ಸಂಭೋಗದ ವೇಳೆ ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಅದ್ರಲ್ಲಿ ಯೋನಿಸ್ಮಸ್ ಕೂಡ ಒಂದು. ಆದ್ರೆ ಅನೇಕರಿಗೆ ಇದೊಂದು ಸಮಸ್ಯೆಯಿದೆ ಎಂಬುದೇ ತಿಳಿದಿಲ್ಲ. ಹಾಗಾಗಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗೋದಿಲ್ಲ.
ನಮ್ಮ ದೇಹ ಹಾಗೂ ಮನಸ್ಸಿನ ಮಧ್ಯೆ ಗಾಢವಾದ ಸಂಬಂಧವಿದೆ. ಒಂದಕ್ಕೆ ಸಮಸ್ಯೆಯಾದ್ರೆ ಇನ್ನೊಂದು ನೋವು ತಿನ್ನುತ್ತದೆ. ನೀವು ರುಚಿಯಾದ ಆಹಾರ ಸೇವನೆ ಮಾಡಿದಾಗ ನಾಲಿಗೆ ಮಾತ್ರವಲ್ಲ ಮನಸ್ಸು ಕೂಡ ಖುಷಿಗೊಳ್ಳುತ್ತದೆ. ಪ್ರೀತಿಯ ಅಪ್ಪುಗೆ ದೇಹ ಮತ್ತು ಮನಸ್ಸು ಎರಡಕ್ಕೂ ಹಿತ ನೀಡುತ್ತದೆ. ದೇಹವು ನಮ್ಮ ಮನಸ್ಸಿಗೆ ಅನುಗುಣವಾಗಿ ಪ್ರತಿಕ್ರಿಯಿಸುತ್ತದೆ. ಲೈಂಗಿಕ ವಿಷ್ಯದಲ್ಲೂ ಇದು ಸತ್ಯ. ಸಂಭೋಗದಲ್ಲಿ ತೃಪ್ತಿ ಸಿಕ್ಕಾಗ ಮಾತ್ರ ಪರಾಕಾಷ್ಠೆ ತಲುಪಲು ಸಾಧ್ಯ. ಅದೇ ರೀತಿ ಕೆಟ್ಟ ಲೈಂಗಿಕ ಅನುಭವ ಮಾನಸಿಕ ಆರೋಗ್ಯಕ್ಕೆ ಹಾನಿಯುಂಟು ಮಾಡುವುದಲ್ಲದೆ ನಮ್ಮ ಲೈಂಗಿಕ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ. ಇದ್ರಲ್ಲಿ ವಜಿನಿಸ್ಮಸ್ (ಯೋನಿಸ್ಮಸ್) ಸಮಸ್ಯೆ ಕೂಡ ಒಂದು. ನಾವಿಂದು ವಜಿನಿಸ್ಮಸ್ ಸಮಸ್ಯೆ ಬಗ್ಗೆ ನಿಮಗೆ ಮಾಹಿತಿಯನ್ನು ನೀಡ್ತೆವೆ.
ವಜಿನಿಸ್ಮಸ್ (Vaginismus) ಎಂದರೇನು? : ವಜಿನಿಸ್ಮಸ್ ಅಂದ್ರೆ ಲೈಂಗಿಕ (Sexual ) ಸಂಬಂಧ ಬೆಳೆಸುವ ವೇಳೆ ಭಯವಾಗುವ ಜೊತೆಗೆ ದೇಹ ಹಾಗೂ ಯೋನಿ (Vagina) ಅದಕ್ಕೆ ಸ್ಪಂದಿಸದೆ ಇರುವುದನ್ನು ವಜಿನಿಸ್ಮಸ್ ಎನ್ನಲಾಗುತ್ತದೆ. ಯೋನಿಸ್ಮಸ್ ಎನ್ನುವುದು ಯೋನಿ ಸ್ಥಿತಿಯಾಗಿದೆ. ಸಂಭೋಗದ ವೇಳೆ ಯೋನಿ ಕಿರಿದಾಗುತ್ತದೆ. ಇದ್ರಿಂದ ಅಸಹನೀಯ ನೋವು ಉಂಟಾಗುತ್ತದೆ. ಯೋನಿ ಸಂಕೋಚನ ನಿಲ್ಲಿಸುವುದು ಮಹಿಳೆಯರ ಕೈನಲ್ಲಿ ಇರೋದಿಲ್ಲ. ಇದಕ್ಕೆ ಉಪಕರಣ ಬಳಸಿದಾಗ ನೋವು ಹೆಚ್ಚಾಗುತ್ತದೆ.
undefined
ಯೋನಿಸ್ಮಸ್ ಗೆ ಕಾರಣವೇನು ? : ಹಿಂದೆ ಲೈಂಗಿಕ ಕ್ರಿಯೆಯಲ್ಲಾದ ಕೆಟ್ಟ ಅನುಭವದ ಜೊತೆಗೆ ಯೋನಿಸ್ಮಸ್ ಗೆ ಇನ್ನೂ ಅನೇಕ ಕಾರಣಗಳಿವೆ. ಆತಂಕ, ಹೆರಿಗೆ (Childbirth) ವೇಳೆ ಆದ ಯೋನಿ ಗಾಯ, ಯಾವುದಾದ್ರೂ ಶಸ್ತ್ರಚಿಕಿತ್ಸೆ, ಲೈಂಗಿಕತೆ ಭಯ, ಲೈಂಗಿಕತೆ ಬಗ್ಗೆ ನಕಾರಾತ್ಮಕ ಭಾವನೆ, ಅತ್ಯಾಚಾರ ಇವೆಲ್ಲವೂ ಯೋನಿಸ್ಮಸ್ ಗೆ ಕಾರಣವಾಗುತ್ತವೆ. ಯೋನಿಸ್ಮಸ್ ಜೊತೆಗೆ ಮೂತ್ರಕೋಶದ ಸೋಂಕು, ಯುಟಿಐ ಮತ್ತು ಯೀಸ್ಟ್ ಸೋಂಕು ಇದ್ದಲ್ಲಿ ಸಮಸ್ಯೆ ಹೆಚ್ಚಾಗುತ್ತದೆ.
ಯಾವ ರೀತಿಯ ಸ್ಯಾನಿಟರಿ ಪ್ಯಾಡ್ ಒಳ್ಳೇದು ನೋಡಿ
ಯೋನಿಸ್ಮಸ್ ಗೆ ಚಿಕಿತ್ಸೆ? : ಸಾಮಾನ್ಯವಾಗಿ ಲೈಂಗಿಕ ಸಮಸ್ಯೆಯನ್ನು ಮಹಿಳೆಯರು ಮುಚ್ಚಿಡುತ್ತಾರೆ. ತಮಗೆ ಈ ಸಮಸ್ಯೆಯಿದೆ ಎಂದು ಅವರು ಎಲ್ಲಿಯೂ ಹೇಳುವುದಿಲ್ಲ. ದೈಹಿಕ ಕೊರತೆಯಿಂದ ಹೀಗಾಗ್ತಿದೆ ಎಂದು ಭಾವಿಸ್ತಾರೆ. ಯೋನಿಸ್ಮಸ್ ಬಗ್ಗೆ ಬಹಿರಂಗವಾಗಿ ಮಾತನಾಡುವ ಅವಶ್ಯಕತೆಯಿದೆ. ಇಲ್ಲವೆಂದ್ರೆ ಇದು ಮಾನಸಿಕ ರೋಗಕ್ಕೆ ಕಾರಣವಾಗುವ ಸಾಧ್ಯತೆಯಿರುತ್ತದೆ.
ಕೆಟ್ಟ ಸಂಬಂಧದಿಂದ ಹೊರಗೆ ಬನ್ನಿ : ನಿಮ್ಮ ಲೈಂಗಿಕ ಸಂಬಂಧ ಕೆಟ್ಟದಾಗಿದ್ದರೆ ಯೋನಿಸ್ಮಸ್ ಸಮಸ್ಯೆ ಕಾಡುತ್ತದೆ. ಹಾಗಾಗಿ ಮೊದಲು ಸಂಬಂಧದಿಂದ ಹೊರಗೆ ಬರಬೇಕು. ಇದಕ್ಕೆ ನೀವು ನಿಮ್ಮ ಸ್ನೇಹಿತರು, ಕುಟುಂಬಸ್ಥರ ಸಲಹೆ, ಸಹಾಯ ಪಡೆಯಬಹುದು.
ವೈದ್ಯರ ಭೇಟಿ: ವೈದ್ಯರು ನಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತಾರೆ. ಆಪ್ತರ ಬಳಿ ಹೇಳಲು ಸಾಧ್ಯವಾಗದ ಸಂಗತಿಯನ್ನು ಕೂಡ ನೀವು ವೈದ್ಯರ ಬಳಿ ಹೇಳಬಹುದು. ಹಾಗಾಗಿ ಯೋನಿಸ್ಮಸ್ ಸಮಸ್ಯೆ ನಿಮಗೆ ಕಾಡ್ತಿದ್ದರೆ ಮುಜುಗರ ಬಿಟ್ಟು ವೈದ್ಯರ ಬಳಿ ಈ ವಿಷ್ಯ ತಿಳಿಸಿ. ನಿಮ್ಮ ಆರೋಗ್ಯ ಸ್ಥಿತಿ ಪರಿಶೀಲಿಸಿ ವೈದ್ಯರು ಚಿಕಿತ್ಸೆ, ಸಲಹೆ ನೀಡುತ್ತಾರೆ. ಮಾನಸಿಕ ಆರೋಗ್ಯ ತಜ್ಞರನ್ನು ಭೇಟಿಯಾಗಿ ನಿಮ್ಮ ಸಮಸ್ಯೆಯಿಂದ ನೀವು ಹೊರಗೆ ಬರುವ ಪ್ರಯತ್ನ ನಡೆಸಬಹುದು.
ಯೋನಿಸ್ಮಸ್ ಸಮಸ್ಯೆಯಿಂದ ಹೊರ ಬರಲು ವ್ಯಾಯಾಮ: ಕೆಗಲ್ ವ್ಯಾಯಾಮಗಳು (Kegel Exercises) ನಿಮ್ಮ ಈ ಸ್ಥಿತಿಯನ್ನು ಸುಧಾರಿಸುತ್ತವೆ. ನಿಮ್ಮ ಯೋನಿ ಸ್ನಾಯುಗಳಿಗೆ ಇದು ವ್ಯಾಯಾಮ ನೀಡುತ್ತದೆ. ಹಾಗಾಗಿ ನೀವು ನಿಯಮಿತವಾಗಿ ವ್ಯಾಯಾಮ ಮಾಡುವ ಮೂಲಕವೂ ಯೋನಿಸ್ಮಸ್ ಸ್ಥಿತಿಯಿಂದ ಹೊರಗೆ ಬರಬಹುದು.
Women Health: ಮಹಿಳೆಯರಲ್ಲಿ ಬೊಜ್ಜು, ಬಿಪಿ ಹೆಚ್ಚಳ, ಬೆಂಗಳೂರಿಗೇ ಅಗ್ರಸ್ಥಾನ !
ಸಂಗಾತಿಯ ಸಹಾಯ: ನಿಮ್ಮ ಈ ಸ್ಥಿತಿ ಸುಧಾರಿಸಲು ಸಂಗಾತಿ ನೆರವು ಬಹಳ ಮುಖ್ಯ. ಸಂಭೋಗದ ವೇಳೆ ಯೋನಿಸ್ಮಸ್ ನಿಮಗೆ ಅಡ್ಡಿಯಾಗ್ತಿದೆ ಎಂದಾದ್ರೆ ನೀವು ಫೋರ್ಪ್ಲೆ ಟ್ರೈ ಮಾಡಬಹುದು. ನಿಮ್ಮಿಬ್ಬರ ಮಧ್ಯೆ ಇರುವ ಸಂಬಂಧವನ್ನು ಸುಧಾರಿಸಿಕೊಳ್ಳುವುದು ಮುಖ್ಯ.