ಬಡ ಹೆಣ್ಮುಮಕ್ಕಳಿಗೆ ದೇವರಾಗಿದ್ದ ಈ ವೈದ್ಯೆ ನೀಡ್ತಾರೆ ಉಚಿತ ಹೆರಿಗೆ ಸೇವೆ

By Suvarna News  |  First Published Oct 30, 2023, 1:16 PM IST

ಆಸ್ಪತ್ರೆಗೆ ಹೋದ್ರೆ ನೀರಿನಂತೆ ಹಣ ಖರ್ಚಾಗುತ್ತೆ. ಬಡವರಿಗೆ ಇದು ದೊಡ್ಡ ಹೊರೆ. ಅಂಥವರ ನೆರವಿಗೆ ನಿಂತ ಈ ವೈದ್ಯೆ ಸೇವೆಗೆ ಮೆಚ್ಚಲೇಬೇಕು. ಸಾವಿರಾರು ಹೆರಿಗೆ ಮಾಡಿಸಿದ ವೈದ್ಯೆ ಪಡೆದಿದ್ದು ಕೇವಲ ಇಷ್ಟು ಹಣ..!
 


ಆಸ್ಪತ್ರೆಗೆ ಖರ್ಚು ಪ್ರತಿಯೊಬ್ಬರಿಗೂ ಹೊಣೆ ಎನ್ನಿಸುತ್ತದೆ. ಅದ್ರಲ್ಲೂ ಬಡ, ಮಧ್ಯಮ ವರ್ಗದ ಜನರು ಆಸ್ಪತ್ರೆಗೆ ಹೋಗಲು ಹೆದರುತ್ತಾರೆ. ನಿತ್ಯದ ಖರ್ಚಿಗೆ ಹಣ ಹೊಂದಿಸೋದೇ ಕಷ್ಟವಾಗಿರುವ ಸಮಯದಲ್ಲಿ ಆಸ್ಪತ್ರೆಗೆ ಹೆಚ್ಚುವರಿ ಹಣ ಸುರಿಯಲು ಅವರು ಭಯಪಡ್ತಾರೆ. ಆದ್ರೆ ಅನಾರೋಗ್ಯಕ್ಕೆ ಒಳಗಾಗಿದ್ದಾಗ ಆಸ್ಪತ್ರೆಗೆ ಹೋಗ್ಲೇಬೇಕು. ಬರೀ ಅನಾರೋಗ್ಯದಲ್ಲಿ ಮಾತ್ರವಲ್ಲ ಮನೆಗೊಂದು ಪುಟ್ಟ ಮಗು ಬರ್ಬೇಕು ಎಂದಾಗ ಆಸ್ಪತ್ರೆಗೆ ಆಗಾಗ ಹೋಗ್ಬೇಕಾಗುತ್ತದೆ. ಗರ್ಭಧಾರಣೆ, ಹೆರಿಗೆ ಹೀಗೆ ಖರ್ಚು ಬೆಳೆಯುತ್ತದೆ. ಇದು ಖುಷಿ ವಿಷ್ಯವಾಗಿದ್ದರೂ ಅನೇಕರಿಗೆ ಈ ಖರ್ಚು ಆತಂಕವುಂಟು ಮಾಡುತ್ತದೆ. ಎಲ್ಲಿಂದ ಹೆರಿಗೆಗೆ ಹಣ ಹೊಂದಿಸೋದು ಎಂಬ ಸಮಸ್ಯೆ ಕಾಡುತ್ತದೆ. 

ಈಗಿನ ದಿನಗಳಲ್ಲಿ ಹೆರಿಗೆ (Childbirth) ಗೆ ಲಕ್ಷಾಂತರ ರೂಪಾಯಿ ಖರ್ಚಾಗ್ತಿದೆ. ಹಣದುಬ್ಬರದ ಈ ಯುಗದಲ್ಲಿ ಉಚಿತ ಚಿಕಿತ್ಸೆ, ಉಚಿತ ಹೆರಿಗೆ ಕನಸಿನ ಮಾತು. ಆದ್ರೆ ವರ್ಷಗಟ್ಟಲೆ ಗರ್ಭಿಣಿಯರಿಗೆ ಉಚಿತ ಹೆರಿಗೆ ಮಾಡಿಸಿದ ಮಹಿಳೆಯೊಬ್ಬರು ಎಲ್ಲರಿಗೂ ಮಾದರಿ. ತಮ್ಮ 91ನೇ ವಯಸ್ಸಿನವರೆಗೂ ಲಕ್ಷಗಟ್ಟಲೆ ಮಹಿಳೆಯರಿಗೆ ಉಚಿತ ಹೆರಿಗೆ ಮಾಡಿಸುವ ಮೂಲಕ ಅನೇಕ ಕುಟುಂಬದಲ್ಲಿ ಸಂತೋಷ ತಂದಿದ್ದ ಮಹಿಳೆ ಬಗ್ಗೆ ನಾವು ನಿಮಗೆ ಮಾಹಿತಿ ನೀಡ್ತೇವೆ. 
ಡಾ. ಭಕ್ತಿ ಯಾದವ್ (Dr.Bhakti Yadav)  ಜೀವನಚರಿತ್ರೆ :  ಭಕ್ತಿ ಯಾದವ್ ಮಹಾರಾಷ್ಟ್ರ ಮೂಲದವರು.  ಭಕ್ತಿ ಯಾದವವ್, ಉಜ್ಜಯಿನಿಯ ಮಹಿದ್‌ಪುರದಲ್ಲಿ ಏಪ್ರಿಲ್ 3 , 1926 ರಂದು ಜನಿಸಿದರು. ಹಳ್ಳಿಯ ಶಾಲೆಯಲ್ಲಿ ಏಳನೇ ತರಗತಿಯವರೆಗೆ ಓದಿದ ಭಕ್ತಿ ಯಾದವ್, ನಂತರ ಇಂದೋರ್‌ನ ಅಹಲ್ಯಾ ಆಶ್ರಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ರು. 1948 ರಲ್ಲಿ  ಅವರು ಇಂದೋರ್‌ನ ಹೋಳ್ಕರ್ ಸೈನ್ಸ್ ಕಾಲೇಜಿನಲ್ಲಿ ತಮ್ಮ ಬಿ.ಎಸ್ಸಿ ಮುಗಿಸಿದ್ರು. ಅಲ್ಲಿ ಟಾಪರ್ ಆಗಿದ್ದ ಭಕ್ತಿ ಯಾವದ್, ಮಹಾತ್ಮಾ ಗಾಂಧಿ ಮೆಮೋರಿಯಲ್ ಮೆಡಿಕಲ್ ಕಾಲೇಜ್ ನಲ್ಲಿ ಎಂಬಿಬಿಎಸ್ (MBBS) ಪೂರ್ಣಗೊಳಿಸುವ ಮೂಲಕ ಇಂದೋರ್‌ನ ಮೊದಲ ಮಹಿಳಾ ವೈದ್ಯೆ ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಆ ಸಮಯದಲ್ಲಿ ಎಂಬಿಬಿಎಸ್ ಮುಗಿಸಿದ್ದ 40 ವಿದ್ಯಾರ್ಥಿಗಳಲ್ಲಿ ಏಕೈಕ ಮಹಿಳೆಯಾಗಿದ್ದರು ಭಕ್ತಿ ಯಾದವ್.

Latest Videos

undefined

ಯೋನಿಯಲ್ಲಿ ಹುಣ್ಣಾಗಿದ್ಯಾ? ಏನ್ಮಾಡಿದರೆ ಹೋಗುತ್ತೆ?

ಮಾದರಿ ವೈದ್ಯೆ ಭಕ್ತಿ ಯಾದವ್ : ಭಕ್ತಿ ಸ್ತ್ರೀರೋಗ ತಜ್ಞರಾಗಿದ್ದರು.  ಬಡ ಕಾರ್ಮಿಕರ ಹೆಂಡತಿಯರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದರು ಭಕ್ತಿ. ಇವರು ತಮ್ಮ ಜೀವಿತಾವಧಿಯಲ್ಲಿ 70,000 ಕ್ಕೂ ಹೆಚ್ಚು ಮಹಿಳೆಯರಿಗೆ ಹೆರಿಗೆ ಮಾಡಿ ದಾಖಲೆ ನಿರ್ಮಿಸಿದ್ದರು. ಬಡವರಿಗೆ ಉಚಿತ ಚಿಕಿತ್ಸೆ ನೀಡಲು ನಂದಲಾಲ್ ಭಂಡಾರಿ ಹೆರಿಗೆ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದರು. ಸರ್ಕಾರಿ ಕೆಲಸಕ್ಕೆ ಆಹ್ವಾನ ಬಂದ್ರೂ ಭಕ್ತಿ ಯಾದವ್ ಆ ಕೆಲಸವನ್ನು ತಿರಸ್ಕರಿಸಿದ್ದರು.

ಇದಾದ ನಂತತ್ರ ಭಕ್ತಿ ಯಾದವ್ ತಮ್ಮ ಮನೆಯನ್ನೇ ಆಸ್ಪತ್ರೆ ಮಾಡಿಕೊಂಡ್ರು. ವಾತ್ಸಲ್ಯ ನರ್ಸಿಂಗ್ ಹೋಂ ಹೆಸರಿನ ಆಸ್ಪತ್ರೆ ಶುರು ಮಾಡಿದ ಭಕ್ತಿ ಯಾದವ್, ಒಂದು ಸಾವಿರ ಮಹಿಳಾ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಿದ್ದರು. ಹೆರಿಗೆಗೆ ಭಕ್ತಿ ಯಾದವ್ ಕೇಳ್ತಿದ್ದ ಶುಲ್ಕ ಬರೀ ಒಂದು ರೂಪಾಯಿ. 

ಬಂಜೆತನಕ್ಕೆ ಸಂಬಂಧಿಸಿದ 4 ಮಿಥ್ಯೆಗಳು, ಹಿಂದಿನ ಸತ್ಯ ತಿಳ್ಕೊಂಡಿರಿ
 
ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಹೆಸರು :
 ಇವರು ಡಾಕ್ಟರ್ ಡ್ಯಾಡಿ ಎಂದೇ ಖ್ಯಾತರಾಗಿದ್ದಾರೆ. ಅತಿ ಹೆಚ್ಚು ಹೆರಿಗೆ ಮಾಡುವ ಮೂಲಕ ಭಕ್ತಿ ಯಾದವ್ ಹೆಸರು  ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸೇರಿದೆ. ಮಾರ್ಚ್ 30, 2017 ರಂದು ಭಕ್ತಿ ಯಾದವ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ವೈದ್ಯೆ ಇದನ್ನು ಸ್ವೀಕರಿಸಲು ಹೋಗಿರಲಿಲ್ಲ. ಹಾಗಾಗಿ ಜಿಲ್ಲಾಧಿಕಾರಿಗಳೇ ಮನೆಗೆ ಬಂದು ಸನ್ಮಾನ ಮಾಡಿದ್ರು. 91 ನೇ ವಯಸ್ಸಿನಲ್ಲೂ ತಮ್ಮ ಕೆಲಸವನ್ನು ಮುಂದುವರೆಸಿದ್ದ ಭಕ್ತಿ ಯಾದವ್ 2017 ರಲ್ಲಿ ನಿಧನರಾದ್ರು. ಆದ್ರೆ ಅವರ ಸಹಾಯವನ್ನು ಮಗು ಪಡೆದ ಕುಟುಂಬಗಳು ಮರೆಯಲು ಸಾಧ್ಯವಿಲ್ಲ. 

click me!