
ಆಮೀರ್ ಖಾನ್ ಅಭಿನಯದ ಪಿಕೆ ಚಿತ್ರದಲ್ಲಿ, ಡಾನ್ಸಿಂಗ್ ಕಾರಿನ ಬಗ್ಗೆ ಒಂದು ದೃಶ್ಯವಿದೆ. ಈ ಚಿತ್ರ ನೋಡಿದವರಿಗೆ ಅದು ನೆನಪಿರಬಹುದು. ಇದರಲ್ಲಿ, ಕಾರಿನ ಒಳಗೆ ಮಹಿಳೆ ಮತ್ತು ಪುರುಷನೊಬ್ಬ ಸೇರಿಕೊಂಡು ಸೆ*ಕ್ಸ್ನಲ್ಲಿ ತೊಡಗಿಸಿಕೊಂಡಿರೋದು. ಆಗ ಕಾರು ಜಂಪ್ ಆಗುತ್ತಿರುತ್ತದೆ. ಇದನ್ನು ನೋಡಿ ಆಮೀರ್ ಖಾನ್, ಕಾರು ಏಕೆ ಡಾನ್ಸ್ ಮಾಡುತ್ತಿದೆ ಎಂದು ಕುತೂಹಲದಿಂದ ನೋಡುತ್ತಾರೆ. ಆದರೆ ಇದು ಚಿತ್ರದ ಕಲ್ಪನೆ ಎಂದುಕೊಂಡರೆ ಅದು ಶುದ್ಧ ತಪ್ಪು. ರೆಡ್ಲೈಟ್ ಏರಿಯಾಗಳಲ್ಲಿ ಹೈಫೈ ಹುಡುಗಿಯರು ದುಡ್ಡಿನ ಆಸೆಗೆ, ಆಮಿಷ ಜೀವನಕ್ಕೆ ಆಸೆ ಬಿದ್ದು ಹೇಗೆ ಡಾನ್ಸಿಂಗ್ ಕಾರಿನಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎನ್ನುವ ಬಗ್ಗೆ ಶಾಕಿಂಗ್ ವಿಷ್ಯವನ್ನು ರಿವೀಲ್ ಮಾಡಿದ್ದಾರೆ ಸಾಮಾಜಿಕ ಕಾರ್ಯಕರ್ತೆಯಾಗಿರುವ ಅತುಲ್ ಶರ್ಮಾ.
ಮುಂಬೈನ ರೆಡ್ಲೈಟ್ ಏರಿಯಾದ ಬಗ್ಗೆ ಅವರು ಮಾತನಾಡಿದ್ದಾರೆ. ಒಂದೆಡೆ ಕೆಲಸದ ಆಮಿಷ ಒಡ್ಡಿ ಅಥವಾ ಕಿಡ್ನ್ಯಾಪ್ ಮಾಡಿಕೊಂಡು ಬಂದು ದಲ್ಲಾಳಿಗಳು ಈ ಕೂಪದಲ್ಲಿ ಮಕ್ಕಳನ್ನು, ಯುವತಿಯರನ್ನು ತಳ್ಳುವುದು ಇದೆ. ಅದೆಂಥ ಭಯಾನಕ ಸ್ಥಳ, ಅಲ್ಲಿ ಹೋದ ಹೆಣ್ಣುಮಕ್ಕಳ ಕಥೆ ಏನು ಎಂಬ ಬಗ್ಗೆ ಭೀಕರತೆಯನ್ನು ಹೇಳಿದ್ದಾರೆ ಅತುಲ್ ಅವರು. ಆದರೆ ಇದೇ ವೇಳೆ, ಮನೆಯಲ್ಲಿ ಆಫೀಸ್ಗೆ ಹೋಗುವುದಾಗಿ ಹೇಳಿ, ಇಂಥ ಏರಿಯಾಗಳಲ್ಲಿ ನಿಲ್ಲುವ ಹೈಫೈ ಮಾಡರ್ನ್ ಲೇಡಿಗಳ ಬಗ್ಗೆಯೂ ಅವರು ಮಾತನಾಡಿದ್ದಾರೆ. ಒಳ್ಳೆಯ ಉದ್ಯೋಗ ಸಿಕ್ಕಿದೆ ಎಂದು ಮನೆಯಲ್ಲಿ ಹೇಳಿರುತ್ತಾರೆ. ಆದರೆ ಕತ್ತಲಾಗುತ್ತಿದ್ದಂತೆಯೇ ಅವರು ಹೋಗುವುದು ರೆಡ್ಲೈಟ್ ಏರಿಯಾಗಳಿಗೆ ಎನ್ನುತ್ತಲೇ ಅಲ್ಲಿಯ ಭಯಾನಕ ಕಥೆಯನ್ನು ಅವರು ವಿವರಿಸಿದ್ದಾರೆ.
ಇವರನ್ನು ನೋಡುವವರೇ ಇರುವುದಿಲ್ಲ. ಹೈಫೈ ಚೆಲುವೆಯರು ಇಲ್ಲಿಯೇ ಸಿಗುತ್ತಾರೆ ಎನ್ನುವುದು ಕೆಲವರಿಗೆ ತಿಳಿದಿರುತ್ತದೆ. ಅವರು ಅಲ್ಲಿಗೆ ಕಾರಿನಲ್ಲಿ ಬರುತ್ತಾರೆ. ಐಷಾರಾಮಿ ಜೀವನ ಬಯಸುವ ಈ ಚೆಲುವೆಯರ ಕೈಗೆ ಒಂದಿಷ್ಟು ಇಡುತ್ತಾರೆ. ಕಾರಿನ ಒಳಗೆ ಹುಡುಗಿಯರ ಪ್ರವೇಶ ಆಗುತ್ತಿದ್ದಂತೆಯೇ ಕಾರು ಕುಣಿಯಲು ಶುರು ಮಾಡುತ್ತದೆ. ತಮ್ಮ ಕೆಲಸ ಮುಗಿಸಿ ಅವರು ಹೋದರೆ, ಇನ್ನೊಬ್ಬರು ಬರುವವರೆಗೆ ಈ ಹುಡುಗಿಯರು ಕಾಯುತ್ತಾರೆ. ಇದು ಬಹುದೊಡ್ಡ ದಂಧೆಯಾಗಿ ಬೆಳೆದಿದೆ. ಸುಲಭದಲ್ಲಿ ದುಡ್ಡು ಮಾಡುವ, ಐಷಾರಾಮಿ ಜೀವನ ನಡೆಸುವ ಮಾರ್ಗ ಇದಾಗಿದೆ. ಇಂಥ ಕೆಲಸ ದೊಡ್ಡ ಮಟ್ಟದಲ್ಲಿಯೇ ನಡೆಯುತ್ತಿದೆ ಎಂದು ಅತುಲ್ ಅವರು ವಿವರಿಸಿದ್ದಾರೆ.
ಅಷ್ಟಕ್ಕೂ, ಇವರು ಮುಂಬೈನ ಕಥೆ ಹೇಳಿದ್ದಾರಷ್ಟೇ. ಬೆಂಗಳೂರಿನಂಥ ಬಹುತೇಕ ಎಲ್ಲಾ ಮಹಾನಗರಗಳಲ್ಲಿಯೂ ಈ ಕೆಲಸ ಅವ್ಯಾಹತವಾಗಿ ನಡೆಯುತ್ತಲೇ ಸಾಗಿದೆ. ಸುಲಭದಲ್ಲಿ ದುಡ್ಡು ಮಾಡುವ ಮಾರ್ಗ ಕಂಡುಕೊಳ್ಳುವ ಈ ಹುಡುಗಿಯರು ಇಂಥ ಕೃತ್ಯಕ್ಕೆ ಇಳಿಯುತ್ತಿದ್ದಾರೆ. ಐಷಾರಾಮಿ ಜೀವನವನ್ನು ಸಾಗಿಸಲು ಇದಕ್ಕಿಂತ ಸುಲಭ ಮಾರ್ಗ ಅವವರಿಗೆ ಮತ್ತೊಂದು ಸಿಗುವುದಿಲ್ಲ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.