ಇಸ್ರೇಲ್ ಸೇನೆ ಹಮಾಸ್ ನಾಯಕ ಯಾಹ್ಯಾ ಸಿನ್ವರ್‌ನನ್ನು ಹತ್ಯೆಗೈದು, ಡಿಎನ್‌ಎ ಟೆಸ್ಟ್‌ಗಾಗಿ ಬೆರಳನ್ನು ಕತ್ತರಿಸಿ ತೆಗೆದುಕೊಂಡು ಹೋಗಿದೆ. ಸಿನ್ವರ್ ಕೊನೆ ಕ್ಷಣದ ವಿಡಿಯೋವನ್ನು ಇಸ್ರೇಲ್ ಬಿಡುಗಡೆ ಮಾಡಿದೆ.
ಜೆರುಸಲೇಂ: ಹಮಾಸ್ ವಿರುದ್ಧ ಯುದ್ಧದಲ್ಲಿ ಇಸ್ರೇಲ್ ಸೇನೆಗೆ ದೊಡ್ಡ ಜಯ ಸಿಕ್ಕಿದೆ ಎಂಬ ವರದಿಗಳು ಪ್ರಕಟವಾಗುತ್ತಿವೆ. ಹಮಾಸ್ ನಾಯಕ ಯಾಹ್ಯಾ ಸಿನ್ವರ್ ನನ್ನು ಹೊಡೆದುರುಳಿಸಿರುವ ಇಸ್ರೇನ್ ಸೇನೆ ಆತನ ಕೊನೆ ಕ್ಷಣದ ದೃಶ್ಯಗಳನ್ನು ಬಿಡುಗಡೆಗೊಳಿಸಿದೆ. ಯಾಹ್ಯಾ ಸಿನ್ವರ್ ಹತನಾಗಿರೋದನ್ನು ಹಮಾಸ್ ಸಹ ದೃಢಪಡಿಸಿದೆ. ಇದೀಗ ಇಸ್ರೇಲ್ ಸೈನಿಕರು, ಯಾಹ್ಯಾ ಸಿನ್ವರ್ ನ ಬೆರಳನ್ನು ಕತ್ತರಿಸಿ ತೆಗೆದುಕೊಂಡು ಹೋಗಿದೆ ಎಂದು ವರದಿಯಾಗಿದೆ. ಸಿಎನ್ಎನ್ ವರದಿ ಪ್ರಕಾರ, ಯಾಹ್ಯಾ ಸಿನ್ವರ್ ಸಾವನ್ನು ದೃಢಪಡಿಸುವ ಉದ್ದೇಶದಿಂದ ಸೈನಿಕರು ಬೆರಳು ಕತ್ತರಿಸಿ ಒಯ್ದಿದ್ದಾರೆ.
ಇಸ್ರೇಲ್ ಸೈನಿಕರಿಗೆ ಯಾಹ್ಯಾ ಸಿನ್ವರ್ ಇರೋ ಸ್ಥಳದ ಖಚಿತ ಮಾಹಿತಿ ಲಭ್ಯವಾಗುತ್ತಿದ್ದಂತೆ ದಾಳಿ ನಡೆಸಿದ್ದರು. ಕಟ್ಟಡದ ಮೇಲೆ ಗುಂಡಿನ ದಾಳಿ ನಡೆಸಿದ ಬಳಿಕ ಒಳ ಹೋದ ಇಸ್ರೇಲ್ ಸೈನಿಕರಿಗೆ ಯಾಹ್ಯಾ ಸಿನ್ವರ್ ಹೋಲುವ ವ್ಯಕ್ತಿಯ ಶವ ಪತ್ತೆಯಾಗಿದೆ. ಡಿಎನ್‌ಎ ಟೆಸ್ಟ್‌ಗೆ ಬೇಕಾಗಬಹುದು ಎಂದ ಬೆರಳನ್ನು ಕತ್ತರಿಸಿ ತೆಗೆದುಕೊಂಡು ಹೋಗಿದೆ. ಯಾಹ್ಯಾ ಸಿನ್ವರ್ ಸುಮಾರು 20 ವರ್ಷಗಳ ಕಾಲ ಯಾಹ್ಯಾ ಸಿನ್ವರ್ ಇಸ್ರೇಲ್ ಜೈಲಿನಲ್ಲಿದ್ದನು. ಹಾಗಾಗಿ ಇಸ್ರೇಲ್ ಬಳಿ ಯಾಹ್ಯಾ ಸಿನ್ವರ್ ನ ಡಿಎನ್‌ಎ ಪ್ರೊಫೈಲ್ ಹೊಂದಿದೆ. 2011ರಲ್ಲಿ ಕೈದಿಗಳ ಅದಲು-ಬದಲು ಪ್ರಕ್ರಿಯೆ ಸಂದರ್ಭದಲ್ಲಿ ಯಾಹ್ಯಾ ಸಿನ್ವರ್ ಬಿಡುಗಡೆಗೊಳಿಸಲಾಗಿತ್ತು.
undefined
ಸೈನಿಕರು ತಂದಿರುವ ಬೆರಳಿನ ಡಿಎನ್‌ಎ ಮತ್ತು ಯಾಹ್ಯಾ ಸಿನ್ವರ್‌ನ ಡಿಎನ್‌ಎ ಪ್ರೊಫೈಲ್‌ಗೆ ಹೊಂದಾಣಿಕೆಯಾಗಿದೆ ಎಂದು ಇಸ್ರೇಲ್ ನ್ಯಾಷನಲ್ ಸೆಂಟರ್ ಆಫ್ ಫೋರೆನ್ಸಿಕ್ ಮೆಡಿಸಿನ್‌ನ ಚೆನ್ ಕುಗೆಲ್ ಖಚಿತಪಡಿಸಿದೆ ಎಂದು ಸಿಎನ್‌ಎನ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಈ ವರದಿ ಬಳಿಕವೇ ಇಸ್ರೇಲ್, ಹಮಾಸ್ ನಾಯಕ ಯಾಹ್ಯಾ ಸಿನ್ವರ್ ಹತ್ಯೆಗೈಯ್ಯಲಾಗಿದೆ ಎಂದು ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿತ್ತು. ಸೈನಿಕರು ಮೊದಲು ಅವನ ಹಲ್ಲುಗಳಿಂದ ಯಾಹ್ಯಾ ಸಿನ್ವರ್‌ನ್ನು ಗುರುತಿಸಲು ಪ್ರಯತ್ನಿಸಿದರು. ಆದರೂ ಸಂಪೂರ್ಣ ಖಚಿತತೆ ಲಭ್ಯವಾಗದ ಹಿನ್ನೆಲೆ ಬೆರಳು ಕತ್ತರಿಸಿ ತೆಗೆದುಕೊಂಡು ಹೋಗಿದ್ದರು.
ಇರಾನ್ ವಿರುದ್ಧ ಪ್ರತೀಕಾರ ತೀರಿಸಲು ಮುಂದಾದ ಇಸ್ರೇಲ್‌ಗೆ ಅಮೆರಿಕದ ಥಾಡ್ ರಕ್ಷಣೆ
ಯಾಹ್ಯಾ ಸಿನ್ವರ್ ಕಟ್ಟಡದಲ್ಲಿ ಕುಳಿತಿದ್ದ ಕೊನೆ ಕ್ಷಣದ ವಿಡಿಯೋವನ್ನು ಇಸ್ರೇಲ್ ಬಿಡುಗಡೆಗೊಳಿಸಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆಯಲ್ಲಿ ತಲೆಗೆ ಗಂಡು ತಗುಲಿದ್ದರಿಂದ ಯಾಹ್ಯಾ ಸಿನ್ವರ್ ಸಾವಾಗಿದೆ. ಕಟ್ಟಡದ ಮೇಲೆ ಶೆಲ್ ದಾಳಿ ನಡೆಸಿದ್ದರಿಂದ ಸಿನ್ವರ್ ಮುಖದ ಮೇಲೆ ಗಾಯಗಳಾಗಿದ್ದವು. ತಲೆಬುರಡೆಯ ಒಂದು ಭಾಗ ಹಾರಿಹೋಗಿತ್ತು ಎಂದು ವರದಿಯಾಗಿದೆ.
ಸಿನ್ವರ್ ವೀರೋಚಿತ ಸಾವು: ಹಮಾಸ್ ಅಧಿಕೃತ ಘೋಷಣೆ
ತನ್ನ ನಾಯಕ ಯಾಹ್ಯಾ ಸಿನ್ವರ್ ಇಸ್ರೇಲ್ ದಾಳಿಯಲ್ಲಿ ಸತ್ತಿದ್ದಾನೆ ಎಂದು ಹಮಾಸ್ ಮುಖಂಡ ಖಲೀಲ್ ಅಲ್ ಯಾಹ್ಯಾ ಶುಕ್ರವಾರ ಖಚಿತಪಡಿಸಿದ್ದಾನೆ. 'ನಿನ್ನೆ ಸಿನ್ನರ್ ಹತ್ಯೆ ಆಗಿದೆ. ಆದರೆ ಗಾಜಾ ಮೇಲೆ ಇಸ್ರೇಲ್ ದಾಳಿ ನಿಲ್ಲಿಸುವವರೆಗೆ, ತನ್ನ ಪಡೆಗಳನ್ನು ಹಿಂಪಡೆವವರೆಗೆ ನಾವು ಇಸ್ರೇಲಿ ಒತ್ತೆಯಾಳುಗಳನ್ನು ಬಿಡಲ್ಲ' ಎಂದಿದ್ದಾನೆ. ಯಾಹ್ಯಾ ಸಿನ್ವರ್ ವೀರೋಚಿತ ಸಾವು ಎಂದು ಹಮಾಸ್ ಬಣ್ಣಿಸಿದೆ.