Kumkumadi Tailam: ಮುಖಕ್ಕೆ ಹಚ್ಚುತ್ತಿದ್ದರೆ ವಯಸ್ಸೇ ಆಗುವುದಿಲ್ಲ !

By Suvarna NewsFirst Published Jan 24, 2022, 12:21 PM IST
Highlights

ಸೌಂದರ್ಯ(Beauty) ವರ್ಧನೆಗೆ ಆರ್ಯುವೇದ ಪದ್ಧತಿಯಲ್ಲಿ ಹಲವು ವಿಧಾನಗಳನ್ನು ಅನುಸರಿಸಲಾಗುತ್ತದೆ. ಗಂಧ, ಅರಿಶಿನ (Turmeric), ಅಲೋವೆರಾ, ತುಳಸಿ ಹೀಗೆ ಹಲವು ಗಿಡಮೂಲಿಕೆಗಳು ತ್ವಚೆಯ ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಹಾಗೆಯೇ ಕುಂಕುಮಾದಿ ತೈಲಂ (Kumkumadi Tailam) ಸಹ ತ್ವಚೆಯ ಸಂರಕ್ಷಣೆಗೆ ಅತ್ಯುತ್ತಮವಾಗಿದೆ. 

ಪುರಾತನ ಕಾಲದಿಂದಲೂ ಬಳಕೆಯಲ್ಲಿರುವ ಕುಂಕುಮಾದಿ ತೈಲಂ (Kumkumadi Tailam)  ಒಂದು ಸಾಂಪ್ರದಾಯಿಕ ಆಯುರ್ವೇದ (Ayurveda) ಔಷಧವಾಗಿದ್ದು ವಿವಿಧ ರೀತಿಯ ಚರ್ಮದ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ. ಮೊಡವೆ (Pimple) ಪೀಡಿತ ಚರ್ಮಕ್ಕೆ ಕುಂಕುಮಾದಿ ಎಣ್ಣೆ ಸೂಕ್ತವಾಗಿದೆ. ಚರ್ಮದಲ್ಲಿನ ಸುಕ್ಕುಗಳು ಮತ್ತು ವಯಸ್ಸಾದ ಚಿಹ್ನೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇಷ್ಟೇ ಅಲ್ಲದೆ, ಸೋರಿಯಾಸಿಸ್, ಎಸ್ಜಿಮಾ, ಮೊಡವೆ, ರೋಸೇಸಿಯಾ ಮತ್ತು ಇನ್ನೂ ಅನೇಕ ಚರ್ಮದ ಸಮಸ್ಯೆಗಳಿಗೂ ಕುಂಕುಮಾದಿ ತೈಲಂನ್ನು ಬಳಸಲಾಗುತ್ತದೆ.

ಕುಂಕುಮಾದಿ ತೈಲಂ ಎಂದರೇನು ?
ಕುಂಕುಮಾದಿ ತೈಲಂ ಅಥವಾ ಕೇಸರಿ (Kesar) ಎಣ್ಣೆಯು ವಿವಿಧ ಅಮೂಲ್ಯ ಗಿಡಮೂಲಿಕೆಗಳ ಸಂಯೋಜನೆಯಾಗಿದೆ. ಪುರಾತನ ಕಾಲದಿಂದಲೂ ತ್ವಚೆಯ ಆರೋಗ್ಯಕ್ಕಾಗಿ ಈ ಆರ್ಯುವೇದ ತೈಲವನ್ನು ಬಳಸಲಾಗುತ್ತಿತ್ತು. ಮುಖ್ಯವಾಗಿ ಕೇಸರಿಯನ್ನು ಬಳಸಿಕೊಂದು ಈ ಎಣ್ಣೆಯನ್ನು ತಯಾರಿಸಲಾಗುತ್ತದೆ. ಇದು ಉತ್ತಮ ಗುಣಮಟ್ಟದ ಆಯುರ್ವೇದ ಉತ್ಪನ್ನವಾಗಿದ್ದು, ಚರ್ಮಕ್ಕೆ ಅತ್ಯುತ್ತಮ ಚಿಕಿತ್ಸಕ ಪ್ರಯೋಜನಗಳನ್ನು ಹೊಂದಿದೆ.

ಕುಂಕುಮಾದಿ ತೈಲಂ ಬಳಸುವುದರ ಪ್ರಯೋಜನಗಳು 
ಕುಂಕುಮಾದಿ ತೈಲಂ ಉಪಯೋಗಿಸುವುದರಿಂದ ಹಲವು ಪ್ರಯೋಜನಗಳಿವೆ. ಅಧ್ಯಯನಗಳ ಪ್ರಕಾರ, ಈ ಎಣ್ಣೆಯಲ್ಲಿರುವ ಸಾವಯವ ಗಿಡಮೂಲಿಕೆಗಳು ಉತ್ಕರ್ಷಣ ನಿರೋಧಕಗಳು ಮತ್ತು ಬ್ಯಾಕ್ಟೀರಿಯಾ (Bacteria) ವಿರೋಧಿ ಗುಣಲಕ್ಷಣಗಳ ಸಂಯೋಜನೆಯಾಗಿದ್ದು, ಇದು ಚರ್ಮದ ಟೋನ್‌ನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಕುಂಕುಮಾದಿ ತೈಲಂ ಬಳಕೆ ಸರಿಯಾದ ರಕ್ತ ಪರಿಚಲನೆಗೆ ಮತ್ತು ಚರ್ಮದ ಕೋಶಗಳನ್ನು ಸರಿಪಡಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.

Saffron Health Benefits: ಕೋವಿಡ್ ಕಾಲದಲ್ಲಿ ಆಹಾರದಲ್ಲಿರಲಿ ಕೇಸರಿ

ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ: ಕುಂಕುಮಾದಿ ಎಣ್ಣೆಯಲ್ಲಿ ಕೇಸರಿಯ ಬಳಕೆ ಹೆಚ್ಚಾಗಿರುವುದರಿಂದ ಇದು ಚರ್ಮದ ಕಾಂತಿ ಹೆಚ್ಚಿಸುತ್ತದೆ ಮತ್ತು ಮುಖಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ ಎಂದು ಅಧ್ಯಯನಗಳು ಸಾಬೀತುಪಡಿಸುತ್ತವೆ.

ಸ್ಕಿನ್ ಸೆಲ್ ಪುನರುತ್ಪಾದನೆಯನ್ನು ಉತ್ತೇಜಿಸುತ್ತದೆ: ಅಧ್ಯಯನಗಳ ಪ್ರಕಾರ, ಕುಂಕುಮಾದಿ ಎಣ್ಣೆಯಿಂದ ನಿಯಮಿತ ಮಸಾಜ್ ಮಾಡುವುದು ಚರ್ಮದ ಕೋಶಗಳನ್ನು ಪುನರುತ್ಪಾದಿಸಲು ಸಹಾಯ ಮಾಡುತ್ತದೆ. ಮುಖದಲ್ಲಿನ ಕಲೆಗಳು ಮತ್ತು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಚರ್ಮಕ್ಕೆ ತ್ವರಿತ ಹೊಳಪನ್ನು ನೀಡುತ್ತದೆ.

ಉರಿಯೂತದ ಚರ್ಮವನ್ನು ಗುಣಪಡಿಸುತ್ತದೆ: ಗಿಡಮೂಲಿಕೆಗಳು ಮತ್ತು ನೈಸರ್ಗಿಕ ತೈಲಗಳ ವಿಶಿಷ್ಟ ಮಿಶ್ರಣವಾದ ಕುಂಕುಮಾದಿ ತೈಲಂ ಉರಿಯೂತದ ಚರ್ಮವನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದು ನಂಜುನಿರೋಧಕ, ಗುಣಗಳನ್ನು ಹೊಂದಿದೆ. ಹೀಗಾಗಿ ತುರಿಕೆ, ಸೋಂಕುಗಳು, ಮೊಡವೆಗಳು ಮತ್ತು ದದ್ದುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Face Yoga For Beauty: ವಯಸ್ಸಾದರೂ ಯಂಗ್ ಆಗಿ ಕಾಣಬೇಕಾದರೆ ಹೀಗೆ ಮಾಡಿ

ಚರ್ಮದ ರಂಧ್ರಗಳನ್ನು ಸ್ವಚ್ಛಗೊಳಿಸುತ್ತದೆ: ಕುಂಕುಮಾದಿ ಎಣ್ಣೆಯು ಹೆಚ್ಚುವರಿ ಎಣ್ಣೆ ಮತ್ತು ಕೊಳೆಯನ್ನು ತೆಗೆದುಹಾಕುವ ಮೂಲಕ ಚರ್ಮದ ರಂಧ್ರಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಮುಖಕ್ಕೆ ಕ್ಲೆನ್ಸರ್ ಆಗಿ ಕೆಲಸ ಮಾಡುತ್ತದೆ. ಮುಖದ ಸತ್ತ ಚರ್ಮವನ್ನು ಹೊರಹಾಕಲು ಸಹಾಯ ಮಾಡುತ್ತದೆ.

ನೈಸರ್ಗಿಕ ಸನ್‌ಸ್ಕ್ರೀನ್ ಆಗಿ ಕಾರ್ಯನಿರ್ವಹಿಸುತ್ತದೆ: ಅಧ್ಯಯನಗಳ ಪ್ರಕಾರ, ಚರ್ಮಕ್ಕಾಗಿ ಕುಂಕುಮಾದಿ ತೈಲಂ ನೈಸರ್ಗಿಕ ಸನ್‌ಸ್ಕ್ರೀನ್ ಆಗಿ ಕಾರ್ಯನಿರ್ವಹಿಸುತ್ತದೆ. ಹಾನಿಕಾರಕ ಯುವಿಎ ಮತ್ತು ಯುವಿಬಿ ಕಿರಣಗಳ ವಿರುದ್ಧ ನೈಸರ್ಗಿಕ ಸೂರ್ಯನ ರಕ್ಷಕವಾಗಿ ಕಾರ್ಯನಿರ್ವಹಿಸುತ್ತದೆ.

ಸ್ವಚ್ಛ ಮತ್ತು ಹೊಳಪಿನ ಚರ್ಮವನ್ನು ನೀಡುತ್ತದೆ: ಎಣ್ಣೆಯು ಕೇಸರಿ, ಶ್ರೀಗಂಧ ಮತ್ತು ಅರಿಶಿನದ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ, ಕಪ್ಪು ಕಲೆಗಳು, ಪಿಗ್ಮೆಂಟೇಶನ್ ಕಲೆಗಳನ್ನು ಕಡಿಮೆ ಮಾಡುತ್ತದೆ. ಸ್ವಚ್ಛ ಮತ್ತು ಹೊಳಪಿನ ಚರ್ಮವನ್ನು ನೀಡುತ್ತದೆ.

ಚರ್ಮವನ್ನು ಹೈಡ್ರೇಟ್ ಮಾಡುತ್ತದೆ: ಅಧ್ಯಯನಗಳು ಹೇಳುವಂತೆ ಕೇಸರಿ ಮತ್ತು ಎಣ್ಣೆಯಲ್ಲಿರುವ ಅಂಶವು ಚರ್ಮವನ್ನು ನೈಸರ್ಗಿಕ ಸ್ಕಿನ್ ಕಂಡೀಷನರ್ (Conditioner) ಆಗಿ ಕಾರ್ಯನಿರ್ವಹಿಸುತ್ತದೆ. ಇದರಿಂದಾಗಿ ಚರ್ಮ ಯಾವಾಗಲೂ ಹೈಡ್ರೇಟ್ ಆಗಿರುತ್ತದೆ. ಇದು ಮೊಡವೆಗಳು ಮತ್ತು ಶುಷ್ಕ ಚರ್ಮವನ್ನು ತಡೆಯುತ್ತದೆ.

ಬ್ಲ್ಯಾಕ್ ಸರ್ಕಲ್‌ಗೆ ಪರಿಹಾರ: ಕಣ್ಣಿನ ಕೆಳಗಿರುವ ಕಪ್ಪು ವರ್ತುಲ (Black circle)ಗಳನ್ನು ಹೋಗಲಾಡಿಸಲು ಸಹ ಕುಂಕುಮಾದಿ ತೈಲ ಅತ್ಯುತ್ತಮ. ಇದಕ್ಕೆ ಮುದಲಿಗೆ ಎಣ್ಣೆಯ ಕೆಲವು ಹನಿಗಳನ್ನು ತೆಗೆದುಕೊಂಡು ಅದನ್ನು ಕಣ್ಣುಗಳ ಕೆಳಗೆ ನಿಧಾನವಾಗಿ ಮಸಾಜ್ ಮಾಡಿ ಮತ್ತು 30 ನಿಮಿಷಗಳ ಕಾಲ ಬಿಡಿ. ನಂತರ ಅದನ್ನು ಸಾಮಾನ್ಯ ನೀರಿನಿಂದ ತೊಳೆಯಿರಿ ಮತ್ತು ದಿನಕ್ಕೆ ಒಂದು ಅಥವಾ ಎರಡು ಬಾರಿ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ.

ಕುಂಕುಮಾದಿ ತೈಲಂ ಬಳಸುವುದು ಹೇಗೆ ?

ಹಂತ 1: ಮೊದಲಿಗೆ ಫೇಸ್ ವಾಶ್ (Face wash) ಬಳಸಿ ನಿಮ್ಮ ಮುಖವನ್ನು ಸರಿಯಾಗಿ ತೊಳೆದು ಸ್ವಚ್ಛಗೊಳಿಸಿಬೇಕು. 
ಹಂತ 2: ನಂತರ ಕುಂಕುಮಾದಿ ಎಣ್ಣೆಯ ಕೆಲವು ಹನಿಗಳನ್ನು ಅಂಗೈಗೆ ತೆಗೆದುಕೊಂಡು ಅದನ್ನು ನಿಮ್ಮ ಮುಖ, ಕುತ್ತಿಗೆಗೆ ಹಚ್ಚಿಕೊಳ್ಳಬೇಕು. 
ಹಂತ 3: 5 ರಿಂದ 10 ನಿಮಿಷಗಳ ಕಾಲ ವೃತ್ತಾಕಾರದದಲ್ಲಿ ಮೇಲ್ಮುಖವಾಗಿ ಮಸಾಜ್ (Massage) ಮಾಡಿಕೊಳ್ಳಬೇಕು. 
ಹಂತ 4: ಇದು ನಿಮ್ಮ ಚರ್ಮದ ಮೇಲೆ ಕನಿಷ್ಠ 2-3 ಗಂಟೆಗಳ ಕಾಲ ಹಾಗೇ ಇರಲಿ. ನಂತರ ಮುಖ ತೊಳೆಯಿರಿ. ಇದನ್ನು ದಿನಕ್ಕೆ 2-3 ಬಾರಿ, ಒಂದು ವಾರದ ವರೆಗೆ ನಿರಂತರವಾಗಿ ಬಳಸಬಹುದು, ಮತ್ತು ನಂತರ ಅದನ್ನು ದಿನಕ್ಕೆ ಒಂದು ಬಾರಿ ಬಳಸಬಹುದು.

ಹಬೆಯ ಮೂಲಕ ಕುಂಕುಮಾದಿ ತೈಲ ಬಳಕೆ: ಕುಂಕುಮಾದಿ ಎಣ್ಣೆಯನ್ನು ಹಬೆಯ ಮೂಲಕ ಸಹ ತೆಗೆದುಕೊಳ್ಳಬಹುದು. ಬಿಸಿ ನೀರಿಗೆ 5-10 ಹನಿಗಳನ್ನು ಸೇರಿಸಿಕೊಂಡು 10  ನಿಮಿಷಗಳ ಕಾಲ ಉಗಿ ತೆಗೆದುಕೊಳ್ಳಿ. ನಂತರ ಸ್ವಚ್ಛವಾದ ಬಟ್ಟೆಯಿಂದ ಮುಖವನ್ನು ಒರೆಸಿಕೊಳ್ಳಿ. ಇದು ಮುಖದ ರಂಧ್ರವನ್ನು ಸ್ವಚ್ಛಗೊಳಿಸುತ್ತದೆ.

ಕುಂಕುಮಾದಿ ತೈಲಂ ಬಳಕೆಯಿಂದಾಗುವ ತೊಂದರೆಗಳು 
ಕುಂಕುಮಾದಿ ತೈಲಂನ್ನು ಬಳಸುವುದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ. ಹೀಗಿದ್ದೂ, ಇದರ ಅತಿಯಾದ ಬಳಕೆ ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಇದು ಕಣ್ಣುಗಳ ಸಮೀಪ ಹಚ್ಚಿದಾಗ ಉರಿಯ ಅನುಭವವಾಗುತ್ತದೆ. ಹೀಗಾಗಿ ಈ ಎಣ್ಣೆಯನ್ನು ಮುಖಕ್ಕೆ ಹಚ್ಚುವಾಗ ಜಾಗರೂಕರಾಗಿರಿ.

ಎಣ್ಣೆಯುಕ್ತ ಚರ್ಮ (Oily Skin)ದ ಜನರು ಇದನ್ನು ಕಡಿಮೆ ಪ್ರಮಾಣದಲ್ಲಿ ಬಳಸುವಂತೆ ಸಲಹೆ ನೀಡಲಾಗುತ್ತದೆ. ಉತ್ಪನ್ನವು ತೈಲ ಆಧಾರಿತವಾಗಿರುವ ಕಾರಣ, ಎಣ್ಣೆಯುಕ್ತ ಚರ್ಮದವರು ಇದನ್ನು ಹೆಚ್ಚು ಬಳಸುವುದು ಮೊಡವೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಇಂಥವರು ಇದನ್ನು ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಬಳಸಬಾರದು. ಸೂಕ್ಷ್ಮ ಚರ್ಮದ ರೀತಿಯ ಜನರು ಈ ಎಣ್ಣೆಯಿಂದ ದದ್ದುಗಳು, ಕಂದು ಕಲೆಗಳು ಅಥವಾ ಮೊಡವೆಗಳಂತಹ ಅಲರ್ಜಿಯ ಪ್ರತಿಕ್ರಿಯೆಗಳನ್ನು ಅನುಭವಿಸಬಹುದು. ಆದ್ದರಿಂದ, ಅದನ್ನು ಎಚ್ಚರಿಕೆಯಿಂದ ಬಳಸಬೇಕು. ಗರ್ಭಾವಸ್ಥೆಯಲ್ಲಿ ಮತ್ತು ಹಾಲುಣಿಸುವ ಸಮಯದಲ್ಲಿ ಅದನ್ನು ಬಳಸುವ ಮೊದಲು ತಜ್ಞರನ್ನು ಸಂಪರ್ಕಿಸುವುದು ಒಳ್ಳೆಯದು. ಯಾಕೆಂದರೆ ಇದು ಕೆಲವರಿಗೆ ದದ್ದುಗಳನ್ನು ಉಂಟುಮಾಡಬಹುದು.

click me!