ಇಸ್ರೇಲ್ ತನ್ನ 'ಐರನ್ ಡೋಮ್' ಎಂಬ ಭದ್ರಕೋಟೆಯ ನಡುವೆಯೂ ಪ್ರತಿಕ್ಷಣ ಸಾವಿನ ಭೀತಿಯಲ್ಲಿ ಬದುಕುತ್ತಿದ್ದರೆ, ಇನ್ನೊಂದೆಡೆ ಇರಾನ್ ಸರ್ಕಾರ ಮಿಸೈಲ್‌ಗಳಿಗಾಗಿ ಕೋಟಿ ಕೋಟಿ ಸುರಿಯುತ್ತಿದೆ.

ಅಲ್ಲಿನ ಸಾಮಾನ್ಯ ಜನರು ಹಸಿವು ಮತ್ತು ಆರ್ಥಿಕ ಸಂಕಷ್ಟದಿಂದ ಪಾರ್ಕಿಂಗ್ ಲಾಟ್‌ಗಳಲ್ಲಿ ಆಶ್ರಯ ಪಡೆಯುವಂತಾಗಿದೆ. ಪ್ರತೀಕಾರದ ಹೆಸರಿನಲ್ಲಿ ನಡೆಯುತ್ತಿರುವ ಈ ನರಮೇಧಕ್ಕೆ ಲೆಬನಾನ್‌ನಂತಹ ರಾಷ್ಟ್ರಗಳು ಚೇತರಿಸಿಕೊಳ್ಳುವ ಮುನ್ನವೇ ಮಣ್ಣಾಗುತ್ತಿವೆ.

ಹಾರ್ಮುಜ್‌ನಲ್ಲಿ ಭಾರತದ ಪವರ್: ಯಾವುದೇ ಬೆಂಗಾವಲು ಇಲ್ಲದೆ ಜಲಸಂಧಿ ದಾಟಿದ 'ಶಿವಾಲಿಕ್,ನಂದಾದೇವಿ'!

ಹಾರ್ಮುಜ್ ಜಲಸಂಧಿಯ ಮೇಲೆ ಉಂಟಾಗಿರುವ ದಿಗ್ಬಂಧನ ಬಡವರ ಬಾಳಿಗೆ ಸಮರಾಘಾತ ನೀಡಿದೆ. ಇಸ್ರೇಲಿನ ಕ್ರೋಧಾಗ್ನಿ ಮತ್ತು ಇರಾನ್‌ನ ಮಿಸೈಲ್ ಹಪಾಹಪಿಯ ನಡುವೆ ಸಿಲುಕಿರುವುದು ಅಮಾಯಕ ಜನರ ಆಕ್ರಂದನ ಮಾತ್ರ. ಈ ಸೇಡಿನ ಚಕ್ರವ್ಯೂಹ ಕೇವಲ ಗಡಿಗಳಿಗೆ ಸೀಮಿತವಾಗದೆ, ಜಾಗತಿಕ ಆರ್ಥಿಕತೆ ಮತ್ತು ಶಾಂತಿಯನ್ನೇ ನುಂಗಿ ಹಾಕುವ ಗಂಡಾಂತರ ಎದುರಾಗಿದೆ. ಕೋಟಿ ಕೋಟಿ ವೆಚ್ಚದ ಭದ್ರಕೋಟೆಗಳಿದ್ದರೂ ಸಾಮಾನ್ಯನ ಪಾಲಿಗೆ ಸಾವಿನ ಸೂತಕ ಮಾತ್ರ ನಿರಂತರವಾಗಿದೆ.

20:18ಮಾಯವಾಗಿದ್ದ ಮೊಜ್ತಬಾ ಖಮೇನಿ ದಿಢೀರ್ ಕಾರಿನಲ್ಲಿ ಪ್ರತ್ಯಕ್ಷವಾದ್ರಾ? ಯುದ್ಧದೊಳಗೆ ಬಿಗ್ ಟ್ವಿಸ್ಟ್
21:55ಚೆಲ್ಲಿದ ರಕ್ತ.. ಇರಾನ್ ಕೊನೆ ಆಟ? ಟ್ರಂಪ್ ಆಪ್ತಮಿತ್ರನ ಸಾವು.. ಶುರುವಾಯ್ತಾ ಇರಾನ್ ಕೊನೆ ಆಟ..?
42:55ಮುರಿದು ಬಿದ್ದ ಶಾಂತಿ ಒಪ್ಪಂದ, ಖಮೇನಿ ಅಂತ್ಯಕ್ರಿಯೆ ಮೊದಲೇ ಅಮೆರಿಕ ಇರಾನ್ ಯುದ್ಧ ಶುರು
23:38ಅಯತೊಲ್ಲಾ ಖಮೇನಿ ದೇಹಕ್ಕೆ 4 ತಿಂಗಳ ಸಂರಕ್ಷಣೆ; ಏನಿದು ಜೀವಂತ ಶವ ಎಂಬಾಮಿಂಗ್?​​
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
26:13Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
19:46108 ದಿನಗಳ ಅಮೆರಿಕ ಇರಾನ್ ಯುದ್ಧ ಅಂತ್ಯ, ತೈಲ ಬೆಲೆ , ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಆಗುತ್ತಾ?
24:36ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ
24:26ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
20:46ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
Read more