ಭಾರತದಲ್ಲಿ 90 ಗಂಟೆ, 70 ಗಂಟೆ ಕೆಲಸದ ಚರ್ಚೆ ಜೋರಾಗಿದೆ. ಇದರ ನಡುವೆ 19ರ ಹರೆಯದ ಕಾಲೇಜು ಯುವತಿ ತನಗೆ 9 ರಿಂದ 5 ಗಂಟೆ ಕಚೇರಿಯಲ್ಲಿ ಕುಳಿತು ಮಾಡುವ ಕೆಲಸ ಬೇಡ. ತಾನು ಒನ್ಲಿ ಫ್ಯಾನ್ಸ್ ಮಾಡೆಲ್ ಅಥವಾ ಜ್ಯೋತಿಷಿಯನ್ನು ವೃತ್ತಿಯಾಗಿ ಆಯ್ಕೆ ಮಾಡುತ್ತೇನೆ ಎಂದಿದ್ದಾಳೆ.
ದೇಶದಲ್ಲೀಗ ಇದೀಗ ಕೆಲಸದ ಸಮಯ, ವರ್ಕ್ ಲೈಫ್ ಬ್ಯಾಲೆನ್ಸ್ ಕುರಿತು ತೀವ್ರ ಚರ್ಚೆ ನಡೆಯುತ್ತಿದೆ. ಎಲ್ ಆ್ಯಂಡ್ ಟಿ ಮುಖ್ಯಸ್ಥ ಎಸ್‌ಎನ್ ಸುಬ್ರಹ್ಮಣ್ಯನ್ ಹೇಳಿದೆ 90 ಗಂಟೆ ಕೆಲಸ ಹಾಗೂ ಇನ್ಫೋಸಿಸ್ ನಾರಾಯಣಮೂರ್ತಿ ಹೇಳಿದ 70 ಗಂಟೆ ಕೆಲಸದ ಹೇಳಿಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಭಾನುವಾರವೂ ಕೆಲಸ ಮಾಡಿದರೆ ಒಳ್ಳೇದು ಎಂದು ಸುಬ್ರಹ್ಮಣ್ಯನ್ ಹೇಳಿರುವುದು ಮತ್ತಷ್ಟು ಮಂದಿಯನ್ನು ಕೆರಳಿಸಿದೆ. ಈ ಚರ್ಚೆಗಳ ನಡುವೆ 19ರ ಹರೆಯದ ಕಾಲೇಜು ಯುವತಿಯ ರೆಡ್ಡಿಟ್ ಪೋಸ್ಟ್ ಇದೀಗ ಮತ್ತೊಂದು ಹಂತದ ಚರ್ಚೆಗೆ ಗ್ರಾಸವಾಗಿದೆ. 9 ರಿಂದ 5 ಗಂಟೆ ತನಕ ಮಾಡುವ ಒತ್ತಡದ ಕೆಲಸ ನನಗೆ ಬೇಡ. ನನ್ನಲ್ಲಿ ಪ್ಲಾನ್ ಎ ಹಾಗೂ ಬಿ ಆಯ್ಕೆಗಳಿವೆ. ಒಂದು OF ಮಾಡೆಲ್ ಮತ್ತೊಂದು ಜ್ಯೋತಿಷಿ ಎಂದು ಯುವತಿ ಹೇಳಿದ್ದಾಳೆ. ಇಷ್ಟೇ ಅಲ್ಲ ಇದಕ್ಕೆ ಕೆಲ ಕಾರಣಗಳನ್ನೂ ಬಿಚ್ಚಿಟ್ಟಿದ್ದಾಳೆ.
ಮೆದುಳು ಕೊರೆಯುವ ವಿಷಯಗಳು, ಶೇಕಡಾ 75ರಷ್ಟು ಕಡ್ಡಾಯ ತರಗತಿ ಹಾಜರಾತಿ, 200 ವರ್ಷ ಹಳೆಯ ಸಿಲೆಬಸ್, ಪ್ರತಿ ದಿನ ಅಸೈನ್ಮೆಂಟ್ ಮಾಡಿ ಮುಗಿಸಿ ಕೊನೆಗ ಪರೀಕ್ಷೆ ಬರೆದರೂ ಕೆಲಸ ಸಿಗುತ್ತೆ ಅನ್ನೋ ಗ್ಯಾರೆಂಟಿ ಇಲ್ಲ. ಇನ್ನು 9 ರಿಂದ 5 ಗಂಟೆ ಕೆಲಸ ಸಿಕ್ಕರೂ ಒತ್ತಡ, ಬೈಗಳು, ಮಶಿನ್ ರೀತಿಯ ಕೆಲಸ ಮಾಡುವುದು ನನ್ನಿಂದ ಸಾಧ್ಯವಿಲ್ಲ. ಹೀಗಾಗಿ ಪ್ಲಾನ್ ಎ ಹಾಗೂ ಬಿ ರೆಡಿ ಮಾಡಿದ್ದೇನೆ ಎಂದು 19ರ ಯುವತಿ ಹೇಳಿದ್ದಾಳೆ.
LT 90 ಗಂಟೆ, ಇನ್ಫೋಸಿಸ್ 70 ಗಂಟೆ, ಆದ್ರೆ ಚಿರತೆಯಿಂದ ಸಿಕ್ತು ಮನೆಯಿಂದ ಕೆಲಸ, ಮೀಮ್ಸ್ ವೈರಲ್
ಇದರಿಂದ ಈಗಲೇ ನಾನು ವೃತ್ತಿ ಬದಲಿಸಲು ನಿರ್ಧರಿಸಿದ್ದೇನೆ. ಈಗಿನಿಂದಲೇ ನಾನು ತಯಾರಿ ಆರಂಭಿಸಿದರೆ ಕೆಲವೇ ವರ್ಷದಲ್ಲಿ ಬದುಕು ನಿಶ್ಚಿಂತೆಯಿಂದ ಸಾಗಲಿದೆ ಎಂದು ಯುವತಿ ಹೇಳಿದ್ದಾಳೆ. ಒನ್ಲಿ ಫ್ಯಾನ್ಸ್ ಮಾಡೆಲ್ ಕರಿಯರ್‌ನಲ್ಲಿ ನಿಮಗೆ ಉದ್ಯೋಗ ಭದ್ರತೆ ಇದೆ. ಕೈತುಂಬಳ ಸಂಬಳವಿದೆ. ಆದರೆ ಇದು ನನಗೆ ಸರಿ ಏನಿಸಿಲ್ಲ, ಅಥವಾ ಸರಿ ಹೋಗಿಲ್ಲ ಎಂದರೆ ಜ್ಯೋತಿಷಿಯಾಗುತ್ತೇನೆ. ಸರಳ ಹಾಗು ಸಿಂಪಲ್ ವಿಧಾನದ ಮೂಲಕ ಕುಳಿತಲ್ಲೇ ಹಣ ಸಂಪಾದಿಸಬಹುದು. ಒಂದೆರಡು ಗಿಮಿಕ್ ಮಾಡಿದರೆ ಸಾಕು. ಕೈಗೆ ಹಣ ಬರಲಿದೆ. ಒತ್ತಡದ ಬದುಕು ಇದಲ್ಲ, ಉದ್ಯೋಗ ಭದ್ರತೆಗೆ ಸಮಸ್ಯೆ ಇಲ್ಲ ಎಂದು ಯುವತಿ ಹೇಳಿದ್ದಾರೆ.
ವಿದೇಶಿ ಯುವಿಯ ರೆಡ್ಡಿಟ್ ಪೋಸ್ಟ್ ಇದೀಗ ಭಾರತದಲ್ಲಿ ಚರ್ಚೆಗೆ ಕಾರಣವಾಗಿದೆ. ಪ್ರಮುಖವಾಗಿ 90 ಗಂಟೆ ಹಾಗೂ 70 ಗಂಟೆ ಕೆಲಸದ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಉದ್ಯೋಗ ಭದ್ರತೆಯಲ್ಲೂ ಭಾರಿ ಆತಂಕದ ವಾತವಾರಣವಿದೆ. ಹಲವು ಕ್ಷೇತ್ರಗಳಲ್ಲಿ ಉದ್ಯೋಗ ಕಡಿತ, ವೇತನ ಕಡಿತಗಳು ನಡೆಯುತ್ತಿದೆ. ಇನ್ನು ಟಾರ್ಗೆಟ್ ರೀಚ್ ಮಾಡಲು ಹೆಚ್ಚುವರಿ ಕೆಲಸ ಸೇರಿದಂತೆ ಸಂಕಷ್ಟದ ಪರಿಸ್ಥಿತಿಗಳು ಎದುರಾಗುತ್ತಿದೆ. ಹೀಗಾಗಿ ಯುವತಿ ಹೇಳಿದಂತೆ ಒಂದಷ್ಟು ವೃತ್ತಿಪರ ಮಾರ್ಗಗಳನ್ನು ಈಗಿನಿಂದಲೇ ಆಯ್ಕೆ ಮಾಡಿಕೊಳ್ಳುವುದು ಉತ್ತಮ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ.
ಯವತಿ ಪೋಸ್ಟ್‌ಗೆ ನೆಟ್ಟಿಗರು ಹಲವು ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ವಡಾ ಪಾವ್ ಮಾರಾಟ ಮಾಡಿ, ಜನರ ಜೊತೆ ಜಗಳ ಮಾಡಿಯೂ ಭಾರತದಲ್ಲಿ ಹಣಗಳಿಸಬಹುದು ಎಂದಿದ್ದಾರೆ. ವಿದೇಶದಲ್ಲಿ ವ್ಯಾಸಾಂಗ ಮಾಡುತ್ತಿರುವ ಕಾಲೇಜು ವಿದ್ಯಾರ್ಥಿಯ ಈ ನಿರ್ಧಾರ ಭಾರತದಲ್ಲಿ ಹಲವರ ಮೇಲೆ ಪರಿಮಾಮ ಬೀರಿದೆ. ಕರಿಯರ್ ಬದಲಿಸವ ನಿರ್ಧಾರದ ಕುರಿತು ಮತ್ತಷ್ಟು ಚಿಂತಿಸುವಂತೆ ಮಾಡಿದೆ. ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ಹಾರುವ ಬದಲು ಈ ರೀತಿಯ ಯಾವುದಾದರು ಒಂದು ವೃತ್ತಿ ಆಯ್ಕೆ ಮಾಡಿಕೊಳ್ಳಬೇಕು ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ.
70 ಗಂಟೆ ಕೆಲಸದಿಂದ GST ಪೋರ್ಟಲ್ ಡೌನ್, ನಾರಾಯಣಮೂರ್ತಿ ರೋಸ್ಟ್ ಮಾಡಿದ ನೆಟ್ಟಿಗರು