ಮಹಿಳೆಯರು ಟಿಂಡರ್ ಡೇಟಿಂಗ್ ಆ್ಯಪ್ ಬಳಸೋದು ಹೀಗಾ? ವಿಡಿಯೋ ನೋಡಿಯೇ ಸುಸ್ತಾದ ಜನ

Published : Mar 06, 2026, 07:08 PM IST
Woman Dating app use

ಸಾರಾಂಶ

ಮಹಿಳೆಯರು ಟಿಂಡರ್ ಡೇಟಿಂಗ್ ಆ್ಯಪ್ ಬಳಸೋದು ಹೀಗಾ? ವಿಡಿಯೋ ನೋಡಿಯೇ ಸುಸ್ತಾದ ಜನ, ಡೇಟಿಂಗ್ ಆ್ಯಪ್ ಮೂಲಕವೇ ಇದೀಗ ಜನ ಹೆಚ್ಚು ಸಕ್ರಿಯವಾಗಿದ್ದಾರೆ. ಇದೀಗ ಮಹಿಳೆಯರು ಡೇಟಿಂಗ್ ಆ್ಯಪ್ ಬಳಕೆ ಕುರಿತು ಭಾರಿ ಚರ್ಚೆಯಾಗುತ್ತಿದೆ. 

ಸೋಶಿಯಲ್ ಮೀಡಿಯಾದಲ್ಲಿನ ಅಭಿಪ್ರಾಯಗಳ ಪ್ರಕಾರ ಮಹಿಳೆಯರು ಹಾಗೂ ಪುರುಷರು ಡೇಟಿಂಗ್ ಆ್ಯಪ್ ಬಳಕೆ ಭಿನ್ನ ಅನ್ನೋ ವಾದವಿದೆ. ಪುರುಷರು ಟಿಂಡರ್ ಆ್ಯಪ್ ಬಳಕೆ ವೇಳೆ ಪ್ರತಿ ಪ್ರೊಫೈಲ್ ಮ್ಯಾಚ್ ಆಗುತ್ತಾ ಅನ್ನೋದು ಚೆಕ್ ಮಾಡುತ್ತಾರೆ. ಡೇಟಿಂಗ್ ಆ್ಯಪ್‌ನನಲ್ಲಿ ಪ್ರತಿ ಅವಕಾಶವನ್ನು ಬಳಸಿಕೊಳ್ಳಲು ಪುರುಷರು ನೋಡುತ್ತಾರೆ, ಜೊತೆಗೆ ಬಲಬದಿಗೆ ಸ್ವೈಪ್ ಮಾಡುತ್ತಾರೆ ಎಂಬುದು ಸೋಶಿಯಲ್ ಮೀಡಿಯಾ ಅಭಿಪ್ರಾಯ. ಇದೇ ವೇಳೆ ಮಹಿಳೆಯರು ತುಂಬಾ ಸೆಲೆಕ್ಟೀವ್ ಆಗಿರುತ್ತಾರೆ ಜೊತೆಗೆ ಎಡಬದಿಗೆ ಸ್ವೈಪ್ ಮಾಡುತ್ತಾರೆ. ಪ್ರೊಫೈಲ್ ಸೆಲೆಕ್ಟ್ ಮಾಡಲು ಸಾಕಷ್ಟು ತಡಕಾಡುತ್ತಾರೆ ಅನ್ನೋ ಅಭಿಪ್ರಾಯಗಳಿವೆ. ಇದೀಗ ಮಹಿಳೆಯೊಬ್ಬರು ಟಿಂಡರ್ ಡೇಟಿಂಗ್ ಆ್ಯಪ್ ಬಳಸುತ್ತಿರುವ ವಿಡಿಯೋ ಒಂದು ಬಹಿರಗವಾಗಿದೆ. ಈ ವಿಡಿಯೋ ನೋಡಿದ ಜನರು ಸೋಶಿಯಲ್ ಮೀಡಿಯಾ ಅಭಿಪ್ರಾಯ ಸರಿ ಎಂದಿದ್ದಾರೆ.

ರೆಸ್ಟೋರೆಂಟ್ ಒಂದರಲ್ಲಿ ಈ ವಿಡಿಯೋ ರೆಕಾರ್ಡ್ ಮಾಡಲಾಗಿದೆ. ಟೇಬಲ್ ಮೇಲೆ ಔತಣಕೂಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಗಣ್ಯರು, ಅತಿಥಿಗಳು ಟೇಬಲ್ ಮುಂದೆ ಕುಳಿತಿದ್ದಾರೆ. ಈ ಯುವತಿ ಕೂಡ ಔತಣಕೂಟದಲ್ಲಿ ಪಾಲ್ಗೊಂಡಿದ್ದಾರೆ. ಟೇಬಲ್ ಮುಂದೆ ಕುಳಿತಿದ್ದಾರೆ. ಔತಣಕೂಡ ಆರಂಭಕ್ಕೂ ಇರುವ ಕೆಲ ನಿಮಿಷಕ್ಕೂ ಮೊದಲು ಮಹಿಳೆ ಟಿಂಡರ್ ಡೇಟಿಂಗ್ ಆ್ಯಪ್ ಚೆಕ್ ಮಾಡಿದ್ದಾರೆ. ಈ ಮಹಿಳೆಯ ಟಿಂಡರ್ ಡೇಟಿಂಗ್ ಆ್ಯಪ್ ಬಳಕೆ ಮಾಡುತ್ತಿರುವುದನ್ನು ವಿಡಿಯೋವನ್ನು ಸೆರೆ ಹಿಡಿದಿದ್ದರೆ.

ಡೇಟಿಂಗ್ ಆ್ಯಪ್ ಬಳಕೆ ನೋಡಿ ಸುಸ್ತಾದ ಜನ

ಮಹಿಳೆ ಔತಣಕೂಟದ ಟೇಬಲ್ ಮುಂದೆ ಕುಳಿತ 10 ಸೆಕೆಂಡ್‌ನಲ್ಲಿ 25ಕ್ಕೂ ಹೆಚ್ಚು ಪ್ರೊಫೈಲ್ ಸ್ವೈಪ್ ಮಾಡಿದ್ದಾಳೆ. ಮಹಿಳೆಯ ಸ್ವೈಪ್ ಸ್ಪೀಡ್ ನೋಡಿ ಜನರು ಸುಸ್ತಾಗಿದ್ದಾರೆ. ಪ್ರೊಫೈಲ್ ಸರಿಯಾಗಿ ನೋಡುವ ಮುನ್ನವೇ ಮಹಿಳೆ ಸ್ವೈಪ್ ಮಾಡಿ ಚೇಂಜ್ ಮಾಡುತ್ತಿದ್ದಾಳೆ. ಲೆಫ್ಟ್‌ಗೆ ಸ್ವೈಪ್ ಮಾಡುತ್ತಿದ್ದಾಳೆ. ಅತ್ಯಂತ ವೇಗವಾಗಿ ಮಹಿಳೆ ಪ್ರೊಪೈಲ್ ಬದಲಿಸುತ್ತಾ ಚೆಕ್ ಮಾಡಿದ್ದಾಳೆ. ಇಷ್ಟು ವೇಗದಲ್ಲಿ ಪ್ರೊಫೈಲ್ ಏನು, ಯಾರು ಅನ್ನೋದು ನೋಡಲು ಸಮಯವಿಲ್ಲ. ಅಷ್ಟರೊಳಗೆ ಈ ಮಹಿಳೆ ಹೇಗೆ ಜಡ್ಜ್ ಮಾಡಿದ್ದಾರೆ ಅನ್ನೋ ಪ್ರಶ್ನೆಗಳು ಹುಟ್ಟಿದೆ.

ಈ ವಿಡಿಯೋಗೆ ಭರ್ಜರಿ ಕಮೆಂಟ್ ವ್ಯಕ್ತವಾಗಿದೆ. ಇದು ಲಿಂಕ್ಡ್‌ಇನ್ ಸಿಬ್ಬಂದಿಗಳು ರೆಸ್ಯೂಮ್ ಫಿಲ್ಟರ್ ಮಾಡುವ ವಿಧಾನ ಎಂದು ವ್ಯಂಗ್ಯವಾಡಿದ್ದಾರೆ. ಇಷ್ಟು ವೇಗದಲ್ಲಿ ದುಡ್ಡು ಎಣಿಸುವಂತಾಗಲಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇಲ್ಲೇ ಗೊತ್ತಾಗುತ್ತೆ ಡೇಟಿಂಗ್ ಆ್ಯಪ್ ಎಷ್ಟು ದೊಡ್ಡ ಸ್ಕ್ಯಾಮ್ ಎಂದು. ಮಹಿಳೆ ಈ ರೀತಿ ಪ್ರೊಫೈಲ್ ನೋಡಿದರೆ ಮ್ಯಾಚ್ ಆಗುವಾತ ಹೇಗಿರಬೇಕು ಎಂದು ಪ್ರಶ್ನಿಸಿದ್ದಾರೆ.

 

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Beer vs Milk: ಹಾಲಿಗಿಂತಲೂ ಬಿಯರ್ ಹೆಚ್ಚು ಆರೋಗ್ಯಕರ ಅನ್ನೋದು ಸತ್ಯವೇ? ಇಲ್ಲಿದೆ ಅಸಲಿ ಗುಟ್ಟು!
ದಿನಾ ಅದೇ ಇಡ್ಲಿ, ದೋಸೆ, ಉಪ್ಪಿಟ್ಟು ತಿಂದು ಬೇಸರವಾಗಿದೆಯೇ? ಒಮ್ಮೆ ಈ 'ಪಾಪಡ್ ದೋಸೆ' ಟ್ರೈ ಮಾಡಿ!