50ನೇ ವಯಸ್ಸಿನಲ್ಲಿ ನಾನು ಒಳ ಉಡುಪು ಮಾಡೆಲ್ ಆದೆ!

By Suvarna NewsFirst Published Dec 21, 2022, 2:28 PM IST
Highlights

ಆಕೆಗೆ ಮಾಡೆಲ್ ಆಗುವ ಆಸೆಯಿತ್ತು. ಆದರೆ 50ನೇ ವಯಸ್ಸಿನವರೆಗೂ ಅದು ಸಾಧ್ಯವಾಗಲೇ ಇಲ್ಲ. 50ನೇ ವಯಸ್ಸಿನಲ್ಲಿ ಈಕೆ ಮಾಡೆಲ್ ಆದಳು- ಅದೂ ಒಳ ಉಡುಪಿನ ಮಾಡೆಲ್! ಈಕೆಯ ಕುತೂಹಲಕಾರಿ ಕತೆ ಆಕೆಯೇ ಹೇಳಿಕೊಂಡಂತೆ ಇಲ್ಲಿದೆ.

“ನಾನು ಚಿಕ್ಕ ಹುಡುಗಿಯಾಗಿದ್ದಾಗಿನಿಂದ ಮಾಡೆಲ್ ಆಗಬೇಕೆಂದು ಕನಸು ಕಂಡಿದ್ದೆ. ಆಗ ನಾನು ಮುದ್ದಾಗಿದ್ದೆ. ನನ್ನನ್ನು ನೋಡಿದ ಜನ 'ಮಾಡೆಲಿಂಗ್ ಕರೋ, ಫಿಲ್ಮೋ ಮೇ ಜಾವೋ' ಎಂದೆಲ್ಲಾ ಹೇಳುತ್ತಿದ್ದರು.

ಆದರೆ ಆಗ ಹೆಣ್ಣುಮಕ್ಕಳು ಮನೆಯಲ್ಲೇ ಇರಬೇಕಿತ್ತು. ಅವರು ಕೆಲಸ ಮಾಡಬೇಕಾದರೆ ಅದು ‘ಗೌರವಾನ್ವಿತ ಕೆಲಸ’ ಆಗಿರಬೇಕಿತ್ತು. ಹಾಗಾಗಿ ನಾಟಕಗಳಲ್ಲಿ ಭಾಗವಹಿಸಲು ಗುಟ್ಟಾಗಿ ಓಡಾಡತೊಡಗಿದೆ. ನಾನು ನಟಿಯರಾದ ಜೀನತ್ ಅಮಾನ್ ಮತ್ತು ಪರ್ವೀನ್ ಬಾಬಿಯನ್ನು ಅನುಕರಿಸಲು ಪ್ರಯತ್ನಿಸುತ್ತಿದ್ದೆ. ನನಗೆ ಗುಜರಾತಿ ಚಲನಚಿತ್ರದಲ್ಲಿ ಆಫರ್ ಕೂಡ ಸಿಕ್ಕಿತು. ಅದಕ್ಕೆ ನಾನು ತುಂಬಾ ಉತ್ಸುಕಳಾಗಿದ್ದೆ, ಆದರೆ ಅಪ್ಪನಿಗೆ ತಿಳಿದಾಗ ಅವರು ''ಒಳ್ಳೇ ಮನೆಯ ಹುಡುಗಿಯರು ಇಂಥದ್ದನ್ನೆಲ್ಲಾ ಮಾಡಲ್ಲ'' ಎಂದು ಹೇಳಿದರು. ನಾನು ಬಂಡಾಯ ಏಳಲು ಬಯಸಲಿಲ್ಲ. ಹೀಗಾಗಿ ನಾನು ನನ್ನ ಕನಸುಗಳನ್ನು ತೊರೆದುಬಿಟ್ಟೆ.

ನಾನು ಪದವಿ, ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದೆ. ನಂತರ ಒಂದು ಕಂಪನಿಯ ನಿರ್ವಾಹಕ ಅಧಿಕಾರಿಯಾಗಿ ಕೆಲಸ ಸಿಕ್ಕಿತು. ಅಲ್ಲಿ ನಾನು ನನ್ನ ಭಾವಿ ಗಂಡನನ್ನು ಭೇಟಿಯಾದೆ. ನಾವು ಪ್ರೀತಿಸಿ ಮದುವೆಯಾದೆವು. ನಾನು ನನ್ನ ಕೆಲಸವನ್ನು ಬಿಟ್ಟು ಫುಲ್‌ಟೈಮ್ ಗೃಹಿಣಿಯಾದೆ. ನಾನು ಒಳ್ಳೆಯ ಹೆಂಡತಿಯಾಗಲು ಮತ್ತು ಒಳ್ಳೆಯ ತಾಯಿಯಾಗಿರಲು ಯತ್ನಿಸಿದೆ. ಅದಕ್ಕೆ ಎಷ್ಟು ಸಮರ್ಪಿತಳಾಗಿದ್ದೆ ಎಂದರೆ ನನ್ನ ಜೀವನವು ಅವರ ಸುತ್ತಲೇ ಸುತ್ತುತ್ತಿತ್ತು. ನಾನು ನನ್ನ ಅಸ್ಮಿತೆಯನ್ನೇ ಕಳೆದುಕೊಂಡಂತಿದ್ದೆ. 

 

ಆದರೆ ಮದುವೆಯಾದ 20 ವರ್ಷಗಳ ನಂತರ, ನಾನು ಶಿಕ್ಷಕಿಯ ಕೆಲಸಕ್ಕೆ ಅರ್ಜಿ ಸಲ್ಲಿಸಿದೆ. ಆದರೆ ಆಗ ನನಗೆ 45 ವರ್ಷ ವಯಸ್ಸಾಗಿತ್ತು. ಹೀಗಾಗಿ ಅದು ಕಷ್ಟಕರವಾಗಿತ್ತು. ಅವರಿಗೆ ‘ಯುವ ಶಿಕ್ಷಕರು’ ಬೇಕಾಗಿತ್ತು, ಆದರೆ ನಾನು ಕೆಲಸ ಗಿಟ್ಟಿಸಿಕೊಂಡೆ. ನಂತರ ‘ಅತ್ಯಂತ ಕ್ರಿಯಾಶೀಲ ಶಿಕ್ಷಕಿ’ ಪ್ರಶಸ್ತಿಯನ್ನು ಗೆದ್ದು ಅವರ ಅಭಿಪ್ರಾಯ ತಪ್ಪು ಎಂದು ಸಾಬೀತುಪಡಿಸಿದೆ!

ಒಮ್ಮೆ, ಆನ್‌ಲೈನ್‌ನಲ್ಲಿ ಸ್ಕ್ರೋಲ್ ಮಾಡುತ್ತಿರುವಾಗ, ‘ಏಜ್ ನೋ ಬಾರ್’ ಎಂಬ ಸೌಂದರ್ಯ ಸ್ಪರ್ಧೆಯ ಜಾಹೀರಾತು ನನ್ನ ಕಣ್ಣಿಗೆ ಬಿತ್ತು. ನಾನು ಕ್ಷಣವೂ ಯೋಚಿಸಲಿಲ್ಲ- ನಾನು ತಕ್ಷಣ ಅರ್ಜಿ ಸಲ್ಲಿಸಿದೆ. ನಾನು ಮಾಡೆಲ್ ಆಗಬೇಕು ಎಂದು ನನ್ನ ಕುಟುಂಬದವರಿಗೆ ಹೇಳಿದೆ- ಫ್ಯಾಮಿಲಿಯಿಂದ ತುಂಬಾ ಬೆಂಬಲ ಬಂತು. 

ನಾನು ಸ್ಪರ್ಧೆಗಾಗಿ ನನ್ನ ದೇಹವನ್ನು ಸ್ವಲ್ಪ ತಯಾರು ಮಾಡಿಕೊಂಡೆ. ಸ್ಪರ್ಧಿಸಿದೆ. ಮತ್ತು 1ನೇ ರನ್ನರ್ ಅಪ್ ಪ್ರಶಸ್ತಿಯನ್ನು ಮನೆಗೆ ತಂದೆ ! ನನ್ನ ಮಕ್ಕಳು ಹೇಳಿದರು- 'ಅಮ್ಮಾ, ನಾವು ನಿನ್ನ ಬಗ್ಗೆ ತುಂಬಾ ಹೆಮ್ಮೆಪಡುತ್ತೇವೆ.' ಇದರ ನಂತರವೂ ನಾನು ಇನ್ನೂ ಒಂದು ಸ್ಪರ್ಧೆಯಲ್ಲಿ ಭಾಗವಹಿಸಿದೆ ಮತ್ತು ಮತ್ತೆ ಗೆದ್ದೆ! ಮತ್ತು 50ನೇ ವಯಸ್ಸಿನಲ್ಲಿ, ನಾನು ನನ್ನ ಮಾಡೆಲಿಂಗ್ ಪ್ರೊಫೈಲ್ ಅನ್ನು ಕ್ರಿಯೇಟ್ ಮಾಡಿದೆ. ಆದರೆ ಬ್ರ್ಯಾಂಡ್‌ಗಳು ಹಳೆಯ ಮಾಡೆಲ್ ಅನ್ನು ಬಯಸಲಿಲ್ಲ. ಅವರು ಸಣ್ಣ ವಯಸ್ಸಿನ ಮಾಡೆಲ್‌ಗಳನ್ನು  ಬಯಸಿದ್ದರು.

Woman Health: ಎರಡನೇ ಬಾರಿ ಅಮ್ಮನಾಗ್ತಿದ್ರೆ ನಿರ್ಲಕ್ಷ್ಯ ಬೇಡ

ಇದರ ನಡುವೆ, ಹುಡುಕಾಡುತ್ತಾ ಇದ್ದಾಗ, ಒಳ ಉಡುಪು ಕಂಪನಿಗಳು ಯಾವಾಗಲೂ ಸಣ್ಣ ವಯಸ್ಸಿನ ಮಾಡೆಲ್‌ಗಳನ್ನು ಬಳಸುತ್ತಿವೆ ಎಂಬುದನ್ನು ಕಂಡುಕೊಂಡೆ. ಪ್ಲಸ್ ಗಾತ್ರದವರ ವಿಭಾಗವಿದೆ, ಆದರೆ ವಯಸ್ಸಾದ ಮಹಿಳೆಯರಿಗೆ ಏನೂ ಇಲ್ಲ. ವಯಸ್ಸಾದ ಮಾಡೆಲ್‌ಗಳೂ ಇಲ್ಲ. ಹೀಗಾಗಿ ಇದು ಒಳ ಉಡುಪು ಮಾಡೆಲ್ ಆಗುವ ನನ್ನ ಆಸೆಯನ್ನು ಹೆಚ್ಚಿಸಿತು. ಒಂದು ಸ್ಟಾರ್ಟಪ್ ಕಂಪನಿ ನನ್ನ ಬಳಿಗೆ ಬಂತು, ಆದರೆ ನಾನು ಹತ್ತಿಯ ಬಟ್ಟೆಯ ಬ್ರಾ ಮಾಡೆಲ್ ಆಗಬೇಕೆಂದು ಅವರು ಬಯಸಿದ್ದರು, ಫ್ಯಾಶನೇಟ್ ಒಳ ಉಡುಪುಗಳು 50 ವರ್ಷ ವಯಸ್ಸಿನವರನ್ನು ಗುರಿಯಾಗಿ ಇಟ್ಟುಕೊಂಡಿರಲೇ ಇಲ್ಲ! 

ಹೀಗಾಗಿ ನಾನೇ ಶೂಟ್ ಮಾಡಿ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದೆ. ಪ್ರತಿಕ್ರಿಯೆ ಅಗಾಧವಾಗಿತ್ತು. ನನ್ನ ಆತ್ಮವಿಶ್ವಾಸಕ್ಕಾಗಿ ಹೆಚ್ಚಿನ ಜನರು ನನ್ನನ್ನು ಶ್ಲಾಘಿಸಿದರು, ಆದರೆ ಕೆಲವರು ಈ ವಯಸ್ಸಿನಲ್ಲಿ ಇದು ಸರಿಯಲ್ಲ ಎಂದು ಕಾಮೆಂಟ್ ಮಾಡಿದರು. ಇದು ತುಂಬಾ ಬೂಟಾಟಿಕೆಯಲ್ಲವೇ? ಏಕೆಂದರೆ ಸಲ್ಮಾನ್ ಖಾನ್ 50ನೇ ವಯಸ್ಸಿನಲ್ಲಿ ಶರ್ಟ್ ಇಲ್ಲದೆ ತಿರುಗಾಡುವಾಗ, ನಾನು ಈ ವಯಸ್ಸಿನಲ್ಲಿ ಲಿಂಗರಿ ಮಾಡೆಲ್ ಆದರೆ ಹೇಗೆ ತಪ್ಪಾಗುತ್ತದೆ? ಇದು ನಾಚಿಕೆಗೇಡಿನ ಸಂಗತಿಯೇ?

‘ಸುಶಿಕ್ಷಿತ’ ಆಪ್ತ ಸ್ನೇಹಿತರೊಬ್ಬರು ‘ನೀವೇನು ಮಾಡುತ್ತಿದ್ದೀರಿ?’ ಎಂದು ಕೇಳಿದರು. ನಾನು ಇತರರು ಏನು ಹೇಳುತ್ತಾರೆ ಎಂಬುದರ ಬಗ್ಗೆ ಯಾವಾಗಲೂ ಕಾಳಜಿ ವಹಿಸುತ್ತೇನೆ. 50ನೇ ವಯಸ್ಸಿನಲ್ಲಿ ನಾನು 15ನೇ ವಯಸ್ಸಿನಿಂದ ಕಂಡ ಕನಸನ್ನು ನಾನು ನನಸಾಗಿಸಿಕೊಂಡೆ, ಏಕೆಂದರೆ ವಯಸ್ಸು ಯಾರಿಗೂ ಪಂಜರವಲ್ಲ, ಪಂಜರವಾಗಬಾರದು. ಕನಸುಗಳಿಗೂ ಎಕ್ಸ್‌ಪೈರಿ ಡೇಟ್ ಇರುವುದಿಲ್ಲ ನೋಡಿ!

ವಿಶ್ವದ Ugly Woman ಯಾರು ಗೊತ್ತಾ? ಅದ್ಯಾಕೆ ಇವರನ್ನು ಕುರೂಪಿ ಅಂತಾರೆ?

 

click me!