ನಾರ್ಮಲ್ ಡೆಲಿವರಿಗಾಗಿ ಇಪ್ಪತ್ತೊಂದು ಗಂಟೆ ಹೆರಿಗೆ ನೋವು ತಿಂದ ನಟಿ

By Roopa HegdeFirst Published May 13, 2024, 4:34 PM IST
Highlights

ಒಂದೆರಡು ಗಂಟೆ ಹೆರಿಗೆ ನೋವು ತಿನ್ನೋದೇ ಕಷ್ಟದ ಕೆಲಸ. ಮಗು ಹೊರಗೆ ಬರ್ತಿದ್ದಂತೆ ಆ ಕ್ಷಣದಲ್ಲಿ ಕಾಡುವ ನೋವು ಇಡೀ ದೇಹದಲ್ಲಿ ಸಾಕಷ್ಟು ಬದಲಾವಣೆ ತರುತ್ತದೆ. ಕೆಲ ಮಹಿಳೆಯರು ನಾಲ್ಕೈದು ಗಂಟೆ ನೋವು ತಿನ್ನೋದಿದೆ. ಆದ್ರೆ ಈ ನಟಿ ಇಪ್ಪತ್ತೊಂದು ಗಂಟೆ ಹೆರಿಗೆ ನೋವು ಅನುಭವಿಸಿದ್ದಾಳೆ. ಅದಕ್ಕೆ ಕಾರಣವೇನು ಎಂಬುದನ್ನೂ ಆಕೆ ಹೇಳಿದ್ದಾಳೆ. 
 

ವಿದಿಶಾ ಶ್ರೀವಾಸ್ತವ್ ಟಿವಿ ಉದ್ಯಮದಲ್ಲಿ ಚಿರಪರಿಚಿತರು. ವಿದಿಶಾ ಅನೇಕ ದಕ್ಷಿಣ ಭಾರತದ ಚಲನಚಿತ್ರಗಳು ಮತ್ತು ಭಾರತೀಯ ದೂರದರ್ಶನ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ  ಭಾಭಿ ಜಿ ಘರ್ ಪರ್ ಹೈ ಮೂಲಕ ಪ್ರೇಕ್ಷಕರಿಂದ ಸಾಕಷ್ಟು ಪ್ರಶಂಸೆ ಪಡೆದ್ದಾರೆ. ವಿದಿಶಾ ಶ್ರೀವಾಸ್ತವ್, ಒಂದು ವರ್ಷದ ಹಿಂದೆ ಮುದ್ದಾದ ಮಗಳಿಗೆ ಜನ್ಮ ನೀಡಿದ್ದಾರೆ. ತಮ್ಮ ಹೆರಿಗೆ, ತಾಯ್ತನದ ಬಗ್ಗೆ ವಿದಿಶಾ ಶ್ರೀವಾಸ್ತವ್ ಆಗಾಗ ಹೇಳ್ತಿರುತ್ತಾರೆ.

ವಿದಿಶಾ ಶ್ರೀವಾಸ್ತವ್ (Vidisha Srivastava) ಹೆರಿಗೆ ಸುಲಭವಾಗಿರಲಿಲ್ಲ. ನಾರ್ಮಲ್ ಹೆರಿಗೆ (Normal Delivery) ಬಯಸಿದ್ದ ವಿದಿಶಾ ಶ್ರೀವಾಸ್ತವ್ ಹೆರಿಗೆ (Birth) ನೋವನ್ನು ಇಪ್ಪತ್ತೊಂದು ಗಂಟೆ ಸಹಿಸಿಕೊಂಡಿದ್ದಾರೆ. ಹೆರಿಗೆ ನೋವು (Pain) ಅನುಭವಿಸಿದವರಿಗೆ ಮಾತ್ರ ಗೊತ್ತು. ಅದನ್ನು ಒಂದೆರಡು ಗಂಟೆ ಸಹಿಸೋದು ಕಷ್ಟ. ಆದ್ರೆ ವಿದಿಶಾ ಶ್ರೀವಾಸ್ತವ್ ಬರೋಬ್ಬರಿ ಇಪ್ಪತ್ತೊಂದು ಗಂಟೆ ಸಹಿಸಿಕೊಂಡಿದ್ದಾರೆ.  ಕೊನೆಗೂ ವಿದಿಶಾ ಶ್ರೀವಾಸ್ತವ್, ನಾರ್ಮಲ್ ಹೆರಿಗೆ ಮೂಲಕವೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 

Latest Videos

ಕಿಯಾರಾ ಹಾಡಿ ಹೊಗಳಿದ ಮೃಣಾಲ್ ಠಾಕೂರ್, ಸೂರ್ಯ ಪಶ್ಚಿಮದಲ್ಲಿ ಹುಟ್ಟಿದ್ನಾ ಕೇಳ್ಬೇಡಿ!

ಸಂದರ್ಶನದಲ್ಲಿ ಮಾತನಾಡಿದ ವಿದಿಶಾ, ನನಗೆ ನಾರ್ಮಲ್ ಹೆರಿಗೆಯೇ ಬೇಕಾಗಿತ್ತು. ಹಾಗಾಗಿ ನಾನು ಇಷ್ಟೊಂದು ಗಂಟೆ ಹೆರಿಗೆ ನೋವು ಸಹಿಸಿಕೊಂಡೆ. ಮಗು ಕೈಗೆ ಬರ್ತಿದ್ದಂತೆ ನಾನು ಎಲ್ಲ ನೋವನ್ನು ಮರೆತಿದ್ದೆ ಎಂದಿದ್ದಾರೆ. ನನಗೆ ಆ ದಿನ ಸಂಪೂರ್ಣ ನೆನಪಿದೆ. ಹೆರಿಗೆ ನೋವನ್ನು ಇಷ್ಟೊಂದು ಸಮಯ ಸಹಿಸಿದ್ದ ಕಾರಣ ಆ ಕ್ಷಣವನ್ನು ಎಂಜಾಯ್ ಮಾಡಲು ಸಾಧ್ಯವಾಗಲಿಲ್ಲ. ಹೆರಿಗೆ ಪ್ರತಿಯೊಬ್ಬ ಮಹಿಳೆಗೆ ವಿಶೇಷವಾಗಿರುತ್ತದೆ ಎಂದು ವಿದಿಶಾ ಹೇಳಿದ್ದಾರೆ. 

ಎರಡೇ ತಿಂಗಳಲ್ಲಿ ಕೆಲಸಕ್ಕೆ ಬಂದ ವಿದಿಶಾ : ಹೆರಿಗೆಯಾದ ಒಂದು ವರ್ಷದ ನಂತ್ರವೂ ಮಹಿಳೆಯರು ವೃತ್ತಿಗೆ ವಾಪಸ್ ಆಗೋದಿಲ್ಲ. ಕೆಲವರು ಮಗು ಆಗ್ತಿದ್ದಂತೆ ಕೆಲಸಕ್ಕೆ ವಿದಾಯ ಹೇಳ್ತಾರೆ. ಆದ್ರೆ ವಿದಿಶಾ ಹೆರಿಗೆಯಾದ ಎರಡೇ ತಿಂಗಳಲ್ಲಿ ಕೆಲಸಕ್ಕೆ ಮರುಳಿದ್ದರು. ವಿದಿಶಾ, ಪ್ರಾಜೆಕ್ಟ್ ಒಪ್ಪಿಕೊಳ್ಳುವ ಮೊದಲು ಗರ್ಭಿಣಿ ಆಗ್ಬಾರದು ಎಂಬ ನಿಯಮವಿತ್ತಂತೆ. ಆದ್ರೆ ವಿದಿಶಾ ಗರ್ಭಧರಿಸಿದ್ದರು. ಅದನ್ನು ಟೀಂ ವಿರೋಧಿಸಿರಲಿಲ್ಲ. ಎಲ್ಲರ ಬೆಂಬಲ ಸಿಕ್ಕ ಕಾರಣ ನನ್ನ ಪ್ರೆಗ್ನೆನ್ಸಿ ಮತ್ತು ಹೆರಿಗೆ ಸುಲಭವಾಯ್ತು ಎಂದು ವಿದಿಶಾ ಹೇಳಿದ್ದಾರೆ. 

ಪ್ರಾಜೆಕ್ಟ್ ಒಪ್ಪಿಕೊಂಡು ಕೆಲವೇ ತಿಂಗಳಾಗಿತ್ತು. ಆಗ್ಲೇ ನಾನು ಗರ್ಭಧರಿಸಿದ್ದೆ. ಕೆಲವರು ತಮಾಷೆ ಮಾಡಿದ್ದರು. ನನ್ನ ಕಾಲೆಳೆಯುವ ಪ್ರಯತ್ನ ನಡೆಸಿದ್ದರು. ಆದ್ರೆ ನಾನು ಅದ್ರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ ಎಂದು ವಿದಿಶಾ ಹೇಳಿದ್ದಾರೆ. ಶೂಟಿಂಗ್ ಹಾಗೂ ಮಗಳ ಆರೈಕೆ ಎರಡೂ ಕಷ್ಟ ಎನ್ನುವ ಸಮಯದಲ್ಲಿ ವಿದಿಶಾ ತಮ್ಮ ಮನೆಯನ್ನು ಬದಲಿಸಿದ್ದರು. ಶೂಟಿಂಗ್ ನಡೆಯುವ ಸ್ಥಳಕ್ಕೆ ಹತ್ತಿರದಲ್ಲೇ ಮನೆ ಮಾಡಿಕೊಂಡಿದ್ದರು.

ಫಿಟ್ನೆಸ್ (Fitness) ಬಗ್ಗೆ ಹೆಚ್ಚು ಕಾಳಜಿವಹಿಸಿದ ವಿದಿಶಾ : ತಾಯಿಯಾದ್ಮೇಲೆ ತೂಕ ಹೆಚ್ಚಾಗುತ್ತೆ. ತೂಕ ನಿಯಂತ್ರಣಕ್ಕೆ (Weight Control) ಕೆಲ ಮಹಿಳೆಯರು ನಿರಂತರ ಪ್ರಯತ್ನ ಮಾಡ್ತಾರೆ. ಅದ್ರಲ್ಲಿ ವಿದಿಶಾ ಕೂಡ ಒಬ್ಬರು. ತಾಯಿಯಾದ್ಮೇಲೆ ವಿದಿಶಾ ಫಿಟ್ನೆಸ್ ಗೆ ಹೆಚ್ಚು ಆದ್ಯತೆ ನೀಡಿದ್ದರು. ವಿದಿಶಾ ಆರೋಗ್ಯಕರ ಆಹಾರವನ್ನೇ ಸೇವನೆ ಮಾಡುತ್ತಿದ್ದಾರೆ. ಪೋಹಾ ಇತ್ಯಾದಿ ಆರೋಗ್ಯಕರ ಪದಾರ್ಥವನ್ನು ಅವರು ತಿನ್ನುತ್ತಾರೆ. ಸ್ತನ್ಯಪಾನ (Breast Feeding) ಮಾಡಬೇಕಾಗಿರುವುದರಿಂದ ಅನಾರೋಗ್ಯಕರ ಆಹಾರದಿಂದ (UnHealthy Food) ಅವರು ದೂರವಿದ್ದರು.  ಹೆರಿಗೆಯಾದ ತಕ್ಷಣ ವಿದಿಶಾ ಯಾವುದೇ ವ್ಯಾಯಾಮ (Exercise) ಮಾಡಲಿಲ್ಲ. ಸಣ್ಣಪುಟ್ಟ ಕೆಲಸ ಮಾಡಿಯೇ ಅವರು ದೇಹಕ್ಕೆ ವ್ಯಾಯಾಮ ನೀಡಿದ್ದರು. ದೇಹವನ್ನು ಮಸಾಜ್ ಮಾಡಲು ವಿದಿಶಾ ಆದ್ಯತೆ ನೀಡಿದ್ದರು. ಪ್ರತಿ ದಿನ ಅವರು ಮಸಾಜ್ ಮಾಡುತ್ತಿದ್ದರು. 

ಹೆಣ್ಣಿನ ಸೌಂದರ್ಯ ಹೆಚ್ಚಿಸುವ ಕೆಂಪು ಲಿಪ್‌ಸ್ಟಿಕ್ ಉತ್ತರ ಕೊರಿಯಾದಲ್ಲಿ ಬ್ಯಾನ್ ಮಾಡಿದ್ದೇಕೆ?

ಹೆರಿಗೆ ನಂತ್ರ ವಿದಿಶಾ ಕೂಡ ಡಿಫ್ರೆಶನ್ (Depression)ಗೆ ಒಳಗಾಗಿದ್ದರು. ಹೆರಿಗೆ ನೋವು ಅವರನ್ನು ಮಾನಸಿಕವಾಗಿಯೂ ದುರ್ಬಲಗೊಳಿಸಿತ್ತು (Mentally Week). ಆದ್ರೆ ಮಗುವಿನ ಆರೈಕೆಗೆ ಹೆಚ್ಚು ಗಮನ ನೀಡಿದ್ದರಿಂದ ಅದ್ರಲ್ಲಿ ಸಂತೋಷ ಕಂಡುಕೊಂಡೆ ಎಂದು ವಿದಿಶಾ ಹೇಳಿದ್ದಾರೆ. 

click me!