ಕೈತೋಟದಲ್ಲಿರುವ ಪುಟ್ಟ ಪಾಟ್ ನಲ್ಲಿ ಸಣ್ಣ ಬೀಜ ಹಾಕಿ ಅದು ಚಿಗುರೊಡೆಯುವುದನ್ನು ಬೆರಗುಗಣ್ಣಿನಿಂದ ನೋಡ್ತೇವೆ. ನಾಲ್ಕೈದು ಎಲೆ ಹೊರ ಬರ್ತಿದ್ದಂತೆ ಸಂತೋಷ ದುಪ್ಪಟ್ಟಾಗಿರುತ್ತೆ. ತರಕಾರಿಯಲ್ಲಿ ಏನೆಲ್ಲ ಅಡುಗೆ ಮಾಡ್ಬೇಕು ಅಂತಾ ಪ್ಲಾನ್ ಕೂಡ ಆಗಿರುತ್ತೆ. ಆದ್ರೆ ಎಲೆಗಳ ಬಣ್ಣ ಬದಲಾಗಿ,ಹುಳು ಹಿಡಿದಾಗ ಏನು ಮಾಡ್ಬೇಕು ಗೊತ್ತಾಗೋದಿಲ್ಲ.
ಮನೆ (Home)ಯ ಮುಂದೆ ಹೂ ತೋಟ (Flower Garden)ವಿದ್ದರೆ ಅದರ ಖುಷಿ ಹೇಳತೀರದು. ಬೆಳಿಗ್ಗೆ ಎದ್ದ ತಕ್ಷಣ ಸುಂದರ ಹೂಗಳು ಮನಸ್ಸಿಗೆ ಮುದ ನೀಡುತ್ತವೆ. ಹಾಗೆಯೇ ನಾವೇ ಮನೆಯಲ್ಲಿ ಬೆಳೆದ ತರಕಾರಿ (Vegetable)ಗಳು ಕೂಡ ಅಡುಗೆ ರುಚಿಯನ್ನು ಹೆಚ್ಚಿಸುತ್ತವೆ. ಮನೆಯಂಗಳದಲ್ಲಿರುವ ಟೊಮೊಟೊ, ಬದನೆ, ಬೀನ್ಸ್, ಸಣ್ಣಪುಟ್ಟ ಹಸಿರು ಸೊಪ್ಪುಗಳು ತುರ್ತು ಸಂದರ್ಭದಲ್ಲಿ ನೆರವಾಗುತ್ತವೆ. ಹಳ್ಳಿಗಳಲ್ಲಿ ಹಿಂದಿನಿಂದಲೂ ಮನೆಯ ಮುಂದೆ, ಹಿಂದೆ ಬೆಳೆದು ನಿಂತ ತರಕಾರಿ ಗಿಡಗಳನ್ನು ನಾವು ಕಾಣಬಹುದು. ಇತ್ತೀಚಿನ ದಿನಗಳಲ್ಲಿ ನಗರ-ಪಟ್ಟಣದ ಜನರೂ ಪುಟ್ಟ ಕೈತೋಟದಲ್ಲಿ ಆಸಕ್ತಿ ಬೆಳೆಸಿಕೊಳ್ತಿದ್ದಾರೆ. ಇದೇ ಕಾರಣಕ್ಕೆ ಟೆರೆಸ್ ಗಾರ್ಡನ್ (Terrace Garden) ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ.
ಮನೆಯಲ್ಲಿ ತರಕಾರಿ ಬೆಳೆಯುವ ಸಂದರ್ಭದಲ್ಲಿ ಅನೇಕ ಸಂಗತಿಗಳನ್ನು ತಿಳಿದಿರಬೇಕು. ಯಾವ ಋತುವಿನಲ್ಲಿ ಯಾವ ತರಕಾರಿ ಬೆಳೆಯುವುದು ಯೋಗ್ಯ ಎಂಬುದರಿಂದ ಹಿಡಿದು ಯಾವ ಮಣ್ಣು,ಗೊಬ್ಬರ ಬಳಕೆ ಮಾಡಬೇಕು ಎನ್ನುವವರೆಗೆ ಎಲ್ಲವನ್ನೂ ತಿಳಿದಿರಬೇಕು. ಋತುಮಾನಕ್ಕೆ ಅನುಗುಣವಾಗಿ ಕೆಲ ಸಸ್ಯಗಳನ್ನು ಆರೈಕೆ ಮಾಡುವುದು ಬಹಳ ಮುಖ್ಯ. ವಿಶೇಷವಾಗಿ ಬೀನ್ಸ್ (Beans). ಚಳಿಗಾಲದಲ್ಲಿ ಬೀನ್ಸ್ ಬಳ್ಳಿಗೆ ಅನೇಕ ರೀತಿಯ ಸಮಸ್ಯೆ ಶುರುವಾಗುತ್ತದೆ. ಕೆಲವೊಮ್ಮೆ ಹೂ ಬಿಟ್ಟರೂ ಕಾಯಿ ಬರುವುದಿಲ್ಲ. ಬೀನ್ಸ್ ಆರೈಕೆ ಹೇಗೆ ಎಂಬುದನ್ನು ಇಂದು ಹೇಳ್ತೀವಿ.
ಒಂದಕ್ಕಿಂತ ಎರಡು ಉತ್ತಮ : ಚಳಿಗಾಲದ ಸಂದರ್ಭದಲ್ಲಿ ಬೀನ್ಸ್ ಸಸ್ಯದ ಎಲೆಗಳು ಒಣಗಲು ಪ್ರಾರಂಭಿಸುತ್ತವೆ. ಈ ಕಾರಣಕ್ಕೆ ನಾವು ಮನೆಯಲ್ಲಿ ತರಕಾರಿ ಬೆಳೆಯುವಾಗ 2 ರಿಂದ 3 ಗಿಡಗಳನ್ನು ಒಟ್ಟಿಗೆ ನೆಡುವುದು ಉತ್ತಮ. ಒಂದು ಗಿಡ ಸತ್ತರೂ ಇನ್ನೊಂದು ಭದ್ರವಾಗಿ ಉಳಿಯುತ್ತದೆ.
ಎಲೆಗಳ ಬೆಳವಣಿಗೆಯ ಕೊರತೆ : ಎಲೆ ಚಿಗುರು ಕಾಣಿಸುತ್ತದೆ. ಆದ್ರೆ ಬೆಳವಣಿಗೆಯಾಗುವುದಿಲ್ಲ. ಎಲೆಗಳ ಮೇಲೆ ಕೀಟಗಳು ದಾಳಿ ನಡೆಸುತ್ತವೆ. ಇದ್ರಿಂದ ಎಲೆಗಳ ಬೆಳವಣಿಗೆ ನಿಲ್ಲಿತ್ತದೆ. ಬೀನ್ಸ್ ಮಾತ್ರವಲ್ಲದೆ ಬಿಳಿಬದನೆ,ಪಾಲಕ್ ಎಲೆಯಲ್ಲಿ ಈ ಕೀಟವನ್ನು ನೀವು ನೋಡಬಹುದು. ಕೀಟಕ್ಕೆ ಮುಕ್ತಿ ನೀಡಲು ನೀರಿಗೆ ಬೇವಿನ ಎಣ್ಣೆಯನ್ನು ಬೆರೆಸಿ ಗಿಡಗಳ ಸುತ್ತಲೂ ಸಿಂಪಡಿಸಬೇಕು. ಎಲೆಗಳಿಗೆ ಸೂರ್ಯನ ಬೆಳಕು ತಾಗುವಂತೆ ನೋಡಿಕೊಳ್ಳಬೇಕು.
Womans Life : ಮದುವೆ ಬಳಿಕ ಹೆಣ್ಮಕ್ಕಳು ಯಾವೆಲ್ಲಾ ದಾಖಲೆ ಬದಲಿಸಬೇಕು ಗೊತ್ತಾ?
ಬೀನ್ಸ್ ಎಲೆ ಬಣ್ಣ ಬದಲಾವಣೆ : ಬೀನ್ಸ್ ಎಲೆಗಳು ಹಳದಿ ಬಣ್ಣಕ್ಕೆ ತಿರುಗುವುದನ್ನು ನೀವು ನೋಡಿರುತ್ತೀರಿ. ಇದು ಸಾಂಕ್ರಾಮಿಕವಾಗಿ ಇಡೀ ಬಳ್ಳಿಯನ್ನು ಹಾಳು ಮಾಡುತ್ತದೆ. ಎಲೆಗಳಲ್ಲಿ ಕಾಣಿಸಿಕೊಳ್ಳುವ ಗೊಂಡೆಹುಳು ಇದಕ್ಕೆ ಕಾರಣ. ಇದ್ರಿಂದ ಮುಕ್ತಿ ಪಡೆಯಲು ನೀವು,ಉಪ್ಪು ನೀರನ್ನು ಹಾಕುವ ಬದಲು ಎಪ್ಸಮ್ ಲವಣಗಳನ್ನು ಬಳಸಿ. ಒಂದು ಕಪ್ ಎಪ್ಸಮ್ ಲವಣಕ್ಕೆ ಇಂದು ಕಪ್ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸಿಂಪಡಿಸಿ. ಕೀಟ ಬಾಧೆ ಇದ್ರಿಂದ ದೂರವಾಗುತ್ತದೆ.
ಪೋಷಕಾಂಶ : ನಿಯಮಿತವಾಗಿ ಎಲ್ಲಾ ಪೋಷಕಾಂಶಗಳನ್ನು ಪಡೆದಾಗ ಮಾತ್ರ ಬೀನ್ಸ್ ಸಸ್ಯದ ಬೆಳವಣಿಗೆ ಪೂರ್ಣಗೊಳ್ಳುತ್ತದೆ. ಅವುಗಳಿಗೆ ಸರಿಯಾದ ಪೋಷಕಾಂಶಗಳು ಸಿಗದಿದ್ದರೆ, ಅವು ಒಣಗಲು ಪ್ರಾರಂಭಿಸುತ್ತವೆ. ಹಾಗಾಗಿ ಪೋಷಕಾಂಶ ಸಿಗುವಂತೆ ನೋಡಿಕೊಳ್ಳಬೇಕು.
India's First Omicron Death : ಒಮಿಕ್ರಾನ್ ವೈರಸ್ ನಿಂದ ದೇಶದಲ್ಲಿ ಮೊದಲ ಸಾವು!
ಎಲೆಗಳಲ್ಲಿ ರಂಧ್ರ : ಬೀನ್ಸ್ ಎಲೆಗಳಲ್ಲಿ ರಂಧ್ರಗಳಾಗುವುದನ್ನು ನೀವು ಅನೇಕ ಬಾರಿ ನೋಡಿರುತ್ತೀರಿ. ಕೀಟಗಳು ಈ ಎಲೆಗಳನ್ನು ತಿನ್ನಲು ಪ್ರಾರಂಭಿಸುತ್ತವೆ. ಕೀಟಗಳಲ್ಲಿ ಅನೇಕ ಜಾತಿಗಳಿವೆ. ಬೀನ್ಸ್, ಟೊಮ್ಯಾಟೊ, ಸೋರೆಕಾಯಿ ಅಥವಾ ಹಾಗಲಕಾಯಿಯಂತಹ ಸಸ್ಯಗಳ ಎಲೆಗಳು ರಂಧ್ರಗಳನ್ನು ಹೊಂದಿದ್ದರೆ, ಅದಕ್ಕಾಗಿ ಬಿಯರ್ ಹ್ಯಾಕ್ ಬಳಸಿ. ಇದಕ್ಕಾಗಿ ಚಿಕ್ಕ ಬಟ್ಟಲಿನಲ್ಲಿ ಬಿಯರ್ ಹಾಕಿ ಗಿಡಗಳ ಬೇರಿನ ಸುತ್ತಲೂ ಇಟ್ಟರೆ ಅದರ ಸುವಾಸನೆ ಕ್ರಿಮಿಕೀಟಗಳನ್ನು ಆಕರ್ಷಿಸಿ ಅದನ್ನು ಕುಡಿದು ಸಾಯುತ್ತವೆ. ಇದಲ್ಲದೆ, ನೀವು ಸಾಬೂನು ನೀರಿನಲ್ಲಿ ಬೇವಿನ ಎಣ್ಣೆಯನ್ನು ಬೆರೆಸಿ ದ್ರಾವಣವನ್ನು ತಯಾರಿಸಬಹುದು ಮತ್ತು ಅದನ್ನು ತರಕಾರಿಗಳ ಎಲೆಗಳ ಮೇಲೆ ಸಿಂಪಡಿಸಬಹುದು. ಇದು ಕೂಡ ಬೀನ್ಸ್ ಎಲೆಗಳನ್ನು ಕೀಟಗಳಿಂದ ರಕ್ಷಿಸಿ,ಬೀನ್ಸ್ ಕಾಯಿಯಾಗಲು ನೆರವಾಗುತ್ತದೆ.