Chitradurga: ಮೂಕಜೀವಿಗಳ ಪಾಲಿಗೆ ಆಶ್ರಯದಾತೆ ಕೋಟೆನಾಡಿನ ಸ್ಪೂರ್ತಿ..!

By Girish GoudarFirst Published Jun 30, 2022, 10:31 PM IST
Highlights

*   ಮೂಕ ವೇದನೆ ಅನುಭವಿಸುವ ಪ್ರಾಣಿಪಕ್ಷಿಗಳ ಪಾಲಿಗೆ ಈ ಯುವತಿ ಕರುಣಾಮಯಿ
*   ಕಷ್ಟ ಕಾಲದಲ್ಲಿ ಸ್ವಯಂ ಪ್ರೇರಿತಳಾಗಿ ಚಿಕಿತ್ಸೆ ನೀಡುವ ಈಕೆಯ ನಿಸ್ವಾರ್ಥ ಸೇವೆ
*   ಸ್ಪೂರ್ತಿಯ ನಿಸ್ವಾರ್ಥ ಸಾಥ್ ನೀಡಿದ 27 ಜನ ಯುವಕರು

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ(ಜೂ.30):  ಮನೆಯಲ್ಲಿ ಪ್ರೀತಿಯಿಂದ ಸಾಕಿದ ಪ್ರಾಣಿಗೆ ಸಣ್ಣ‌ ಕಾಯಿಲೆ ಅಥವಾ ಸ್ವಲ್ಪ ಗಾಯವಾದ್ರೆ ಸಾಕು, ಮನೆಯಿಂದ ಹೊರಹಾಕುವ ಜನರೇ ಹೆಚ್ಚು. ಆದ್ರೆ ಅಂತಹ ಮೂಕಜೀವಿಗಳ ಪಾಲಿಗೆ ಕೋಟೆನಾಡಿನ  ಯುವತಿಯೊಬ್ಬರು ಸಂಕಷ್ಟಕ್ಕೆ ಮರುಗುವ ವಾತ್ಸಲ್ಯಮಯಿ ಎನಿಸಿದ್ದಾರೆ. ಅಷ್ಟಕ್ಕೂ ಆ ಯುವತಿ ಮಾಡ್ತಿರೋ ಮಹತ್ಕಾರ್ಯವಾದ್ರೂ ಏನಂತೀರ.

ನೋಡಿ ಹೀಗೆ ಗಾಯಗೊಂಡು, ನರಳುತ್ತಾ ಬೀದಿಯಲ್ಲಿ ಸುತ್ತುತ್ತಿರೊ ಬಿಡಾಡಿ ದನಕರು, ಬೀದಿನಾಯಿ, ಕುದುರೆ ಹಾಗು ಹಾವು. ಅವುಗಳಿಗೆ ಸ್ವಲ್ಪವೂ ಅಳುಕಿಲ್ಲದೇ ಶುಶ್ರೂಷೆ ಮಾಡಿ ಆರೈಕೆ ಮಾಡ್ತಿರೋ ಯುವತಿ. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಕೋಟೆನಾಡು ಚಿತ್ರದುರ್ಗದ ಯುವತಿ ಸ್ಪೂರ್ತಿ. 

ಅಪ್ಪು ಧ್ಯಾನದಲ್ಲಿ ಕಾಲ ಕಳೆಯುತ್ತಿದ್ದಾರೆ ಕಾಲು ಸ್ವಾಧೀನವಿಲ್ಲದ ಅಣ್ಣ-ತಂಗಿ

ಹೌದು, ಈ ಯುವತಿ ಚಿಕ್ಕಂದಿನಿಂದಲೇ ಪ್ರಾಣಿ ಪ್ರೀತಿಯನ್ನು ಮೈಗೂಡಿಸಿಕೊಂಡಿದ್ದಾರೆ. ಹೆತ್ತವರಿಗೆ ಊಟ ಹಾಕದೇ ಹೊರ ಹಾಕುವ ಈ ಕಾಲದಲ್ಲಿ ಮೂಕ ವೇದನೆ ಅನುಭವಿಸುವ ಪ್ರಾಣಿಪಕ್ಷಿಗಳ ಪಾಲಿಗೆ ಈ ಯುವತಿ ಕರುಣಾಮಯಿ ಎನಿಸಿದ್ದಾರೆ. ಮೂಕ ಜೀವಿಗಳನ್ನು  ತನ್ನ ಸ್ವಂತ ಕುಟುಂಬದ ಸದಸ್ಯರಂತೆ ಕಾಣುವ ಈಕೆ, ಎಲ್ಲಿಯೇ ಪ್ರಾಣಿಪಕ್ಷಿಗಳಿಗೆ ಅಪಘಾತವಾದರೂ, ತಕ್ಷಣ ಅಲ್ಲಿಗೆ ಹಾಜಾರಾಗ್ತಾರೆ. ಗಾಯಗೊಂಡ ಮೂಕಜೀವಿಗಳ ವೇದನೆ ಅರ್ಥೈಸಿಕೊಂಡು, ನಿಸ್ವಾರ್ಥದಿಂದ ಚಿಕಿತ್ಸೆ ನೀಡ್ತಾರೆ. ಅವುಗಳ ಗಾಯ ಸಂಪೂರ್ಣ ಗುಣವಾಗುವವರೆಗೆ ಪ್ರೀತಿಯಿಂದ ಆಹಾರ ನೀಡಿ,ಚಿಕಿತ್ಸೆ ನೀಡಿ ಮಗುವಿನಂತೆ ಹಾರೈಕೆ ಮಾಡ್ತಾರೆ. ಇಲ್ಲಿಯವರೆಗೆ ಸಾವಿರಾರು ದನಕರುಗಳು, ನೂರಾರು ಬೀದಿ ನಾಯಿಗಳು ಹಾಗು  ಕುದುರೆಗಳು ಸೇರಿದಂತೆ ಅಪಾಯಕಾರಿ ಎನಿಸಿರೊ ಹಾವು ಹಾಗೂ ಹದ್ದಿಗೂ ಚಿಕಿತ್ಸೆ ನೀಡಿ ಅಪರೂಪದ ಆರೋಗ್ಯದಾತೆ ಎನಿಸಿದ್ದಾರೆ. ಹೀಗಾಗಿ ಆ ಪ್ರಾಣಿ, ಪಕ್ಷಿಗಳಿಗೂ ಕೂಡ ಈಕೆಯ ಕಂಡರೆ ಬಲು ಪ್ರೀತಿ.

ಸ್ಪೂರ್ತಿ, ಮೂಕಜೀವಿಗಳ ಆರೋಗ್ಯಧಾತೆ

ಇನ್ನು ಸ್ಪೂರ್ತಿಯ ನಿಸ್ವಾರ್ಥ ಸೇವೆ ಕಂಡು, ಪ್ರೇರಣೆ ಪಡೆದ ಜೈನ ಸಮುದಾಯದ 27 ಜನ ಯುವಕರು ಸಹ ಈಕೆಗೆ ಸಾಥ್ ನೀಡ್ತಿದ್ದಾರೆ. ಜೈನ್ ಪೀಪಲ್ ಫಾರ್ ಫೀಪಲ್ಸ್ ಅಂತ ಸಂಘಟನೆ ಕಟ್ಕೊಂಡು, ಬೀದಿಯಲ್ಲಿ ಅನಾಥವಾಗಿ ಬದುಕುವ ಪ್ರಾಣಿಗಳ ಪಾಲಿಗೆ ಆಶ್ರಯಧಾತರು ಎನಿಸಿದ್ದಾರೆ. ಅಲ್ಲದೆ ಕೋವಿಡ್ ಸಂಕಷ್ಟದ ವೇ ಳೆ‌ಸಹ ಮೂಕ ಜೀವಿಗಳಿಗೆ ಅಗತ್ಯ ಆಹಾರ, ಚಿಕಿತ್ಸೆ ಹಾಗೂ ಆರೈಕೆ ಮಾಡುವ ಮೂಲಕ ಆಹಾರವಿಲ್ಲದೇ ಮೂಕಜೀವಿಗಳು ಸಾವನ್ನಪ್ಪದಂತೆ ಎಚ್ಚರ ವಹಸಿದ್ದಾರೆ. ಇದೆಲ್ಲಾ ಸೇವೆಗೂ ಈ ಯುವಕರು ಹಾಗು ಯುವತಿ ತಮ್ಮ‌ಸ್ವಂತ ಹಣವನ್ನೇ ಬಳಸಿದ್ದೂ, ಕೋಟೆನಾಡಲ್ಲೊಂದು ಅನಿಮಲ್ ರೆಸ್ಕ್ಯೂ ಸೆಂಟರ್ ತೆರೆಯುವ ಮಹಾದಾಸೆ ಹೊಂದಿದ್ದಾರೆ. ಇದಕ್ಕೆ‌ ಸರ್ಕಾರ ಪ್ರೋತ್ಸಾಹಿಸಿದ್ರೆ ಮೂಕಜೀವಿಗಳ ಪಾಲನೆಗೊಂದು ಸ್ಪೂರ್ತಿ ಸಿಕ್ಕಂತಾಗುತ್ತದೆ ಎನ್ನುತ್ತಾರೆ ಜೈನ್ ಪೀಪಲ್ಸ್ ಫಾರ್ ಪೀಪಲ್ಸ್ ಸಂಘಟನೆಯ ಸದಸ್ಯ ದಿಲೀಪ್ ತಿಳಿಸಿದ್ದಾರೆ. 

ಒಟ್ಟಾರೆ ಅಪಘಾತದಲ್ಲಿ ಗಾಯಗೊಂಡು ಮೂಕವೇದನೆ ಅನುಭವಿಸುತಿದ್ದ ಪ್ರಾಣಿಪಕ್ಷಿಗಳ ಪಾಲಿಗೆ ಸ್ಪೂರ್ತಿ ವಾತ್ಸಲ್ಯಮಯ ತಾಯಿ ಎನಿಸಿದ್ದಾರೆ‌. ಹಾಗೆಯೇ ಕಷ್ಟಕಾಲದಲ್ಲಿ ಸ್ವಯಂ ಪ್ರೇರಿತಳಾಗಿ ಚಿಕಿತ್ಸೆ ನೀಡುವ ಈಕೆಯ ನಿಸ್ವಾರ್ಥ ಸೇವೆ ಇತರರಿಗೂ ಮಾದರಿ ಎನಿಸಿದೆ. 
 

click me!