ಬಿಳಿ ಬಟ್ಟೆ ಮೇಲಾಗಿರೋ ಇಂಕ್ ಕಲೆ ಬಗ್ಗೆ ಟೆನ್ಷನ್ ಬೇಡ, ಹೀಗ್ ಮಾಡಿದ್ರೆ ಹೋಗ್ಬಿಡುತ್ತೆ

By Suvarna NewsFirst Published Mar 23, 2024, 5:44 PM IST
Highlights

ಬಿಳಿ ಬಟ್ಟೆ ಹಾಕಿಕೊಂಡಾಗ ಎರಡು ಪಟ್ಟು ಎಚ್ಚರಿಕೆವಹಿಸ್ತೇವೆ. ಮಕ್ಕಳನ್ನು ನಿಯಂತ್ರಿಸೋದು ಕಷ್ಟ. ಮಕ್ಕಳ ಬಟ್ಟೆ ಮೇಲೆ ಇಂಕ್ ಕಲೆ ಕಾಮನ್. ಅದನ್ನು ತೆಗೆಯೋದು ಇನ್ಮುಂದೆ ಸುಲಭ. ಟಿಪ್ಸ್ ನಾವು ಹೇಳ್ತೇವೆ. 
 

ಚಿಕ್ಕ ಮಕ್ಕಳಿಗೆ ಬಿಳಿ ಬಟ್ಟೆ ಹಾಕ್ಬೇಕು ಅಂದ್ರೆ ಪಾಲಕರು ಮೇಲೆ ಕೆಳಗೆ ನೋಡ್ತಾರೆ. ಆದ್ರೆ ಶಾಲೆಗೆ ಹೋಗುವ ಮಕ್ಕಳಿಗೆ ಬಿಳಿ ಬಟ್ಟೆ ಧರಿಸೋದು ಅನಿವಾರ್ಯ. ಮಕ್ಕಳು ಬಿಳಿ ಬಟ್ಟೆಗೆ ಮಣ್ಣಿನ ಕಲೆ ಮಾಡೋದು ಮಾತ್ರವಲ್ಲ, ಪೆನ್ನಿನ ಶಾಯಿ ಹಚ್ಚಿಕೊಳ್ತಾರೆ. ಬುಕ್ ಮೇಲೆ ಬರೆಯುವ ಬದಲು ಶರ್ಟ್ ಮೇಲೆ ಗೀಚಿಕೊಂಡು ಬಂದಿರುತ್ತಾರೆ. ಬೇರೆ ಕಲರ್ ಡ್ರೆಸ್ ಮೇಲೆ ಶಾಯಿ ಕಲೆಯಾದ್ರೆ ಅದು ಕಾಣೋದಿಲ್ಲ. ಅದೇ ಬಿಳಿ ಬಟ್ಟೆ ಮೇಲೆ ಸಣ್ಣ ಕಲೆ ಕೂಡ ಎದ್ದು ಕಾಣುತ್ತದೆ. ಈ ಕಲೆ ತೆಗೆಯೋದು ಅಮ್ಮಂದಿರಿಗೆ ದೊಡ್ಡ ತಲೆನೋವು. ಮಾರುಕಟ್ಟೆಯಲ್ಲಿ ಅದೆಷ್ಟೋ ಸೋಪು, ಸೋಪಿನ ಪುಡಿಗಳು ಬಂದಿವೆ. ಕೆಲವೊಂದು ಜೆಲ್ ಲಭ್ಯವಿದೆ. ಅದನ್ನು ಬಟ್ಟೆಗೆ ಹಾಕಿದ್ರೂ ಇಂಕಿನ ಕಲೆ ಹೋಗೋದಿಲ್ಲ. ನಮ್ಮ ಮಕ್ಕಳದ್ದೂ ಇದೇ ಸಮಸ್ಯೆ ಎನ್ನುವ ತಾಯಂದಿರಿಗೆ ಇಲ್ಲೊಂದಿಷ್ಟು ಕಲೆ ತೆಗೆಯುವ ಐಡಿಯಾಗಳಿವೆ. 

ಮಕ್ಕಳ ಬಿಳಿ ಬಣ್ಣದ ಬಟ್ಟೆ ಮೇಲೆ ಕಾಣಿಸುವ ಇಂಕ್ ಕಲೆ ಹೀಗೆ ತೆಗೆಯಿರಿ :
ಇಂಕ್ (Ink) ಕಲೆ ತೆಗೆಯಲು ಸಹಾಯ ಮಾಡುತ್ತೆ ಡೆಟಾಲ್ (Detail) : ಮಕ್ಕಳ ಶರ್ಟ್ (Shirt) ಮೇಲೆ ಇಂಕ್ ಕಲೆಯಾಗಿದೆ ಅಂದ್ರೆ ಇನ್ಮುಂದೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಡೆಟಾಲ್ ಒಂದು ಆಂಟಿಸೆಪ್ಟಿಕ್ ಲಿಕ್ವಿಡ್ ಆಗಿದೆ. ಇದನ್ನು ಸೋಂಕು ಮತ್ತು ನಂಜುನಿರೋಧಕವಾಗಿ ಬಳಸಲಾಗುತ್ತದೆ. ಬಹುತೇಕ ಎಲ್ಲರ ಮನೆಯಲ್ಲ ಡೆಟಾಲ್ ಇರುತ್ತೆ. ಈ ಡೆಟಾಲ್ ಬಳಸಿ ನೀವು ಸುಲಭವಾಗಿ ಕಲೆ ತೆಗೆಯಬಹುದು. ಇದಲ್ಲದೆ ಕಲೆ ತೆಗೆಯಲು ಟೂತ್ ಬ್ರೆಷ್ ಬಳಸಬೇಕು. ಮೊದಲು ನೀವು ನಾಲ್ಕೈದು ಹನಿ ಡೆಟಾಲನ್ನು ಕಲೆಯಾಗಿರುವ ಜಾಗಕ್ಕೆ ಹಾಕಿ. ನಂತ್ರ ಟೂತ್ ಬ್ರೆಷ್ ಬಳಸಿ ಕಲೆಯಾದ ಜಾಗವನ್ನು ಸರಿಯಾಗಿ ಉಜ್ಜಬೇಕು. ಇದ್ರಿಂದ ಇಂಕ್ ಕಲೆ ಮಾಯವಾಗುತ್ತದೆ. ನೀವು ಬ್ರೆಷ್ ಬದಲು ಹತ್ತಿಯನ್ನು ಕೂಡ ಬಳಸಬಹುದು. ಇಂಕಿರುವ ಜಾಗಕ್ಕೆ ಡೆಟಾಲ್ ಹಾಕಿ, ಹತ್ತಿಯಲ್ಲಿ ಉಜ್ಜಬೇಕು.

ಇಲ್ನೋಡಿ, ಅನಂತ್ ಅಂಬಾನಿಯ 200 ಕೋಟಿ ಮೌಲ್ಯದ ವಾಚ್‌ಗಳ ಸಂಗ್ರಹ!

ಟೊಮೆಟೊ (Tomato) : ಹತ್ತಿ ಬಟ್ಟೆಯಿಂದ ಶಾಯಿ ತೆಗೆಯಲು ಟೊಮೆಟೊವನ್ನು ಕೂಡ ಬಳಸಬಹುದು. ಮೊದಲು ನೀವು ಟೊಮೆಟೊವನ್ನು ಕತ್ತರಿಸಬೇಕು. ಅದರ ಮೇಲೆ ಉಪ್ಪನ್ನು ಸಿಂಪಡಿಸಿ. ನಂತ್ರ  ಕಲೆಯಾದ ಜಾಗಕ್ಕೆ ನಿಧಾನವಾಗಿ ಉಜ್ಜಬೇಕು. ಉಪ್ಪು ಮತ್ತು ನಿಂಬೆ ರಸವು ಕಲೆಗಳನ್ನು ತೆಗೆದುಹಾಕುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ.  

ಇತರ ಕಲೆ ತೆಗೆಯಲು ಇಲ್ಲಿದೆ ವಿಧಾನ : ಬಟ್ಟೆಯ ಮೇಲೆ ಚಾಕೊಲೇಟ್ ಬಿದ್ದರೆ, ತಕ್ಷಣವೇ ಅದರ ಕಲೆಗಳನ್ನು ತೆಗೆದುಹಾಕಲು ಟಾಲ್ಕಮ್ ಪೌಡರ್ ಬಳಸಿ. ಟಾಲ್ಕಮ್ ಪೌಡರ್ ಹಾಕಿ ಬೆಚ್ಚಗಿನ ನೀರಿನಲ್ಲಿ ಬಟ್ಟೆಯನ್ನು ತೊಳೆದ್ರೆ ಕಲೆ ಮಾಯವಾಗುತ್ತದೆ. ಐಸ್ ಕ್ರೀಮ್ ಕಲೆಯನ್ನು ತೆಗೆದುಹಾಕಲು ಅಮೋನಿಯಾವನ್ನು ಬಳಸಿ. ಅದರ ದ್ರಾವಣವನ್ನು ಕಲೆಯ ಪ್ರದೇಶದ ಮೇಲೆ ಹಾಕಬೇಕು. ನಂತರ ಅದನ್ನು ನಿಧಾನವಾಗಿ ಉಜ್ಜಿ ತೆಗೆಯಬೇಕು.

ನಿಮ್ಮ ಆಯುಷ್ಯ ಎಷ್ಟಿದೆ ಎಂದು ತಿಳಿಯೋಕೆ ಇದೊಂದೇ ಟೆಸ್ಟ್‌ ಸಾಕು!

ಟೀ – ಕಾಫಿ ಕಲೆ : ಟೀ-ಕಾಫಿಯ ಕಲೆಗಳನ್ನು ಹೋಗಲಾಡಿಸಲು ಬಟ್ಟೆಯ ಮೇಲೆ ಡಿಟರ್ಜೆಂಟ್ ಪೌಡರ್ ಅಥವಾ ಸೋಪು ಹಚ್ಚಿ ಉಗುರುಬೆಚ್ಚಗಿನ ನೀರಿನಲ್ಲಿ ಅದ್ದಿ 5-10 ನಿಮಿಷ ಬಿಡಿ. ನಂತರ ಶುದ್ಧ ನೀರಿನಿಂದ ಬಟ್ಟೆಯನ್ನು ತೊಳೆಯಿರಿ. ಕಲೆಯಾದ ಜಾಗಕ್ಕೆ ಅಡಿಗೆ ಸೋಡಾ ಹಚ್ಚಬೇಕು. 15 ನಿಮಿಷ ಬಿಟ್ಟು ಅದನ್ನು ಸ್ವಚ್ಛಗೊಳಿಸಬೇಕು. ಟೀ – ಕಾಫಿ ಕಲೆಯ ಜಾಗಕ್ಕೆ ಟೂತ್ಪೇಸ್ಟ್ ಹಚ್ಚಿಡಿ. ಹದಿನೈದು ನಿಮಿಷ ಬಿಟ್ಟು ಸ್ವಚ್ಛಗೊಳಿಸಬೇಕು.  ಪಾನ್ ಗುಟ್ಕಾ ಕಲೆ : ಪಾನ್ – ಗುಟ್ಕಾ ಕಲೆಗಳು ಬಟ್ಟೆಯ ಅಂದವನ್ನು ಹಾಳು ಮಾಡುತ್ತವೆ. ಕಲೆಯಾದ ಜಾಗಕ್ಕೆ ಹುಳಿ ಮೊಸರನ್ನು ಹಾಕಿ ಹತ್ತು ನಿಮಿಷ ಇಟ್ಟು ವಾಶ್ ಮಾಡಿದ್ರೆ ಕಲೆ ಮಾಯವಾಗುತ್ತದೆ.

click me!