ಈ ಮಹಿಳೆಗೆ ಬಂದ ಕಷ್ಟಗಳು ಇನ್ಯಾರಿಗೂ ಬರಲಾರವು..! ಜೈಲಿಗೋದ ಗಂಡ, 17 ಮೂಳೆ ಮುರಿತ, ಮಗು ಸಾವು!

ಈ ಮಹಿಳೆ ಗಂಡನಿಂದ ಬೆಟ್ಟದಿಂದ ತಳ್ಳಲ್ಪಟ್ಟರೂ 17 ಮೂಳೆ ಮುರಿದು, 100 ಪಿನ್‌ಗಳಿಂದ ಮೂಳೆ ಜಾಯಿಂಟ್ ಮಾಡಿದ್ದರೂ ಆಕೆ ಇನ್ನೂ ಬದುಕುಳಿದಿದ್ದಾರೆ. ಹೊಟ್ಟೆಯಲ್ಲಿದ್ದ ಮಗು ಸಾವು, ಗಂಡ ಜೈಲು ಪಾಲು, ಮತ್ತೊಂದು ಮಗುವಿಗೆ ಹಾರ್ಟ್ ಸಮಸ್ಯೆ... ಇತ್ಯಾದಿ ಕಷ್ಟಗಳ ಸಾಲು ಬೆಳೆಯುತ್ತಾ ಹೋಗುತ್ತದೆ.. 


ಸಾಮಾನ್ಯವಾಗಿ ಜೀವನದಲ್ಲಿ ಎಲ್ಲರಿಗೂ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತವೆ. ಆದರೆ, ಈ ಮಹಿಳೆಯ ಜೀವನದಲ್ಲಿ ಎದುರಾದ ಕಷ್ಟಗಳು ಬೇರೆ ಯಾರಗೂ ಬರಲಾರವು ಎಂದೆನಿಸುತ್ತದೆ. ಆಕೆಯ ಗಂಡನೇ ಜೀವ ತೆಗೆಯಲು ಪ್ರಯತ್ನಿಸಿದರೂ 17 ಮೂಳೆ ಮುರಿದುಕೊಂಡು ಬದುಕಿದ ಮಹಿಳೆ ಜೀವನ ಜೀವಂತ ಶವದಂತಾಗಿದೆ. ಆಕೆಗೆ ಎದುರಾಗಿರುವ ಇನ್ನೂ ಹಲವು ಕಷ್ಟಗಳ ಬಗ್ಗೆ ಸ್ವತಃ ಮಹಿಳೆ ಹೇಳಿಕೊಂಡಿದ್ದು, ಲಕ್ಷಾಂತರ ಜನರು ಆಕೆಗೆ ಅಭಿಮಾನಿಗಳಾಗಿದ್ದಾರೆ.. ಇಲ್ಲಿದೆ ನೋಡಿ ಪೂರ್ತಿ ಕಥೆ..

ನಮ್ಮದೊಂದು ಸುಂದರ ಕುಟುಂಬ, ಅನ್ಯೋನ್ಯವಾಗಿದ್ದ ದಂಪತಿಯ ಸಂಸಾರ ಸುಖವಾಗಿ ಸಾಗುತ್ತಿತ್ತು. ಆದರೆ, ಆನ್‌ಲೈನ್ ಜೂಜಾಟಕ್ಕೆ ಬಿದ್ದು ಗಂಡ ಹಣ ಕಳೆದುಕೊಂಡು, ಮೈತುಂಬಾ ಸಾಲ ಮಾಡಿಕೊಂಡಿದ್ದಾನೆ. ಈ ಸಾಲ ತೀರಿಸಲಾಗದೇ ಒದ್ದಾಡುತ್ತಿದ್ದಾಗ ಹೆಂಡತಿ ಆಸ್ತಿ, ಆಕೆಯನ್ನು ಪ್ರವಾಸಿ ತಾಣಕ್ಕೆ ಕರೆದೊಯ್ದು ಬೆಟ್ಟದಿಂದ ತಳ್ಳಿದ್ದಾನೆ. ನೂರಾರು ಅಡಿ ಕೆಳಗೆ ಬಿದ್ದ ಹೆಂಡತಿ ದೇಹದಲ್ಲಿ 17 ಕಡೆ ಮೂಳೆ ಮುರಿದ್ದರೂ, ಬದುಕಿ ವಾಪಸ್ ಬಂದಿದ್ದಾಳೆ. ಆದರೆ, ಆಕೆಯ ಹೊಟ್ಟೆಯೊಳಗಿದ್ದ ಮಗು ಸಾವನ್ನಪ್ಪಿದೆ... ಹೀಗೆ ಕಥೆ ತೆರೆದುಕೊಳ್ಳುತ್ತದೆ..

Latest Videos

ಈ ಮಹಿಳೆ ಥೈಲ್ಯಾಂಡ್‌ ಮೂಲದ 38 ವರ್ಷದ ವಾಂಗ್ ನಾನ್. ಈಎ ತನ್ನ ಬದುಕುಳಿದ ಕಥೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. 2019ರಲ್ಲಿ ಒಂದು ರಜಾ ದಿನ ನನಗೆ ಕರಾಳ ದಿನವಾಗಿತ್ತು. ಸ್ವತಃ ನನ್ನ ಪತಿ ಯು ಕ್ಸಿಯಾಡಾಂಗ್ ಬೆಟ್ಟದ ಮೇಲೆ ಕರೆದುಕೊಂಡು ಹೋಗಿ ಬಂಡೆ ಮೇಲಿಂದ ತಳ್ಳಿದ್ದಾನೆ. ಈ ದಾಳಿಯಲ್ಲಿ ನನ್ನ ದೇಹದಲ್ಲಿ 17 ಕಡೆ ಮೂಳೆ ಮುರಿದುಕೊಂಡವು. ಇದೀಗ ದೇಹದಲ್ಲಿ 100ಕ್ಕೂ ಹೆಚ್ಚು ಕಡೆ ಉಕ್ಕಿನ ಪಿನ್‌ಳನ್ನು ಅಳವಡಿಕೆ ಮಾಡಿದ್ದಾರೆ. ಆದರೆ, ನನ್ನ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿತು. ಜೀವಂತ ಶವದಂತಾಗಿದ್ದ ನಾನು ಈವರೆಗೆ ಜೀವ ಗಟ್ಟಿಯಾಗಿ ಹಿಡಿದುಕೊಂಡಿದ್ದೇನೆ ಎಂದು ಹೇಳಿದ್ದಾಳೆ.

ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಸಿಬ್ಬಂದಿ ಬೆಳಗ್ಗೆ 8ಕ್ಕೆ ಸಾಲ ವಸೂಲಿಗೆ ಬಂದರೆ ರಾತ್ರಿ 10ಕ್ಕೆ ವಾಪಸ್; ದಾಂಪತ್ಯದಲ್ಲಿ ಬಿರುಕು!

ಇದಾದ ನಂತರ ಈ ಮಹಿಳೆಗೆ ಚಿಕಿತ್ಸೆ ನೀಡಿದ ವೈದ್ಯರು ನೀವು ಮತ್ತೆಂದೂ ಗರ್ಭಿಣಿಯಾಗಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ಆದರೆ, ಕೆಲವು ವರ್ಷಗಳ ನಂತರ ಆಕೆ ಹಲವಾರು ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡು ಮಗುವಿಗೆ ಜೀವ ಕೊಡಲು ಸಾಧ್ಯವೆನ್ನುವಷ್ಟು ಆರೋಗ್ಯ ಸಂಪಾದಿಸಿದ್ದಾರೆ. 2024ರ ಸೆಪ್ಟೆಂಬರ್‌ನಲ್ಲಿ, ಐವಿಎಫ್ ಮೂಲಕ ಗಂಡು ಮಗುವನ್ನು ಪಡೆದಿದ್ದಾರೆ. ಆದರೆ, ಆ ಮಗು ಹೃದಯ ದೋಷದಿಂದ ಜನಿದಿದೆ. ಈಗ ಮಗುವಿಗೆ ಹಲವು ಚಿಕಿತ್ಸೆಗಳನ್ನು ಮಾಡಿಸಲಾಗಿದ್ದು, ಮಗು ಜೀವಕ್ಕೆ ಅಪಾಯವಿಲ್ಲದಂತೆ ಮಾಡಲಾಗಿದೆ.

ಇನ್ನು ಹೆಂಡತಿಯನ್ನು ಕೊಲೆ ಮಾಡಲು ಯತ್ನಿಸಿದ ಪತಿ ಕ್ಸಿಯಾಡಾಂಗ್‌ಗೆ ನ್ಯಾಯಾಲಯ 33 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಗಂಡನಿಂದ ಜೀವ ಹಾನಿಯಾಗಿದ್ದರೂ, ಅವಳು ಇನ್ನೂ ತನ್ನ ಗಂಡನಿಂದ ವಿಚ್ಛೇದನ ಪಡೆದುಕೊಂಡಿಲ್ಲ. ಇಷ್ಟಾದರೂ ಬುದ್ಧಿ ಕಲಿಯದ ಗಂಡ ತನ್ನ ಇಡೀ ಯೌವನವನ್ನು ಜೈಲಿನಲ್ಲಿ ಕಳೆಯುತ್ತಿದ್ದೇನೆ, ಹೀಗಾಗಿ ನನ್ನ ಹೆಂಡತಿ ಯು ವಾಂಗ್‌ ನನಗೆ 35 ಕೋಟಿ ರೂ. ಜೀವನಾಂಶ ಪರಿಹಾರ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾನೆ. ಈ ಕೇಸಿನಲ್ಲಿಯೂ ಕೂಡ ಮಹಿಳೆ ವಾಂಗ್ ಸೋಲಲು ಸಿದ್ಧರಿಲ್ಲದೇ, ಕಾನೂನು ಹೋರಾಟ ಮುಂದುವರೆಸಿದ್ದಾಳೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಮಂಗಳಮುಖಿಯರ ಜಡೆ ಜಗಳ: ವಿಡಿಯೋ ವೈರಲ್!

ಈ ಕಥೆಯನ್ನು ಮಹಿಳೆ ಹಂಚಿಕೊಂಡ ಬೆನ್ನಲ್ಲಿಯೇ ಚೀನಾದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಅವರಿಗೆ ಫಾಲೋವರ್ಸ್‌ಗಳ ಸಂಖ್ಯೆ ತೀವ್ರ ಹೆಚ್ಚಾಗಿದೆ. ಇದೀಗ ಮಹಿಳೆ ತನ್ನ ಮಗು ಮತ್ತು ಪೋಷಕರ ಪಾಲನೆ ಜೊತೆಗೆ ತನ್ನ ಉಳಿವಿಗಾಗಿ ಹೋರಾಡುತ್ತಿದ್ದಾಳೆ.

click me!