ಟೆಕ್ನಾಲಜಿಯನ್ನು ಹೆಣ್ಮಕ್ಕಳ ರಕ್ಷಣೆಗೂ ಬಳಸಬಹುದು, ಹೇಗೆ ಗೊತ್ತಾ?

Published : May 23, 2023, 02:19 PM ISTUpdated : May 23, 2023, 03:01 PM IST
ಟೆಕ್ನಾಲಜಿಯನ್ನು ಹೆಣ್ಮಕ್ಕಳ ರಕ್ಷಣೆಗೂ ಬಳಸಬಹುದು, ಹೇಗೆ ಗೊತ್ತಾ?

ಸಾರಾಂಶ

ರೈಲಿನಲ್ಲಿ ಹದಿ ಹರೆಯದ ಪುಂಡನೊಬ್ಬ ಹುಡುಗಿಯೊಬ್ಬಳ ಮೈ ಮುಟ್ಟುವ ಪ್ರಯತ್ನ ಮಾಡಿದ. ರೈಲಿನಲ್ಲಿದ್ದ ಅಷ್ಟೂ ಜನ ನೋಡಿಯೂ ನೋಡದಂತೆ ಇದ್ದರು. ಸೀನ್ ಕಟ್ ಮಾಡಿದ್ರೆ ಅಲ್ಲಿ ನಡೆದದ್ದೇ ಬೇರೆ. ಅದೇನು? ಟೆಕ್ನಾಲಜಿಯನ್ನು ಸೇಫ್ಟಿ ಉದ್ದೇಶಕ್ಕೂ ಹೇಗೆ ಬಳಸಬಹುದು?

ಯಾವುದೋ ಹೊರ ರಾಷ್ಟ್ರ. ಅಲ್ಲೊಂದು ಟ್ರೇನ್‌ನಲ್ಲಿ ಹೆಚ್ಚು ಕಮ್ಮಿ ಜಗತ್ತಿನ ಎಲ್ಲ ಭಾಗಗಳ ಜನರಿದ್ದಾರೆ. ಬಿಳಿಯರು, ಆಫ್ರಿಕಾ ಭಾಗದವರು, ಭಾರತೀಯರು, ಚೀನಾ, ಜಪಾನ್ ಹೀಗೆ ಬೇರೆ ಬೇರೆ ಮುಖ್ಯ ಚರ್ಯೆ ಹೋಲುವ ಹೆಂಗಸರು, ಗಂಡಸರು. ಅಲ್ಲೊಬ್ಬ ಕೊಳಕು ಮನಸ್ಸಿನ ಹರೆಯದ ಹುಡುಗನೂ ಇದ್ದಾನೆ. ತನ್ನ ಎದುರು ಕೂತಿದ್ದ ಹುಡುಗಿಯನ್ನೇ ದಿಟ್ಟಿಸುವ ಆತ ಆಶ್ಲೀಲವಾಗಿ ಸನ್ನೆ ಮಾಡುತ್ತಾನೆ. ಹುಡುಗಿ ಅವಮಾನದಿಂದ ಕಂಪಿಸುತ್ತಾಳೆ. ಆತ ಎದ್ದು ಬಂದು ಆಕೆಯನ್ನು ಆವರಿಸುವ ಹಾಗೆ ಕಾಲುಗಳನ್ನು ಕವರ್ ಮಾಡ್ತಾನೆ. 'ನಾನಿಲ್ಲಿ ನಿಲ್ಲಬಹುದಲ್ವಾ? ನಂಗೆ ಆ ಹಕ್ಕು ಇದೆ. ನಂಗಿಷ್ಟ ಬೇಕಾದಲ್ಲಿ ನಾನು ನಿಲ್ಲಬಹುದು' ಅನ್ನೋ ಹಾಗೆ ಅವಳನ್ನು ಕವರ್ ಮಾಡ್ತಾನೆ. ಅವಳು ಅವಮಾನ, ನೋವು, ಭಯದಲ್ಲಿ ಒದ್ದಾಡುತ್ತಾಳೆ. ಟ್ರೈನಿನಲ್ಲಿ ಅಷ್ಟು ಜನ ಇದ್ದರೂ ಒಬ್ಬರೂ ಆಕೆಯ ಸಹಾಯಕ್ಕೆ ಬರೋದಿಲ್ಲ. ಎಲ್ಲರೂ ನೋಡಿಯೂ ನೋಡದ ಹಾಗಿರುತ್ತಾರೆ.

ಆಧುನಿಕ ಬದುಕಿನ ರೀತಿಯೇ ಹಾಗೆ. ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸೋದು ಕಡಿಮೆ. ತಾನಾಯ್ತು ತನ್ನ ಪಾಡಾಯ್ತು ಅನ್ನೋ ಹಾಗಿರ್ತಾರೆ. ಇಂಥದ್ದೊಂದು ರಿಸ್ಕ್ ಅವರ ಕಾಲ ಬುಡಕ್ಕೆ ಬಂದಾಗಲೇ ಅವರಿಗೆ ಸನ್ನಿವೇಶದ ಅರಿವಾಗುತ್ತದೆ. ಆದರೆ ಜನರ ಈ ಮೈಂಡ್‌ಸೆಟನ್ನೇ ಅಡ್ವಾಂಟೇಜ್ ಆಗಿ ತಗೊಂಡ ಆ ಹುಡುಗ ಹುಡುಗಿಗೆ ದೌರ್ಜನ್ಯ ಮಾಡೋದನ್ನು ಮುಂದುವರಿಸುತ್ತಾನೆ. ಪಕ್ಕದ ಸೀಟಿನ ಹುಡುಗಿ ಇದನ್ನು ತನ್ನ ಮೊಬೈಲಲ್ಲಿ ಫೋಟೊ ತೆಗೀತಾಳೆ. ಅದನ್ನು ಗಮನಿಸಿದ ಆ ಹುಡುಗ ಅವಳಿಂದ ಬಲವಂತದಲ್ಲಿ ಮೊಬೈಲ್ ಕಿತ್ತುಕೊಂಡು ಆ ಫೋಟೋ ಡಿಲೀಟ್‌ ಮಾಡುತ್ತಾನೆ. ಅಷ್ಟೇ ಅಲ್ಲ, ಅವಳನ್ನೂ ಆಟ ಆಡಿಸಿ ಮೊಬೈಲ್ ಬಿಸಾಕುತ್ತಾನೆ.

ಕಾಂಗ್ರೆಸ್‌ ಶಾಸಕಿ ನಯನಾ ಮೋಟಮ್ಮ 'ಖಾಸಗಿ ಫೋಟೋಸ್‌' ವೈರಲ್‌! ಅವಿವೇಕಿಗಳಿಗೆ ಉತ್ತರವಿದು ಎಂದ ಎಂಎಲ್‌ಎ

ತಾನು ಗೆದ್ದೆ ಅಂತ ಬೀಗುತ್ತಿರುವಾಗಲೇ ಇನ್ನೊಬ್ಬ ಹೆಣ್ಮಗಳು ವೀಡಿಯೋ ಮಾಡೋದು ಕಾಣುತ್ತದೆ. ಆಗ ಕೊಂಚ ಹಿಂಜರಿಯುವ ಹುಡುಗ, 'ನೀನಿದನ್ನೆಲ್ಲ ವೀಡಿಯೋ ಮಾಡ್ತಿದ್ದೀಯಾ?' ಅಂತ ಪ್ರಶ್ನೆ ಮಾಡ್ತಾನೆ. 'ಬರೀ ವೀಡಿಯೋ ಮಾಡ್ತಿಲ್ಲ, ಫೇಸ್‌ಬುಕ್ ಲೈವ್‌ನಲ್ಲಿದ್ದೇನೆ. ಹತ್ತಿರ ಇರುವ ಪೊಲೀಸ್ ಸ್ಟೇಶನ್‌ನವರು ಕೂಡಲೇ ಈ ಜಾಗಕ್ಕೆ ಬರಬೇಕು' ಅಂತ ಲೈವ್‌ನಲ್ಲೇ ಹೇಳ್ತಾಳೆ. ಹುಡುಗ ಭಯದಲ್ಲಿ ಮುದುಡಿ ತನ್ನ ಸೀಟಲ್ಲಿ ಕೂರ್ತಾನೆ. ರೈಲು ಅಷ್ಟರಲ್ಲಾಗಲೇ ಸ್ಟೇಶನ್ ಸಮೀಪ ಬಂದಿರುತ್ತೆ. ಆಟೋಮ್ಯಾಟಿಕ್ ಡೋರು ತೆರೆಯುವ ಮೊದಲೇ ಗಾಜಿನ ಕಿಟಕಿಯಾಗಿ ಪೊಲೀಸರು ನಿಂತಿರೋದು ಕಾಣುತ್ತೆ.

ಸೋಷಿಯಲ್ ಮೀಡಿಯಾವನ್ನು ಎಫೆಕ್ಟಿವ್(effective) ಆಗಿ ಹೇಗೆ ಬಳಸಬಹುದು ಅನ್ನೋದಕ್ಕೆ ಈ ಕಿರುಚಿತ್ರ ಮಾದರಿಯಂತಿದೆ. ಸಾರ್ವಜನಿಕ ಜಾಗಗಳಲ್ಲಿ, ಪಬ್ಲಿಕ್ ಟ್ರಾನ್ಸ್‌ಪೋರ್ಟ್‌ನಲ್ಲಿ (Pubbli transport)ಸಂಚರಿಸುವಾಗ ಎಷ್ಟೋ ಜನ ಹೆಣ್ಮಕ್ಕಳು ಇಂಥಾ ಕೀಚಕರಿಂದ ತೊಂದರೆಗೆ ಒಳಗಾಗ್ತನೇ ಇರ್ತಾರೆ. ಮರ್ಯಾದೆಗೆ ಅಂಜಿ ಭಯ ಪಟ್ಟು ಎಲ್ಲವನ್ನೂ ಸಹಿಸಿಕೊಂಡು ಸುಮ್ಮನಿದ್ದು ಬಿಡ್ತಾರೆ. ಈಗೀಗ ಜನರ ತಾವಾಯ್ತು ತಮ್ಮ ಪಾಡಾಯ್ತು ಅಂತ ಇರುವ ಕಾರಣ ಇಂಥಾ ಟೈಮಲ್ಲಿ ಯಾರಾದ್ರೂ ಅವರ ಸಹಾಯಕ್ಕೆ ಬರುತ್ತಾರೆ ಅನ್ನೋ ವಿಶ್ವಾಸವೂ ಇರೋದಿಲ್ಲ. ಅಂಥಾ ಟೈಮಲ್ಲಿ ಕೈಯಲ್ಲೇ ಇರುವ ಮೊಬೈಲ್(mobile) ಬಳಸಿ ಅವರು ಕಾಟ ಕೊಡ್ತಿರೋ ಹುಡುಗರಿಗೆ ತಕ್ಕ ಬುದ್ಧಿ ಕಲಿಸಬಹುದು

Topper Story: ಪ್ರೀತಿ ಪ್ರೇಮವೆಂದು ಪೋಷಕರನ್ನು ತೊರೆದಾಕೆ ಇಂದು ಟಾಪರ್!

ನಾನು ಸದಾ ಟೆಕ್ನಾಲಜಿಯಲ್ಲೇ ಮುಳುಗಿರುತ್ತೇವೆ. ಅದನ್ನು ಬಳಸೋದ್ರಲ್ಲೇ ನಮ್ಮ ಅರ್ಧ ಆಯುಸ್ಸು ಮುಗಿದಿರುತ್ತೆ. ಆದರೆ ಬರೀ ಎಂಟರ್‌ಟೈನ್‌ಮೆಂಟ್‌ಗೋಸ್ಕರವೇ ಅದನ್ನು ಬಳಸೋರು ಜಾಸ್ತಿ. ಅಪಾಯದ ಸನ್ನಿವೇಶದಲ್ಲಿ ಕೈಯಲ್ಲಿ ಮೊಬೈಲ್‌ ಇದ್ದರೂ ಅದರಲ್ಲಿರುವ ಕೆಲವು ಟೆಕ್ನಾಲಜಿಯನ್ನು(technology) ಬಳಸಿಕೊಳ್ಳಲು ತಲೆ ಓಡೋದಿಲ್ಲ. ಆದರೆ ಅಪಾಯದ ಸನ್ನಿವೇಶದಲ್ಲಿ ಭಯದಲ್ಲಿ ತತ್ತರಿಸೋ ಬದಲು ಇಂಥಾ ಟ್ರಿಕ್ಸ್ (tricks)ಫಾಲೋ ಮಾಡಿದರೆ ಈ ಬಗ್ಗೆ ಉಳಿದವರಲ್ಲಿ ಜಾಗೃತಿ ಮೂಡಿಸಿದ ಹಾಗೂ ಆಗುತ್ತೆ, ಇಂಥಾ ಕೀಚಕರಿಗೆ ತಮ್ಮ ಆಟ ಇನ್ನು ಮುಂದೆ ನಡೆಯೋದಿಲ್ಲ ಅಂತ ಪಾಠ ಕಲಿಸಿದ ಹಾಗೂ ಆಗುತ್ತೆ. ಇದನ್ನು ನೋಡಿ ಉಳಿದವರೂ ಇಂಥಾ ಕೆಟ್ಟ ನಡತೆಯಿಂದ ದೂರ ಇರ್ತಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗೃಹಲಕ್ಷ್ಮಿ ಯೋಜನೆ ₹2000 ಹಣ ಬಂದಿಲ್ವಾ? ಇನ್ಮೇಲೆ ಕಚೇರಿಗೆ ಅಲೆದಾಡಬೇಕಿಲ್ಲ, ಈ ಸಹಾಯವಾಣಿ ಕರೆ ಮಾಡಿ!
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ, ಮಿಡ್ ನೈಟ್ ಫಿಜ್ಜಾ – ಯಂಗ್ ಹುಡುಗಿಯರ ಲೈಫ್ ಹಾಳು ಮಾಡ್ತಿದೆ ಕೆಟ್ಟ ಡಯಟ್