ಸಿಂಗಾಪುರದಲ್ಲಿ ಕೆಲಸದಾಕೆಯ ಕಣ್ಣೀರಿನ ಕಥೆ; ಮಲಗೋಕೆ ಕೊಟ್ಟಿದ್ದು ಯೋಗಾ ಮ್ಯಾಟ್, 4 ದಿನಕ್ಕೆ ಬಾಸ್ ಮಾಡಿದ್ದು ಇದು!

Published : Apr 26, 2026, 01:09 PM IST
Singapura Room

ಸಾರಾಂಶ

ಸಿಂಗಾಪುರದಲ್ಲಿ ಮನೆಗೆಲಸ ಮಾಡುವ ಯುವತಿಯೊಬ್ಬರು ತಮಗಾದ ಕೆಟ್ಟ ಅನುಭವವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಬ್ರಿಟಿಷ್-ಭಾರತೀಯ ಕುಟುಂಬವೊಂದು ಮಲಗಲು ಯೋಗಾ ಮ್ಯಾಟ್ ನೀಡಿ, ದುಡಿದ ಸಂಬಳವನ್ನೂ ಕೊಡದೆ ವಂಚಿಸಿದೆ. ಜೊತೆಗೆ ಇನ್ನೇನು ಆಗಿದೆ? ಈ ಸ್ಟೋರಿ ನೋಡಿ.. 

ಸಿಂಗಾಪುರದಲ್ಲಿ ಮಹಿಳೆಗೆ ವಂಚನೆ!

ಸಿಂಗಾಪುರದಲ್ಲಿ ಕೆಲಸ ಮಾಡುವಾಗ ತಮಗಾದ ಅತ್ಯಂತ ನೋವಿನ ಅನುಭವವನ್ನು ಯುವತಿಯೊಬ್ಬರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. 2008ರಿಂದ ಸಿಂಗಾಪುರದಲ್ಲಿ ಕೆಲಸ ಮಾಡುತ್ತಿರುವ ಇವರು, ತಮ್ಮ ಹಿಂದಿನ ಭಾರತೀಯ ಮಾಲೀಕರು ತುಂಬಾ ಒಳ್ಳೆಯವರಾಗಿದ್ದರು ಎಂದು ಹೇಳಿದ್ದಾರೆ. ಆದರೆ, ಇತ್ತೀಚೆಗೆ ಕೆಲಸಕ್ಕೆ ಸೇರಿದ್ದ ಬ್ರಿಟಿಷ್-ಭಾರತೀಯ ಕುಟುಂಬವೊಂದು ತೋರಿದ ಅಮಾನವೀಯ ನಡೆಯ ಬಗ್ಗೆ ಅವರು ಬರೆದುಕೊಂಡಿದ್ದಾರೆ. 'SINGAPORE TRANSFER (No Fees/SD), DIRECT HIRE & NEW HELPER' ಎಂಬ ಫೇಸ್‌ಬುಕ್ ಗ್ರೂಪ್‌ನಲ್ಲಿ ಡೆಸೇನಾ ಜೆನಿ ಎಂಬ ಯುವತಿ ಈ ಪೋಸ್ಟ್ ಮಾಡಿದ್ದಾರೆ.

ಅವರ ಫೇಸ್‌ಬುಕ್ ಪೋಸ್ಟ್‌ನಲ್ಲಿದ್ದದ್ದು ಹೀಗೆ:

ಹಿಂದಿನ ಮಾಲೀಕರ ನಂತರ, ನನ್ನ ಸ್ನೇಹಿತರೊಬ್ಬರ ಮೂಲಕ ಸಿಂಗಾಪುರಕ್ಕೆ ಹೊಸದಾಗಿ ಬಂದಿದ್ದ ಬ್ರಿಟಿಷ್-ಭಾರತೀಯ ಕುಟುಂಬವೊಂದರಲ್ಲಿ ನನಗೆ ಕೆಲಸ ಸಿಕ್ಕಿತು. ಮಾರ್ಚ್ 12ರಂದು ನಾನು ಅವರನ್ನು ಭೇಟಿಯಾದೆ. ನನ್ನ ಹಳೆಯ ಮಾಲೀಕರು ಮಾರ್ಚ್ 31ರಂದು ನನ್ನನ್ನು ಕೆಲಸದಿಂದ ಬಿಡುಗಡೆ ಮಾಡಿದರು. ಹೊಸ ಮಾಲೀಕರು ಏಪ್ರಿಲ್ 5ರಿಂದ ಕೆಲಸಕ್ಕೆ ಬರುವಂತೆ ಹೇಳಿದರು. ಅಲ್ಲಿ ಕೆಲಸ ಶುರು ಮಾಡಿದ ಮೊದಲ ದಿನವೇ ನನಗೆ ಏನೋ ಸರಿ ಇಲ್ಲ ಎನಿಸಿತು, ಆದರೂ ಕೆಲಸ ಮುಂದುವರಿಸಿದೆ. ಅವರು ನನಗೆ ಉಳಿದುಕೊಳ್ಳಲು ತುಂಬಾ ಚಿಕ್ಕ ಕೋಣೆ ಕೊಟ್ಟರು, ಮಲಗಲು ಕೊಟ್ಟಿದ್ದು ಕೇವಲ ಒಂದು ಯೋಗಾ ಮ್ಯಾಟ್. ಅವರು ಸಿಂಗಾಪುರಕ್ಕೆ ಹೊಸಬರಾದ ಕಾರಣ, ನಾನು ಎಲ್ಲವನ್ನೂ ಸಹಿಸಿಕೊಂಡೆ.

ನಾನು ಅಲ್ಲಿ ನಾಲ್ಕು ದಿನ ಕೆಲಸ ಮಾಡಿದೆ. ಅಷ್ಟರಲ್ಲಿ, ನನ್ನ ಹಳೆಯ ಮಾಲೀಕರು ನನಗೆ ಮೆಸೇಜ್ ಮಾಡಿ, 'ನಿನ್ನ ವರ್ಕ್ ಪರ್ಮಿಟ್ ಇನ್ನೂ ನಮ್ಮ ಹೆಸರಿನಲ್ಲೇ ಇದೆಯಲ್ಲಾ' ಎಂದು ಕೇಳಿದರು. ನಾನು ಈ ಬಗ್ಗೆ ನನ್ನ ಹೊಸ ಬಾಸ್‌ ಬಳಿ ಮಾತನಾಡಿದಾಗ, ಅವರು ಸರಿಪಡಿಸುವುದಾಗಿ ಹೇಳಿದರು. ಆದರೆ, ನಾನು ಪರಿಶೀಲಿಸಿದಾಗ, ವರ್ಕ್ ಪರ್ಮಿಟ್ ಬದಲಾಯಿಸಲು ಅವರು ಯಾವುದೇ ಪ್ರಕ್ರಿಯೆ ಆರಂಭಿಸಿಲ್ಲ ಎಂಬುದು ತಿಳಿಯಿತು. ಸಿಂಗಾಪುರದಲ್ಲಿ ವರ್ಕ್ ಪರ್ಮಿಟ್ ವರ್ಗಾವಣೆ ಆಗದೆ ಹೊಸ ಮಾಲೀಕರ ಬಳಿ ಕೆಲಸ ಮಾಡುವುದು ಕಾನೂನುಬಾಹಿರ ಎಂಬುದು ನನಗೆ ಗೊತ್ತಿತ್ತು. ಹಾಗಾಗಿ, ನಾನು ಆ ಕೆಲಸ ಬಿಟ್ಟೆ. ಇದಕ್ಕಿಂತ ಕೆಟ್ಟ ವಿಷಯವೆಂದರೆ, ನಾನು ಕೆಲಸ ಮಾಡಿದ ಆ ನಾಲ್ಕು ದಿನಗಳ ಸಂಬಳವನ್ನು ಅವರು ನನಗೆ ಕೊಡಲೇ ಇಲ್ಲ. ಅಷ್ಟೇ ಅಲ್ಲ, ನನ್ನನ್ನು ಬ್ಲಾಕ್ ಕೂಡ ಮಾಡಿದರು. ಈಗ ನನಗೆ ಹೊಸ ಕೆಲಸ ಸಿಕ್ಕಿದೆ. ಆ ಬ್ರಿಟಿಷ್-ಭಾರತೀಯ ಕುಟುಂಬಕ್ಕೆ ದೇವರು ತಕ್ಕ ಶಿಕ್ಷೆ ನೀಡಲಿ. ಇಷ್ಟು ಕರುಣೆ ಇಲ್ಲದ ಅವರ ಬಗ್ಗೆ ನನಗೆ ತುಂಬಾ ಬೇಸರವಿದೆ.

ಈ ಪೋಸ್ಟ್‌ಗೆ ಅನೇಕರು ಕಾಮೆಂಟ್ ಮಾಡಿದ್ದು, ಇಂತಹ ಸಂದರ್ಭಗಳಲ್ಲಿ ಯಾರ ಸಹಾಯ ಪಡೆಯಬೇಕು ಮತ್ತು ಅವರನ್ನು ಹೇಗೆ ರಿಪೋರ್ಟ್ ಮಾಡಬೇಕು ಎಂಬುದರ ಬಗ್ಗೆ ಹಲವರು ಮಾಹಿತಿ ನೀಡಿದ್ದಾರೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಹೀಗೆ ಕ್ಲೀನ್ ಮಾಡಿದ್ರೆ ಸಾಕು, ಮಡಕೆ ಚೂರು ವಾಸನೆ ಬರದೆ ನೀರು ಮಂಜಿನಂತೆ ತಂಪಾಗಿರುತ್ತೆ
ಇವೆರಡನ್ನು ಸೇರಿಸಿದ್ರೆ ಮುಗೀತು.. ಅರ್ಧದಷ್ಟಿದ್ದ ಹಿಟ್ಟಿನ ಪಾತ್ರೆ ಮೇಲಿನವರೆಗೆ ಉಬ್ಬಿ ಬರುತ್ತೆ, ಇಡ್ಲಿ ಬೆಣ್ಣೆಯಂತಿರುತ್ತೆ