
ಮಧ್ಯಾಹ್ನ ಊಟವಾದ್ಮೇಲೆ ಅದೇನೇ ಕೆಲಸ ಮಾಡ್ತಿರಿ, ಕಣ್ಣು ಮುಚ್ಚಿ ಮುಚ್ಚಿ ಬರ್ತಿರುತ್ತದೆ. ನಿದ್ರೆ ತಡೆಯೋಕೆ ಎಷ್ಟೇ ಪ್ರಯತ್ನಿಸಿದ್ರೂ ಸಾಧ್ಯವಾಗೋದಿಲ್ಲ. ಕೆಲ ಋತುವಿನಲ್ಲಂತೂ ಇದು ಹೆಚ್ಚು. ಕಚೇರಿಯ ಒತ್ತಡದ ಕೆಲಸದ ಮಧ್ಯೆಯೂ ಅನೇಕರು ಕುಳಿತಲ್ಲೇ ತೂಕಡಿಸುತ್ತಾರೆ. ಇದ್ರಿಂದ ಕೆಲಸ ಸರಿಯಾಗಿ ಆಗೋದಿಲ್ಲ. ಉದ್ಯೋಗಿಗಳ ಕೆಲಸಕ್ಕೆ ತೊಂದರೆ ಆಗದಿರಲಿ ಎನ್ನುವ ಕಾರಣಕ್ಕೆ ಕೆಲ ಕಂಪನಿಗಳು ನ್ಯಾಪಿಂಗ್ ಟೈಂ ನೀಡ್ತವೆ. ಮಧ್ಯಾಹ್ನ ಊಟವಾದ್ಮೇಲೆ ಸ್ವಲ್ಪ ಹೊತ್ತು ನಿದ್ರೆ ಮಾಡಿ ಎದ್ದರೆ ಮತ್ತೆ ನಾವು ಫ್ರೆಶ್ ಆಗ್ತೇವೆ. ಮುಂದಿನ ಕೆಲಸ ಮಾಡಲು ಸಿದ್ಧರಾಗ್ತೇವೆ. ಅದೇ ಈ ನಿದ್ರೆ ಅಭ್ಯಾಸ ರೂಢಿಯಾಗಿದ್ರೆ ಅಥವಾ ಅದನ್ನು ತಡೆಹಿಡಿದು ಕುಳಿತಿದ್ರೆ ಕೆಲವರಿಗೆ ತಲೆನೋವು ಬರೋದಿದೆ.
ಮಧ್ಯಾಹ್ನ (Afternoon) ದ ಊಟದ ನಂತ್ರ ಪವರ್ ನ್ಯಾಪ್ ಬಹಳ ಅಗತ್ಯವೆಂದು ಅನೇಕ ಸಂಶೋಧನೆ (Research) ಗಳು ಹೇಳಿವೆ. ಈ ನಿದ್ರೆ ನಮ್ಮ ತಾಜಾತನ ಹೆಚ್ಚಿಸುತ್ತದೆ. ನ್ಯಾಶನಲ್ ಸ್ಲೀಪ್ ಫೌಂಡೇಶನ್ ಆಫ್ ಅಮೇರಿಕಾ ಈ ಬಗ್ಗೆ ಅಧ್ಯಯನ ನಡೆಸಿದೆ. ಅದ್ರ ಪ್ರಕಾರ, ದಿನದಲ್ಲಿ ಮನುಷ್ಯನಿಗೆ ಎರಡು ಬಾರಿ ಅತಿ ಹೆಚ್ಚು ನಿದ್ರೆ (Sleep) ಬರುತ್ತದೆ. ಒಂದು ಬೆಳಗಿನ ಜಾವ ಎರಡು ಗಂಟೆಯಿಂದ ಏಳು ಗಂಟೆಯವರೆಗೆ. ಇನ್ನೊಂದು ಮಧ್ಯಾಹ್ನ ಎರಡು ಗಂಟೆಯಿಂದ ಐದು ಗಂಟೆಯವರೆಗೆ. ಬೆಳಗಿನ ಜಾವ ಬಹುತೇಕರಿಗೆ ಸಮಸ್ಯೆ ಆಗೋದಿಲ್ಲ. ಯಾಕೆಂದ್ರೆ ಆಗ ಎಲ್ಲರೂ ಗಾಢ ನಿದ್ರೆಯಲ್ಲಿರುತ್ತಾರೆ. ಅದೇ ಈ ಮಧ್ಯಾಹ್ನ ಎರಡು ಗಂಟೆಯಿಂದ ಐದು ಗಂಟೆ ಸಮಯ ಸ್ವಲ್ಪ ಸವಾಲು. ಯಾಕೆಂದ್ರೆ ಆ ಸಮಯದಲ್ಲಿ ಎಲ್ಲರಿಗೂ ನಿದ್ರೆ ಮಾಡುವ ಅವಕಾಶ ಇರೋದಿಲ್ಲ.
ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡ್ಬೇಕೆಂದ ನಾರಾಯಣ ಮೂರ್ತಿ: ಬೆಂಗಳೂರಿನ ಖ್ಯಾತ ಹೃದ್ರೋಗ ತಜ್ಞರ ಟ್ವೀಟ್ ವೈರಲ್
ಮಧ್ಯಾಹ್ನದ ಸಮಯದಲ್ಲಿ ನಿದ್ರೆ ಬರಲು ಕಾರಣವೇನು? : ಸಂಶೋಧಕರು ಮಧ್ಯಾಹ್ನ ಊಟ ಆದ್ಮೇಲೆ ನಿದ್ರೆ ಬರಲು ಕಾರಣವೇನು ಎಂಬುದನ್ನು ಕೂಡ ಹೇಳಿದ್ದಾರೆ. ಹೊಟ್ಟೆ ತುಂಬಿರುವಾಗ ನಿದ್ರೆ ಬರುತ್ತದೆ. ನಾವು ಊಟ ಮಾಡಿದ್ಮೇಲೆ ನಮ್ಮ ದೇಹದ ಕೆಲಸ ಶುರುವಾಗುತ್ತದೆ. ಆಹಾರವನ್ನು ಜೀರ್ಣಿಸಿಕೊಳ್ಳುವ ಕೆಲಸವನ್ನು ದೇಹ ಮಾಡುತ್ತದೆ. ಈ ವೇಳೆ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ಇನ್ಸುಲಿನ್ ಬಿಡುಗಡೆಯಾಗುತ್ತದೆ. ಇದು ನಮ್ಮ ಶಕ್ತಿಯ ಮಟ್ಟದಲ್ಲಿ ಕುಸಿತಕ್ಕೆ ಕಾರಣವಾಗುತ್ತದೆ. ದೇಹದಲ್ಲಿ ಶಕ್ತಿ ಕಡಿಮೆ ಆಗ್ತಾ ಇದ್ದಂತೆ ಜನರು ಸೋಮಾರಿತ ಅನುಭವಿಸುತ್ತಾರೆ. ನಿದ್ರೆ ಬರಲು ಶುರುವಾಗುತ್ತದೆ. ಕುಳಿತಲ್ಲೇ ತೂಕಡಿಗೆ ಬರುತ್ತದೆ. ಊಟದ ನಂತರ ನಿಮಗೆ ಕಾಡುವ ಈ ಸೋಮಾರಿತನವನ್ನು ಪೋಸ್ಟ್‌ಪ್ರಾಂಡಿಯಲ್ ಡಿಪ್ ಎಂದು ಕರೆಯಲಾಗುತ್ತದೆ. ನಿದ್ರೆಯನ್ನು ಉತ್ತೇಜಿಸಲು ಮೆಲಟೋನಿನ್ ನಂತಹ ಹಾರ್ಮೋನು ಇದರಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತವೆ.
ಗರ್ಭಾವಸ್ಥೆಯಲ್ಲಿ ತಾಯಿ -ಮಗು ಇಬ್ರೂ ಚೆನ್ನಾಗಿರ್ಬೇಕು ಅಂದ್ರೆ ಮಖಾನ ತಿನ್ನಿ !
ಮಹಿಳೆಯರಿಗೆ ಹೆಚ್ಚು ನಿದ್ರೆ ಬರಲು ಕಾರಣವೇನು? : ಮಹಿಳೆಯರಿಗೆ ಹಾರ್ಮೋನ್ ಗಳಲ್ಲಿ ಏರುಪೇರಾಗುವುದು ಹೆಚ್ಚು. ಹಾರ್ಮೋನ್ ಬದಲಾವಣೆ, ಮುಟ್ಟಿನ ಸಮಯದಲ್ಲಿ ಅವರು ಹೆಚ್ಚು ಸುಸ್ತನ್ನು ಅನುಭವಿಸುತ್ತಾರೆ. ಹಾಗಾಗಿಯೇ ಅವರಿಗೆ ಈ ಪವರ್ ನ್ಯಾಪ್ ಅಗತ್ಯ ಹೆಚ್ಚಿರುತ್ತದೆ. ಮಹಿಳೆಯರ ಈ ಪವರ್ ನ್ಯಾಪನ್ನು ಗರ್ಲ್ ನ್ಯಾಪ್ ಎಂದೂ ಕರೆಯಲಾಗುತ್ತದೆ. ಮಧುಮೇಹ, ಥೈರಾಯ್ಡ್, ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆ, ಆಹಾರದ ಅಲರ್ಜಿ, ನಿದ್ರಾಹೀನತೆ, ರಕ್ತಹೀನತೆಯಿಂದ ಬಳಲುವವರಿಗೂ ಮಧ್ಯಾಹ್ನ ಊಟದ ನಂತ್ರ ಹೆಚ್ಚು ನಿದ್ರೆ ಬರುತ್ತದೆ.
ನೀವು ಸೇವನೆ ಮಾಡುವ ಆಹಾರ ಇಲ್ಲಿ ಮಹತ್ವದ ಪಾತ್ರವಹಿಸುತ್ತದೆ. ನೀವು ಹೆಚ್ಚು ಪ್ರೊಟೀನ್ ಮತ್ತು ಸಿರೊಟೋನಿನ್ ಪ್ರಮಾಣ ಹೆಚ್ಚಿರುವ ಆಹಾರ ಸೇವನೆ ಮಾಡಿದಾಗ ನಿದ್ರೆ ಹೆಚ್ಚಾಗಿ ಬರುತ್ತದೆ. ಚೀಸ್, ಸೋಯಾಬೀನ್ ಮತ್ತು ಮೊಟ್ಟೆ ಸೇವನೆ ಮಾಡಿದಾಗ ನಿದ್ರೆ ಹೆಚ್ಚಾಗಿ ಕಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.