
ಕಷ್ಟಪಟ್ಟು,ಹಗಲಿರುಳು ದುಡಿದು ಜನರು ಅಲ್ಪಸ್ವಲ್ಪ ಹಣ ಉಳಿತಾಯ (Savings) ಮಾಡಿರ್ತಾರೆ. ಅದನ್ನು ಒಳ್ಳೆಯ ಕಂಪನಿ(Company)ಯಲ್ಲಿ ಹೂಡಿಕೆ (Investment) ಮಾಡಿ,ಹೆಚ್ಚು ಆದಾಯ (Income ) ಗಳಿಸಬೇಕೆಂಬ ಬಯಕೆ ಎಲ್ಲರಿಗೂ ಇರುತ್ತದೆ. ಕೆಲವೇ ದಿನಗಳಲ್ಲಿ ಹಣ ಡಬಲ್ (Double) ಆಗುವ ಕಂಪನಿಯಲ್ಲಿ ಹೂಡಿಕೆ ಮಾಡಿ,ಕೈಸುಟ್ಟುಕೊಳ್ಳುವವರು ಅನೇಕರಿದ್ದಾರೆ. ಇನ್ನು ಕೆಲವರು ಸರಿಯಾಗಿ ಆಲೋಚನೆ ಮಾಡಿ,ನಂಬಿಕಸ್ತ ಕಂಪನಿಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸ್ತಾರೆ. ಎಲ್ಲೋ ಹಣ ಹಾಕಿ,ಕೊನೆಗೆ ಕಣ್ಣೀರಿಡುವ ಬದಲು, ಭದ್ರತೆಯಿರುವ ಕಡೆ ಹೂಡಿಕೆ ಮಾಡುವುದು ಉತ್ತಮ ಆಯ್ಕೆ. ದೇಶದ ಲಕ್ಷಾಂತರ ಜನರು ಈಗಲೂ ಎಲ್‌ಐಸಿ (LIC)ಯನ್ನು ನಂಬುತ್ತಾರೆ. ಇದು ದೇಶದ ಅತಿದೊಡ್ಡ ಮತ್ತು ಹಳೆಯ ವಿಮಾ ಕಂಪನಿಯಾಗಿದೆ. ಕಾಲಕಾಲಕ್ಕೆ, ಕಂಪನಿಯು ಅಂತಹ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತದೆ. ಅದು ಜನರಿಗೆ ಉತ್ತಮ ಭವಿಷ್ಯದ ಯೋಜನೆಯನ್ನು ರೂಪಿಸಲು ಸಹಾಯ ಮಾಡಲಿದೆ. ಇಂದು ನಾವು ನಿಮಗೆ ಕಡಿಮೆ ಹಣದಲ್ಲಿ ಉತ್ತಮ ಉಳಿತಾಯ ಮಾಡಬಹುದಾದ ಎಲ್ಐಸಿಯ ಪಾಲಿಸಿ ಬಗ್ಗೆ ಹೇಳ್ತೇವೆ.
ಮಹಿಳೆಯರು ಹೂಡಿಕೆ ಮಾಡುವುದು ಕಡಿಮೆ. ಹೂಡಿಕೆ ಮಾಡುವ ಬಗ್ಗೆ ಆಸಕ್ತಿಯಿದ್ದರೂ ಮಾಹಿತಿ ಕೊರತೆಯಿರುತ್ತದೆ. ಸ್ವಲ್ಪ ಪ್ರಮಾಣದಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ಎಲ್ಐಸಿಯ ಆಧಾರ್ ಶೀಲ ಪಾಲಿಸಿಯು ನಿಮಗೆ ಉತ್ತಮ ಆಯ್ಕೆಯಾಗಿದೆ. ಎಲ್ಐಸಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮಹಿಳೆಯರು ಉಳಿತಾಯ ಮತ್ತು ಭದ್ರತೆ ಎರಡರ ಪ್ರಯೋಜನಗಳನ್ನು ಪಡೆಯುತ್ತಾರೆ. ಈ ಯೋಜನೆಯನ್ನು ಖರೀದಿಸುವ ಮೂಲಕ ನೀವು ಅನೇಕ ಪ್ರಯೋಜನಗಳನ್ನು ಪಡೆಯಬಹುದು.
ಯುಐಡಿಎಐ ನೀಡಿದ ಆಧಾರ್ ಕಾರ್ಡ್ ಹೊಂದಿರುವ ಮಹಿಳೆಯರಿಗಾಗಿ ಈ ನೀತಿಯನ್ನು ಎಲ್ ಐಸಿ ಸಿದ್ಧಪಡಿಸಿದೆ. ಎಲ್ಐಸಿಯ ಈ ಯೋಜನೆ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ.
ಎಲ್ ಐಸಿ ಆಧಾರ್ ಶೀಲಾ ಯೋಜನೆ :
ಎಲ್‌ಐಸಿಯ ಆಧಾರ್ ಶೀಲಾ ಯೋಜನೆಯು ಮಹಿಳೆಯರಿಗೆ ಮಾತ್ರ. ಇದರಲ್ಲಿ ಎಂಟು ವರ್ಷದಿಂದ 55 ವರ್ಷದವರೆಗೆ ಹೂಡಿಕೆ ಮಾಡಬಹುದು. ಈ ಪಾಲಿಸಿಯಲ್ಲಿ ಮಹಿಳೆಯರು ಅನೇಕ ರೀತಿಯಲ್ಲಿ ಪ್ರಯೋಜನಗಳನ್ನು ಪಡೆಯುತ್ತಾರೆ. ಉದಾಹರಣೆಗೆ, ಈ ಪಾಲಿಸಿಯಲ್ಲಿ, ಯಾವುದೇ ಮಹಿಳೆ ಕನಿಷ್ಠ 75 ಸಾವಿರ ರೂಪಾಯಿ ಮತ್ತು ಗರಿಷ್ಠ 3 ಲಕ್ಷ ರೂಪಾಯಿಗಳಿಗೆ ವಿಮೆಯನ್ನು ಖರೀದಿಸಬಹುದು.
LIC Policy: ವಾರಸುದಾರರ ಕೈತಪ್ಪುವ ವಿಮೆ, ಠೇವಣಿ ಹಣ, ಏನು ಮಾಡಬೇಕು.?
ಎಲ್ಐಸಿಯ ಈ ಯೋಜನೆಯಡಿ, ನೀವು ತ್ರೈಮಾಸಿಕ, ಅರ್ಧ ವಾರ್ಷಿಕ ಮತ್ತು ವಾರ್ಷಿಕ ಆಧಾರದ ಮೇಲೆ ಹೂಡಿಕೆ ಮಾಡಬಹುದು. ಈ ಯೋಜನ ಅಡಿಯಲ್ಲಿ, ನೀವು ಕನಿಷ್ಟ 10 ವರ್ಷಗಳು ಮತ್ತು ಗರಿಷ್ಠ 20 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ನೀವು 20 ವರ್ಷಗಳವರೆಗೆ ಪ್ರತಿ ತಿಂಗಳು 899 ರೂಪಾಯಿಗಳನ್ನು ಠೇವಣಿ ಮಾಡಿದರೆ ಶೇಕಡಾ 4.5 ತೆರಿಗೆಯನ್ನು ಸಹ ಪಾವತಿಸಬೇಕಾಗುತ್ತದೆ.
ಆಧಾರಶೀಲ ಯೋಜನೆಯನ್ನು ಖರೀದಿಸಿದ ಮಹಿಳೆ ದುರದೃಷ್ಟವಶಾತ್ ಮರಣಹೊಂದಿದರೆ, ಈ ಸಂದರ್ಭದಲ್ಲಿ ನಿಗದಿತ ಮೊತ್ತವನ್ನು ಅವರ ಮನೆಯ ಸದಸ್ಯರಿಗೆ ಪಾವತಿಸಲಾಗುತ್ತದೆ. ಅದೇ ಸಮಯದಲ್ಲಿ, ಈ ಯೋಜನೆಯಲ್ಲಿ ಯಾವುದೇ ಆದಾಯ ತೆರಿಗೆ ವಿನಾಯಿತಿ ಲಭ್ಯವಿಲ್ಲ.
LIC IPO: ಈ ತಿಂಗಳ ಮೂರನೇ ವಾರ ಸೆಬಿಗೆ ಕರಡು ಪ್ರತಿ ಸಲ್ಲಿಕೆ ಸಾಧ್ಯತೆ; ಹಾಗಾದ್ರೆ ಎಲ್ಐಸಿ ಐಪಿಒ ಯಾವಾಗ?
20 ವರ್ಷಕ್ಕೆ ಪ್ರತಿ ತಿಂಗಳು 899 ರೂಪಾಯಿ ಠೇವಣಿ ಇಟ್ಟರೆ 20 ವರ್ಷಗಳಲ್ಲಿ ಒಟ್ಟು ನೀವು 2 ಲಕ್ಷ 14 ಸಾವಿರ ರೂಪಾಯಿ ಹೂಡಿಕೆ ಮಾಡಿದಂತಾಗುತ್ತದೆ. ಪಾಲಿಸಿಯ ಮುಕ್ತಾಯದ ವೇಳೆ 3 ಲಕ್ಷ 97 ಸಾವಿರ ರೂಪಾಯಿ ನಿಮಗೆ ಸಿಗಲಿದೆ. ಈ ಪಾಲಿಸಿಯಲ್ಲಿ ಹೂಡಿಕೆ ಮಾಡುವ ಮೂಲಕ ಮಹಿಳೆಯರು ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಬಹುದು. 20 ವರ್ಷಗಳ ನಂತರ ಭಾರೀ ಮೊತ್ತವನ್ನು ಸಂಗ್ರಹಿಸಬಹುದು. ಸಣ್ಣ ವಯಸ್ಸಿನಲ್ಲಿಯೇ ಈ ಹೂಡಿಕೆ ಶುರು ಮಾಡಿದ್ರೆ ವೃದ್ಧಾಪ್ಯತದಲ್ಲಿ ಈ ಹಣ ನೆರವಿಗೆ ಬರಲಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.