ಸೆಲೆಬ್ರಿಟಿಗಳನ್ನು ಜನಸಾಮಾನ್ಯರು ಫಾಲೋ ಮಾಡುತ್ತಾರೆ. ಅವರಂತೆ ಮೇಕಪ್ ಮಾಡಿಕೊಳ್ಳಲು, ಡ್ರೆಸ್ ಧರಿಸಲು ಇಷ್ಟಪಡುತ್ತಾರೆ. ಆದ್ರೆ ಇಲ್ಲೊಬ್ಬಾಕೆ ಸ್ವತಃ ಸೆಲೆಬ್ರಿಟಿಯಂತಾಗಲು ಪ್ರಯತ್ನಿಸಿ ಬರೋಬ್ಬರಿ 40 ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳೆ. ಅದ್ರಿಂದ ಆಗಿದ್ದೇನು. ಇಲ್ಲಿದೆ ಸಂಪೂರ್ಣ ಮಾಹಿತಿ.
ಸೆಲೆಬ್ರಿಟಿಗಳೆಂದರೆ ಜನಸಾಮಾನ್ಯರಿಗೆ ಅದೇನೋ ಖುಷಿ. ಅವರ ಲೈಫ್‌ಸ್ಟೈಲ್, ಆಹಾರಪದ್ಧತಿ, ಡ್ರೆಸ್ಸಿಂಗ್, ಮೇಕಪ್ ಸ್ಟೈಲ್ ಎಲ್ಲವನ್ನೂ ಕಾಪಿ ಮಾಡಲು ಯತ್ನಿಸುತ್ತಾರೆ. ಈ ಮೂಲಕ ತಾವು ಕೂಡಾ ಅವರಂತೆ ಕಾಣುತ್ತಿದ್ದೇವೆ ಎಂಬ ಭಾವನೆಯಲ್ಲಿ ಹಿರಿಹಿರಿ ಹಿಗ್ಗುತ್ತಾರೆ. ಆದ್ರೆ ಇಲ್ಲೊಬ್ಬಾಕ್ಕೆ ಸೆಲಿಬ್ರಿಟಿಗಳನ್ನು ಜಸ್ಟ್ ಕಾಪಿ ಮಾಡಲು ಹೋಗಿಲ್ಲ. ಬದಲಾಗಿ ಅವರಂತೆಯೇ ಆಗಲು ಬಯಸಿದ್ದಾಳೆ. ಇದಕ್ಕಾಗಿ ಬರೋಬ್ಬರಿ 40 ಬಾರಿ ಪ್ಲಾಸ್ಟಿಕ್ ಸರ್ಜರಿಯನ್ನೂ ಮಾಡಿಸಿಕೊಂಡಿದ್ದಾಳೆ. ಇದ್ರಿಂದ ಆಗಿರೋದೇನು ಎಂಬುದನ್ನು ತಿಳ್ಕೊಳ್ಳಿ.
ಕಿಮ್ ಕರ್ದಾಶಿಯಾನ್‌ನಂತೆ ಕಾಣಲು 40 ಬಾರಿ ಪ್ಲಾಸ್ಟಿಕ್ ಸರ್ಜರಿ
ಫ್ಯಾಷನ್ ಜಗತ್ತಿನಲ್ಲಿ ಕಿಮ್ ಕರ್ದಾಶಿಯಾನ್ (Kim Kardashian) ಅವರ ಖ್ಯಾತಿ ದೊಡ್ಡದು. ನಟಿಯಾಗಿ, ಮಾಡೆಲ್ ಆಗಿ, ಉದ್ಯಮಿಯಾಗಿಯೂ ಅವರು ಫೇಮಸ್ ಆಗಿದ್ದಾರೆ. ಸಿಕ್ಕಾಪಟ್ಟೆ ಹಾಟ್ ಅವತಾರದಲ್ಲಿ ಅವರು ಗಮನ ಸೆಳೆಯುತ್ತಾರೆ. ಹಲವು ಯುವತಿಯರು ಇವರನ್ನು ಕಂಡು ತಾವೂ ಹಾಗೆಯೇ ಇರಬೇಕೆಂದು ಅಂದುಕೊಳ್ಳುತ್ತಾರೆ. ಅದೇ ರೀತಿ ಲಾಸ್ ಏಂಜಲೀಸ್‌ನ ಜೆನ್ನಿಫರ್ ಪ್ಯಾಂಪ್ಲೋನಾ, ತನ್ನನ್ನು ತಾನು ಕಿಮ್ ಕಾರ್ಡಶಿಯನ್ ಲುಕ್‌ಲೈಕ್ ಆಗಿ ಪರಿವರ್ತಿಸಲು ಯತ್ನಿಸಿದ್ದಾರೆ. ಜೆನಿಫರ್ ಪಂಪ್ಲೋನಾ ಅವರು ಸತತ 12 ವರ್ಷಗಳ ಕಾಲ 40 ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡರು. ಅವರ ದೇಹದ ವಿವಿಧ ಅಂಗಗಳಿಗೆ ಆಪರೇಷನ್ ಮಾಡಲಾಯಿತು.
ಸ್ತನದಲ್ಲಿ ಕಾಣಿಸುವ ಇಂಥ ಸಮಸ್ಯೆಗೇನೂ ಟೆನ್ಷನ್ ಮಾಡಿಕೊಳ್ಳೋದು ಬೇಡ!
ರೂಪ ಪರಿವರ್ತನೆಗೆ ಬರೋಬ್ಬರಿ 4.7 ಕೋಟಿ ರೂಪಾಯಿ ಖರ್ಚು !
ಜೆನಿಫರ್ ಪಂಪ್ಲೋನಾ (Jennifer Pamplona) ಎಂಬ ಮಾಡೆಲ್ ಕಿಮ್ ಕರ್ದಾಶಿಯಾನ್ ರೀತಿಯ ತಮ್ಮ ರೂಪ ಪರಿವರ್ತನೆಗೆ ಬರೋಬ್ಬರಿ 4.7 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. 40 ಬಾರಿ ಪ್ಲಾಸ್ಟಿಕ್ ಸರ್ಜರಿ (Plastic Surgery)ಯನ್ನೂ ಮಾಡಿಸಿಕೊಂಡಿದ್ದಾರೆ. ಜೆನಿಫರ್ ಪಂಪ್ಲೋನಾ ಅವರಿಗೆ ಈಗ 29 ವರ್ಷ ವಯಸ್ಸು. ಅವರಿಗೆ ಕಿಮ್ ಕರ್ದಾಶಿಯನ್ ಎಂದರೆ ಎಲ್ಲಿಲ್ಲದಷ್ಟು ಇಷ್ಟ. ತಮ್ಮ ನೆಚ್ಚಿನ ನಟಿಯ ರೀತಿ ತಾವೂ ಆಗಬೇಕು ಎಂಬ ಆಸೆ ಅವರ ಮನದಲ್ಲಿ ಮೂಡಿದ್ದೇ ತಡ, ಪ್ಲಾಸ್ಟಿಕ್ ಸರ್ಜರಿ ಮಾಡಿಕೊಳ್ಳಲು ಮುಂದಾದರು. 17ನೇ ವಯಸ್ಸಿನಲ್ಲಿ ಇದ್ದಾಗಲೇ ಸರ್ಜರಿ ಶುರು ಆಯಿತು. ಸತತ 12 ವರ್ಷಗಳ ಕಾಲ ಅವರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡರು. ದೇಹದ ವಿವಿಧ ಅಂಗಗಳಿಗೆ ಆಪರೇಷನ್ ಮಾಡಲಾಯಿತು.
ಆದರೆ ಹಲವಾರು ಸರ್ಜರಿಯ ಬಳಿಕ ಕಿಮ್ ಕರ್ದಾಶಿಯಾನ್ ಲುಕ್ ಸಿಕ್ಕರೂ ಜೆನಿಫರ್‌ಗೆ ಖುಷಿಯಾಗಿಲ್ಲ. ಬದಲಿಗೆ ಮರಳಿ ಮಾಮೂಲಿ ರೂಪಕ್ಕೆ ಬರಬೇಕು ಅನಿಸಲು ಶುರುವಾಗಿದೆ. ಎಲ್ಲರೂ ನನ್ನನ್ನು ಕಿಮ್ ಕರ್ದಾಶಿಯಾನ್ ಎಂದು ಕರೆಯುವುದು ನನಗೆ ಇಷ್ಟವಾಗುತ್ತಿಲ್ಲ ಎಂದು ಜೆನಿಫರ್ ಹೇಳಿಕೊಂಡಿದ್ದಾರೆ.
ರೂಪ ಬದಲಾದ ನಂತರ ಹೆಚ್ಚಿತು ಜನಪ್ರಿಯತೆ
ಕಿಮ್ ಕರ್ದಾಶಿಯಾನ್ ರೀತಿ ಕಾಣುತ್ತಾರೆ ಎಂಬ ಕಾರಣದಿಂದಾಗಿ ಜೆನಿಫರ್ ಪಂಪ್ಲೋನಾ ಅವರ ಜನಪ್ರಿಯತೆ ಹೆಚ್ಚಿತು. ಸೋಷಿಯಲ್ ಮೀಡಿಯಾದಲ್ಲಿ ಅವರನ್ನು ಫಾಲೋ ಮಾಡುವವರ ಸಂಖ್ಯೆಯೂ ಹೆಚ್ಚಾಯಿತು. ಆದರೆ ಅವರು 40 ಬಾರಿ ಪ್ಲಾಸ್ಟಿಕ್ ಸರ್ಜರಿಗೆ ಒಳಗಾದ ಪರಿಣಾಮ ಅವರ ಆರೋಗ್ಯದಲ್ಲಿ ಏರುಪೇರು ಆಯಿತು. ಅಲ್ಲದೆ, ಜನರು ನನ್ನನ್ನು ಕಿಮ್ ಕರ್ದಾಶಿಯಾನ್ ಎಂದು ಕರೆಯುತ್ತಾರೆ ಮತ್ತು ಅದು ಕಿರಿಕಿರಿಯಾಗಲು ಪ್ರಾರಂಭಿಸಿತು. ನಾನು ಕೆಲಸ ಮಾಡಿದ್ದೇನೆ ಮತ್ತು ಅಧ್ಯಯನ ಮಾಡಿದ್ದೇನೆ ಮತ್ತು ಉದ್ಯಮಿಯಾಗಿದ್ದೆ. ನಾನು ಈ ಎಲ್ಲಾ ಕೆಲಸಗಳನ್ನು ಮಾಡಿದ್ದೇನೆ ಮತ್ತು ನನ್ನ ವೈಯಕ್ತಿಕ ಜೀವನದಲ್ಲಿ ಈ ಎಲ್ಲಾ ಸಾಧನೆಗಳನ್ನು ಹೊಂದಿದ್ದೇನೆ, ಆದರೆ ನಾನು ಕಾರ್ಡಶಿಯನ್‌ನಂತೆ ಕಾಣುತ್ತಿದ್ದರಿಂದ ಮಾತ್ರ ನನ್ನನ್ನು ಗುರುತಿಸಲಾಗುತ್ತಿದೆ ಎಂದು ಜೆನಿಫರ್ ಬೇಸರದಿಂದ ಹೇಳಿಕೊಂಡಿದ್ದಾರೆ.
ಪ್ರೆಗ್ರೆನ್ಸಿ ಟೆಸ್ಟ್ ಕಿಟ್ ಸರಿಯಾದ ರೀತಿಯಲ್ಲಿ ಬಳಸೋದು ಹೇಗೆ ?
ಮೊದಲಿನಂತಾಗಲು ಮತ್ತೆ ಸರ್ಜರಿ ಮಾಡಿಸಿಕೊಳ್ತಿರೋ ಯುವತಿ
ತನಗೆ ದೇಹ ಡಿಸ್ಮಾರ್ಫಿಯಾ ಇದೆ ಎಂದು ಅರಿತುಕೊಳ್ಳುವ ಮೊದಲು ತಾನು ಹಲವಾರು ವರ್ಷಗಳಿಂದ ಅಸಮಾಧಾನಗೊಂಡಿದ್ದೇನೆ ಮತ್ತು ತನ್ನ ಸಹಜ ನೋಟಕ್ಕೆ ಮರಳಲು ಬಯಸುತ್ತೇನೆ ಎಂದು ಪ್ಯಾಂಪ್ಲೋನಾ ಹೇಳಿಕೊಂಡಿದ್ದಾಳೆ. ಈಗ ಜೆನಿಫರ್ ಪಂಪ್ಲೋನಾಗೆ ವಾಸ್ತವ ಅರಿವಾಗಿದೆ. ಹಾಗಾಗಿ ತಾವು ಮತ್ತೆ ಮೊದಲಿನಂತೆ ಕಾಣಬೇಕು ಎಂದು ಪುನಃ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗುತ್ತಿದ್ದಾರೆ. ಅದೇನೆ ಇರ್ಲಿ ರೂಪ ಬದಲಾವಣೆಗೆ ಯುವತಿ ಕೋಟಿ ಕೋಟಿ ಖರ್ಚು ಮಾಡಿರುವುದು ಮಾತ್ರ ವಿಪರ್ಯಾಸವೇ ಸರಿ.