Two Finger Test ಅಂದ್ರೇನು ? ಅತ್ಯಾಚಾರ ಪೀಡಿತೆಗೆ ಮಾಡೋ ಈ ಟೆಸ್ಟಿನ ಬಗ್ಗೆ ಇಲ್ಲಿದೆ ಮಾಹಿತಿ

By Suvarna NewsFirst Published Nov 3, 2022, 4:45 PM IST
Highlights

ನಮ್ಮ ಸಮಾಜದಲ್ಲಿ ಅತಿ ಹೆಚ್ಚು ಅವಮಾನ ಎದುರಿಸುವವಳು ಹೆಣ್ಣು. ದೌರ್ಜನ್ಯಕ್ಕೆ ಒಳಗಾದ್ಮೇಲೂ ಆಕೆಯನ್ನು ಹಿಂಡಿ ಹಿಪ್ಪೆ ಮಾಡಲಾಗುತ್ತದೆ. ಸಾವಿರಾರು ಪ್ರಶ್ನೆ, ನೂರಾರು ಪರೀಕ್ಷೆಗೆ ಆಕೆ ತನ್ನನ್ನು ಒಡ್ಡಿಕೊಳ್ಳಬೇಕಾಗುತ್ತದೆ. ಇದ್ರಿಂದ ಬದುಕಿದ್ದು ಸತ್ತ ಸ್ಥಿತಿಗೆ ಬರ್ತಾಳೆ ಆಕೆ.
 

ಮಹಿಳೆಯರ ಸುರಕ್ಷತೆ ಬಗ್ಗೆ ಸರ್ಕಾರ ಎಷ್ಟೆ ಕಾನೂನು ತಂದ್ರೂ ಈಗ್ಲೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಕಡಿಮೆಯಾಗಿಲ್ಲ. ರಾತ್ರಿ ಇರಲಿ ಹಗಲಿನಲ್ಲೂ ಮಹಿಳೆ ಒಂಟಿಯಾಗಿ ಓಡಾಡುವುದು ಕಷ್ಟ. ಮಹಿಳೆಯರ ಮೇಲೆ ನಿರಂತರವಾಗಿ ಹಿಂಸೆಗಳು ನಡೆಯುತ್ತಿವೆ. ನಿಮಿಷಕ್ಕೊಂದರಂತೆ ಅತ್ಯಾಚಾರ ನಡೆಯುತ್ತಲೇ ಇದೆ. ಅತ್ಯಾಚಾರಕ್ಕೆ ಒಳಗಾದ ಮಹಿಳೆ ಈ ನೋವಿನ ಜೊತೆ ಸಮಾಜದ ಮುಂದೆ ಮತ್ತೊಂದಿಷ್ಟು ನೋವು ತಿನ್ನಬೇಕಾಗುತ್ತದೆ. ಪೊಲೀಸರ ಪ್ರಶ್ನೆ, ಕೋರ್ಟ್ ಮುಂದೆ ನಿಲ್ಲುವುದು ಸೇರಿದಂತೆ ಅನೇಕ ರೀತಿಯಲ್ಲಿ ಅವಮಾನಕ್ಕೊಳಗಾಗ್ತಾಳೆ. ಪೀಡಿತೆ ಮೇಲೆ ಅತ್ಯಾಚಾರ ನಡೆದಿದ್ದು ಎಷ್ಟು ಸತ್ಯ ಎಂಬುದನ್ನು ತಿಳಿಯಲು ಕೆಲ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಆ ಪರೀಕ್ಷೆಯಲ್ಲಿ ಟು ಫಿಂಗರ್ ಟೆಸ್ಟ್ ಕೂಡ ಒಂದು. ನಾವಿಂದು ಟು ಫಿಂಗರ್ ಟೆಸ್ಟ್ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

ಅತ್ಯಾಚಾರ (Rape) ಕ್ಕೊಳಗಾದ ಪೀಡಿತೆಗೆ ಕೆಲವು ಬಾರಿ ಟು ಫಿಂಗರ್ (Two Finger ) ಟೆಸ್ಟ್ ನಡೆಯುತ್ತದೆ. ಇದ್ರಿಂದ ಪೀಡಿತೆ ಮತ್ತೊಂದಿಷ್ಟು ನೋವು (Pain) ತಿನ್ನಬೇಕಾಗುತ್ತದೆ. ಸುಪ್ರೀಂ ಕೋರ್ಟ್ (Supreme Court) ಕೂಡ ಈ ಟು ಫಿಂಗರ್ ಟೆಸ್ಟ್ ಗೆ ಅಸಮಾಧಾನ ವ್ಯಕ್ತಪಡಿಸಿದೆ.

ಟು ಫಿಂಗರ್ ಟೆಸ್ಟ್ ಎಂದರೇನು? :  ಟು ಫಿಂಗರ್ ಪರೀಕ್ಷೆ (Test) ಯಲ್ಲಿ ಪೀಡಿತೆ ಖಾಸಗಿ ಭಾಗಕ್ಕೆ ಎರಡು ಬೆರಳುಗಳನ್ನು ಹಾಕುವ ಮೂಲಕ ಪರೀಕ್ಷೆ ನಡೆಯುತ್ತದೆ. ಆಕೆಯ ಕನ್ಯತ್ವದ ಬಗ್ಗೆ ಈ ಪರೀಕ್ಷೆ ಮೂಲಕ ತಿಳಿಯುವ ಪ್ರಯತ್ನ ನಡೆಯುತ್ತದೆ. ಆಕೆ ಮೇಲೆ ಅತ್ಯಾಚಾರ ನಡೆದಿದೆಯೇ ಇಲ್ಲವೆ ಎಂಬುದನ್ನು ತಿಳಿಯಲು ಟು ಫಿಂಗರ್ ಟೆಸ್ಟ್ ಮಾಡಲು ಕೆಲವೊಮ್ಮೆ ಸಲಹೆ ನೀಡಲಾಗುತ್ತದೆ.  ಟು ಫಿಂಗರ್ ಟೆಸ್ಟ್ ಗೆ ಈ ಹಿಂದಿನಿಂದಲೂ ವಿರೋಧ ವ್ಯಕ್ತವಾಗುತ್ತಲೇ ಬಂದಿದೆ. 2018 ರಲ್ಲಿ ಯುಎನ್ ಮತ್ತು ಡಬ್ಲ್ಯುಎಚ್ ಒ (WHO), ಟು ಫಿಂಗರ್ ಟೆಸ್ಟ್, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವೆಂದಿತ್ತು. ಇದನ್ನು ನಿಷೇಧಿಸುವಂತೆ ಕರೆ ನೀಡಿತ್ತು. ಹಾಗೆಯೇ ಟು ಫಿಂಗರ್ ಟೆಸ್ಟ್ ನಿಂದ ಮಹಿಳೆಯರ ಕನ್ಯತ್ವ ಪರೀಕ್ಷೆ  ಸಾಧ್ಯವಿಲ್ಲ ಎಂದು ಡಬ್ಲ್ಯುಎಚ್ ಒ ಹೇಳಿದೆ.

ಸ್ತನಗಳ ದೊಡ್ಡ ಗಾತ್ರದಿಂದ ಸಮಸ್ಯೆ ಅನುಭವಿಸುತ್ತಿದ್ದೀರಾ? ಇದನ್ನ ಟ್ರೈ ಮಾಡಿ

ಸುಪ್ರೀಂ ಕೋರ್ಟ್ ಹೇಳಿದ್ದೇನು ? : ಸುಪ್ರೀಂ ಕೋರ್ಟ್ (Supreme Court) ಕೂಡ ಟು ಫಿಂಗರ್ ಟೆಸ್ಟನ್ನು ಸಂಪೂರ್ಣವಾಗಿ ವಿರೋಧಿಸಿದೆ. ಇದ್ರಿಂದ ಕನ್ಯತ್ವ ಪರೀಕ್ಷೆ (Virginity Test) ಸಾಧ್ಯವಿಲ್ಲ. ಹಾಗೆ ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ಟು ಫಿಂಗರ್ ಪರೀಕ್ಷೆ ನಡೆಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಕೋರ್ಟ್ ಆದೇಶ ನೀಡಿದೆ. ಅಲ್ಲದೆ ಪಠ್ಯದಲ್ಲಿರುವ ಈ ವಿಷ್ಯವನ್ನು ತೆಗೆದುಹಾಕುವ ನಿರ್ಧಾರಕ್ಕೆ ಬರಲಾಗಿದೆ.  ಟು ಫಿಂಗರ್ ಟೆಸ್ಟ್, ಲೈಂಗಿಕವಾಗಿ ಸಕ್ರಿಯವಾಗಿರುವ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುವುದಿಲ್ಲವೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ. ಈ ಪರೀಕ್ಷೆ ಮಹಿಳೆಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ನೋವುಂಟು ಮಾಡುತ್ತದೆ. ಪುರುಷ ಪ್ರಧಾನ ಸಮಾಜಕ್ಕೆ ಮಾನ್ಯತೆ ನೀಡುವ ಅಂಶವೂ ಇದ್ರಲ್ಲಿದೆ. 

Pink Tax ಅಂದ್ರೇನು? ಮಹಿಳೆಯರು ಯಾಕೆ ನೀಡ್ಬೇಕು ಗೊತ್ತಾ?

2013ರಲ್ಲಿಯೇ ಆಗಿತ್ತು ನಿಷೇಧ : ಟು ಫಿಂಗರ್ ಟೆಸ್ಟನ್ನು ಭಾರತದಲ್ಲಿ 2013ರಲ್ಲಿಯೇ ನಿಷೇಧಿಸಲಾಗಿದೆ. ಆದ್ರೆ ಈಗ್ಲೂ ಕೂಡ ಈ ಬಗ್ಗೆ ಸಾಕಷ್ಟು ಮಾತುಗಳು, ಚರ್ಚೆಗಳು ಕೇಳಿ ಬರ್ತಿವೆ. ಕೆಲವೊಂದು ಕಡೆ ಈ ಪರೀಕ್ಷೆ ಮಾಡುವಂತೆ ಸಲಹೆ ಕೇಳಿ ಬರ್ತಿದೆ. ಇದೇ ಕಾರಣಕ್ಕೆ ಸುಪ್ರೀಂ ಕೋರ್ಟ್ ಮತ್ತೆ ಈ ಬಗ್ಗೆ ಮಾತನಾಡಿದೆ. ಮಹಿಳೆಯರಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುವ ಈ ಪರೀಕ್ಷೆ ಇನ್ನೂ ವೈದ್ಯಕೀಯ ಕೋರ್ಸ್‌ನ ಭಾಗವಾಗಿರೋದು ಬೇಸರದ ಸಂಗತಿಯಾಗಿದೆ. ಹಾಗಾಗಿಯೇ ಸುಪ್ರೀಂ ಕೋರ್ಟ್ ಕಠಿಣ ಕ್ರಮಕ್ಕೆ ಸೂಚನೆ ನೀಡಿದೆ. 
 

click me!