ಟಿವಿ ನೋಡ್ತಾ, ನಿದ್ರೆ ಮಾಡ್ತಾ ಈಕೆ ಗಳಿಸ್ತಾಳೆ ಲಕ್ಷಾಂತರ ರೂ!

By Suvarna NewsFirst Published Sep 22, 2023, 1:23 PM IST
Highlights

ಕೆಲಸ ಯಾವುದಾದ್ರೆ ಏನು, ಶ್ರದ್ಧೆಯಿಂದ ಮಾಡಿದಾಗ ಸಂಬಂಧ ಸಿಕ್ಕೇ ಸಿಗುತ್ತೆ. ಐಟಿಯಲ್ಲಿ ಮಾಡೋದು ಮಾತ್ರ ಕೆಲಸವಲ್ಲ. ಕೆಲವೊಂದು ಕೆಲಸ ಚಿಕ್ಕದೆನ್ನಿಸಿದ್ರೂ ಜವಾಬ್ದಾರಿ ಜೊತೆ ಸಂಬಳ ಹೆಚ್ಚಿಗೆ ಇರುತ್ತದೆ. ಇದಕ್ಕೆ ಈ ಮಹಿಳೆ ನಿದರ್ಶನ. 
 

ಭಾರತದಲ್ಲಿ ನಿರುದ್ಯೋಗಿಗಳ ಸಂಖ್ಯೆ ಸಾಕಷ್ಟಿದೆ. ಹಾಗಂತ ದೇಶದಲ್ಲಿ ಕೆಲಸಕ್ಕೆ ಬರವಿದೆ ಎಂದಲ್ಲ. ಭಾರತದಲ್ಲಿ ಕೆಲಸ ಸಾಕಷ್ಟು ಖಾಲಿ ಇದೆ. ಆದ್ರೆ ನಿರುದ್ಯೋಗಿಗಳು ತಮ್ಮ ವಿದ್ಯಾರ್ಹತೆ ಬಿಟ್ಟು ಬೇರೆ ಕೆಲಸ ಮಾಡಲು ಒಪ್ಪೋದಿಲ್ಲ. ಕೆಲವೊಂದು ಕೆಲಸವನ್ನು ಅವರು ಕೀಳೆನ್ನುವಂತೆ ನೋಡ್ತಾರೆ. ಆದ್ರೆ ಆ ಕೆಲಸಕ್ಕೆ ಕೈ ತುಂಬ ಸಂಬಳ ಸಿಗುತ್ತೆ ಎನ್ನುವ ಜ್ಞಾನವೇ ಅವರಿಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಜನ ಬೇಕು, ನಾನಿ ಅವಶ್ಯಕತೆ ಇದೆ ಎಂದು ಅನೇಕ ಜಾಹೀರಾತು ಬರ್ತಿರುತ್ತದೆ. ತಮ್ಮ ವಿದ್ಯೆಗೆ ತಕ್ಕ ಕೆಲಸ ಸಿಕ್ಕಿಲ್ಲ ಎನ್ನುವ ಜನರು ಮನೆಯಲ್ಲಿ ಖಾಲಿ ಕುಳಿತುಕೊಳ್ತಾರೇ ವಿನಃ ಇಂಥ ಕೆಲಸ ಮಾಡೋದಿಲ್ಲ. ಆದ್ರೆ, ಕಚೇರಿಯಲ್ಲಿ ಹಗಲು, ರಾತ್ರಿ ಕೆಲಸ ಮಾಡಿ ಅಲ್ಪಸ್ವಲ್ಪ ಹಣ ಸಂಪಾದನೆ ಮಾಡೋದಕ್ಕಿಂತ ಶ್ರೀಮಂತರ ಮನೆ ಮಕ್ಕಳನ್ನು ನೋಡಿಕೊಂಡ್ರೆ ಹೆಚ್ಚು ಹಣ ಗಳಿಸಬಹುದು ಎನ್ನುತ್ತಾಳೆ ಈ ಮಹಿಳೆ. ಮಕ್ಕಳ ಪಾಲನೆ ಜೊತೆ ನಿದ್ರೆ, ಟಿವಿ, ಊಟ ಎಲ್ಲವನ್ನೂ ಆರಾಮವಾಗಿ ಮಾಡುವ ಅಮೆರಿಕಾದ ನಾನಿಯೊಬ್ಬಳು ತನ್ನ ಕೆಲಸ ಏನೇನು ಎಂಬುದನ್ನು ಹೇಳಿದ್ದಾಳೆ.

ಕೆಲ ದಿನಗಳ ಹಿಂದಷ್ಟೆ ಕೆಲ್ಲಿ ಹೆಸರಿನ ಅಮೆರಿಕಾ (America) ದ ಮಹಿಳೆಯೊಬ್ಬಳು ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾಳೆ. ವಿಡಿಯೋ ಪ್ರಕಾರ, ಕೆಲ್ಲಿ ತಾನು ಮಾಡ್ತಿರೋದು ವಿಶ್ವದ ಅತ್ಯುತ್ತಮ ಕೆಲಸ ಎಂದಿದ್ದಾಳೆ.  ನನ್ನ ಕೆಲಸದಲ್ಲಿ ನನಗೆ ಖುಷಿ (Happiness) ಇದೆ. ನೆಮ್ಮದಿ ಇದೆ. ಕೆಲಸವನ್ನು ನಾನು ಎಂಜಾಯ್ ಮಾಡ್ತಿದ್ದೇನೆ ಎಂದಿದ್ದಾಳೆ. ಮಕ್ಕಳ ಜೊತೆ ಟಿವಿ ವೀಕ್ಷಣೆ, ಮಧ್ಯಾಹ್ನ 3 ಗಂಟೆ ನಿದ್ರೆ ಮಾಡುವ ಕೆಲ್ಲಿ, ತನ್ನ ಕೆಲಸವನ್ನು ಮನಸ್ಪೂರ್ವಕವಾಗಿ ಮಾಡ್ತಿದ್ದಾಳೆ. 

ಗಿಲ್ಟ್ ಫೀಲ್ ಮಾಡಿಕೊಳ್ಳೋದು ಬೇಕಾ? ಏನು ಮಾಡಿದ್ರೆ ಲೈಫ್ ಬಿಂದಾಸ್ ಇರುತ್ತೆ?

ಕೆಲ್ಲಿ ದಿನಚರಿ ಏನು? : ಕೆಲ್ಲಿ ಶ್ರೀಮಂತರ ಮನೆಯಲ್ಲಿ ನಾನಿ. ಬೆಳಿಗ್ಗೆ ಆಕೆ ದಿನಚರಿ ಆರಂಭವಾಗೋದು ಟಿವಿ ನೋಡುವ ಮೂಲಕ. ಮಕ್ಕಳ ಜೊತೆ ಕುಳಿತು ಟಿವಿ ವೀಕ್ಷಣೆ ಮಾಡುವ ಕೆಲ್ಲಿ, ನಂತ್ರ ಮಕ್ಕಳನ್ನು ಸ್ಕೂಲ್ ಗೆ ಬಿಟ್ಟು ಬರ್ತಾಳೆ. ಆ ಮೇಲೆ ಮನೆಯಲ್ಲಿರುವ ಕಿರಿಯ ಹುಡುಗ ಹ್ಯಾಂಪ್ಟನ್‌ ಜೊತೆ ಸ್ಟಾರ್‌ಬಕ್ಸ್‌ನಲ್ಲಿ  ಕುಳಿತು ಕಾಫಿ ಕುಡಿಯುತ್ತಾಳೆ. ಅಲ್ಲದೆ ಹ್ಯಾಂಪ್ಟನ್ ಗೆ ಕೇಕ್ ತಿನ್ನಿಸುತ್ತಾಳೆ. 

ಆಮೇಲೆ ಹ್ಯಾಂಪ್ಟನ್ ಜೊತೆ ಕೆಲ್ಲಿ ಜಿಮ್ ಗೆ ಹೋಗ್ತಾಳೆ. ಅಲ್ಲಿ ಹ್ಯಾಂಪ್ಟನ್ ಆಟ ಆಡಿದ್ರೆ, ಕೆಲ್ಲಿ ಜಿಮ್ ಮಾಡ್ತಾಳೆ. ನಂತ್ರ ಅಲ್ಲಿಯೇ ಸ್ನಾನ ಮಾಡುವ ಕೆಲ್ಲಿ, ಸುತ್ತಮುತ್ತಲಿನ ಜನರ ಜೊತೆ ಸ್ವಲ್ಪ ಹರಟೆ ಹೊಡೆದು ಮನೆಗೆ ವಾಪಸ್ ಬರ್ತಾಳೆ. ಮನೆಗೆ ಬಂದ್ಮೇಲೆ ಅವಳಿಷ್ಟದ ಕೆಲಸ ಶುರುವಾಗುತ್ತದೆ. ಹ್ಯಾಂಪ್ಟನ್ ಮತ್ತು ಕೆಲ್ಲಿ ಮೂರು ಗಂಟೆಗಳ ಕಾಲ ನಿದ್ರೆ ಮಾಡ್ತಾರೆ. ಈ ಸಮಯದಲ್ಲಿ ಮನೆಯಲ್ಲಿರುವ ಉಳಿದ ಕೆಲಸಗಾರರು ಮನೆ ಕ್ಲೀನಿಂಗ್ ಸೇರಿದಂತೆ ಬಟ್ಟೆ ಸ್ವಚ್ಛಗೊಳಿಸುವ ಕೆಲಸ ಮುಗಿಸ್ತಾರೆ. ಇದಾದ್ಮೇಲೆ ಹ್ಯಾಂಪ್ಟನ್ ಸಹೋದರರನ್ನು ಶಾಲೆಯಿಂದ ಕರೆದುಕೊಂಡು ಬರಲು ಹೋಗುವ ಕೆಲ್ಲಿ, ಅವರು ಬಂದ್ಮೇಲೆ ಅವರ ಜೊತೆ ಸ್ವಲ್ಪ ಆಹಾರ ಸೇವನೆ ಮಾಡಿ, ಆಟ ಆಡ್ತಾಳೆ. ಅಲ್ಲಿಗೆ ಸಂಜೆ ಆಗುವ ಕಾರಣ ಆಕೆ ಕೆಲಸ ಮುಗಿಯುತ್ತದೆ.

ಪ್ರತೀ ಯಶಸ್ವಿ ಮಹಿಳೆಯ ಹಿಂದೆ ಪುರುಷನಿದ್ದಾನೆ-ಸುಧಾಮೂರ್ತಿ; ಇದಪ್ಪಾ ಮಾತು ಅಂದ್ರೆ ಎಂದ ನೆಟ್ಟಿಗರು

ಈ ಕೆಲಸಕ್ಕೆ ಕೆಲ್ಲಿ ಪಡೆಯುವ ಸಂಬಳ ಎಷ್ಟು ? : ಕೆಲ್ಲಿ ವಿಡಿಯೋದಲ್ಲಿ ತನಗೆ ಎಷ್ಟು ಸಂಬಳ ಬರುತ್ತೆ ಎಂಬುದನ್ನು ಹೇಳಿಲ್ಲ. ಆದ್ರೆ ಅಮೆರಿಕಾದಲ್ಲಿ ಶ್ರೀಮಂತರ ಮನೆ ಮಕ್ಕಳನ್ನು ನೋಡಿಕೊಳ್ಳುವ ನಾನಿಯರಿಗೆ ವರ್ಷಕ್ಕೆ 30 ಲಕ್ಷ ರೂಪಾಯಿ ಸಂಬಳ ನೀಡಲಾಗುತ್ತದೆ. ಕೆಲ್ಲಿಗೂ ಅಂದಾಜು ಇಷ್ಟೇ ಸಂಬಳ ಬರುತ್ತದೆ.  ಮಕ್ಕಳ ಜೊತೆ ಆಟ, ಟಿವಿ, ನಿದ್ರೆಯನ್ನು ಎಂಜಾಯ್ ಮಾಡುವ ಕೆಲ್ಲಿ, ಕೈತುಂಬ ಸಂಬಳ ಕೂಡ ಪಡೆಯುತ್ತಿದ್ದಾಳೆ. 
 

click me!