
ಎಂಥಾ ಲೋಕವಯ್ಯಾ?
ಕೆಲವೊಂದು ಸೀನ್‌ಗಳು ಸಿನಿಮಾದಲ್ಲೂ ಇರಲ್ಲ. ಆದರೆ, ನಿಜ ಜೀವನದಲ್ಲಿ ನಡೀತಿರುತ್ತೆ. ಇಂಥದ್ದೇ ಒಂದು ವಿಚಿತ್ರ ಘಟನೆಗೆ ಮೀರೆತ್‌ನ ಸಿವಿಲ್ ಲೈನ್ಸ್ ಕೋರ್ಟ್ ಆವರಣ ಸಾಕ್ಷಿಯಾಗಿದೆ. ಪಕ್ಕದ ಮನೆಯವರ ಜೊತೆ ಜಗಳವಾಡಿದ್ದಕ್ಕೆ ಜೈಲು ಸೇರಿದ್ದ ಗಂಡನಿಗೆ ಜಾಮೀನು ಕೊಡಿಸಲು ಬಂದಿದ್ದ ಇಬ್ಬರು ಹೆಂಡತಿಯರು, ಕೋರ್ಟ್ ಆವರಣದಲ್ಲೇ ರಂಪಾಟ ಮಾಡಿ ಕೊನೆಗೆ ತಾವೇ ಜೈಲು ಸೇರಿದ್ದಾರೆ.
ಪೂರ್ವ ಮಹಾವೀರ್ (ದೆಹಲಿ ಗೇಟ್ ಏರಿಯಾ) ನಿವಾಸಿ ಫುರ್ಕಾನ್, ತನ್ನ ಪಕ್ಕದ ಮನೆಯವರ ಜೊತೆ ಜಗಳ ಮಾಡಿಕೊಂಡಿದ್ದಕ್ಕೆ ಅರೆಸ್ಟ್ ಆಗಿ ಜೈಲು ಸೇರಿದ್ದ. ಈತನಿಗೆ ಜಾಮೀನು ಕೊಡಿಸೋಕೆ ಅಂತಾನೇ ಆತನ ಇಬ್ಬರು ಹೆಂಡತಿಯರು ಮೀರೆತ್‌ನ ಸಿವಿಲ್ ಲೈನ್ಸ್ ಕೋರ್ಟ್‌ಗೆ ಬಂದಿದ್ದರು. 20 ವರ್ಷಗಳ ಹಿಂದೆ ಫುರ್ಕಾನ್‌ನನ್ನು ಮದುವೆಯಾಗಿದ್ದ ಗಂಗಾ ನಗರದ ಮೊದಲ ಪತ್ನಿ ಶಬಾನಾ ಮತ್ತು ಎರಡನೇ ಪತ್ನಿ ಶಹೀನ್, ಇಬ್ಬರೂ ತಮ್ಮ ತಮ್ಮ ಸಂಬಂಧಿಕರ ಜೊತೆ ಕೋರ್ಟ್‌ಗೆ ಬಂದಿದ್ದರು. ಇಬ್ಬರೂ ಸೇರಿ ಗಂಡನಿಗೆ ಜಾಮೀನು ಕೊಡಿಸುವ ಪ್ರಯತ್ನದಲ್ಲಿದ್ದರು. ಆದರೆ, ಯಾವುದೋ ಸಣ್ಣ ವಿಚಾರಕ್ಕೆ ಇಬ್ಬರ ಕುಟುಂಬಗಳ ನಡುವೆ ಮಾತಿಗೆ ಮಾತು ಬೆಳೆದು ದೊಡ್ಡ ಜಗಳವೇ ಶುರುವಾಗಿದೆ.
ಕೋರ್ಟ್ ಆವರಣದಲ್ಲಿದ್ದೇವೆ ಅನ್ನೋದನ್ನೂ ಮರೆತು, ಇಬ್ಬರು ಹೆಂಡತಿಯರು ಮತ್ತು ಅವರ ಸಂಬಂಧಿಕರು ಎರಡು ಗುಂಪುಗಳಾಗಿ ಹೊಡೆದಾಡಿಕೊಂಡಿದ್ದಾರೆ. ಕೂದಲು ಹಿಡಿದು ಎಳೆದಾಡಿ, ಬಟ್ಟೆ ಹರಿದು, ಬಾಯಿಗೆ ಬಂದಂತೆ ಬೈಯುತ್ತಾ ಮಹಿಳೆಯರು ಕಿತ್ತಾಡಿದ್ದನ್ನು ನೋಡಿ ಕೋರ್ಟ್‌ನಲ್ಲಿದ್ದವರೇ ಬೆಚ್ಚಿಬಿದ್ದಿದ್ದಾರೆ. ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಬೇಕಾಯ್ತು. ಈ ಗಲಾಟೆಯಲ್ಲಿ ಎರಡೂ ಕಡೆಯ ಮೂವರು ಮಹಿಳೆಯರಿಗೆ ಗಾಯಗಳಾಗಿವೆ ಅಂತಲೂ ವರದಿಯಾಗಿದೆ.
ಇಷ್ಟೆಲ್ಲಾ ರಂಪಾಟ ನಡೆಯುವ ಹೊತ್ತಿಗೆ, ಫುರ್ಕಾನ್‌ಗೆ ಜಾಮೀನು ಸಿಕ್ಕಿ ಆತ ಹೊರಗೆ ಬಂದಿದ್ದ. ಆದರೆ, ಕೋರ್ಟ್ ಆವರಣದಲ್ಲಿ ಗಲಾಟೆ ಸೃಷ್ಟಿಸಿದ ಆರೋಪದ ಮೇಲೆ ಆತನ ಇಬ್ಬರು ಹೆಂಡತಿಯರು ಮತ್ತು ಸಂಬಂಧಿಕರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹೀಗೆ, ಗಂಡ ಜಾಮೀನು ಪಡೆದು ಹೊರಬಂದರೆ, ಆತನನ್ನು ಬಿಡಿಸಲು ಬಂದ ಹೆಂಡತಿಯರು ಜೈಲು ಸೇರಿದರು. ಈ ಘಟನೆಯ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.