ಮದುವೆ ಅಂದ್ಮೇಲೆ ಪದ್ಧತಿ – ಸಂಪ್ರದಾಯ ಇರ್ಬೇಕು. ಕೆಲವೊಂದು ಅತಿ ಎನ್ನಿಸಿದ್ರೆ ಮತ್ತೆ ಕೆಲವನ್ನು ಮಾಡಲೇಬೇಕಾದ ಅನಿವಾರ್ಯವಿರುತ್ತದೆ. ಭಾರತದಲ್ಲಿ ಮಾತ್ರವಲ್ಲ ಚೀನಾದಲ್ಲೂ ಮದುವೆ ಸಂದರ್ಭದಲ್ಲಿ ವರ ಕೆಲ ಸವಾಲು ಎದುರಿಸಬೇಕಾಗುತ್ತದೆ.
ಮದುವೆಗೆ ಸಂಬಂಧಿಸಿದಂತೆ ಪ್ರತಿಯೊಂದು ದೇಶದಲ್ಲಿ ಮಾತ್ರವಲ್ಲ ಪ್ರತಿಯೊಂದು ಪ್ರದೇಶದಲ್ಲೂ, ಜಾತಿಯಲ್ಲೂ ಭಿನ್ನ ಸಂಪ್ರದಾಯಗಳಿವೆ. ಕೆಲವೊಂದು ಸಂಪ್ರದಾಯಗಳ ಪಾಲನೆಯನ್ನು ಜನರು ಬಿಟ್ಟಿದ್ದಾರೆ. ಮತ್ತೆ ಕೆಲ ಸಂಪ್ರದಾಯಗಳನ್ನು ಈಗ್ಲೂ ಪಾಲಿಸಿಕೊಂಡು ಬರಲಾಗ್ತಿದೆ. ಮದುವೆ ಸಂದರ್ಭದಲ್ಲಿ ನಡೆಯುವ ಪದ್ಧತಿ, ಆಚರಣೆ ವಾರಗಟ್ಟಲೆ ನಡೆಯುವುದಿದೆ. ಕೆಲವೊಂದು ವಧುವಿಗೆ ಹಿಂಸೆ ಎನ್ನಿಸಿದ್ರೆ ಮತ್ತೆ ಕೆಲವರು ವರನಿಗೆ ಹಿಂಸೆ ನೀಡುತ್ತವೆ. ಸಂಪ್ರದಾಯಗಳು ಜೇಬು ಖಾಲಿ ಮಾಡೋದಿದೆ.
ಭಾರತ (India) ದಲ್ಲಿಯ ಕೆಲ ಮದುವೆಗಳಲ್ಲಿ ಬಾಗಿಲು ತಡೆಯೋದು ಎನ್ನುವ ಪದ್ಧತಿ ಇದೆ. ಈ ಪದ್ಧತಿ ಚೀನಾ (China) ದಲ್ಲೂ ಜಾರಿಯಲ್ಲಿದೆ. ಆದ್ರೆ ಇಲ್ಲಿನ ಸಂಪ್ರದಾಯ (Tradition) ಅಲ್ಲಿನ ಪದ್ಧತಿಗಿಂತ ಸ್ವಲ್ಪ ಭಿನ್ನತೆಯನ್ನು ಹೊಂದಿದೆ. ಸಂಪ್ರದಾಯದ ಹೆಸರಿನಲ್ಲಿ ವರನಿಗೆ ಮಾನಸಿಕ ಹಿಂಸೆ ನೀಡಲಾಗುತ್ತದೆ. ಕೆಲವರು ಇದರಿಂದ ತಪ್ಪಿಸಿಕೊಳ್ಳಲು ಮದುವೆ (Marriage) ಯಿಂದ್ಲೇ ದೂರ ಓಡುವ ನಿರ್ಧಾರ ಮಾಡ್ತಿದ್ದಾರೆ.
ಭಾರತೀಯ ಪ್ರವಾಸಿಗರಿಗೆ ಸಿಹಿ ಸುದ್ದಿ: ಈ ದೇಶಕ್ಕೆ ಹೋಗಲು ಇನ್ಮುಂದೆ ವೀಸಾನೇ ಬೇಕಿಲ್ಲ!
ಕೆಲ ದಿನಗಳ ಹಿಂದೆ ಚೀನಾದಲ್ಲಿ ವರನೊಬ್ಬ ತನ್ನ ವಧುವನ್ನು ಕರೆದುಕೊಂಡು ಬರಲು ಹಳ್ಳಿಗೆ ಹೋಗಿದ್ದ. ಆತನನ್ನು ಅನೇಕರು ತಡೆದಿದ್ದಾರೆ. ಕಾರು ಅಡ್ಡ ಹಾಕಿದ ಜನರು, ಸಿಗರೇಟ್, ಹಣ ನೀಡುವಂತೆ ಕೇಳಿದ್ದಾರೆ. ವಿಶೇಷವೆಂದ್ರೆ ಈ ತಂಡದಲ್ಲಿದ್ದ ಜನರೆಲ್ಲ ವೃದ್ಧರು. ಘಟನೆ ಚೀನಾದ ಜಿಯಾಂಗ್ಸು ಪ್ರಾಂತ್ಯದ ತೈಝೌ ಗ್ರಾಮದಲ್ಲಿ ನಡೆದಿದೆ. ಇದ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜನರು ಈ ವಿಡಿಯೋ ನೋಡಿ ಕೋಪ ವ್ಯಕ್ತಪಡಿಸಿದ್ದಾರೆ.
ಚೀನಾ ಜನರು ಇದನ್ನು ಪದ್ಧತಿಯಂತೆ ಆಚರಣೆ ಮಾಡ್ತಾರೆ. ಮದುವೆ ನಂತ್ರ ವರು, ವಧುವನ್ನು ಕರೆದೊಯ್ಯುವ ಮೊದಲು ವೃದ್ಧರಿಗೆ ಹಣ ನೀಡಬೇಕಾಗುತ್ತದೆ. ಸಕ್ಕರೆ, ಸಿಗರೇಟ್ ಅಥವಾ ಹಣವನ್ನು ತುಂಬಿದ ಕೆಂಪು ಲಕೋಟೆಗಳನ್ನು ನೀಡಬೇಕು. ಒಂದ್ವೇಳೆ ವರ ಹಣವನ್ನು ನೀಡಲು ತಡ ಮಾಡಿದ್ರೆ ಇಲ್ಲವೆ ಅವರನ್ನು ಖುಷಿಪಡಿಸಲು ವಿಫಲನಾದ್ರೆ ಆತ ವಧುವನ್ನು ಭೇಟಿಯಾಗೋದು ಲೇಟ್ ಆಗುತ್ತದೆ. ಕೆಲವೊಮ್ಮೆ ದಿನಗಟ್ಟಲೆ ಅಲ್ಲಿಯೇ ಇರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
Travel Tips: ವೀಕೆಂಡ್‌ನಲ್ಲಿ ಬೆಂಗಳೂರಿಗರು ಸುತ್ತಿ ಬರೋಕೆ ಇಷ್ಟೊಂದು ಜಾಗವಿದೆ!
ವರನನ್ನು ಹೀಗೆ ದಾರಿ ಮಧ್ಯೆ ತಡೆಯೋದಕ್ಕೆ ಮ್ಯಾಂಡರಿನ್ ಭಾಷೆಯಲ್ಲಿ ಲ್ಯಾನ್ ಮೆನ್ ಎಂದು ಕರೆಯಲಾಗುತ್ತದೆ. ಅಂದರೆ ಬಾಗಿಲು ಬಂದ್ ಮಾಡುವುದು ಎಂದರ್ಥ. ಒಂದ್ಕಡೆ ದಾರಿ ಮಧ್ಯೆ ವೃದ್ಧರು ಅಡ್ಡ ನಿಂತ್ರೆ ಇನ್ನೊಂದು ಕಡೆ ವಧುವಿನ ಸಂಬಂಧಿಕರು ಮನೆಯಲ್ಲಿ ಅಡ್ಡ ನಿಲ್ತಾರೆ. ವೃದ್ಧರನ್ನು ಖುಷಿಪಡಿಸಿ ವಧುವಿನ ಮನೆಗೆ ಹೋದ್ರೆ ಅಲ್ಲಿ ವಧುವಿನ ಸಂಬಂಧಿಕರು ಮತ್ತು ಕುಟುಂಬದವರು ವರನಿಗೆ ಕೆಲ ಕೆಲಸ ನೀಡುತ್ತಾರೆ. ವರನಿಗೆ ಒಗಟುಗಳನ್ನು ಕೇಳ್ತಾರೆ. ಕವಿತೆ ಹೇಳಲು, ಹಾಡಲು ಹಾಡಲು, ಡಾನ್ಸ್ ಮಾಡಲು ಹೇಳ್ತಾರೆ. ವರ ಎಲ್ಲರ ಮುಂದೆ ಅವರು ಹೇಳಿದ್ದನ್ನು ಮಾಡಿ ತೋರಿಸಬೇಕಾಗುತ್ತದೆ. ಒಂದ್ವೇಳೆ ಆತ ಒಲ್ಲೆ ಅಂದ್ರೆ ಮತ್ತೊಂದಿಷ್ಟು ಸಮಯ ಅಲ್ಲಿಯೇ ಕಳೆಯಬೇಕಾಗುತ್ತದೆ.
ವರ ಪಾಲಿಸಬೇಕಾದ ಈ ಸಂಪ್ರದಾಯಗಳ ಬಗ್ಗೆ ವೆಡ್ಡಿಂಗ್ ಪ್ಲಾನರ್ (Wedding Planner) ಒಬ್ಬರು ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ, ದಾರಿ ತಡೆಯಲು ಬಂದವರ ಸಂಖ್ಯೆ ಹೆಚ್ಚಿದ್ದರೆ ವರನ ಕುಟುಂಬವು ಪ್ರತಿಯೊಬ್ಬರಿಗೂ ಕೆಂಪು ಪ್ಯಾಕೆಟ್‌ನಲ್ಲಿ ಕೇವಲ ಒಂದು ಯುವಾನ್ ಅಂದರೆ ಸುಮಾರು 11 ರೂಪಾಯಿ ನೀಡುತ್ತದೆ. ಅದೇ ಜನರ ಸಂಖ್ಯೆ ಕಡಿಮೆ ಇದ್ದರೆ 10 ಯುವಾನ್ ಅಂದರೆ ಸುಮಾರು 113 ರೂಪಾಯಿ ನೀಡಲಾಗುತ್ತದೆ. ಭಾರತದಲ್ಲೂ ಈ ಪದ್ಧತಿ ಜಾರಿಯಲ್ಲಿದೆ. ಆದ್ರೆ ವೃದ್ಧರು ರಸ್ತೆ ತಡೆಯೋದಿಲ್ಲ. ವಧು ಗಂಡನ ಮನೆಗೆ ಬರುವ ಸಮಯದಲ್ಲಿ ಬಾಗಿಲು ತಡೆದು ವರನಿಂದ ಹಣ ಪಡೆಯುವ ಸಂಪ್ರದಾಯ ಕೆಲ ಕಡೆ ಇದ್ರೆ ಮತ್ತೆ ಕೆಲ ಕಡೆ ವರನ ಚಪ್ಪಲಿ ಅಡಗಿಸಿಟ್ಟು ಹಣ ತೆಗೆದುಕೊಳ್ಳಲಾಗುತ್ತದೆ.