ತಾಯಿಯಾಗ್ಬೇಕು ಎಂಬ ಕನಸನ್ನು ಮಹಿಳೆ ಕಾಣ್ತಾಳೆ. ಗರ್ಭಿಣಿಯಾಗಿದ್ದಾಳೆ ಎಂದಾಗ ಆಕೆ ಖುಷಿ ಹೇಳತೀರದು. ಗರ್ಭ ಧರಿಸದ ಮೇಲೆ ಮಗು ಹಾಗೂ ತಾಯಿಗೆ ಅನೇಕ ಸಮಸ್ಯೆ ಕಾಡುತ್ತದೆ. ಚೆಕ್ ಅಪ್ ಮಾಡಿಸಿಕೊಂಡು ಗರ್ಭಧರಿಸುವ ಪ್ಲಾನ್ ಮಾಡಿದ್ರೆ ಮುಂದೆ ಯಾವುದೇ ಸಮಸ್ಯೆಯಾಗೋದಿಲ್ಲ.
ತಾಯಿಯಾಗುವುದು ಮಹಿಳೆಯರ ಪಾಲಿಗೆ ಅತ್ಯಂತ ಸಂತೋಷದ ಘಳಿಗೆ. ಈ ಸಮಯ ಆಕೆಯಲ್ಲಿ ಮಾನಸಿಕ, ದೈಹಿಕ ಹಾಗೂ ಭಾವನಾತ್ಮಕ ಪರಿವರ್ತನೆಗಳು ಸಹಜವಾಗಿಯೇ ಆಗುತ್ತವೆ. ಗರ್ಭಧರಿಸುವುದರಿಂದ ಮೊದಲಾಗಿ ಪುಟ್ಟ ಕಂದನಿಗೆ ಜನ್ಮ ನೀಡುವ ದಾರಿ ಬಹಳ ಸುದೀರ್ಘ ಹಾಗೂ ಕಷ್ಟಕರ. ಹೆಣ್ಣಿಗೆ ಒಮ್ಮೆ ತಾನು ಗರ್ಭಧರಿಸಿದ್ದೇನೆ ಅಥವಾ ಗರ್ಭ ಧರಿಸಲು ಆಕೆ ಮಾನಸಿಕವಾಗಿ ಸಿದ್ಧಳಾದಾಗಲೇ ಆಕೆಯಲ್ಲಿ ಹತ್ತು ಹಲವು ಪ್ರಶ್ನೆ, ಕುತೂಹಲ ಹಾಗೂ ಅಂಜಿಕೆ ಮನೆಮಾಡುತ್ತದೆ.
ಹೊಟ್ಟೆ (Stomach) ಯಲ್ಲಿ ಬೆಳೆಯುವ ಮಗುವಿನ ಆರೋಗ್ಯ (Health) ಚೆನ್ನಾಗಿರಲಿ, ಅದಕ್ಕೆ ಯಾವುದೇ ರೀತಿಯ ತೊಂದರೆಯಾಗದಿರಲಿ ಎಂದು ಎಲ್ಲ ತಾಯಂದಿರು ಬಯಸುತ್ತಾರೆ. ಮುಂದೆ ಜನಿಸುವ ಮಗುವಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂದರೆ ಗರ್ಭಧರಿಸುವ ಮೊದಲು ಕೆಲವು ತಪಾಸಣೆಗಳನ್ನು ಮಾಡಿಸಿಕೊಳ್ಳುವುದು ಒಳ್ಳೆಯದು. ಇದರಿಂದ ಹುಟ್ಟುವ ಮಗುವೂ ಕೂಡ ಆರೋಗ್ಯವಂತವಾಗಿರುತ್ತೆ. ಸಾಮಾನ್ಯವಾಗಿ ಗರ್ಭಧರಿಸವುದಕ್ಕೂ ಮುನ್ನ ಮೆಡಿಕಲ್ (Medical) ರೆಕಾರ್ಡ್ಸ್, ಲಸಿಕೆಗಳು, ಜೀವನಶೈಲಿ, ಆಹಾರಾಭ್ಯಾಸ, ಮದ್ಯಪಾನ, ಧೂಮಪಾನ (Smoking) ದ ವಿವರಗಳ ಬಗ್ಗೆ ತಪಾಸಣೆ ಮಾಡಲಾಗುತ್ತದೆ.
ಗರ್ಭಾವಸ್ಥೆ, ಹೆರಿಗೆ ಸಮಯದಲ್ಲಿ ಪ್ರತಿ 2 ನಿಮಿಷಕ್ಕೊಂದು ಮಹಿಳೆ ಸಾವು: ವಿಶ್ವಸಂಸ್ಥೆ
ಗರ್ಭಧರಿಸುವ ಮುನ್ನ ಪೂರ್ವಭಾವಿ ತಪಾಸಣೆ ಏಕೆ ಮುಖ್ಯ?: ಮದುವೆಯಾದ ನಂತರ ಗಂಡ ಹೆಂಡತಿ ತಂದೆತಾಯಿಗಳಾಗುವ ಸಂದರ್ಭ ಇಬ್ಬರ ಜೀವನವನ್ನೂ ಬದಲಾಯಿಸುತ್ತದೆ. ಈ ಹಂತದಲ್ಲಿ ಇಬ್ಬರ ಆರೋಗ್ಯ ಸ್ಥಿತಿ ಕೂಡ ಚೆನ್ನಾಗಿರುವುದು ಅತೀ ಮುಖ್ಯ. ಹಾಗಾಗಿ ಈ ಪ್ರಕ್ರಿಯೆಯಲ್ಲಿ ಪೂರ್ವತಪಾಸಣೆಯು ಒಂದು ಪ್ರಮುಖ ಹಂತವಾಗಿದೆ. ಇಂತಹ ತಪಾಸಣೆಯಿಂದ ಸಂಭಾವ್ಯ ತೊಡಕುಗಳು, ಅಪಾಯಗಳನ್ನು ಗುರುತಿಸಲು ಮತ್ತು ರೋಗನಿರ್ಣಯ ಮಾಡಲು ಸಹಾಯವಾಗುತ್ತದೆ. ಇದರಿಂದ ತಾಯಿ ಮಗು ಇಬ್ಬರ ಆರೋಗ್ಯವೂ ಚೆನ್ನಾಗಿರುತ್ತೆ.
ಪ್ರಿಕನ್ಸೆಪ್ಷನ್ ಚೆಕ್ ಅಪ್ : ಪೂರ್ವಭಾವಿ ತಪಾಸಣೆಯಲ್ಲಿ ಗರ್ಭಧಾರಣೆಯ ಮೇಲೆ ಪರಿಣಾಮ ಬೀರಬಹುದಾದ ದೀರ್ಘಕಾಲದ ಖಾಯಿಲೆಗಳನ್ನು ಗುರುತಿಸಬಹುದಾಗಿದೆ. ಮಧುಮೇಹ, ಅಧಿಕ ರಕ್ತದೊತ್ತಡ ಹೊಂದಿರುವ ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ವಿಶೇಷ ಕಾಳಜಿ ಮತ್ತು ಚಿಕಿತ್ಸೆಯನ್ನು ಕೊಡಬೇಕಾಗುತ್ತದೆ. ಮಹಿಳೆ ಅಥವಾ ಪುರುಷನ ಕುಟುಂಬದಲ್ಲಿ ಅನುವಂಶಿಕ ಖಾಯಿಲೆಗಳು ಇದ್ದಲ್ಲಿ ಮಗುವಿಗೂ ಅಂತಹ ಖಾಯಿಲೆಗಳು ಬರುತ್ತದೆ. ಇಂತಹ ತೊಂದರೆಗಳಿಂದ ಹುಟ್ಟುವ ಮಗುವನ್ನು ದೂರವಿಡಬೇಕೆಂದರೆ ಪ್ರಿಕನ್ಸೆಪ್ಷನ್ ಚೆಕ್ ಅಪ್ ಅಗತ್ಯವಾಗಿದೆ.
ಆನುವಂಶಿಕ ಅಸ್ವಸ್ಥತೆಗಳ ಗುರುತಿಸುವಿಕೆ : ರೋಗನಿರ್ಣಯದ ಜೊತೆಗೆ ದಂಪತಿ ಕುಟುಂಬದ ಇತಿಹಾಸ ಕೂಡ ತಪಾಸಣೆಯಲ್ಲಿ ಒಳಗೊಂಡಿರುತ್ತದೆ. ಕುಟುಂಬದವರಲ್ಲಿ ಬಿಪಿ, ಡಯಾಬಿಟೀಸ್, ಆಟೋಇಮ್ಯೂನ್ ಅಸ್ವಸ್ಥತೆ, ಅಸ್ತಮಾ, ಅಂಗವಿಕಲತೆ, ಮಾನಸಿಕ ಮಾನಸಿಕ ಅಸ್ವಸ್ಥತೆ ಮುಂತಾದ ವಂಶವಾಹಿ ಖಾಯಿಲೆಗಳನ್ನು ಗುರುತಿಸಲಾಗುತ್ತದೆ. ಗರ್ಭಧಾರಣೆಗೆ ಮುನ್ನ ಆನುವಂಶಿಕ ಸಮಾಲೋಚನೆ ಆನುವಂಶಿಕ ಅಪಾಯಗಳನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತದೆ. ಇದರಿಂದ ಮಗುವು ಆನುವಂಶಿಕ ಖಾಯಿಲೆಗಳಿಂದ ದುರ್ಬಲವಾಗುವುದನ್ನು ತಡೆಯಬಹುದಾಗಿದೆ.
ಪ್ರಿಕನ್ಸೆಪ್ಷನ್ ಚೆಕ್ ಅಪ್ ನಲ್ಲಿ ದಂಪತಿ ತೆಗೆದುಕೊಳ್ಳುತ್ತಿರುವ ಔಷಧ, ಚಿಕಿತ್ಸೆ ಮತ್ತು ವಿವಿಧ ಪರೀಕ್ಷೆಗಳ ಬಗ್ಗೆ ವಿಮರ್ಷೆ ಮಾಡಲಾಗುತ್ತದೆ. ಗರ್ಭಧಾರಣೆಯ ಮೇಲೆ ಪ್ರಭಾವ ಬೀರಬಹುದಾದ ಅಥವಾ ಅಂತಹ ಚಿಕಿತ್ಸೆಗಳಿಗೆ ಅಗತ್ಯವಿರುವ ಹೊಂದಾಣಿಕೆಗಳ ಬಗ್ಗೆ ಸಲಹೆ ನೀಡಲಾಗುತ್ತದೆ.
ಪ್ಲಾಸ್ಟಿಕ್ ಬಾಟಲ್‌ನಲ್ಲಿ ನೀರು ಕುಡಿಯೋದು ಅಪಾಯ, ಅದ್ರಲ್ಲೂ ಹೆಣ್ಮಕ್ಕಳು ಈ ಅಭ್ಯಾಸ ಬಿಟ್ಟರೊಳಿತು!
ಜೀವನಶೈಲಿಯ ಬದಲಾವಣೆ : ಮಗು ಹುಟ್ಟಿದಾಕ್ಷಣ ತಂದೆ ತಾಯಿಯರ ಜೀವನದಲ್ಲಿ ಬದಲಾವಣೆಗಳು ನಡೆದೇ ನಡೆಯುತ್ತದೆ. ಆದರೂ ಮಗು ಹೊರಜಗತ್ತಿಗೆ ಬಂದಮೇಲೆ ಹಾಗೂ ಬರುವ ಮೊದಲು ದಂಪತಿ ತಮ್ಮ ಜೀವನಶೈಲಿಯಲ್ಲಿ ಬದಲಾವಣೆ ತಂದುಕೊಳ್ಳಬೇಕಾಗುತ್ತದೆ. ಧೂಮಪಾನ ಮಾಡುವುದನ್ನು ಬಿಡಿವುದು, ತೂಕ ಕಡಿಮೆ ಮಾಡಿಕೊಳ್ಳುವುದರ ಮೂಲಕ ಆರೋಗ್ಯಕರ ಗರ್ಭಧಾರಣೆಯನ್ನು ಹೆಚ್ಚಿಸಬೇಕು. ಪ್ರಿಕನ್ಸೆಪ್ಷನ್ ಚೆಕ್ ಅಪ್ ಯಾವ ಸಮಸ್ಯೆಗೆ ಹೇಗೆ ಆರೋಗ್ಯದ ಆರೈಕೆ ಮಾಡಿಕೊಳ್ಳಬೇಕು, ಯಾರ ಮಾರ್ಗದರ್ಶನ ಮತ್ತು ಬೆಂಬಲ ಪಡೆಯಬೇಕು ಎನ್ನುವ ಅಮೂಲ್ಯವಾದ ಮಾಹಿತಿಯನ್ನು ನೀಡುತ್ತದೆ. ಅವಶ್ಯವಿದ್ದಲ್ಲಿ ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಿಕ್ (ART)ಗಳಂತಹ ಸಂತಾನೋತ್ಪತ್ತಿ ಆಯ್ಕೆಯನ್ನೂ ಸಹ ಪ್ರಿಕನ್ಸೆಪ್ಷನ್ ಚೆಕ್ ಅಪ್ ಒಳಗೊಂಡಿರುತ್ತದೆ.