Saree Fall Trend: ಸೀರೆ ಫಾಲ್ ಟ್ರೆಂಡ್ ಶುರುವಾಗಿದ್ದು ಯಾವಾಗ ಗೊತ್ತಾ?

By Suvarna News  |  First Published Dec 17, 2022, 3:53 PM IST

ಹೊಸ ಸೀರೆ ತಂದ್ಮೇಲೆ ಅದಕ್ಕೆ ಫಾಲ್ ಹಚ್ಲೇಬೇಕು. ಮ್ಯಾಚಿಂಗ್ ಫಾಲ್ ಗಾಗಿ ಎಲ್ಲೆಲ್ಲೋ ಹುಡುಕಾಟ ನಡೆಸ್ತೇವೆ. ಈ ಫಾಲ್ ಯಾಕೆ ಮತ್ತೆ ಯಾವಾಗ ಶುರುವಾಯ್ತು ಅನ್ನೋದು ಅನೇಕರಿಗೆ ತಿಳಿದಿಲ್ಲ. ನಾವಿಂದು ಅದ್ರ ಬಗ್ಗೆ ಮಾಹಿತಿ ನೀಡ್ತೆವೆ. 
 


ಸೀರೆ ನಾರಿಗೆ ಚೆಂದ. ಸೀರೆ ಅಂದ ಹೆಚ್ಚಾಗೋದು ಕೂಡ ನಾರಿ ಅದನ್ನು ಉಟ್ಟಾಗ್ಲೆ. ಭಾರತದ ಸಂಪ್ರದಾಯಿಕ ಉಡುಗೆ ಸೀರೆ. ಸೀರೆಗೆ ಸಂಬಂಧಿಸಿದಂತೆ ಸಾಕಷ್ಟು ಹಾಡುಗಳನ್ನು ಸಿನಿಮಾದಲ್ಲಿ ನಾವು ಕೇಳ್ತಿರುತ್ತೇವೆ. ಅದ್ರಲ್ಲಿ ಬಾಲಿವುಡ್ ನಟ ಶಾಹಿದ್ ಕಪೂರ್ ಹಾಗೂ ಸೋನಾಕ್ಷಿ ಸಿನ್ಹಾ ಅಭಿನಯದ `ಸಾಡಿ ಕೆ ಫಾಲಸಾ ಮ್ಯಾಚ್ಯು ಕಿಯಾರೆ’ ಎಂಬ ಹಾಡನ್ನು ನೀವು ಕೇಳಿರಬಹುದು. ಸೀರೆಯ ಫಾಲ್ ಬಗ್ಗೆ ಈ ಹಾಡಿದೆ. ಸೀರೆ ಫಾಲ್ ಅಲ್ವಾ ಅಂತಾ ನೀವು ನಿರ್ಲಕ್ಷ್ಯ ಮಾಡ್ಬೇಡಿ. ಸೀರೆಗೆ ತಕ್ಕಂತೆ ಫಾಲ್ ಹೊಂದಿಸೋದು ಸ್ವಲ್ಪ ಕಷ್ಟದ ಕೆಲಸವೇ. ಸ್ವಲ್ಪ ಮ್ಯಾಜಿಂಗ್ ತಪ್ಪಿದ್ರೂ ಸೀರೆ ಅಂದ ಕಳೆದುಕೊಳ್ಳುತ್ತದೆ. ಸೀರೆಗೆ ತಕ್ಕಂತೆ ನೀವು ಫಾಲ್ ಬಳಸಬೇಕಾಗುತ್ತದೆ.

ಸೀರೆ (Saree ) ಎಷ್ಟೇ ದುಬಾರಿಯಾಗಿರಲಿ ಇಲ್ಲ ಕಡಿಮೆ ಬೆಲೆಯದ್ದಾಗಿರಲಿ ಅದಕ್ಕೆ ಫಾಲ್ (Fall) ಹಚ್ಚೋದು ಸಾಮಾನ್ಯ. ಸೀರೆ ಬಹಳ ದಿನ ಬಾಳಿಕೆ ಬರಬೇಕು ಎನ್ನುವ ಕಾರಣಕ್ಕೆ ಫಾಲ್ ಹಚ್ಚಲಾಗುತ್ತದೆ. ಸೀರೆ ಫಾಲ್ ಮಾರುಕಟ್ಟೆ ಕೂಡ ದೊಡ್ಡದಿದೆ. ಅನೇಕರು ಮ್ಯಾಚಿಂಗ್ ಪಾಲ್ ಸೆಂಟರ್ ಇಟ್ಟುಕೊಂಡು ಜೀವನ ನಡೆಸ್ತಿದ್ದಾರೆ. ಕೆಲ ಬ್ರ್ಯಾಂಡೆಡ್ ಸೀರೆಗಳಿಗೆ ಮ್ಯಾಚಿಂಗ್ (Matching) ಫಾಲ್ ನೀಡಲಾಗುತ್ತದೆ. ರೆಡಿಮೆಡ್ ಸೀರೆಗಳಿಗೂ ನೀವು ಫಾಲ್ ನೋಡಿರ್ತಿರಿ. 

Tap to resize

Latest Videos

ಹೊಸ ಸೀರೆ ತಂದ ತಕ್ಷಣ ಮಹಿಳೆಯರು ಬ್ಲೌಸ್ (Blouse) ಜೊತೆ ಫಾಲ್ ಹಚ್ಚುವಂತೆ ಹೊಲಿಗೆಯವರಿಗೆ ಸೂಚನೆ ನೀಡ್ತಾರೆ. ಫಾಲ್ ಇಲ್ಲದೆ ಸೀರೆ ಉಡೋದು ಬಹಳ ಕಷ್ಟ ಎನ್ನುವವರಿದ್ದಾರೆ. ಸೀರೆ ಕೆಳ ಭಾಗ ಫಾಲ್ ಇಲ್ಲದೆ ಹೋದ್ರೆ ಕೊಳಕಾಗುತ್ತದೆ. ಹಾಗೆ ಕೆಳ ಭಾಗದಲ್ಲಿ ನೆರಿಗೆ ಸರಿಯಾಗಿ ಕುಳಿತುಕೊಳ್ಳಬೇಕೆಂದ್ರೆ ಫಾಲ್ ಇರ್ಲೇಬೇಕು. ಮಹಿಳೆಯರು ಫಾಲ್ ಬಗ್ಗೆ ಅದೆಷ್ಟೋ ಬಾರಿ ಮಾತನಾಡ್ತಿರುತ್ತಾರೆ. ಕೆಲ ಮಹಿಳೆಯರು ಫಾಲ್ ಹಚ್ಚುವ ಕೆಲಸ ಮಾಡ್ತಿರುತ್ತಾರೆ. ಆದ್ರೆ ಈ ಫಾಲ್ ಇತಿಹಾಸ ತಿಳಿದಿರೋದಿಲ್ಲ. 

ಫೇಶಿಯಲ್ ನಂತರ ಈ ತಪ್ಪನ್ನೆಲ್ಲಾ ಮಾಡಬೇಡಿ, ಸ್ಕಿನ್ ಹಾಳಾಗುತ್ತೆ!

ಸೀರೆ ಫಾಲ್ ಹಚ್ಚೋದು ಯಾವಾಗ ಶುರುವಾಯ್ತು ಗೊತ್ತಾ? : ಸೀರೆ ಇತಿಹಾಸ ತುಂಬಾ ಹಳೆಯದು. ಕ್ರಿ.ಪೂ.2500 ರಲ್ಲೂ ಮಹಿಳೆಯರು ಸೀರೆ ಧರಿಸುತ್ತಿದ್ದರು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಆದ್ರೆ ಸೀರೆಗೆ ಫಾಲ್  ಹಚ್ಚುವ ಪ್ರವೃತ್ತಿ ತುಂಬಾ ಹಳೆಯದಲ್ಲ. ಸುಮಾರು 50 ವರ್ಷಗಳ ಇತಿಹಾಸವನ್ನು ಇದು ಹೊಂದಿದೆ. 50 ವರ್ಷಗಳ ಹಿಂದೆ ಸೀರೆಗೆ ಫಾಲ್ ಹಚ್ಚುವ ಪದ್ಧತಿ ಇರಲಿಲ್ಲ. ಇದು 1970ರ ಸುಮಾರಿಗೆ ಮುಂಬೈನಲ್ಲಿ ಆರಂಭವಾಯಿತು ಎಂದು ಒಂದು ವರದಿಯಲ್ಲಿ ಹೇಳಲಾಗಿದೆ. ಹಿಂದೆ ಸೀರೆಗಳನ್ನು ಫಾಲ್ ಹಾಕದೆ ಧರಿಸುತ್ತಿದ್ದರು. ಆದರೆ ಸ್ವಾತಂತ್ರ್ಯದ ನಂತರ ಕಸೂತಿ ಮತ್ತು ಸ್ಟೋನ್ ಗಳು ಸೀರೆಯಲ್ಲಿ ಕಾಣಿಸಿಕೊಳ್ಳಲು ಶುರುವಾದ್ವು. ಆಗ ಸೀರೆ ಭಾರ ಹೆಚ್ಚಾಯ್ತು. ತೂಕ ಹೆಚ್ಚಾದಂತೆ ಸೀರೆ ಬೆಲೆ ಕೂಡ ಜಾಸ್ತಿಯಾಯ್ತು.

ಹೊಸ ಶೂ ಖರೀದಿಸುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯಗಳಿವು

ದುಬಾರಿ ಸೀರೆಗಳಲ್ಲಿ ಆಗ ಸಮಸ್ಯೆ ಶುರುವಾಯ್ತು. ಎರಡು-ಮೂರು ಬಾರಿ ಬಳಸಿದ ನಂತರ ಅವು ಕೆಳಗಿನಿಂದ ಉಜ್ಜಲು ಪ್ರಾರಂಭಿಸಿದವು. ಕೆಳಗಿನ ಬಟ್ಟೆ ಪೈಪ್ ನಂತೆ ಬಾಗುತ್ತಿತ್ತು. ಮಾಮೂಲಿ ಕಾಟನ್ ಸೀರೆಗಳಿಗೂ ಇದೆ ಸಮಸ್ಯೆಯಾಗ್ತಿತ್ತು. ಸೀರೆಗಳನ್ನು ಹೆಚ್ಚು ಕಾಲ ಉಳಿಸಲು ಏನಾದರೂ ಉಪಾಯ ಮಾಡ್ಲೇಬೇಕಿತ್ತು. ಇದು ಬೆಲ್ ಬಾಟಮ್ ಪ್ಯಾಂಟ್‌ಗಳ ಕಾಲವಾಗಿತ್ತು. ಆ ಸಮಯದಲ್ಲಿ ಪ್ಯಾಂಟ್‌ನ ಕೆಳಗಿರುವ ಬಟ್ಟೆ ಸಹ ಕೊಳೆಯಾಗ್ತಿತ್ತು.  ಪ್ಯಾಂಟ್ ಸವೆಯದಂತೆ ತಳದಲ್ಲಿ ಚೈನ್ ಹಾಕುವ ಪರಿಪಾಠ ಶುರುವಾಯಿತು. ಪ್ಯಾಂಟ್ ನಂತೆ ಸೀರೆಗೆ ಚೈನ್ ಹಾಕಲು ಸಾಧ್ಯವಿರಲಿಲ್ಲ. ಸೀರೆ ಉದ್ದವಿರುವ ಕಾರಣ ಅದಕ್ಕೆ ಬೇರೆ ವ್ಯವಸ್ಥೆ ಮಾಡುವುದು ಅನಿವಾರ್ಯವಾಯ್ತು. ಆಗ ಬಂದಿದ್ದೆ ಫಾಲ್. ಮೊದಲು ಸೀರೆ ಕೆಳಗೆ ಬಟ್ಟೆ ಹಾಕಲಾಗ್ತಾಯಿತ್ತು. ಅದನ್ನು ಒಳಗಿನಿಂದ ಹೊಲಿಯುತ್ತಿದ್ದರು. ಮ್ಯಾಚಿಂಗ್ ಬಟ್ಟೆಯನ್ನೇ ಇದಕ್ಕೆ ಬಳಸಲಾಗ್ತಾಯಿತ್ತು. ಸೀರೆಗೆ ಫಾಲ್ ಹಚ್ಚೋದ್ರಿಂದ ಎರಡು ಲಾಭವಿದೆ. ಸೀರೆ ಸರಿಯಾಗಿ ನಿಲ್ಲುವ ಜೊತೆಗೆ ಕೆಳಗಿನ ಭಾಗ ಬೇಗ ಹರಿಯುವುದಿಲ್ಲ. 

click me!