ಚೂಯಿಂಗ್ ಗಮ್‌ ಗುಳ್ಳೆ ಮಾಡೋ ಕೆಲ್ಸ; ತಿಂಗಳಿಗೆ 67,000 ರೂ. ಆದಾಯ !

By Suvarna News  |  First Published Jul 27, 2022, 10:06 AM IST

ದಿನಪೂರ್ತಿ ಹೊಟ್ಟೆ ತುಂಬಾ ತಿನ್ತಾ, ಕಣ್ತುಂಬಾ ನಿದ್ದೆ ಮಾಡ್ತಾ ಇರ್ಬೇಕು ಅನ್ನೋದು ಹಲವರ ಆಸೆ. ಕೆಲ್ಸ ಮಾಡೋದು ಅಂದ್ರೆ ಸಾಕು ಮೂಗು ಮುರೀತಾರೆ. ಹಾಗೇ ಇಲ್ಲೊಬ್ಬಳು, ಜಸ್ಟ್ ಚೂಯಿಂಗ್‌ ಗಮ್‌ನಿಂದ ಗುಳ್ಳೆ ಸೃಷ್ಟಿಸೋ ಮೂಲಕ ತಿಂಗಳಿಗೆ ಭರ್ತಿ 67,000 ರೂ. ಗಳಿಸ್ತಿದ್ದಾಳೆ. 
 


ಜಗತ್ತಿನಲ್ಲಿ ಅದೆಷ್ಟು ಚಿತ್ರವಿಚಿತ್ರವಾದ ಆಸಕ್ತಿಕರ ಉದ್ಯೋಗಗಳಿವೆ.  ಅವುಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋದರೆ ಅಚ್ಚರಿಯಾಗೋದು ಖಂಡಿತ. ಇಡೀ ದಿನಾ ಟಿವಿ ನೋಡುವುದು, ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಕೆಲಸ ಮಾಡಿಕೊಳ್ಳುವುದು, ಸುಮ್ಮನೆ ಸೂಟ್ ಹಾಕಿಕೊಂಡು ಓಡಾಡುವುದಕ್ಕೆ ಕೂಡಾ ಸಂಬಳ ಕೊಡೋ ಕೆಲಸದ ಬಗ್ಗೆ ನೀವು ಈ ಹಿಂದೆ ಕೇಳಿದ್ದೀರಿ. ಆದ್ರೆ ಇದು ಇನ್ನೊಂಥರಾ  ವಿಚಿತ್ರ. ಈಕೆಗಿರೋದು ಚೂಯಿಂಗ್‌ ಗಮ್‌ನಿಂದ ಗುಳ್ಳೆ ಮಾಡೋದಷ್ಟೇ ಕೆಲಸ. ಕುಳಿತಲ್ಲೇ ಇದೇ ಕೆಲಸ ಮಾಡಿ ತಿಂಗಳಿಗೆ ಬರೋಬ್ಬರಿ 67,000 ರೂ. ಗಳಿಸ್ತಿದ್ದಾಳೆ.  ಹೌದು, ನಂಬಲು ಕಷ್ಟವೆನಿಸಿದರೂ ಇದು ನಿಜ. ಮಹಿಳೆಯೊಬ್ಬಳು ಚೂಯಿಂಗ್‌ ಗಮ್‌ನಿಂದ ಗುಳ್ಳೆಯನ್ನು ಸೃಷ್ಟಿಸೋ ಮೂಲಕ ಕುಳಿತಲ್ಲೇ ಸಾವಿರಗಟ್ಟಲೆ ಸಂಪಾದಿಸುತ್ತಿದ್ದಾಳೆ. 

30ಕ್ಕೂ ಹೆಚ್ಚು ಚ್ಯೂಯಿಂಗ್ ಗಮ್‌ ಜಗಿದು ಗುಳ್ಳೆ ತಯಾರಿ
ಜರ್ಮನಿಯ ಜೂಲಿಯಾ ಫೊರಾಟ್, ಒಂದೇ ಬಬಲ್-ಬ್ಲೋಯಿಂಗ್ ಸೆಷನ್‌ನಲ್ಲಿ 30ಕ್ಕೂ ಹೆಚ್ಚು ಚ್ಯೂಯಿಂಗ್ ಗಮ್‌ಗಳನ್ನು ತನ್ನ ಬಾಯಿಯಲ್ಲಿ ತುಂಬಿಕೊಂಡು ತಲೆಗಿಂತಲೂ ದೊಡ್ಡದಾದ ಗುಳ್ಳೆ (Bubble)ಯನ್ನು ಸೃಷ್ಟಿಸುತ್ತಾಳೆ.  ಅವಳು ತನ್ನ ಹೆಚ್ಚುವರಿ ಆದಾಯ (Income)ವನ್ನು ಗಳಿಸಲು ಒಂದು ತಿಂಗಳಲ್ಲಿ ಸುಮಾರು 480 ರೂ. ಅನ್ನು ಚೂಯಿಂಗ್ ಗಮ್‌ಗಳಿಗಾಗಿ ಖರ್ಚು ಮಾಡುತ್ತಾಳೆ. ನಿಮ್ಮ ಚೂಯಿಂಗ್ ಗಮ್‌ನ ಕ್ಲಿಪ್‌ಗಳನ್ನು ನೀವು ಮಾರಾಟ (Sale) ಮಾಡಬಹುದು ಎಂದು ನನ್ನ ಸ್ನೇಹಿತ ಒಂದು ದಿನ ನನಗೆ ತಮಾಷೆಯಾಗಿ ಹೇಳಿದನು. ಇದು ಸ್ವಲ್ಪ ತಮಾಷೆಯಾಗಿ ಪ್ರಾರಂಭವಾಯಿತು ಆದರೆ ನಾನು ಸ್ವಲ್ಪ ಸಂಶೋಧನೆ ಮಾಡಿದೆ ಮತ್ತು ಅದಕ್ಕೆ ಮೀಸಲಾದ ಆನ್‌ಲೈನ್ ಸಮುದಾಯಗಳನ್ನು ಕಂಡುಕೊಂಡ ನಂತರ ಅದು ನಿಜವೆಂದು ಅರಿತುಕೊಂಡೆ. ಆ ನಂತರದಿಂದ ಚೂಯಿಂಗ್‌ ಗಮ್‌ನಿಂದ ಹಣ ಗಳಿಸುತ್ತಿದ್ದೇನೆ ಎಂದು ಜೂಲಿಯಾ ಫೊರಾಟ್ ತಿಳಿಸುತ್ತಾರೆ.  

Tap to resize

Latest Videos

ಇಂಥಾ ಉದ್ಯೋಗಗಳೂ ಇವೆ ಸ್ವಾಮಿ!

ಬಬಲ್‌ ಗಮ್‌ನಿಂದ ತಯಾರಾಗುತ್ತೆ ತಲೆಗಿಂತಲೂ ದೊಡ್ಡ ಗುಳ್ಳೆ !
ಶೀಘ್ರದಲ್ಲೇ, ನಾನು ಮೈ ಕ್ಲಬ್‌ ಮತ್ತು ಆನ್‌ಲೈನ್‌ನಲ್ಲಿ ಚಿತ್ರಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದೆ, ಅಲ್ಲಿ ನಾನು ಸ್ವಲ್ಪ ಗಮನ ಸೆಳೆದಿದ್ದೇನೆ. ನನ್ನ ಅಭಿಮಾನಿಗಳು ಅವರಿಗೆ ಬೇಕಾದ ವಿಷಯವನ್ನು ಪೂರೈಸಲು ಸಾಧ್ಯವಾಗುತ್ತದೆ. ಇಂಥಾ ಮನೋರಂಜನೆ ಬೇರೆಡೆ ಸಿಗುವುದಿಲ್ಲ ಎಂದು ಸಂತೋಷಪಡುತ್ತಾರೆ ಎಂದು ಜೂಲಿಯಾ ಖುಷಿಯಿಂದ ಹೇಳುತ್ತಾರೆ. ಜನರು ಹೆಚ್ಚು ಕಸ್ಟಮೈಸ್ ಮಾಡಿದ ವೀಡಿಯೊ ಅಥವಾ ಚಿತ್ರವನ್ನು ಕೇಳುತ್ತಾರೆ. ನಾನು ವಿಭಿನ್ನ ಬಟ್ಟೆಗಳನ್ನು ಧರಿಸಿದಾಗ ವಿವಿಧ ಕೋನಗಳಿಂದ ದೊಡ್ಡ, ಸಣ್ಣ, ಸಣ್ಣ ಅಥವಾ ಬಹು ಗುಳ್ಳೆಗಳನ್ನು ಒಡೆಯಲು ಅವರು ಕೇಳಿಕೊಳ್ಳುತ್ತಾರೆ ಎಂದು ಜೂಲಿಯಾ ತಿಳಿಸಿದ್ದಾರೆ. ಗುಳ್ಳೆಗಳನ್ನು ಊದುವುದರಿಂದ ಬರುವ ಹೆಚ್ಚುವರಿ ಹಣವನ್ನು ಹೆಚ್ಚಾಗಿ ಚಿಕಿತ್ಸೆಗೆ ಬಳಸುತ್ತೇನೆ ಎಂದು ಅವರು ಹೇಳಿದರು.

ಇದು ನನಗೆ ಪೂರ್ಣ ಸಮಯದ ಕೆಲಸವಲ್ಲ. ನಾನು ಆರ್ಕಿಟೆಕ್ಚರ್ ಮತ್ತು ಸಿವಿಲ್ ಇಂಜಿನಿಯರಿಂಗ್ ಮತ್ತು ಮಾರ್ಕೆಟಿಂಗ್‌ನಲ್ಲಿ ಪದವಿಯನ್ನು ಹೊಂದಿದ್ದೇನೆ. ಹೀಗಾಗಿ ಈ ಮೂಲಕ ನಾನು ನಿಗದಿತ ಆದಾಯ ಗಳಿಸುತ್ತಿದ್ದೇನೆ. ಹೆಚ್ಚುವರಿಯಾಗಿ ಚೂಯಿಂಗ್ ಗಮ್ ಊದುವ ಮೂಲಕ ದುಡ್ಡು ಮಾಡಿಕೊಳ್ಳುತ್ತಿದ್ದೇನೆ ಎಂದು ಜೂಲಿಯಾ ತಿಳಿಸಿದ್ದಾರೆ. ಬಬಲ್‌ಗಮ್‌ ಅನ್ನು ನಾನು ಆನ್‌ಲೈನ್‌ನಲ್ಲಿ ಖರೀದಿಸುತ್ತೇನೆ. ಸಾಮಾನ್ಯವಾಗಿ ಕನಿಷ್ಠ 90 ತುಂಡುಗಳ ಬೃಹತ್ ಪ್ಯಾಕ್‌ಗಳು ಸಿಗುತ್ತವೆ. ಇವು ನಿಜವಾಗಿಯೂ ಅಗ್ಗವಾಗಿವೆ. ನಾನು ದೊಡ್ಡ ಗುಳ್ಳೆಗಳನ್ನು ಸ್ಫೋಟಿಸಲು ಬಯಸಿದಾಗ ನಾನು 10-15 ತುಂಡುಗಳನ್ನು ಬಳಸುತ್ತೇನೆ ಆದರೆ ನಾನು ಮೆಗಾ ಬಬಲ್‌ಗಳನ್ನು ಸ್ಫೋಟಿಸಲು ಬಯಸಿದಾಗ, ನಾನು 30ಕ್ಕೂ ಹೆಚ್ಚು ತುಣುಕುಗಳು ಬೇಕಾಗುತ್ತದೆ ಎಂದಿದ್ದಾರೆ. 

ಮನೆ, ಕೆಲಸ ಬ್ಯಾಲೆನ್ಸ್ ಮಾಡೋ ಹೆಣ್ಣು ಹೈರಾಣವಾಗದಿರಲಿ

ಬಬಲ್ ಗಮ್ ಊದುವ ಈ ಕೆಲಸವನ್ನು ನಾನು ತುಂಬಾ ಆನಂದಿಸುತ್ತೇನೆ ಎಂದು ಜೂಲಿಯಾ ತಿಳಿಸಿದ್ದಾರೆ. ಜನರ ಸವಾಲುಗಳನ್ನು ಸ್ವೀಕರಿಸಿ ಅದನ್ನು ಪ್ರಯತ್ನಿಸುತ್ತೇನೆ. ಹೀಗಾಗಿಯೇ ನಾನೀಗ ಹೆಚ್ಚಿನ ಅಭಿಮಾನಿಗಳನ್ನು ಹೊಂದಿದ್ದೇನೆ ಎಂದು ಜೂಲಿಯಾ ಫೊರಾಟ್ ತಿಳಿಸುತ್ತಾರೆ. 

click me!