ಪ್ರತೀ ಯಶಸ್ವಿ ಮಹಿಳೆಯ ಹಿಂದೆ ಪುರುಷನಿದ್ದಾನೆ-ಸುಧಾಮೂರ್ತಿ; ಇದಪ್ಪಾ ಮಾತು ಅಂದ್ರೆ ಎಂದ ನೆಟ್ಟಿಗರು

Published : Sep 20, 2023, 03:47 PM IST
ಪ್ರತೀ ಯಶಸ್ವಿ ಮಹಿಳೆಯ ಹಿಂದೆ ಪುರುಷನಿದ್ದಾನೆ-ಸುಧಾಮೂರ್ತಿ; ಇದಪ್ಪಾ ಮಾತು ಅಂದ್ರೆ ಎಂದ ನೆಟ್ಟಿಗರು

ಸಾರಾಂಶ

ಪ್ರತೀ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆಯಿರುತ್ತಾಳೆ. ಈ ಮಾತನ್ನು ನಾವು ಸಾಮಾನ್ಯವಾಗಿ ಕೇಳಿರುತ್ತೇವೆ. ಹಾಗೆಯೇ ಪ್ರತಿ ಯಶಸ್ವೀ ಮಹಿಳೆ ಹಿಂದೆ ಪುರುಷನ ಬೆಂಬಲವಿರುತ್ತದೆ ಎಂದು ಇನ್ಫೋಸಿಸ್‌ನ ಸುಧಾಮೂರ್ತಿ ಹೇಳಿದ್ದಾರೆ. 'ದಿ ವ್ಯಾಕ್ಸಿನ್ ವಾರ್‌' ಚಿತ್ರವನ್ನು ನೋಡಿದ ಬಳಿಕ ಅವರು ಹೀಗೆ ಹೇಳಿದ್ದು, ನೆಟ್ಟಿಗರು ಇದನ್ನು ಕೇಳಿ ಇದಪ್ಪಾ ಮಾತಂದ್ರೆ ಅಂದಿದ್ದಾರೆ.

ಇನ್ಫೋಸಿಸ್ ಪ್ರತಿಷ್ಠಾನದ ಮಾಜಿ ಅಧ್ಯಕ್ಷೆ ಸುಧಾ ಮೂರ್ತಿ ಸರಳ, ಸಜ್ಜನಿಕೆಯ ವ್ಯಕ್ತಿ. ಯಶಸ್ವೀ ಉದ್ಯಮಿಯಾಗಿರುವುದರ ಜೊತೆಗೆ ತಮ್ಮ ಮಾತು, ಗುಣ, ನಡವಳಿಕೆಯಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ಜೀವನದ ಬಗ್ಗೆ ಅವರಾಡುವ ಮಾತುಗಳು ಎಂಥವರಲ್ಲೂ ಸ್ಪೂರ್ತಿ ತರಿಸುವಂತಿರುತ್ತದೆ. ಕುಟುಂಬ, ಮಕ್ಕಳ ಬೆಳವಣಿಗೆ, ಸಮಾಜ, ಸರಳ ಬದುಕು, ಆಧ್ಯಾತ್ಮ ಹೀಗೆ ಎಲ್ಲದರ ಬಗ್ಗೆಯೂ ಸುಧಾಮೂರ್ತಿಯವರು ಮಾತನಾಡುತ್ತಾರೆ. ಇತ್ತೀಚಿಗೆ ವಿವೇಕ್ ಅಗ್ನಿಹೋತ್ರಿಯವರ 'ದಿ ವ್ಯಾಕ್ಸಿನ್ ವಾರ್' ಚಿತ್ರವನ್ನು ವೀಕ್ಷಿಸಿ ಸುಧಾಮೂರ್ತಿಯವರು ಮಾತನಾಡಿದ್ದು, ಎಲ್ಲರ ಗಮನ ಸೆಳೆದಿದೆ. 

 ಸುಧಾ ಮೂರ್ತಿ ಇತ್ತೀಚೆಗೆ ವಿವೇಕ್ ಅಗ್ನಿಹೋತ್ರಿ ಅವರ ಮುಂಬರುವ ಚಿತ್ರ ದಿ ವ್ಯಾಕ್ಸಿನ್ ವಾರ್ ಪ್ರದರ್ಶನಕ್ಕೆ ಹಾಜರಾಗಿದ್ದರು. ಚಲನಚಿತ್ರವನ್ನು (Movies) ವೀಕ್ಷಿಸಿದ ನಂತರ, ಸುಧಾ ಅವರು ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. 

ಸಿಂಪಲ್ ಆಗಿರೋದೆ ಇಷ್ಟ, ನಾನು Low maintenance wife ಎಂದ ಸುಧಾಮೂರ್ತಿ

ಮಹಿಳೆ, ಮನೆ ಮತ್ತು ಕೆಲಸವನ್ನು ಜೊತೆಯಲ್ಲೇ ನಿಭಾಯಿಸುವುದು ಸುಲಭವಲ್ಲ
ವ್ಯಾಕ್ಸಿನ್ ವಾರ್‌ ಸಿನಿಮಾವನ್ನು ಭಾರತದ ಮೊದಲ ಜೈವಿಕ-ವಿಜ್ಞಾನ ಸಿನಿಮಾ ಪ್ರಯತ್ನ ಎಂದು ಹೇಳಲಾಗುತ್ತದೆ. ತಯಾರಕರ ಪ್ರಕಾರ, ಇದು ಭಾರತ ಮತ್ತು ಜಗತ್ತಿಗೆ ಕೈಗೆಟುಕುವ ಲಸಿಕೆ (Vaccine)ಯನ್ನು ಅಭಿವೃದ್ಧಿಪಡಿಸುವ ಮೂಲಕ COVID-19 ವಿರುದ್ಧದ ಹೋರಾಟದಲ್ಲಿ ಭಾರತೀಯ ವಿಜ್ಞಾನಿಗಳ ನೈಜ ಕಥೆಯನ್ನು ಆಧರಿಸಿದೆ. ಪ್ರದರ್ಶನದ ನಂತರ ಸುಧಾ ಮೂರ್ತಿ ಅವರು ತಮ್ಮ ಚಿತ್ರದ ಬಗ್ಗೆ ಮಾತನಾಡಿರುವ ವಿಡಿಯೋವನ್ನು ವಿವೇಕ್ ಅಗ್ನಿಹೋತ್ರಿ ಹಂಚಿಕೊಂಡಿದ್ದಾರೆ.

ಇದರಲ್ಲಿ ಸುಧಾಮೂರ್ತಿ ಮೂವಿಯನ್ನು 'ಹೃದಯ ಸ್ಪರ್ಶಿ' ಎಂದು ಕರೆದಿದ್ದಾರೆ. COVID-19ಗೆ ಲಸಿಕೆಯನ್ನು ರಚಿಸುವಲ್ಲಿ ಮಹಿಳಾ ವಿಜ್ಞಾನಿಗಳ ಪ್ರಯತ್ನವನ್ನು ಚಲನಚಿತ್ರವು ತೋರಿಸಿದಂತೆ, ಅರ್ಥಮಾಡಿಕೊಳ್ಳುವ ಪುರುಷ (Men)ನಿಂದ ಮಹಿಳೆಯ ಯಶಸ್ಸು ಸಾಧ್ಯವಾಗುತ್ತದೆ ಎಂಬುದರ ಕುರಿತು ಅವರು ಮಾತನಾಡಿದರು.

'ನಾನು ಮಹಿಳೆಯ ಪಾತ್ರವನ್ನು ಅರ್ಥಮಾಡಿಕೊಂಡಿದ್ದೇನೆ. ಏಕೆಂದರೆ ಅವಳು ತಾಯಿ, ಅವಳು ಹೆಂಡತಿ ಮತ್ತು ಅವಳು ವೃತ್ತಿಜೀವನದ ವ್ಯಕ್ತಿ. ಕುಟುಂಬ ಮತ್ತು ಕೆಲಸವನ್ನು ಸಮತೋಲನಗೊಳಿಸುವುದು ತುಂಬಾ ಕಷ್ಟ. ಅದರಲ್ಲೂ ಮಹಿಳೆಗೆ ಮಕ್ಕಳೊಂದಿಗೆ ತನ್ನ ವೃತ್ತಿಜೀವನವನ್ನು ಮುಂದುವರಿಸುವುದು ಸುಲಭವಲ್ಲ. ಆಕೆಗೆ  ಕುಟುಂಬದಿಂದ ಉತ್ತಮ ಬೆಂಬಲ ಬೇಕು ಎಂದು ನಾನು ಯಾವಾಗಲೂ ಹೇಳುತ್ತೇನೆ, ಪ್ರತಿಯೊಬ್ಬ ಯಶಸ್ವಿ ಮಹಿಳೆಯ ಹಿಂದೆ, ಅರ್ಥಮಾಡಿಕೊಳ್ಳುವ ಪುರುಷನಿದ್ದಾನೆ, ಇಲ್ಲದಿದ್ದರೆ ಅವಳು ಯಾವುದೇ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ' ಎಂದು ಸುಧಾಮೂರ್ತಿ ತಿಳಿಸಿದ್ದಾರೆ.

ಇನ್ಪೋಸಿಸ್‌ ಆರಂಭಿಸಲು ಪತಿಗೆ 10,000 ರೂ. ಸಾಲ ಕೊಟ್ಟಿದ್ದರಂತೆ ಸುಧಾ ಮೂರ್ತಿ!

ಮಹಿಳಾ ವಿಜ್ಞಾನಿಗಳ ಕಥೆಯನ್ನು ಆಧರಿಸಿದ 'ದಿ ವ್ಯಾಕ್ಸಿನ್ ವಾರ್‌' ಸಿನಿಮಾ
'ದಿ ವಾಕ್ಸಿನ್‌ ವಾರ್‌', ಸಾಂಕ್ರಾಮಿಕ ಸಮಯದಲ್ಲಿ ಪ್ರಯೋಗಾಲಯದಲ್ಲಿ ಸಮಯ ಕಳೆದ ಮಹಿಳಾ ವಿಜ್ಞಾನಿಗಳ ಕಥೆಯನ್ನು ಪ್ರದರ್ಶಿಸುವ ಸಿನಿಮಾವಾಗಿದೆ. ಸುಧಾ ಮೂರ್ತಿ ಅವರ ಪ್ರಕಾರ, ವಾಕ್ಸಿನ್ ವಾರ್‌ ಭಾರತದಲ್ಲಿ ಕರೋನವೈರಸ್ ವಿರುದ್ಧ ಲಸಿಕೆಗಳು ಹೇಗೆ ಅಸ್ತಿತ್ವಕ್ಕೆ ಬಂದವು ಎಂಬುದರ ಕುರಿತು ಜನರಿಗೆ ತಿಳಿಸುತ್ತದೆ. 

'ಕೊವಾಕ್ಸಿನ್ ಏನು ಎಂಬುದು ಸಾಮಾನ್ಯ ಜನರಿಗೆ ಅರ್ಥವಾಗುವುದಿಲ್ಲ. ಅದು ಕೇವಲ ಒಂದು ಲಸಿಕೆ ಅಂದುಕೊಂಡಿದ್ದಾರೆ. ಆದರೆ, ಹಿಂದಿರುವ ಶ್ರಮವನ್ನು ಈ ಸಿನಿಮಾ ತೋರಿಸುತ್ತದೆ. ಎಲ್ಲಾ ವಿಜ್ಞಾನಿಗಳು ಮಾಡಿದ್ದು ನಿಸ್ವಾರ್ಥದ ಕೆಲಸ. ಕೋವಿಡ್ ಅವಧಿಯಲ್ಲಿ ಅವರು ಗರಿಷ್ಟ ಸಮಯವನ್ನು ಔಷಧ ಕಂಡು ಹಿಡಿಯಲು ಕಳೆದರು. ಇದರಿಂದ ನಾವು ಸುಖವಾಗಿ ಬದುಕುವಂತಾಯಿತು' ಎಂದು ಸುಧಾ ಮೂರ್ತಿ ಹೇಳಿದ್ದಾರೆ.. ಕಲಾವಿದರ ನಟನೆ, ವಿವೇಕ್‌ ಅಗ್ನಿಹೋತ್ರಿ ನಿರ್ದೇಶನ ಮತ್ತು ತಂಡದ ಶ್ರಮಕ್ಕೆ ಭೇಷ್ ಎಂದಿದ್ದಾರೆ.

ಇದೇ ಸೆ.28ರಂದು ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ರಿಲೀಸ್ ಆಗುತ್ತಿದೆ. ಸಿನಿಮಾದಲ್ಲಿ ಕಾಂತಾರ ನಟಿ ಸಪ್ತಮಿ ಗೌಡ, ಅನುಪಮ್ ಖೇರ್, ಪಲ್ಲವಿ ಜೋಶಿ, ರೈಮಾ ಸೇನ್ ಸೇರಿದಂತೆ ಹಲವರು ನಟಿಸಿದ್ದಾರೆ. ‘ದಿ ಕಾಶ್ಮೀರಿ ಫೈಲ್ಸ್’ ಸಕ್ಸಸ್ ನಂತರ ಈ ಸಿನಿಮಾಗೆ ವಿವೇಕ್ ಅಗ್ನಿಹೋತ್ರಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ರಿಲೀಸ್‌ಗೆ ಫ್ಯಾನ್ಸ್ ಕಾಯ್ತಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಸಾಲೆ ಪೌಡರ್ ಮಾಡುವಾಗ ಸ್ವಲ್ವೇ ಸ್ವಲ್ಪ ಅಕ್ಕಿ ಸೇರಿಸಿ, ಅಡುಗೆ ರುಚಿ ಡಬ್ಬಲ್ ಆಗುತ್ತೆ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!