ಭಾರತದ ಮೊತ್ತ ಮೊದಲ ಬಾರಿಗೆ ಸ್ಥಳೀಯವಾಗಿ ತಯಾರಿಸಿದ ಗರ್ಭಕಂಠದ ಕ್ಯಾನ್ಸರ್ ಲಸಿಕೆ ಬಿಡುಗಡೆಯಾಗಿದೆ. HPV ಜಾಬ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕೆಲವೊಂದು ವಿಷಯಗಳು ಇಲ್ಲಿದೆ.
ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ದೇಶೀಯವಾಗಿ ಅಭಿವೃದ್ಧಿಪಡಿಸಿದ ಕ್ವಾಡ್ರಿವಲೆಂಟ್ ಹ್ಯೂಮನ್ ಪ್ಯಾಪಿಲೋಮಾ ವೈರಸ್ (Human Papilloma Virus – HPV) ಲಸಿಕೆಯನ್ನು ಕೆಲವೇ ತಿಂಗಳುಗಳಲ್ಲಿ ಪ್ರಾರಂಭಿಸಲಾಗುವುದು ಎಂದು ತಿಳಿದುಬಂದಿದೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಲಸಿಕೆಯ ವೈಜ್ಞಾನಿಕ ಪೂರ್ಣಗೊಳಿಸುವಿಕೆಯನ್ನು ಘೋಷಿಸಲು ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಶೀಘ್ರವೇ ಲಸಿಕೆಯನ್ನು ಬಿಡುಗಡೆಗೊಳಿಸುವ ಬಗ್ಗೆ ಮಾಹಿತಿ ನೀಡಿದರು. ಲಸಿಕೆಗೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳು ಪೂರ್ಣಗೊಂಡಿವೆ. ಈಗ ಅವುಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವ ಮುಂದಿನ ಹಂತವು ನಡೆಯಲಿದೆ ಎಂದು ಕಾರ್ಯಕ್ರಮದಲ್ಲಿ ತಿಳಿಸಿದರು.
ಕೇವಲ 200-400 ರೂ.ಗೆ ಲಸಿಕೆ ಲಭ್ಯ
ಆಯುಷ್ಮಾನ್ ಭಾರತ್‌ನಂತಹ ಯೋಜನೆಗಳು ಆರೋಗ್ಯ (Health) ರಕ್ಷಣೆಯ ಬಗ್ಗೆ ಯೋಚಿಸುವಂತೆ ಮಾಡಿದೆ. ಜೈವಿಕ ತಂತ್ರಜ್ಞಾನ ಇಲಾಖೆಯು ಈ ವಿಷಯದಲ್ಲಿ ಮುಂದಾಳತ್ವ ವಹಿಸಿದೆ ಮತ್ತು ಸಹಕಾರಿ ಕ್ರಮಗಳನ್ನು ಕೈಗೊಂಡಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಹೇಳಿದರು. ಈ ಲಸಿಕೆ (Vaccine) ಕೈಗೆಟುಕುವ ದರದಲ್ಲಿ ಜನರಿಗೆ ಲಭ್ಯವಾಗಲಿದೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್‌ಐಐ) ಸಿಇಒ ಆದರ್ ಪೂನವಾಲಾ ಮಾತನಾಡಿ, ಗರ್ಭಕಂಠದ ಕ್ಯಾನ್ಸರ್ (cervical cancer) ಲಸಿಕೆ ಕೈಗೆಟುಕುವ ಬೆಲೆಯಲ್ಲಿದೆ. ಕೇವಲ 200-400 ರೂ. ಜನರಿಗೆ ಲಭ್ಯವಿರುತ್ತದೆ. ಅಂತಿಮ ಬೆಲೆಯನ್ನು ಇನ್ನೂ ನಿರ್ಧರಿಸಲಾಗಿಲ್ಲ ಎಂದು ಹೇಳಿದ್ದಾರೆ.
Women Health : ಮಹಿಳೆಯರನ್ನು ಹೆಚ್ಚಾಗಿ ಕಾಡುತ್ತೆ ಈ ಐದು ಕ್ಯಾನ್ಸರ್
200 ಮಿಲಿಯನ್ ಡೋಸ್ ಲಸಿಕೆ ತಯಾರಿಸುವ ಯೋಜನೆ
ವರ್ಷದ ಅಂತ್ಯದ ವೇಳೆಗೆ ಲಸಿಕೆಯನ್ನು ಪ್ರಾರಂಭಿಸಲಾಗುವುದು ಎಂದು ಪೂನಾವಾಲಾ ಹೇಳಿದ್ದಾರೆ. ಮೊದಲು ಲಸಿಕೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಾಗುವಂತೆ ಮಾಡಲಾಗುವುದು ಮತ್ತು ಮುಂದಿನ ವರ್ಷದಿಂದ ಕೆಲವು ಖಾಸಗಿ ಪಾಲುದಾರರು ಸಹ ಭಾಗಿಯಾಗಲಿದ್ದಾರೆ ಎಂದರು. 200 ಮಿಲಿಯನ್ ಡೋಸ್‌ಗಳನ್ನು ತಯಾರಿಸುವ ಯೋಜನೆ ಜಾರಿಯಲ್ಲಿದೆ ಎಂದು ತಿಳಿದುಬಂದಿದೆ. ಮೊದಲು ಲಸಿಕೆಯನ್ನು ಭಾರತದಲ್ಲಿ ನೀಡಲಾಗುವುದು ಮತ್ತು ನಂತರ ಅದನ್ನು ಇತರ ದೇಶಗಳಿಗೆ ರಫ್ತು ಮಾಡಲಾಗುವುದು ಎಂದು ಪೂನಾವಾಲಾ ಮಾಹಿತಿ ನೀಡಿದರು.
ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ಗರ್ಭಕಂಠದ ಕ್ಯಾನ್ಸರ್
ಸಿಎಸ್‌ಐಆರ್‌ನ ಮಹಾನಿರ್ದೇಶಕ ಡಾ ಎನ್ ಕಲೈಸೆಲ್ವಿ ಮಾತನಾಡಿ, ಇದು ಈ ಕ್ಷೇತ್ರದಲ್ಲಿ ಮೊದಲ ಸಂಶೋಧನೆಯಾಗಿದೆ ಎಂದರು.
ಈ ಲಸಿಕೆಗಾಗಿ ದೇಶಾದ್ಯಂತ 2000ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ರಾಜೇಶ್ ಗೋಖಲೆ ತಿಳಿಸಿದ್ದಾರೆ. ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್ 15 ರಿಂದ 44 ವರ್ಷ ವಯಸ್ಸಿನ ಮಹಿಳೆ (Woman)ಯರಲ್ಲಿ ಹೆಚ್ಚಾಗಿ ಕಂಡುಬರುವ ಎರಡನೇ ಕ್ಯಾನ್ಸರ್ ಆಗಿದೆ.ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಜುಲೈನಲ್ಲಿ SII ಗೆ ಗರ್ಭಕಂಠದ ಕ್ಯಾನ್ಸರ್‌ಗೆ ಲಸಿಕೆ ತಯಾರಿಸಲು ಮಾರುಕಟ್ಟೆ ಅಧಿಕಾರವನ್ನು ನೀಡಿದೆ.
ಬಯೋಟೆಕ್ನಾಲಜಿ ಇಲಾಖೆಯ ಕಾರ್ಯದರ್ಶಿ ರಾಜೇಶ್ ಗೋಖಲೆ ಮಾತನಾಡಿ, ಈ ಲಸಿಕೆಗಾಗಿ ದೇಶಾದ್ಯಂತ 2000 ಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸಿದ್ದರು ಎಂದು ಮಾಹಿತಿ ನೀಡಿದರು.
ಸ್ತನ ಕ್ಯಾನ್ಸರ್ ಎಂಬ ಆರೋಗ್ಯದ ಶತ್ರುವಿನ ಬಗ್ಗೆ ಮಿಸ್ ಮಾಡದೇ ಈ ವಿಷ್ಯ ತಿಳ್ಕೊಳಿ...
ಗರ್ಭಕಂಠದ ಕ್ಯಾನ್ಸರ್ ಎಂದರೇನು ?
ಹ್ಯೂಮನ್ ಪ್ಯಾಪಿಲೋಮಾವೈರಸ್ (ಎಚ್‌ಪಿವಿ) ಕಾರಣದಿಂದಾಗಿ ಈ ಕ್ಯಾನ್ಸರ್ ವೃದ್ಧಿಯಾಗುತ್ತದೆ. ಮಹಿಳೆಯ ಗರ್ಭಕೋಶದ ಕಂಠದ ಭಾಗದಲ್ಲಿ ಈ ಕ್ಯಾನ್ಸರ್ ಬೆಳೆಯುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಮಾಹಿತಿ ಪ್ರಕಾರ, 2018ರಲ್ಲಿ ಜಗತ್ತಿನಾದ್ಯಂತ ಅಂದಾಜು 5,70,000 ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ಕಾಯಿಲೆ ಪತ್ತೆಯಾಗಿತ್ತು. ಮಾತ್ರವಲ್ಲ ಅದೇ ಕಾರಣಗಳಿಂದಾಗಿ ಸುಮಾರು 3,11,000 ಮಹಿಳೆಯರು ಸಾವಿಗೀಡಾಗಿದ್ದರು. ಶೇಕಡಾ 50ರಷ್ಟು ಪ್ರಕರಣಗಳಲ್ಲಿ ಎಚ್‌ಪಿವಿಯ ಎರಡು ವಿಧಗಳು (16 ಮತ್ತು 18) ಕಾರಣವಾಗಿವೆ. ಸಾಮಾನ್ಯವಾದ ರೋಗ ನಿರೋಧಕ ವ್ಯವಸ್ಥೆ ಹೊಂದಿರುವ ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ಬೆಳವಣಿಗೆಯಾಗಲು 15ರಿಂದ 20 ವರ್ಷ ಬೇಕಾಗುತ್ತದೆ. ಆದರೆ, ರೋಗ ನಿರೋಧಕ ಶಕ್ತಿ ದುರ್ಬಲ ಆಗಿರುವ ಮಹಿಳೆಯರಲ್ಲಿ ಐದರಿಂದ 10 ವರ್ಷಗಳಲ್ಲಿ ಕ್ಯಾನ್ಸರ್ ಬೆಳೆಯುತ್ತದೆ