ವ್ಯಾಪಾರವಾಗಿ ಬದಲಾದ ಹವ್ಯಾಸ; ಚೆಂದದ ಉತ್ಪನ್ನ ತಯಾರಿಸಿ ಲಕ್ಷಾಂತರ ಗಳಿಕೆ!

By Suvarna News  |  First Published Mar 11, 2024, 3:56 PM IST

ಮನೆಯಲ್ಲಿ ಬಿಡುವಿನ ಸಮಯದಲ್ಲಿ ಏನು ಮಾಡ್ಬೇಕು? ಅನೇಕ ಮಹಿಳೆಯರನ್ನು ಕಾಡುವ ಪ್ರಶ್ನೆ ಇದು. ಮಾಡೋಕೆ ಬೇಕಾದಷ್ಟು ಕೆಲಸ ಇದೆ, ಗಳಿಸೋಕೆ ನಾನಾ ದಾರಿ ಇದೆ. ಈ ಮಹಿಳೆಯಂತೆ ನಿಮ್ಮ ಹವ್ಯಾಸವನ್ನೇ ನೀವು ಬಂಡವಾಳ ಮಾಡಿಕೊಳ್ಳಬಹುದು. 
 


ದಿನ ದಿನಕ್ಕೂ ಪರಿಸರ ಹದಗೆಡುತ್ತಿದೆ. ಪರಿಸರ ನಾನಾ ವಿಧದಲ್ಲಿ ಮಾಲಿನ್ಯಕ್ಕೆ ಒಳಗಾಗ್ತಿದೆ.  ಎಲ್ಲ ಮಾಲಿನ್ಯಕ್ಕೆ ಮುಖ್ಯ ಕಾರಣಗಳಲ್ಲಿ ಒಂದು ಪ್ಲಾಸ್ಟಿಕ್. ಜನರಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವಂತೆ ಜಾಗೃತಿ ಕಾರ್ಯಕ್ರಮಗಳು ಒಂದ್ಕಡೆ ನಡೆಯುತ್ತಿದ್ದರೆ ನಿಧಾನವಾಗಿ ಜನರು ಕೂಡ ಪರಿಸರ ರಕ್ಷಣೆಗೆ ಮುಂದಾಗ್ತಿದ್ದಾರೆ. ಪ್ಲಾಸ್ಟಿಕ್ ಬದಲು ಬೇರೆ ವಸ್ತುಗಳ ಬಳಕೆ ಹೆಚ್ಚಾಗ್ತಿದೆ. ಬಟ್ಟೆ, ಕಾಗದ, ಸೆಣಬಿನ ವಸ್ತುಗಳಿಗೆ ಬೇಡಿಕೆ ಹೆಚ್ಚಾಗ್ತಿದೆ. ಅದರಿಂದ ಮಾಡಿದ ವಸ್ತುಗಳನ್ನು ಜನರು ಖರೀದಿ ಮಾಡುತ್ತಿರುವ ಕಾರಣ, ಅದನ್ನು ತಯಾರಿಸುವವರ ಜೇಬು ತುಂಬುತ್ತಿದೆ. ವ್ಯಾಪಾರ ಶುರು ಮಾಡುವ ಆಲೋಚನೆಯಲ್ಲಿ ನೀವಿದ್ದರೆ ಸೆಣಬಿನ ಕ್ಷೇತ್ರಕ್ಕೆ ಕೈ ಹಾಕಬಹುದು. ಆರಂಭದಲ್ಲಿ ಒಬ್ಬರೇ ಹವ್ಯಾಸಕ್ಕೆ ಶುರು ಮಾಡಿದ ಕೆಲಸವನ್ನು ಈಗ ವ್ಯಾಪಾರವಾಗಿ ಬದಲಿಸಿ ಲಕ್ಷಾಂತರ ರೂಪಾಯಿ ದುಡಿಯುತ್ತಿರುವ ಈ ಮಹಿಳೆ ನಿಮಗೆ ಸ್ಪೂರ್ತಿಯಾಗಬಹುದು. 

ನಾವಿಂದು  ಭೋಪಾಲ್‌ನ ಮಮತಾ ಸಿಂಗ್ ಸ್ಫೂರ್ತಿದಾಯಕ ಕಥೆಯನ್ನು ನಿಮಗೆ ಹೇಳ್ತೇವೆ. ಬಹುತೇಕ ಮಹಿಳೆಯರಿಗೆ ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ಶುರು ಮಾಡಲು ಸಾಧ್ಯವಾಗೋದಿಲ್ಲ. ಮನೆಯಲ್ಲಿಯೇ ಮಾಡುವ ಕೆಲಸವನ್ನು ಹುಡುಕುತ್ತಿರುತ್ತಾರೆ. ಅಂಥವರು ಮಮತಾರಿಂದ ಪ್ರೇರಣೆ ಪಡೆಯಬಹುದು.

Tap to resize

Latest Videos

ಏಕಾಂಗಿಯಾಗಿ 3 ಬಾವಿಯಲ್ಲಿ ಜಲಧಾರೆ ಹರಿಸಿದ ಗೌರಿ: ಮುಳ್ಳಿನ ಹಾದಿ ಸವೆದ ಸಾಧಕಿಗೆ ಸ್ತ್ರೀ ಅವಾರ್ಡ್​

ಮಮತಾ ಐದು ವರ್ಷಗಳ ಹಿಂದೆಯೇ ಸೆಣಬಿ (Jute)ನ ಮಹತ್ವ ತಿಳಿದಿದ್ದರು. ಪ್ಲಾಸ್ಟಿಕ್ ಬದಲು ಸೆಣಬಿನ ಬ್ಯಾಗ್ ಒಂದನ್ನು ಅವರು ಸಿದ್ಧಪಡಿಸಿದ್ದರು. ಪಕ್ಕದ ಮನೆ ಆಂಟಿಗೆ ಈ ಬ್ಯಾಗ್ ಇಷ್ಟವಾಗಿತ್ತು. ಅವರಿಗೆ ಬ್ಯಾಗ್ (bag) ಸಿದ್ಧಪಡಿಸಿದ್ದ ಮಮತಾ ಸಿಂಗ್, ಯಾಕೆ ಇದನ್ನು ವ್ಯಾಪಾರ (Business) ವಾಗಿ ಶುರು ಮಾಡಬಾರದು ಎಂದು ಆಲೋಚನೆ ಮಾಡಿದ್ದರು. 2019ರಲ್ಲಿ ನಮ್ಮ ಹವ್ಯಾಸವನ್ನು ವ್ಯಾಪಾರ ಮಾಡಿಕೊಂಡು ಸೆಣಬಿನ ಬ್ಯಾಗ್ ತಯಾರಿಸಲು ಆರಂಭಿಸಿದ್ರು. ಆರಂಭದಲ್ಲಿ 2000 ರೂಪಾಯಿ ಬಂಡವಾಳ ಹಾಕಿ ವ್ಯವಹಾರ ಶುರು ಮಾಡಿದ್ದ ಮಮತಾ ಸಿಂಗ್ ಈಗ ಐದು ಜನರ ಜೊತೆ ಕೆಲಸ ಮಾಡಿ, ಲಾಭ ಪಡೆಯುತ್ತಿದ್ದಾರೆ. 

ಮದುವೆಗೆ ಮುನ್ನ ಶಾಜಾಪುರದಲ್ಲಿ ಸೆಣಬಿನ ಬ್ಯಾಗ್ ತಯಾರಿಸುತ್ತಿದ್ದ ಮಮತಾ ಸಿಂಗ್, ಮದುವೆ ನಂತ್ರವೂ ತಮ್ಮ ಕೆಲಸ ಮುಂದುವರೆಸಿದರು. ಮೊದಲು ಬರೀ ಹಗ್ಗದ ರೂಪದಲ್ಲಿ ಮಾತ್ರ ಸೆಣಬನ್ನು ಬಳಕೆ ಮಾಡಲಾಗ್ತಿತ್ತು. ದಿನ ಕಳೆದಂತೆ ಅದ್ರಲ್ಲಿ ದೊಡ್ಡ ಬದಲಾಣೆ ಆಯ್ತು. ಇದೇ ಮಮತಾ ಪಾಲಿಗೆ ವರದಾನವಾಯ್ತು. ಹೊಸ ತಂತ್ರಜ್ಞಾನದ ಮೂಲಕ ಸೆಣಬಿನ ನಾನಾ ವಸ್ತುಗಳನ್ನು ಮಮತಾ ತಯಾರಿಸುತ್ತಾರೆ. ಮಮತಾ ಸಿಂಗ್ ಹತ್ತಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸಿ ಈಗ ಮಾರಾಟ ಮಾಡುತ್ತಿದ್ದಾರೆ.

ಸೆಣಬಿನಿಂದ ಲೇಡೀಸ್ ಬ್ಯಾಗ್, ಕುಶನ್, ಅಲಂಕಾರಿಕ ವಸ್ತುಗಳು, ಮೊಬೈಲ್ ಬ್ಯಾಗ್, ಮೊಬೈಲ್ ಸ್ಟ್ಯಾಂಡನ್ನು ಅವರ ತಂಡ ತಯಾರಿಸುತ್ತದೆ. ಪ್ಯಾಕಿಂಗ್ ಬ್ಯಾಗ್ ಗಳನ್ನು ಕೂಡ ಅವರು ತಯಾರಿಸುತ್ತಾರೆ. ಕಾರ್ಪೆಟ್‌, ರಗ್, ಕರ್ಟನ್ ಮತ್ತು ಲೈನಿಂಗ್‌ ಕೂಡ ಅವರ ಟೀಂನಿಂದ ಸಿದ್ಧವಾಗ್ತಿದೆ. ನೂರು ರೂಪಾಯಿಯಿಂದ ಸಾವಿರ ರೂಪಾಯಿ ಬೆಲೆಯ ಉತ್ಪನ್ನಗಳು ಇವರ ಬಳಿ ಲಭ್ಯವಿದೆ.

2023-24ನೇ ಸಾಲಿನ ಅಡ್ವಾನ್ಸ್ ಟ್ಯಾಕ್ಸ್ ಪಾವತಿಗೆ ಮಾ.15 ಅಂತಿಮ ಗಡುವು; ಇ-ಕ್ಯಾಂಪೇನ್ ಪ್ರಾರಂಭಿಸಿದ ಐಟಿ ಇಲಾಖೆ

ಮಮತಾ ಸಿಂಗ್ ಬರಿ ತಾವು ಉತ್ಪನ್ನ ತಯಾರಿಸಿ ಮಾರಾಟ ಮಾಡೋದು ಮಾತ್ರವಲ್ಲ ಅದನ್ನು ಬೇರೆಯವರಿಗೆ ಕಲಿಸುತ್ತಿದ್ದಾರೆ. ಆಸಕ್ತ ಮಹಿಳೆಯರು ಮಮತಾ ಸಿಂಗ್ ಬಳಿ ಈ ಉತ್ಪನ್ನಗಳ ತಯಾರಿ ಕಲಿಯಬಹುದು. 200 ಕ್ಕೂ ಹೆಚ್ಚು ಮಹಿಳೆಯರು ಮತ್ತು ಹುಡುಗಿಯರಿಗೆ ಅವರು ಉಚಿತ ತರಬೇತಿ ನೀಡಿದ್ದಾರೆ. ಈಗ ಮಮತಾ ಕೋರ್ಸ್ ಶುರು ಮಾಡಿದ್ದು, ಶುಲ್ಕದ ರೂಪದಲ್ಲಿ 200 ರೂಪಾಯಿ ಪಡೆಯುತ್ತಿದ್ದಾರೆ. ಎಂಟು ದಿನದ ಕಾರ್ಯಾಗಾರದಲ್ಲಿ ಅವರು ಅನೇಕ ಬಗೆಯ ಸೆಣಬಿನ ಉತ್ಪನ್ನಗಳ ತಯಾರಿ ಬಗ್ಗೆ ಮಾಹಿತಿ ನೀಡುತ್ತಾರೆ. 

click me!