
ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿ 4.8 ತೀವ್ರತೆಯ ಭೂಕಂಪನದ ಅನುಭವವಾಗಿದ್ದು, ಭೂಮಿಯ ಕಂಪನಕ್ಕೆ ಅಮೆರಿಕಾದ ಸ್ವಾತಂತ್ರದ ಪ್ರತಿಮೆ ಸ್ಟ್ಯಾಚ್ಯೂ ಆಫ್ ಲಿಬರ್ಟಿ ಅಲುಗಾಡಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಿನದ ಹಿಂದಷ್ಟೇ ಸ್ಟ್ಯಾಚ್ಯೂ ಆಫ್ ಲಿಬರ್ಟಿಗೆ ಸಿಡಿಲು ಬಡಿದಿತ್ತು. ನ್ಯೂಯಾರ್ಕ್ ನಗರದಲ್ಲಿ 4.8 ತೀವ್ರತೆಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಯಾವುದೇ ಹಾನಿಯಾಗಿಲ್ಲ.
ಅರ್ತ್ ಕ್ಯಾಮ್‌ನಲ್ಲಿ ಸೆರೆಯಾದ ದೃಶ್ಯಾವಳಿಯಲ್ಲಿ ಅಮೆರಿಕಾದ ಸ್ವಾತಂತ್ರ್ಯದ ಪ್ರತಿಮೆ ಅಲುಗುತ್ತಿರುವ ದೃಶ್ಯ ವೈರಲ್ ಆಗಿದೆ. ನ್ಯೂಜೆರ್ಸಿಯ ಕ್ಯಾಲಿಫೋನ್ ಬಳಿ ಭೂಕಂಪದ ಕೇಂದ್ರ ಬಿಂದುವನ್ನು ಗುರುತಿಸಲಾಗಿದೆ. ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಘಟನೆಯ ಸಮಯದಲ್ಲಿ ಎಲ್ಲಿಸ್ ದ್ವೀಪವು ಅಲುಗಾತ್ತಿರುವುದು ಕಾಣಿಸುತ್ತಿದೆ ಲೇಡಿ ಲಿಬರ್ಟಿಯ ಪ್ರತಿಮೆಯೂ ಭೂಕಂಪನದ ಸಮಯದಲ್ಲಿ ಕೆಲ ಸೆಕೆಂಡ್ ಅಲುಗುವುದನ್ನು ಕೂಡ ಈ ವೀಡಿಯೋದಲ್ಲಿ ನೋಡಬಹುದು.
ಅಪರೂಪಕ್ಕೆ ಕಾಣಿಸಿಕೊಂಡ ಡೊನಾಲ್ಡ್ ಟ್ರಂಪ್ 18 ವರ್ಷದ ಮಗನ ಹೈಟ್ ನೋಡಿ ಬೆರಗಾದ ಜನ
ಸರಿಸುಮಾರು 42 ಲಕ್ಷ ಜನರಿಗೆ ಭೂಕಂಪದ ಅನುಭವವಾಗಿದ್ದು, ವಾಷಿಂಗ್ಟನ್ ಡಿಸಿಯಿಂದ ನ್ಯೂಯಾರ್ಕ್ ಕೆನಡಾ ಗಡಿಯವರೆಗೆ ಕಂಪನದ ಅನುಭವವಾಗಿದೆ. ಈ ಕಂಪನ ಕೇವಲ ಸೆಕೆಂಡುಗಳ ಕಾಲ ನಡೆದಿದೆ. ಇದರಿಂದ ನ್ಯೂಯಾರ್ಕ್ ನಗರದಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ, ಆದಾಗ್ಯೂ ನೇವಾರ್ಕ್‌ನಲ್ಲಿ ಮೂರು ಕಟ್ಟಡಗಳು ಅಲುಗಾಡಿದ್ದು, ಅವುಗಳನ್ನು ಅಸುರಕ್ಷಿತ ಎಂದು ಗುರುತಿಸಲಾಗಿದೆ. ಕ್ಕೂ ಮೊದಲು 1884ರಲ್ಲಿ ನ್ಯೂಯಾರ್ಕ್‌ನಲ್ಲಿ 5.2 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿತ್ತು.
ನ್ಯೂಯಾರ್ಕ್‌ನಲ್ಲಿ ಭೂಮಿ ಕಂಪಿಸಿ ಗಂಟೆಗಳ ನಂತರ ನ್ಯೂಜೆರ್ಸಿಯಲ್ಲಿಯೂ 4.0 ತೀವ್ರತೆಯ ಭೂ ಕಂಪನವಾಗಿದೆ. ಈ ವೇಳೆ ಗವರ್ನರ್ ಫಿಲ್ ಮರ್ಫಿ ಅವರು ತುರ್ತು ಮಾರ್ಗಸೂಚಿಗಳನ್ನು ಅನುಸರಿಸಲು ಸ್ಥಳೀಯ ನಿವಾಸಿಗಳಿಗೆ ಕರೆ ನೀಡಿದರು. ನ್ಯೂಜೆರ್ಸಿ ಈಗಷ್ಟೇ ಆಘಾತವನ್ನು ಅನುಭವಿಸಿದೆ. ದಯವಿಟ್ಟು ಕೆಳಗಿನ ತುರ್ತು ಮಾರ್ಗದರ್ಶನವನ್ನು ಅನುಸರಿಸಿ ಮತ್ತು ನಿಮಗೆ ನಿಜವಾದ ತುರ್ತು ಪರಿಸ್ಥಿತಿ ಇಲ್ಲದಿದ್ದರೆ 911 ಗೆ ಕರೆ ಮಾಡುವುದನ್ನು ತಪ್ಪಿಸಿ ಎಂದು ಅವರು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.
ತನ್ನ ವಿರುದ್ಧದ ಪ್ರತಿಭಟನಾ ಹಾಡಿಗೆ ತಿಳಿಯದೇ ಚಪ್ಪಾಳೆ ತಟ್ಟಿ ಮುಜುಗರಕ್ಕೀಡಾದ ಅಮೆರಿಕಾ ಉಪಾಧ್ಯಕ್ಷೆ
ನ್ಯೂಯಾರ್ಕ್‌ನ ಗವರ್ನರ್ ಕ್ಯಾಥಿ ಹೊಚುಲ್ ಅವರು ಕೂಡ ಈ ಬಗ್ಗೆ ಟ್ವಿಟ್ ಮಾಡಿದ್ದಾರೆ. ನ್ಯೂಜೆರ್ಸಿಯಲ್ಲಿ ಇಂದು ಬೆಳಗ್ಗೆ 4.0 ತೀವ್ರತೆಯ ಭೂಕಂಪನ ಸಂಭವಿಸಿದೆ. ನಾವು ನಿರ್ಣಾಯಕ ಮೂಲಸೌಕರ್ಯಗಳನ್ನು ಪರಿಶೀಲಿಸುವುದನ್ನು ಮುಂದುವರಿಸುತ್ತಿದ್ದೇವೆ ಮತ್ತು ಈ ಸಮಯದಲ್ಲಿ ಯಾವುದೇ ಗಮನಾರ್ಹ ಹಾನಿಯ ವರದಿ ಆಗಿಲ್ಲ ಎಂದು ಅವರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ