
ಮುಂಬೈ (ಆಗಸ್ಟ್ 21, 2023): ರಣವೀರ್ ಸಿಂಗ್ ಬಾಲಿವುಡ್‌ನ ಅತ್ಯಂತ ಯಶಸ್ವಿ ಮತ್ತು ಶ್ರೀಮಂತ ನಟರಲ್ಲಿ ಒಬ್ಬರು. ದೀಪಿಕಾ ಪಡುಕೋಣೆ ಪತಿಯ ನಿವ್ವಳ ಮೌಲ್ಯ ಹೆಚ್ಚಳಕ್ಕೆ ಬಹಳಷ್ಟು ಕಾರ್ಯತಂತ್ರದ ಹೂಡಿಕೆಗಳು ಮತ್ತು ವ್ಯವಹಾರಗಳೇ ಕಾರಣ. ಉದ್ಯಮಿ ವಿನೀತಾ ಸಿಂಗ್ ಸ್ಥಾಪಿಸಿದ ಶುಗರ್ ಕಾಸ್ಮೆಟಿಕ್ಸ್ ರಣವೀರ್ ಸಿಂಗ್ ಅವರ ಅತ್ಯಂತ ಪ್ರಸಿದ್ಧ ಮತ್ತು ಲಾಭದಾಯಕ ವ್ಯಾಪಾರ ಹೂಡಿಕೆಗಳಲ್ಲಿ ಒಂದಾಗಿದೆ.
ರಣವೀರ್ ಸಿಂಗ್ ಅವರ ವ್ಯಾಪಾರ ಪಾಲುದಾರ ಮತ್ತು ಶುಗರ್ ಕಾಸ್ಮೆಟಿಕ್ಸ್ ಸಂಸ್ಥಾಪಕಿ ವಿನೀತಾ ಸಿಂಗ್ ಅವರು ದೇಶದ ಅತ್ಯಂತ ಯಶಸ್ವಿ ಮಹಿಳಾ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ. ಇದಕ್ಕೆ ಕಾರಣ ಇವರು ನಿರ್ಮಿಸಿದ ಬೃಹತ್ ಸೌಂದರ್ಯ ಬ್ರ್ಯಾಂಡ್. ಪ್ರತಿ ವರ್ಷವೂ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ ಈ ಮಹಿಳೆ.
ಇದನ್ನು ಓದಿ: ತಾಂತ್ರಿಕ ಕಾರಣದಿಂದ Gadar - 2 ನಟ ಸನ್ನಿ ಡಿಯೋಲ್ ನಿವಾಸದ ಹರಾಜು ನೋಟಿಸ್ ಹಿಂಪಡೆದ ಬ್ಯಾಂಕ್: ಕಾಂಗ್ರೆಸ್ ವ್ಯಂಗ್ಯ
ಐಐಟಿ ಮದ್ರಾಸ್ ಪದವೀಧರೆಯಾದ ವಿನೀತಾ ಸಿಂಗ್ ಅವರು ತಮ್ಮದೇ ಆದ ಒಳ ಉಡುಪು ಕಂಪನಿಯನ್ನು ಪ್ರಾರಂಭಿಸಲು ಯೋಜಿಸಿದ್ದರು. ನಂತರ, ದೊಡ್ಡ ಕಂಪನಿಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು Deutsche Bank ನಲ್ಲಿ 3 ತಿಂಗಳ ಕಾಲ ಇಂಟರ್ನ್‌ಶಿಪ್ ಆಯ್ಕೆ ಮಾಡಿಕೊಂಡಿದ್ದರು. ಇಂಟರ್ನ್ ಆಗಿ ಅವರ ಕೆಲಸದಿಂದ ಪ್ರಭಾವಿತರಾದ ಬ್ಯಾಂಕ್ ವಿನೀತಾಗೆ 1 ಕೋಟಿ ರೂಪಾಯಿಗಳ ಸಂಬಳದ ಪ್ಯಾಕೇಜ್‌ನೊಂದಿಗೆ ಕೆಲಸವನ್ನು ನೀಡಲು ನಿರ್ಧರಿಸಿತು.
ಆದರೆ, ವಾಣಿಜ್ಯೋದ್ಯಮಿ ಈ ಪ್ರಸ್ತಾಪವನ್ನು ತಿರಸ್ಕರಿಸಿದರು ಮತ್ತು ಸೌಂದರ್ಯವರ್ಧಕ ಬ್ರ್ಯಾಂಡ್ ಅನ್ನು ನಿರ್ಮಿಸುವ ಮೂಲಕ ತನ್ನ ಸ್ವಂತ ಕಂಪನಿಯನ್ನು ಪ್ರಾರಂಭಿಸಲು ನಿರ್ಧರಿಸಿದರು. ಇನ್ನು, ಶುಗರ್ ಕಾಸ್ಮೆಟಿಕ್ಸ್ ವ್ಯಾಪಾರದ ಪ್ರಾರಂಭದಲ್ಲಿ, ವಿನೀತಾ ಸಿಂಗ್ ಸಂದರ್ಶನವೊಂದರಲ್ಲಿ ತಾನು "ಮ್ಯಾಚ್‌ಬಾಕ್ಸ್ ಗಾತ್ರದ" ಫ್ಲಾಟ್‌ನಲ್ಲಿ ವಾಸಿಸುತ್ತಿದ್ದೆ. ಮುಂಬೈನಲ್ಲಿ ಪ್ರತಿ ಬಾರಿ ಮಳೆ ಬಂದಾಗ ವಾಡಿಕೆಯಂತೆ ಈ ಫ್ಲಾಟ್ ಪ್ರವಾಹಕ್ಕೆ ಒಳಗಾಗುತ್ತಿತ್ತು ಎಂದೂ ಹೇಳಿದ್ದರು. ಆರಂಭದಲ್ಲಿ, ಶುಗರ್ ಕಾಸ್ಮೆಟಿಕ್ಸ್ ತನ್ನ ವೆಬ್‌ಸೈಟ್ ಮೂಲಕ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡುತ್ತಿತ್ತು.
ಇದನ್ನೂ ಓದಿ: ಬದಲಾಗ್ತಿದೆ Pornhub ಕಂಪನಿಯ ಹೆಸರು: ಕಾರಣ ಹೀಗಿದೆ..
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.