Gossip: ಗುಟ್ಟು ಮಹಿಳೆ ಬಾಯಲ್ಲಿ ನಿಂತಿದ್ದುಂಟಾ?

By Suvarna NewsFirst Published Jun 6, 2023, 1:09 PM IST
Highlights

ಗುಟ್ಟಿಗೂ ಮಹಿಳೆಗೂ ಏನೋ ಸ್ಪೆಷಲ್ ಬಾಂಡಿಂಗ್ ಎನ್ನಬಹುದು. ಬಹುತೇಕ ಮಹಿಳೆಯರ ಬಾಯಲ್ಲಿ ಗುಟ್ಟು ನಿಲ್ಲಲು ಸಾಧ್ಯವೇ ಇಲ್ಲ. ಒಂದಲ್ಲ ಒಂದು ರೀತಿಯಲ್ಲಿ ಹೊಟ್ಟೆಯಲ್ಲಿರೋದನ್ನು ಹೊರ ಹಾಕುವ ಮಹಿಳೆಯರ ಈ ಸ್ವಭಾವಕ್ಕೆ ಕಾರಣ ವಿಚಿತ್ರವಾಗಿದೆ. 
 

ವಟ ಗಂಗೆ, ಬಿಬಿಸಿ ನ್ಯೂಸ್.. ಹೀಗೆ ಮಹಿಳೆಯರಿಗೆ ಅನೇಕ ಹೆಸರುಗಳಿಂದ ಕರೆಯುತ್ತಾರೆ. ಮನೆಯಲ್ಲಿ ಏನೋ ಒಂದು ಗುಟ್ಟಿದ್ದರೆ ಅದನ್ನು ಬಹಳ ಬೇಗ ತಾಯಿ ಅಥವಾ ಪತ್ನಿ ಮುಂದೆ ಪುರುಷರು ಹೇಳೋದಿಲ್ಲ. ಈ ವಿಷ್ಯವನ್ನು ಆಕೆ ತನ್ನೆಲ್ಲ ಸುತ್ತಮುತ್ತಲಿನ ಜನರಿಗೆ ಹೇಳಿಬಿಡ್ತಾಳೆ ಎನ್ನುವ ಭಯ. ಯಾರ ಬಾಯಲ್ಲಿ ಗುಟ್ಟು ನಿಂತ್ರೂ ಮಹಿಳೆ ಬಾಯಲ್ಲಿ ನಿಲ್ಲೋದಿಲ್ಲ ಎನ್ನಲಾಗುತ್ತದೆ. ಅದು ಸಣ್ಣ ವಿಷ್ಯವಿರಲಿ ಇಲ್ಲ ದೊಡ್ಡ ವಿಷ್ಯವಿರಲಿ ಅದನ್ನು ಇನ್ನೊಬ್ಬರ ಮುಂದೆ ಹೇಳಿದಾಗ ಮಹಿಳೆಗೆ ಅದೇನೋ ಸಮಾಧಾನ. ಅದೇನೋ ನೆಮ್ಮದಿ, ಖುಷಿ. ಮಹಿಳೆ ತಾನು ಮಾಡಿದ ತಪ್ಪನ್ನು ಕೂಡ ಗುಟ್ಟಾಗಿ ಇಡೋದಿಲ್ಲ. ಆಕೆ ಬಾಯಲ್ಲಿ ಗುಟ್ಟು ನಿಲ್ಲಲು ಸಾಧ್ಯವೇ ಇಲ್ಲ ಎನ್ನಲಾಗುತ್ತದೆ.

ಈ ವಿಷ್ಯದಲ್ಲಿ ಹುಡುಗರೇನೂ ಕಡಿಮೆಯಿಲ್ಲ. ಅನೇಕ ಸಂಶೋಧನೆ (Research) ಗಳು ಪುರುಷರು ಕೂಡ ಮಹಿಳೆಯರಿಗಿಂತ ಹೆಚ್ಚು ಗಾಸಿಪ್ (Gossip) ಮಾಡ್ತಾರೆ ಎಂಬುದನ್ನು ಹೇಳಿದೆ. ಆದ್ರೆ ಮಹಿಳೆಯರೇ ಹೈಲೆಟ್ ಆಗ್ತಾರೆ. ಇಬ್ಬರು ಹುಡುಗಿಯರು ಒಟ್ಟಿಗೆ ಕುಳಿತು, ಗುಸುಪಿಸು ಮಾಡ್ತಿದ್ದಾರೆ ಅಂದ್ರೆ ಅವರ ಬಾಯಿಗೆ ಇನ್ಯಾರೋ ಬಿದ್ದಿದ್ದಾರೆ ಎಂದೇ ಅರ್ಥ. ಅಷ್ಟಕ್ಕೂ ಹುಡುಗಿಯರ ಬಾಯಲ್ಲಿ ಗುಟ್ಟು ನಿಲ್ಲೋದಿಲ್ಲ ಏಕೆ ಅಥವಾ ಯಾಕೆ ಅವರಷ್ಟು ಮಾತನಾಡ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಕಂಡುಹಿಡಿಯುವ ಪ್ರಯತ್ನ ನಡೆಸೋಣ. ಇದಕ್ಕೆ ಕೆಲವರು ಕುಂತಿ ಕಾರಣ ಹೇಳಿದ್ರೆ ಮತ್ತೆ ಕೆಲವರು ಹಾರ್ಮೋನ್ (Hormone) ಎನ್ನುತ್ತಾರೆ. 

ಗರ್ಭಾವಸ್ಥೆಯಲ್ಲಿ ಸೋಂಕು ಕಾಣಿಸಿಕೊಂಡ್ರೆ ತಾಯಿ - ಮಗುವಿಗೆ ಅಪಾಯ

ಯುಧಿಷ್ಠಿರನು ಸ್ತ್ರೀ ಕುಲಕ್ಕೆ ನೀಡಿದ ಶಾಪವೇ ಇದು? : ಮಹಿಳೆಯ ಮಾತಿನ ಬಗ್ಗೆ ನಾವು ಚರ್ಚೆ ಮಾಡೋದಾದ್ರೆ ಮಹಾಭಾರತಕ್ಕೆ ಹೋಗಿ ಬರಬೇಕು. ಮಹಾಭಾರತದ ಯುದ್ಧ ಕೊನೆಗೊಂಡಾಗ, ಪಾಂಡವರು ತಮ್ಮ ಹಿರಿಯ ಸಹೋದರ ಕರ್ಣನನ್ನು ಕೊಂದಿದ್ದಕ್ಕೆ ದುಃಖಿತರಾಗಿದ್ದರು. ಪಾಂಡವರಿಗೆ ತಮ್ಮ ಸಹೋದರನನ್ನು ಕೊಂದ ಪಾಪವೂ ಇತ್ತು. ಈ ಯುದ್ಧದಲ್ಲಿ ಅನೇಕ ವಿಧದ ಮೋಸಗಳನ್ನು ಮಾಡಲಾಗಿತ್ತು. ಆದರೆ ಯುಧಿಷ್ಠಿರ ತನ್ನ ತಾಯಿ ಕುಂತಿಯಿಂದ ಇಂಥದ್ದನ್ನು ನಿರೀಕ್ಷೆ ಮಾಡಿರಲಿಲ್ಲ. ಕುಂತಿ, ಕರ್ಣನ ಮರಣದವರೆಗೂ ಕರ್ಣ ತನ್ನ ಮಗ ಎಂಬ ರಹಸ್ಯವನ್ನು ಬಿಟ್ಟುಕೊಟ್ಟಿರಲಿಲ್ಲ. ಒಂದ್ವೇಳೆ ಕುಂತಿ ಮೊದಲೇ ಈ ಸಂಗತಿ ಹೇಳಿದ್ದರೆ ಕರ್ಣ ಸಾವನ್ನಪ್ಪುತ್ತಿರಲಿಲ್ಲ. ತಾಯಿಯಿಂದಲೇ ಪಾಂಡವರು, ಸಹೋದರನನ್ನು ಕೊಲ್ಲುವಂತಾಯ್ತು ಎಂದು ಯುಧಿಷ್ಠಿರ ಭಾವಿಸಿದ್ದ. ಇದಕ್ಕೆ ತನ್ನ ತಾಯಿಯನ್ನು ಶಪಿಸಿದ್ದ.  ಈ ಶಾಪ ಸ್ತ್ರೀಕುಲಕ್ಕೆ ತಟ್ಟಿದೆ ಎನ್ನಲಾಗುತ್ತದೆ. ಹಾಗಾಗಿಯೇ ಮಹಿಳೆಯರಿಗೆ ಯಾವುದೇ ಗುಟ್ಟನ್ನು ಗುಟ್ಟಾಗಿಡಲು ಸಾಧ್ಯವಿಲ್ಲ. ಎಲ್ಲವನ್ನೂ ಅವರು ಹೇಳಿಬಿಡ್ತಾರೆ.

ಈ ಬಗ್ಗೆ ವಿಜ್ಞಾನ ಹೇಳೋದೇನು  : ಸಂಶೋಧಕರು ಜರ್ನಲ್ ಆಫ್ ಎಕ್ಸ್ ಪರಿಮೆಂಟಲ್ ಸೋಶಿಯಲ್ ಸೈಕಾಲಜಿಯಲ್ಲಿ ವರದಿ ಪ್ರಕಟಿಸಿದ್ದಾರೆ. ಮಹಿಳೆಯರು ತಮಗೆ ಬಂದ ಮಾಹಿತಿಯನ್ನು ಹೇಗೆ ಇತರರಿಗೆ ತಿಳಿಸ್ತಾರೆ ಎಂಬುದನ್ನು ಇದ್ರಲ್ಲಿ ಹೇಳಲಾಗಿದೆ. ಮಹಿಳೆಯರು ಗಾಸಿಪ್ ಮೂಲಕ ವಿಷ್ಯವನ್ನು ಬೇರೆಯವರಿಗೆ ಹೇಳ್ತಾರಂತೆ. ಅದನ್ನು ಅವರು ಒಂದು ತಂತ್ರದಂತೆ ಬಳಕೆ ಮಾಡ್ತಾರೆ. ಬೇರೆಯವರ ಇಮೇಜ್ ಗೆ ಮಸಿಬಳಿಯಲು ಅಥವಾ ತಮ್ಮ ಕೆಲಸ ಮಾಡಿಸಿಕೊಳ್ಳಲು ಅವರು ಗಾಸಿಪ್ ಬಳಕೆ ಮಾಡಿಕೊಳ್ತಾರಂತೆ. ಈ ಗಾಸಿಪ್ ಇಬ್ಬರನ್ನು ಹತ್ತಿರ ಮಾಡುತ್ತದೆ ಎಂದೂ ಈ ವರದಿಯಲ್ಲಿ ಹೇಳಲಾಗಿದೆ. ಮೂರನೇ ವ್ಯಕ್ತಿ ಬಗ್ಗೆ ಮಾತನಾಡುವಾಗ ಇವರಿಬ್ಬರು ಒಂದಾಗಿರುತ್ತಾರೆ. 

PERIODS ವೇಳೆ ಸೂರ್ಯನಿಗೆ ಅರ್ಘ್ಯ ಅರ್ಪಿಸಬಹುದಾ?

ಹರಟೆಗೆ ಅಥವಾ ಗುಟ್ಟನ್ನು ಹೇಳಲು ಇನ್ನೊಂದು ಮುಖ್ಯ ಕಾರಣ ಮನಸ್ಸನ್ನು ಹಗುರಗೊಳಿಸುವುದು. ಮನಸ್ಸಿನಲ್ಲಿ ಯಾವುದೇ ಗುಟ್ಟಿದ್ದರೆ ಸರಿಯಾಗಿ ನಿದ್ರೆ ಬರೋದಿಲ್ಲ. ಅದೇನೋ ಚಡಪಡಿಕೆ ಅನೇಕರಿಗೆ ಆಗ್ತಿರುತ್ತದೆ. ಅದೇ ಆ ಗುಟ್ಟನ್ನು ಹೊರಗೆ ಹಾಕಿದಾಗ, ಮನಸ್ಸಿನಲ್ಲಿದ್ದ ವಿಷ್ಯ ಹೊರ ಬಂದಾಗ ಮೆದುಳಿನಿಂದ ಡೋಪಮೈನ್ ಹೊರಗೆ ಬರುತ್ತದೆ. ಇದ್ರಿಂದ ಅವರಿಗೆ ಸಂತೋಷವಾಗುತ್ತದೆ. ಮನಸ್ಸು ನಿರಾಳವಾಗುತ್ತದೆ. 
 

click me!