
ಏಳೇಳು ಜನ್ಮಕ್ಕೂ ಜೊತೆಗಿರ್ತೇವೆ ಎಂದು ಪ್ರಮಾಣ ಮಾಡಿ ಮದುವೆಯಾಗುವ ಜೋಡಿ ಕೆಲವೊಮ್ಮೆ ಏಳು ವರ್ಷದೊಳಗೆ ಬೇರೆಯಾಗಿರ್ತಾರೆ. ಮತ್ತೆ ಕೆಲವರು ಸಂಗಾತಿಗೆ ಮೋಸ ಮಾಡಲು ಶುರು ಮಾಡಿರ್ತಾರೆ. ಸಂಬಂಧ ನಂಬಿಕೆ, ವಿಶ್ವಾಸದ ಮೇಲೆ ನಿಂತಿರುತ್ತದೆ. ದಾಂಪತ್ಯದಲ್ಲಿ ಬಯಸಿದ್ದು ಸಿಗದೆ ಹೋದಾಗ, ನಂಬಿಕೆ ದ್ರೋಹವಾದಾಗ, ಪ್ರೀತಿ, ಗೌರವಕ್ಕೆ ಕೊರತೆಯಾದಾಗ ಹೀಗೆ ಅನೇಕ ಕಾರಣಕ್ಕೆ ಸಂಗಾತಿಗಳು ದೂರವಾಗ್ತಾರೆ. ದಾಂಪತ್ಯ ಮುರಿದು ಬಿತ್ತು ಎಂದಾಗ ಅದಕ್ಕೆ ಒಬ್ಬರು ಕಾರಣವಾಗೋದಿಲ್ಲ. ಎರಡು ಕೈ ತಟ್ಟಿದಾಗ ಮಾತ್ರ ಚಪ್ಪಾಳೆ ಎನ್ನುವಂತೆ ಮಹಿಳೆ ಕೂಡ ಪತಿಗೆ ಮೋಸ ಮಾಡುವ ಅನೇಕ ಉದಾಹರಣೆಗಳಿವೆ. ಅನೇಕ ಮಹಿಳೆಯರು ಇದನ್ನು ಒಪ್ಪಿಕೊಂಡಿದ್ದಾರೆ. ಪತಿಗೆ ಮೋಸ ಮಾಡಲು ಕಾರಣವೇನು ಎಂಬುದನ್ನು ಅವರು ತಿಳಿಸಿದ್ದಾರೆ.
ವಿವಾಹೇತರ ಸಂಬಂಧದ ಬಗ್ಗೆ ಮಹಿಳೆಯರು ಹೇಳಿದ್ದೇನು? :
ಚಿಕ್ಕ ವಯಸ್ಸಿನಲ್ಲೆ ಮದುವೆ (Marriage) ಯಾದ ಮಹಿಳೆ ಹೇಳೋದೇನು ? : ಆಕೆಗೆ 24ನೇ ವಯಸ್ಸಿನಲ್ಲಿಯೇ ಮದುವೆಯಾಗಿತ್ತಂತೆ. ಪತಿ ರೋಮ್ಯಾಂಟಿಕ್ (Romantic) ಇರಲಿಲ್ಲವಂತೆ. ಆತನ ಮೇಲೆ ನನಗೆ ಪ್ರೀತಿ (Love) ಇರಲಿಲ್ಲ. ಇಡೀ ದಿನ ಮನೆ ಕೆಲಸ ಹಾಗೂ ಮಕ್ಕಳ ಕೆಲಸಕ್ಕೆ ನಾನು ಸೀಮಿತನಾಗಿದ್ದೆ. ಈ ನಮ್ಮ ನಿರಾಸಾದಾಯಕ ಪ್ರಪಂಚ ನನಗೆ ಬೇಸರ ತರಿಸಿತ್ತು. ನನಗಾಗಿ ನಾನು ಸಮಯ ನೀಡಲು ಶುರು ಮಾಡಿದೆ. ಹೊಸ ಪ್ರಪಂಚ ನೋಡುವ ಪ್ರಯತ್ನ ನಡೆಸಿದೆ. ಆಗ ನನಗೊಬ್ಬರ ಪರಿಚಯವಾಯ್ತು. ಅವರ ಜೊತೆಗಿರುವ ಪ್ರತಿ ಕ್ಷಣವನ್ನು ನಾನು ಆನಂದಿಸಲು ಶುರು ಮಾಡಿದೆ. ನಾನು ಪಂಜರದಿಂದ ಬಿಟ್ಟ ಹಕ್ಕಿಯಾಗಿದ್ದೆ. ಪತಿಗೆ ಮೋಸ ಮಾಡ್ತಿದ್ದೇನೆಂಬ ನೋವು ನನಗಿರಲಿಲ್ಲ ಎನ್ನುತ್ತಾಳೆ ಮಹಿಳೆ.
ಪ್ರೀತಿ ಇಲ್ಲದ ಮೇಲೆ ಬೇರೆ ದಾರಿ : ಈ ಮಹಿಳೆ ಪತಿ ಸದಾ ತಂದೆ – ತಾಯಿಗೆ ಗಮನ ನೀಡ್ತಿದ್ದನಂತೆ. ಅವನ ಪಾಲಕರನ್ನು ನೋಡಿಕೊಳ್ಳೋದು ಬೇಡ ಎಂದು ನಾನೆಂದು ಹೇಳಿಲ್ಲ. ಆದ್ರೆ ಅಲ್ಲಿ ಇಲ್ಲಿ ಸ್ವಲ್ಪ ಸಮಯವನ್ನು ನನಗೆ ನೀಡ್ಬೇಕಿತ್ತು. ಪತಿಗೆ ನನ್ನ ಮೇಲೆ ಆಸಕ್ತಿ, ಪ್ರೀತಿ ಎರಡೂ ಇರಲಿಲ್ಲ. ನನಗೆ ಮಹತ್ವ ನೀಡ್ತಿರಲಿಲ್ಲ. ಈ ಸಂದರ್ಭದಲ್ಲಿ ಯಾರು ನನಗೆ ಆಸಕ್ತಿ ತೋರಿಸಿದ್ರೋ ಅವರಿಗೆ ನನ್ನನ್ನು ನಾನು ಸಮರ್ಪಿಸಿಕೊಂಡೆ. ಅಲ್ಲಿಂದ ನನ್ನ ಅಫೇರ್ ಶುರುವಾಯ್ತು ಎನ್ನುತ್ತಾಳೆ ಮಹಿಳೆ.
Relationship Tips: ನಿಮ್ಮ ವ್ಯಕ್ತಿತ್ವ ಸಂಬಂಧಗಳ ಮೇಲೆ ಪ್ರಭಾವ ಬೀರುತ್ತೆ!
ಗಂಡನ ನಿಂದನೆ ಮಾತು ಸಾಕಾಯ್ತು : ಈ ಮಹಿಳೆ ಪತಿ ಕಥೆಗಾರನಂತೆ. ಮಾತು ಮಾತಿಗೂ ಪತ್ನಿಯನ್ನು ನಿಂದಿಸುತ್ತಾನಂತೆ. ಎಂದೂ ಪತ್ನಿ ಬಗ್ಗೆ ಹೊಗಳಿಕೆ ಮಾತುಗಳನ್ನು ಆಡಿಲ್ಲವಂತೆ. ಪತಿಯ ಈ ವರ್ತನೆ ನನಗೆ ಬೇಸರತರಿಸಿದೆ. ಪತಿಯಿಂದ ದೂರವಾಗಲು ಮನಸ್ಸು ಬಯಸುತ್ತದೆ. ಆದ್ರೆ ಕುಟುಂಬದ ಮಧ್ಯೆ ಸಂಬಂಧ ಚೆನ್ನಾಗಿರುವ ಕಾರಣ ವಿಚ್ಛೇದನ ನೀಡಲು ಸಾಧ್ಯವಾಗ್ತಿಲ್ಲ. ಹಾಗಾಗಿ ನನ್ನ ಸಂತೋಷಕ್ಕೆ ಬೇರೆ ದಾರಿ ನೋಡಿಕೊಂಡಿದ್ದೇನೆ. ನನ್ನ ಸಂತೋಷವನ್ನು ಬೇರೆ ಕಡೆ ಹುಡುಕಿಕೊಂಡಿದ್ದೇನೆ. ಇದನ್ನು ಗೌಪ್ಯವಾಗಿಡುವುದು ನನಗೆ ಗೊತ್ತು ಎನ್ನುತ್ತಾಳೆ ಆಕೆ.
ಕಷ್ಟ ಕಣ್ರೀ..25 ವರ್ಷ ಆದ್ಮೇಲೆ ಈ ಊರಲ್ಲಿ ಸಿಂಗಲ್ ಆಗಿ ಇರೋ ಹಾಗಿಲ್ಲ!
ಬೋರಿಂಗ್ ಗಂಡ : ಕೆಲಸ ಮುಗಿದ ಮೇಲೆ ಇಬ್ಬರು ಕುಳಿತು ಟಿವಿ ನೋಡೋದು ಬಿಟ್ಟರೆ ಈ ಸಂಗಾತಿ ಜೀವನದಲ್ಲಿ ಮತ್ತೇನೂ ಇರಲಿಲ್ಲ. ರೋಮ್ಯಾನ್ಸ್ ಸಂಪೂರ್ಣವಾಗಿ ಸತ್ತಿತ್ತು. ಪತಿ ಎಲ್ಲಿಗೂ ಡೇಟಿಂಗ್ ಕರೆದುಕೊಂಡು ಹೋಗ್ತಿರಲಿಲ್ಲ. ಇಬ್ಬರು ಹೊರಗೆ ಊಟಕ್ಕೆ ಹೋಗ್ತಿರಲಿಲ್ಲ. ಈ ಬಗ್ಗೆ ಪತಿ ಜೊತೆ ಅನೇಕ ಬಾರಿ ಆಕೆ ಮಾತನಾಡಿದ್ದಳು. ಆದ್ರೆ ಪತಿ ಈ ಬಗ್ಗೆ ಆಸಕ್ತಿ ತೋರಿಸಿರಲಿಲ್ಲ. ನಂತ್ರ ಪತಿಗೆ ಮೋಸ ಮಾಡಲು ಶುರು ಮಾಡಿದ್ಲು. ನನ್ನ ಪತಿಯನ್ನು ನಾನೂ ಪ್ರೀತಿ ಮಾಡ್ತಿಲ್ಲ ಎಂಬ ಸತ್ಯ ಆಗ ಗೊತ್ತಾಯ್ತು ಎನ್ನುತ್ತಾಳೆ ಈ ಮಹಿಳೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.