ರಂಜಾನ್ ಸಮಯದಲ್ಲೇ ಮಸೀದಿಯಲ್ಲಿ 13 ವರ್ಷದ ಬಾಲಕನ ಮೇಲೆ ಅತ್ಯಾಚಾರ

By Anusha Kb  |  First Published Apr 7, 2024, 11:09 AM IST

ಮುಸ್ಲಿಂ ಸಮುದಾಯ ಪವಿತ್ರ ಮಾಸ ರಂಜಾನ್ ಸಮಯದಲ್ಲೇ  ಪಾಕಿಸ್ತಾನ ಮಸೀದಿಯೊಂದರಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ನಮಾಜು ಮಾಡುವುದಕ್ಕಾಗಿ ಮಸೀದಿಗೆ ತೆರಳಿದ್ದ 13 ವರ್ಷದ ಬಾಲಕನ ಮೇಲೆ ಮಸೀದಿಯೊಳಗೆಯೇ ಅತ್ಯಾಚಾರ ನಡೆದಿದೆ.


ಮುಜಾಫರ್‌ಗರ್‌: ಮುಸ್ಲಿಂ ಸಮುದಾಯ ಪವಿತ್ರ ಮಾಸ ರಂಜಾನ್ ಸಮಯದಲ್ಲೇ  ಪಾಕಿಸ್ತಾನ ಮಸೀದಿಯೊಂದರಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ನಮಾಜು ಮಾಡುವುದಕ್ಕಾಗಿ ಮಸೀದಿಗೆ ತೆರಳಿದ್ದ 13 ವರ್ಷದ ಬಾಲಕನ ಮೇಲೆ ಮಸೀದಿಯೊಳಗೆಯೇ ಅತ್ಯಾಚಾರ ನಡೆದಿದೆ.  28 ವರ್ಷದ ಯುವಕನೋರ್ವ 13 ವರ್ಷದ ಬಾಲಕನ ಮೇಲೆ ಅತ್ಯಾಚಾರವೆಸಗಿದ್ದಾನೆ. ರಂಜಾನ್ ಜಗತ್ತಿನೆಲ್ಲೆಡೆ ಇರುವ ಮುಸಲ್ಮಾನರಿಗೆ ಪವಿತ್ರ ಮಾಸವಾಗಿದ್ದು, ಈ ಸಮಯದಲ್ಲಿ ಯಾವುದೇ ತಪ್ಪು , ಪಾಪಕಾರ್ಯ ಕೆಟ್ಟ ಕೆಲಸಗಳನ್ನು ಮಾಡುವುದಕ್ಕೆ ಯಾವುದೇ ಮುಸ್ಲಿಂ ವ್ಯಕ್ತಿ ಬಯಸುವುದಿಲ್ಲ, ಹೀಗಿರುವಾಗ ಇದೇ ಮಾಸದಲ್ಲಿ ಪಾಕಿಸ್ತಾನದಲ್ಲಿ ಈ ರೀತಿಯ ಅಮಾನವೀಯ ಘಟನೆ ನಡೆದಿದೆ. 

ಪಾಕಿಸ್ತಾನದ ಮುಜಾಫರ್‌ಗರ್‌ನಲ್ಲಿರುವ ಕೊಟ್ ಅದ್ದುಸ್ ಸಿಟಿಯ ಸನವಾನ್ ಬುಕಿ ಚೌಕ್‌ನಲ್ಲಿರುವ ಮಸೀದಿಯೊಂದರಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತ ಬಾಲಕ ಇತಿಕಾಫ್ ಆಚರಣೆ ಮಾಡುತ್ತಿದ್ದು,  ಜೊತೆಗೆ ಇದೇ ಮಸೀದಿಯಲ್ಲೇ ಇದ್ದು, ಕುರಾನ್ ಅಧ್ಯಯನದಲ್ಲಿ ತೊಡಗಿದ್ದ, ಮಸೀದಿಯೊಳಗೆಯೇ ಘಟನೆ ನಡೆದಿದ್ದು, 28 ವರ್ಷದ ಕಾಮುಕನ ಕೃತ್ಯ ಮಸೀದಿಯ ಮೌಲ್ವಿ ಕಣ್ಣಿಗೆ ಬಿದ್ದಿದ್ದು, ತನ್ನ ಈ ಪಾಪಕೃತ್ಯಕ್ಕೆ ಕಠಿಣ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮೌಲ್ವಿ ಹೇಳುತ್ತಿದ್ದಂತೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. 

Latest Videos

undefined

ಪಾಕ್‌ನಲ್ಲಿ ಉಗ್ರರ ಹತ್ಯೆಗೆ ಆದೇಶಿಸಿತ್ತಾ ಕೇಂದ್ರ ಸರ್ಕಾರ ? ಇದರ ಹಿಂದಿದೆ ಮೋದಿ ಸರ್ಕಾರ ಎಂದ UK ಪತ್ರಿಕೆ!

ಆದರೆ ನಂತರ ಮಸೀದಿ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದು, ಇದಾದ ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಸಂತ್ರಸ್ತ ಬಾಲಕನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಪೊಲೀಸರು ವರದಿಗಾಗಿ ಕಾಯುತ್ತಿದ್ದು, ವರದಿಯ ನಂತರ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. 

ಇತಿಕಾಫ್ ಎಂಬುದು ರಂಜಾನ್ ತಿಂಗಳಲ್ಲಿ ಆಚರಿಸಲಾಗುವ ಪವಿತ್ರ ಆಚರಣೆಯಾಗಿದೆ. ಇದನ್ನು ಆಚರಿಸುವ ಮುಸ್ಲಿಮರು ಮಸೀದಿಯೊಳಗೆ ಒಂದು ನಿರ್ದಿಷ್ಟ ಅವಧಿಗೆ ವಾಸ್ತವ್ಯವಿದ್ದು, ಪ್ರಪಂಚದಿಂದ ತಮ್ಮನ್ನು ಪ್ರತ್ಯೇಕಿಸಿಕೊಳ್ಳುತ್ತಾರೆ. ಅಲ್ಲಾಹನ ಆರಾಧನೆಗಾಗಿ ತಮ್ಮ ಸಮಯವನ್ನು ಮೀಸಲಿಡುವುದು ಆಚರಣೆಯ ಏಕೈಕ ಉದ್ದೇಶವಾಗಿದೆ. ಆದರೆ, ಈ ಪವಿತ್ರ ರಂಜಾನ್ ಮಾಸದಲ್ಲಿ ಮತ್ತು ಅದು ಕೂಡ ಪವಿತ್ರ ಆಚರಣೆಯ ಸಂದರ್ಭದಲ್ಲಿ ಸಂಭವಿಸಿದ ಘಟನೆ ಇಡೀ ದೇಶ ಮತ್ತು ಮುಸ್ಲಿಂ ಸಮುದಾಯವನ್ನು ತಲೆತಗ್ಗಿಸುವಂತೆ ಮಾಡಿದೆ.

ಅಬೂಟಾಬಾದ್‌ನಲ್ಲಿ ಗನ್‌ ಹಿಡ್ಕೊಂಡು ಪಾಕಿಸ್ತಾನ ಕ್ರಿಕೆಟ್‌ ತಂಡದ ತರಬೇತಿ, ವಿಶ್ವ ಕ್ರಿಕೆಟ್‌ಗೆ ಅಚ್ಚರಿ!

click me!