ಚೀನಾಗೆ ಬೆಂಬಲಿಸಿ ಭಾರತದ ಬಳಿ ನೆರವಿಗೆ ಕೈ ಚಾಚಿದ ಮಾಲ್ಡೀವ್ಸ್‌: ಅಗತ್ಯ ವಸ್ತುಗಳ ಪೂರೈಕೆಗೆ ಭಾರತ ಒಪ್ಪಿಗೆ

By Anusha KbFirst Published Apr 6, 2024, 10:44 AM IST
Highlights

ಸದಾ ಚೀನಾವನ್ನು ಬೆಂಬಲಿಸುತ್ತಾ ಭಾರತದ ವಿರುದ್ಧ ಕತ್ತಿ ಮಸೆಯುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಜಿಜು ಈಗ ಅಗತ್ಯ ವಸ್ತುಗಳನ್ನು ತನ್ನ ದೇಶಕ್ಕೆ ಪೂರೈಕೆ ಮಾಡುವಂತೆ ಭಾರತದತ್ತ ಕೈ ಚಾಚಿದ್ದಾರೆ.

ನವದೆಹಲಿ: ಸದಾ ಚೀನಾವನ್ನು ಬೆಂಬಲಿಸುತ್ತಾ ಭಾರತದ ವಿರುದ್ಧ ಕತ್ತಿ ಮಸೆಯುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಜಿಜು ಈಗ ಅಗತ್ಯ ವಸ್ತುಗಳನ್ನು ತನ್ನ ದೇಶಕ್ಕೆ ಪೂರೈಕೆ ಮಾಡುವಂತೆ ಭಾರತದತ್ತ ಕೈ ಚಾಚಿದ್ದಾರೆ. ಮಾಲ್ಡೀವ್ಸ್ ಅಧ್ಯಕ್ಷರ ಉದ್ಧಟತನದ ಹೇಳಿಕೆಗಳಿಂದಾಗಿ ಭಾರತ ಹಾಗೂ ಮಾಲ್ಡೀವ್ಸ್ ನಡುವಣ ರಾಜತಾಂತ್ರಿಕ ಬಿಕ್ಕಟ್ಟು ತೀವ್ರಗೊಂಡಿತ್ತು. ಇದರ  ಬೆನ್ನಲ್ಲೇ  ಮಾಲ್ಡೀವ್ಸ್ ಭಾರತದ ಸಹಾಯ ಕೇಳಿದೆ ಹೀಗಾಗಿ ಭಾರತ ಈ ದ್ವೀಪ ರಾಷ್ಟ್ರಕ್ಕೆ ಮತ್ತೆ ನೆರವಾಗಲು ಮುಂದಾಗಿದೆ. ಮಾಲ್ಡೀವ್ಸ್‌ಗೆ ಅಗತ್ಯ ಆಹಾರ ಉತ್ಪನ್ನಗಳನ್ನು ರಫ್ತು ಮಾಡಲು ಭಾರತ ನಿರ್ಧರಿಸಿದೆ. ದೇಶೀಯ ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ಭಾರತವು ಈ ಆಹಾರ ಉತ್ಪನ್ನಗಳ ರಫ್ತಿನ ಮೇಲೆ ನಿರ್ಬಂಧಗಳನ್ನು ಹೇರಿತ್ತು. ಆದರೂ ಈಗ ಧೀರ್ಘಕಾಲದ ಸ್ನೇಹದ ಸಂಕೇತವಾಗಿ ಸರಕುಗಳ ಸೀಮಿತ ರಪ್ತಿಗೆ ಮುಂದಾಗಿದೆ. ದ್ವೀಪ ರಾಷ್ಟ್ರದ ಮನವಿಯ ನಂತರ ಭಾರತ ಈ ನಿರ್ಧಾರ ಕೈಗೊಂಡಿದೆ. 

ಭಾರತ ಸರ್ಕಾರ ಮತ್ತು ಮಾಲ್ಡೀವ್ಸ್‌ ಸರ್ಕಾರದ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಅಡಿಯಲ್ಲಿ 2024-2025 ರ ಅವಧಿಯಲ್ಲಿ ಸರ್ಕಾರವು ಮೊಟ್ಟೆ, ಆಲೂಗಡ್ಡೆ, ಈರುಳ್ಳಿ, ಅಕ್ಕಿ, ಗೋಧಿ, ಹಿಟ್ಟು, ಸಕ್ಕರೆ, ದಾಲ್, ಜಲ್ಲಿ ಕಲ್ಲು (stone aggregate) ಮತ್ತು ನದಿ ಮರಳು ಒಳಗೊಂಡಂತೆ ಕೆಲವು ಪ್ರಮಾಣದ ಅಗತ್ಯ ವಸ್ತುಗಳನ್ನು ಮಾಲ್ಡೀವ್ಸ್‌ಗೆ ರಫ್ತು ಮಾಡಲು ನಿರ್ಧರಿಸಿದೆ. 

ಸಾಮಾನ್ಯವಾಗಿ, ಈ ಸರಕುಗಳ ರಫ್ತಿನ ಮೇಲೆ ನಿರ್ಬಂಧ ಅಥವಾ ನಿಷೇಧವಿದೆ. ಆದರೂ ಈ ವಸ್ತುಗಳ ರಪ್ತಿಗೆ 2024-25 ಅವಧಿಯಲ್ಲಿ ಅಸ್ತಿತ್ವದಲ್ಲಿರುವ ಅಥವಾ ಭವಿಷ್ಯದ ಯಾವುದೇ ನಿರ್ಬಂಧ/ನಿಷೇಧದಿಂದಲೂ ವಿನಾಯಿತಿ ನೀಡಲಾಗಿದೆ. ಪ್ರಸ್ತುತ ಆಲೂಗಡ್ಡೆ 21,513.08 ಟನ್, ಈರುಳ್ಳಿ 35,749.13 ಟನ್, ಅಕ್ಕಿ 1,24,218.36 ಟನ್, ಗೋಧಿ ಹಿಟ್ಟು 1,09,162.96 ಟನ್, ಸಕ್ಕರೆ 64,494.33 ಟನ್,  ದಾಲ್ 224.48  ಟನ್, ಜಲ್ಲಿ ಕಲ್ಲು 1 ಮಿಲಿಯನ್ ಟನ್, ನದಿ ಮರಳು ಒಂದು ಮಿಲಿಯನ್ ಟನ್ ಹೀಗೆ ನಿರ್ದಿಷ್ಟ ಪ್ರಮಾಣದಲ್ಲಿ ಈ ವಸ್ತುಗಳನ್ನು ರಪ್ತು ಮಾಡಲು ನಿರ್ಧರಿಸಲಾಗಿದೆ. 

ಭಾರತದ ವಿರುದ್ದ ತೊಡೆತಟ್ಟಿ ಯೂಟರ್ನ್ ಹೊಡೆದ ಮಾಲ್ಡೀವ್ ಅಧ್ಯಕ್ಷ, ಸಾಲ ಮನ್ನಾಗೆ ಮನವಿ!

ಹೀಗೆ ನಿಗದಿಪಡಿಸಿದ ಪ್ರಮಾಣದ ನದಿ ಮರಳು ಮತ್ತು ಕಲ್ಲುಗಳ ರಫ್ತಿಗೆ, ಪೂರೈಕೆದಾರರು ಹಾಗೂ ಹೊರತೆಗೆಯುವವರು ಸೂಕ್ತ ಅನುಮತಿಗಳನ್ನು ಪಡೆದಿದ್ದಾರೆ ಮತ್ತು ಕರಾವಳಿ ನಿಯಂತ್ರಣ ವಲಯದ ಅಧಿಸೂಚನೆಯ ಅಡಿಯಲ್ಲಿ ನಿಷೇಧಿಸಲಾದ ಕರಾವಳಿ ನಿಯಂತ್ರಣ ವಲಯ ಪ್ರದೇಶದಲ್ಲಿ ಮರಳಿನ ಗಣಿಗಾರಿಕೆಯನ್ನು ಮಾಡುತ್ತಿಲ್ಲ ಎಂಬುದನ್ನು  CAPEXIL ಖಚಿತಪಡಿಸಿಕೊಳ್ಳಬೇಕಾಗಿದೆ. 

ನದಿ ಮರಳು ಮತ್ತು ಜಲ್ಲಿ ಕಲ್ಲನ್ನು ರಫ್ತು ಮಾಡಲು ರಫ್ತುದಾರರು ಅಗತ್ಯ ಪರಿಸರ ಅನುಮತಿಗಳು,  ನದಿ ಮರಳನ್ನು ಹೊಂದಿರುವ ಆಯಾ ರಾಜ್ಯ ಸರ್ಕಾರಗಳ ಗೊತ್ತುಪಡಿಸಿದ ನೋಡಲ್ ಪ್ರಾಧಿಕಾರದಿಂದ ಯಾವುದೇ ಆಕ್ಷೇಪಣೆ ಇಲ್ಲದ ಪ್ರಮಾಣಪತ್ರವನ್ನು ಪಡೆದುಕೊಳ್ಳಬೇಕಿದೆ. ಈ ಅನುಮತಿಯು ನದಿ ಮರಳು ಮತ್ತು ಜಲ್ಲಿ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಯಾವುದೇ ರಾಜ್ಯದ ಕಾನೂನು/ನ್ಯಾಯಾಂಗ ಆದೇಶಗಳಿಗೆ ಒಳಪಟ್ಟಿರುತ್ತದೆ.

ಭಾರತೀಯ ಸೈನಿಕರಿಗೆ ದೇಶದಲ್ಲಿ ಜಾಗವಿಲ್ಲ: ಮೇ 10ರೊಳಗೆ ಸಂಪೂರ್ಣ ನಿರ್ಗಮಿಸಿ: ಮಾಲ್ಡೀವ್ಸ್‌ ಗಡುವು

ಕಳೆದ ವರ್ಷ ನವೆಂಬರ್‌ನಿಂದ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಇದ್ದು,  ಚೀನಾ ಪರ ಒಲವಿಗೆ ಫೇಮಸ್ ಆಗಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಮಾಲ್ಡೀವ್ಸ್ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಈ ಬಿಕ್ಕಟ್ಟು ಆರಂಭವಾಗಿತ್ತು.  ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಭಾರತವು ತನ್ನ ದೇಶದಿಂದ ತನ್ನ 88 ಮಿಲಿಟರಿ ಸಿಬ್ಬಂದಿಯನ್ನು ವಾಪಸ್ ಕರೆದುಕೊಳ್ಳುವಂತೆ ಮಾಲ್ಡೀವ್ಸ್ ಅಧ್ಯಕ್ಷ ಮುಜಿಜು ಉದ್ಧಟತನದ ಹೇಳಿಕೆ ನೀಡಿದ್ದರು. 

ಇದಾದ ನಂತರ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲಕ್ಷದ್ವೀಪ ದ್ವೀಪಕ್ಕೆ ಭೇಟಿ ನೀಡಿ ಅಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಿದ ನಂತರ ಮಾಲ್ಡೀವ್ಸ್‌ನ ಮೂವರು ಅಧಿಕಾರಿಗಳು ಕೆಟ್ಟ ಕಾಮೆಂಟ್‌ಗಳನ್ನು ಮಾಡಿದ ನಂತರ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿದ್ದವು ಪರಿಣಾಮವಾಗಿ ಅನೇಕ ಸೆಲೆಬ್ರಿಟಿಗಳು ಸೇರಿದಂತೆ ಭಾರತೀಯರು ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ ಕೈಗೊಂಡರು. ಇದರಿಂದ ಮಾಲ್ಡೀವ್ಸ್ ಪ್ರವಾಸೋದ್ಯಮಕ್ಕೆ ತೀವ್ರ ಹಿನ್ನಡೆಯಾಯ್ತು.

ಆದರೆ ಈಗ ಭಾರತ ಮಾಲ್ಡೀವ್ಸ್‌ ತನ್ನ ಉದ್ಧಟತನ ಬಿಟ್ಟು ಈ ಉತ್ಪನ್ನಗಳ ರಪ್ತು ಮಾಡುವಂತೆ ಭಾರತಕ್ಕೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಭಾರತ ಮತ್ತೆ ಅಗತ್ಯ ವಸ್ತುಗಳ ರಪ್ತಿಗೆ ಮುಂದಾಗಿದೆ.  ಭಾರತದ ಈ ನಿರ್ಧಾರಕ್ಕೆ ಈಗ ಮಾಲ್ಡೀವ್ಸ್ ಧನ್ಯವಾದವನ್ನೂ ತಿಳಿಸಿದೆ.  1981 ರ ಭಾರತ ಮತ್ತು ಮಾಲ್ಡೀವ್ಸ್ ವ್ಯಾಪಾರ ಒಪ್ಪಂದವು ಅಗತ್ಯ ವಸ್ತುಗಳ ರಫ್ತಿಗೆ ಸಮ್ಮತಿ ಸೂಚಿಸಿದೆ. ಹಾಗೆಯೇ 2022ರಲ್ಲಿ ಭಾರತ ಮಾಲ್ಡೀವ್ಸ್‌ನ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿತ್ತು.

"Signifies longstanding friendship": Maldives Foreign Minister thanks India for allowing export of essential commodities to island nation

Read Story | https://t.co/pQioKvlswx pic.twitter.com/NXp3O3i0G0

— ANI Digital (@ani_digital)

 

click me!