Sarojini Naidu Death Anniversary: ಗಾಂಧಿಯನ್ನು ಮಿಕ್ಕಿ ಮೌಸ್ ಎಂದು ಕರೆದಿದ್ದ ಸರೋಜಿನಿ ನಾಯ್ಡು!

Suvarna News   | Asianet News
Published : Mar 02, 2022, 02:12 PM ISTUpdated : Mar 02, 2022, 02:23 PM IST
Sarojini Naidu Death Anniversary: ಗಾಂಧಿಯನ್ನು ಮಿಕ್ಕಿ ಮೌಸ್ ಎಂದು ಕರೆದಿದ್ದ ಸರೋಜಿನಿ ನಾಯ್ಡು!

ಸಾರಾಂಶ

ಸ್ವಾತಂತ್ರ್ಯ ಹೋರಾಟದ ನೇತಾರ ಮಹಾತ್ಮ ಗಾಂಧಿ ಅವರನ್ನು ಅವರ ಎದುರೇ 'ಮಿಕ್ಕಿ ಮೌಸ್' ಎಂದು ಛೇಡಿಸಿ ದಕ್ಕಿಸಿಕೊಳ್ಳಬಹುದಾದ ಛಾತಿ ಮತ್ತು ವಿನೋದ ಸ್ವಭಾವ ಇದ್ದ ವ್ಯಕ್ತಿ ಸರೋಜಿನಿ ನಾಯ್ಡು. ಅವರ ಸ್ಮರಣೆಯ ದಿನ ಇಂದು.    

ಸರೋಜಿನಿ ನಾಯ್ಡು (Sarojin Naidu) ಅವರು ಭಾರತದ ಸ್ವಾತಂತ್ರ್ಯ ಹೋರಾಟದ (Freedom fighters) ಪ್ರಮುಖರಲ್ಲಿ ಒಬ್ಬರು. ರಾಜಕೀಯ ಕಾರ್ಯಕರ್ತೆಯಾಗಿರುವುದರ ಜೊತೆಗೆ, ಸಮೃದ್ಧ ಲೇಖಕಿ, ವಾಗ್ಮಿ, ಆಡಳಿತಗಾರ್ತಿ ಮತ್ತು ಪ್ರತಿಭಾನ್ವಿತ ಕವಿಯೂ ಆಗಿದ್ದರು. ಫೆಬ್ರವರಿ 13, 1879ರಂದು ಹೈದರಾಬಾದ್‌ನಲ್ಲಿ ಸರೋಜಿನಿ ಚಟ್ಟೋಪಾಧ್ಯಾಯ ಎಂಬ ಹೆಸರಿನಿಂದ ಜನಿಸಿದ ಅವರು ಬಾಲ ಪ್ರತಿಭೆ. ಆಕೆಯ ತಂದೆ ಅಘೋರ್ ನಾಥ್ ಚಟ್ಟೋಪಾಧ್ಯಾಯ ಹೈದರಾಬಾದ್‌ನಲ್ಲಿ ನಿಜಾಮ್ ಕಾಲೇಜನ್ನು ಸ್ಥಾಪಿಸಿದ ವಿಜ್ಞಾನಿ. ಆಕೆಯ ತಾಯಿ ಬರಡಾ ಸುಂದರಿ ದೇವಿ ಪ್ರಸಿದ್ಧ ಬಂಗಾಳಿ ಕವಿಗಳಲ್ಲಿ ಒಬ್ಬರು. ಎಂಟು ಮಂದಿ ಒಡಹುಟ್ಟಿದವರಲ್ಲಿ ಸರೋಜಿನಿ ಹಿರಿಯರು.
ಅವಳು ಕೇವಲ 12 ವರ್ಷದವಳಿದ್ದಾಗ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಅಗ್ರಸ್ಥಾನದಲ್ಲಿದ್ದಳು. 16ನೇ ವಯಸ್ಸಿನಲ್ಲಿ ಹೈದರಾಬಾದ್‌ನ ನಿಜಾಮರಿಂದ ವಿದ್ಯಾರ್ಥಿವೇತನ ಪಡೆದರು. ಲಂಡನ್‌ನ (London) ಕಿಂಗ್ಸ್ ಕಾಲೇಜಿನಲ್ಲಿ ಅಧ್ಯಯನ ಮಾಡಲು ಲಂಡನ್‌ಗೆ ಹೋದರು. ನಂತರ ಕೇಂಬ್ರಿಡ್ಜ್‌ನ (Cambridge) ಗಿರ್ಟನ್ ಕಾಲೇಜಿನಲ್ಲಿ ಅಧ್ಯಯನ ಮಾಡಿದರು.

Inspiring woman: ಇದು ಸೀರೆಯುಟ್ಟವಳ ಸಿಕ್ಸ್ ಪ್ಯಾಕ್ ಕಥೆ!

ಅದ್ಭುತ ಶೈಕ್ಷಣಿಕ ದಾಖಲೆಯಿಂದಾಗಿ, ಸರೋಜಿನಿ ಅವರ ತಂದೆ ಅವರು ವಿಜ್ಞಾನಿಯಾಗಬೇಕೆಂದು ಬಯಸಿದ್ದರು. ಆದರೆ ಅವಳು ಕಾವ್ಯದ (Poetry) ಬಗ್ಗೆ ಸಹಜವಾದ ಪ್ರೀತಿಯನ್ನು ಹೊಂದಿದ್ದಳು. ಅವಳು ತನ್ನ ಗಣಿತದ ನೋಟ್‌ಬುಕ್‌ನಲ್ಲಿ ತನ್ನ ಮೊದಲ ಕವಿತೆಯನ್ನು ಬರೆದಳು. ಆಕೆಯ ಮೊದಲ ಸಾಹಿತ್ಯ ಕೃತಿ 'ಮಹೇರ್ ಮುನೀರ್' ಹೈದರಾಬಾದ್ ನಿಜಾಮನನ್ನು ಮೆಚ್ಚಿಸಿತು. ಅವಳು 1,300-ಸಾಲುಗಳ ದೀರ್ಘ ಕವಿತೆ ದಿ ಲೇಡಿ ಆಫ್ ದಿ ಲೇಕ್ ಅನ್ನು ಬರೆದಾಗ ಅವಳ ನಿಜವಾದ ಉತ್ಸಾಹವು ಕಾವ್ಯದಲ್ಲಿದೆ ಎಂದು ಅವಳ ತಂದೆ ಅರಿತುಕೊಂಡರು ಮತ್ತು ಅದನ್ನು ಹೆಚ್ಚು ಗಂಭೀರವಾಗಿ ಪ್ರೋತ್ಸಾಹಿಸಲು ಪ್ರಾರಂಭಿಸಿದರು. 
ಅವರ ಕೃತಿಗಳು ದಿ ಗೋಲ್ಡನ್ ಥ್ರೆಶೋಲ್ಡ್, ದಿ ಬರ್ಡ್ ಆಫ್ ಟೈಮ್, ದಿ ಬ್ರೋಕನ್ ವಿಂಗ್, ಶರತ್ಕಾಲ ಹಾಡುಗಳು ವ್ಯಾಪಕವಾಗಿ ಓದಲ್ಪಟ್ಟಿವೆ ಮತ್ತು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದಿವೆ. ಇಂಗ್ಲಿಷ್ ಕಾವ್ಯಕ್ಕೆ ಅವರ ಅಮೂಲ್ಯ ಕೊಡುಗೆ ಅವರಿಗೆ 'ದಿ ನೈಟಿಂಗೇಲ್ ಆಫ್ ಇಂಡಿಯಾ' ಎಂಬ ಗೌರವವನ್ನು ತಂದುಕೊಟ್ಟಿತು.

ಅಂತರ್ ಜಾತಿ ವಿವಾಹ (Intercast marriage)
ಸರೋಜಿನಿ ಅವರು ಲಂಡನ್‌ನಲ್ಲಿದ್ದಾಗ ವೃತ್ತಿಯಲ್ಲಿ ವೈದ್ಯರಾದ ಡಾ.ಗೋವಿಂದರಾಜುಲು ನಾಯ್ಡು ಅವರನ್ನು ಭೇಟಿಯಾದರು. ವಿದ್ಯಾಭ್ಯಾಸ ಮುಗಿಸಿ ಅವರನ್ನು ಮದುವೆಯಾದಳು. ಆ ಸಮಯದಲ್ಲಿ ಅಂತರ್ಜಾತಿ ವಿವಾಹಗಳು ನಿಷಿದ್ಧವಾಗಿತ್ತು ಆದರೆ ಆಕೆಯ ತಂದೆ ಪ್ರಗತಿಪರ ಚಿಂತಕರಾಗಿದ್ದರಿಂದ ಆಕೆಗೆ ಅವಕಾಶ ನೀಡಿದರು.

ರಾಜಕೀಯ ಕ್ರಿಯಾಶೀಲತೆ
1905ರಲ್ಲಿ ಬಂಗಾಳದ ವಿಭಜನೆಯ ನಂತರ ಸರೋಜಿನಿ ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಸೆಳೆಯಲ್ಪಟ್ಟರು. ಅವರು ಗೋಪಾಲ ಕೃಷ್ಣ ಗೋಖಲೆ ಅವರನ್ನು ಭೇಟಿಯಾದರು. ಅವರು ಜನಸಾಮಾನ್ಯರಲ್ಲಿ ಸ್ವಾತಂತ್ರ್ಯದ ಉತ್ಸಾಹವನ್ನು ಉತ್ತೇಜಿಸಲು ಆಕೆಯ ಕಾವ್ಯವನ್ನು ಬಳಸುವಂತೆ ಕೇಳಿಕೊಂಡರು.
ನಾಯ್ಡು ಅವರು ಮಹಾತ್ಮ ಗಾಂಧಿ ಅವರನ್ನು ಮೊದಲು ಭೇಟಿಯಾದದ್ದು ಲಂಡನ್‌ನಲ್ಲಿ. ಈ ಘಟನೆಯು ಅವರ ಜೀವನದ ಸಂಪೂರ್ಣ ಹಾದಿಯನ್ನು ಬದಲಾಯಿಸಿತು. ಇದು ಅವಳನ್ನು ವಿದ್ವಾಂಸರು ಮತ್ತು ಕವಿಗಳ ಆರಾಮದಾಯಕ ಕೋಣೆಗಳಿಂದ ದೂರವಿಟ್ಟು ಹೋರಾಟಗಾರರ ಜೊತೆ ನಡೆಸಿತು. ಕಾಲಾನಂತರದಲ್ಲಿ ಇಬ್ಬರೂ ಉತ್ತಮ ಗೆಳೆಯರಾದರು. ಸೌಹಾರ್ದತೆಯನ್ನು ಹಂಚಿಕೊಂಡರು. ಆಗಸ್ಟ್ 8, 1932ರಂದು ಗಾಂಧಿಯವರು ನಾಯ್ಡುಗೆ ಬರೆದ ಪತ್ರದಲ್ಲಿ ನಾಯ್ಡು ಅವರನ್ನು 'ಬುಲ್ಬುಲ್' ಎಂದು ಸಂಬೋಧಿಸಿದ್ದರು ಮತ್ತು 'ಲಿಟಲ್ ಮ್ಯಾನ್' ಎಂದು ಸಹಿ ಹಾಕಿದರು. ಇನ್ನೊಂದು ಪತ್ರದಲ್ಲಿ ಒಂದು ಕಡೆ ನಾಯ್ಡು ಅವರು ಗಾಂದೀಜಿಯನ್ನು "ಮಿಕ್ಕಿ ಮೌಸ್", "ಲಿಟಲ್ ಮ್ಯಾನ್" ಎಂದು ಉಲ್ಲೇಖಿಸಿದ್ದರು. ಗಾಂಧೀಜಿ ಅದನ್ನು ವಿನೋದವಾಗಿ ತೆಗೆದುಕೊಂಡಿದ್ದರು. ವಾಸ್ತವವಾಗಿ, ಮಿಕಿ ಮೌಸ್ ಎಂಬುದು ಇಂಗ್ಲಿಷ್‌ ಮಾಧ್ಯಮಗಳು ಗಾಂಧಿಯವರನ್ನು ವಿನೋದವಾಗಿ ಕರೆಯುತ್ತಿದ್ದ ಹೆಸರಾಗಿತ್ತು. ಯಾಕೆಂದರೆ ಅವರ ಪುಟ್ಟ ಆಕೃತಿ ಹಾಗೂ ಅಗಲವಾದ ದೊಡ್ಡ ಕಿವಿಗಳು. ಗಾಂಧಿಯ ಮೇಲಿನ ಅಭಿಮಾನದ ಹೊರತಾಗಿಯೂ, ನಾಯ್ಡು ಅವರು ಮಹಾತ್ಮರ ಆಹಾರಕ್ರಮವನ್ನು ಅಷ್ಟು ಇಷ್ಟಪಡುತ್ತಿರಲಿಲ್ಲ. “ಹುಲ್ಲು ಮತ್ತು ಮೇಕೆ ಹಾಲು. ನೆವರ್, ನೆವರ್, ನೆವರ್!” ಅಂತ ಹೇಳುತ್ತಿದ್ದರಂತೆ! 

Mallammaji Vijayothsava: ಜಗತ್ತಿನ ಮೊದಲ ಸ್ತ್ರೀಸೈನ್ಯ ಕಟ್ಟಿದ ವೀರವನಿತೆ ಬೆಳವಡಿ ಮಲ್ಲಮ್ಮ

ಸ್ವಾತಂತ್ರ್ಯ ಹೋರಾಟದಲ್ಲಿ ಪಾತ್ರ
ನಾಯ್ಡು ಅವರು ನಾಗರಿಕ ಅಸಹಕಾರ ಚಳುವಳಿ ಮತ್ತು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಆಕೆಯನ್ನು ಮಹಾತ್ಮಾ ಗಾಂಧಿ ಮತ್ತು ಇತರರೊಂದಿಗೆ ಜೈಲಿಗೆ ಹಾಕಲಾಯಿತು. 1925ರಲ್ಲಿ, ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಎರಡನೇ ಮಹಿಳಾ ಅಧ್ಯಕ್ಷರಾದರು. 1930ರಲ್ಲಿ ಮಹಾತ್ಮಾ ಗಾಂಧಿ ಜೈಲಿನಲ್ಲಿದ್ದಾಗ ಅವರು ಅಸಹಕಾರದ ಮುಂಚೂಣಿಯಲ್ಲಿದ್ದರು. 1931ರಲ್ಲಿ ಅವರು ಮಹಾತ್ಮ ಗಾಂಧಿ ಮತ್ತು ಪಂಡಿತ್ ಮಾಳವೀಯರೊಂದಿಗೆ ದುಂಡು ಮೇಜಿನ ಶೃಂಗಸಭೆಯಲ್ಲಿ ಭಾಗವಹಿಸಿದರು. ಭಾರತೀಯ ಸಂವಿಧಾನದ ಕರಡು ರಚನೆಗೂ ಕೊಡುಗೆ ನೀಡಿದ್ದಾರೆ.

ಅಸಾಧಾರಣ ವಾಗ್ಮಿ
ಅವಳು ಪ್ರೇಕ್ಷಕರನ್ನು ಸಮ್ಮೋಹನಗೊಳಿಸುವ ವಾಗ್ಮಿಯಾಗಿದ್ದರು. ಮಾತನಾಡುವುದು ಅವರಿಗೆ ಮೀನು ಈಜುವಷ್ಟು ಸುಲಭವಾಗಿತ್ತು. ಮಹಿಳೆಯರನ್ನು ಸ್ವಾತಂತ್ರ್ಯ ಚಳವಳಿಯತ್ತ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತದ ಮಹಿಳೆಯರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿ ಅಡುಗೆ ಮನೆಯಿಂದ ಹೊರತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ರಾಜ್ಯದಿಂದ ರಾಜ್ಯಕ್ಕೆ, ನಗರದಿಂದ ನಗರಕ್ಕೆ ಪ್ರಯಾಣಿಸಿ ಮಹಿಳೆಯರ ಹಕ್ಕುಗಳನ್ನು ಕೇಳಿದರು. ಮಹಿಳೆಯರಲ್ಲಿ ಸ್ವಾಭಿಮಾನವನ್ನು ಮರುಸ್ಥಾಪಿಸಿದರು. ಅನ್ನಿ ಬೆಸೆಂಟ್ ಮತ್ತು ಇತರರೊಂದಿಗೆ 1917ರಲ್ಲಿ ಮಹಿಳಾ ಭಾರತೀಯ ಸಂಘವನ್ನು ರೂಪಿಸಿದರು. ಸಂಘವು ಸ್ತ್ರೀಯರಿಗೆ ಮತದಾನ ಮತ್ತು ಪ್ರತಿನಿಧಿಸುವ ಹಕ್ಕು ಸೇರಿದಂತೆ ಸಮಾನ ಹಕ್ಕುಗಳನ್ನು ಕೋರಿತು. ಕಾಂಗ್ರೆಸ್ (Congress) ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಹೆಚ್ಚಿನ ಮಹಿಳೆಯರನ್ನು ಸೇರಿಸುವ ಅಗತ್ಯವನ್ನು ಅವರು ಮಂಡಿಸಿದರು.

Royal Beauty Secrets: ರಾಣಿಯರು ಹೇಗೆಲ್ಲ ಸೌಂದರ್ಯ ಹೆಚ್ಚಿಸಿಕೊಳ್ತಿದ್ರು ಗೊತ್ತಾ? ನೀವೂ ಟ್ರೈ ಮಾಡಿ..

ಭಾರತ ಸ್ವಾತಂತ್ರ್ಯ ಪಡೆದ ನಂತರ, ಸರೋಜಿನಿ ಉತ್ತರ ಪ್ರದೇಶದ ಗವರ್ನರ್ (Governar) ಆದ ಮೊದಲ ಮಹಿಳೆ. ನಾಯ್ಡು ಅವರು ಕಚೇರಿಯಲ್ಲಿದ್ದಾಗ ಹೃದಯಾಘಾತಕ್ಕೆ ಒಳಗಾದರು ಮತ್ತು ಮಾರ್ಚ್ 2, 1949ರಂದು ಲಕ್ನೋದಲ್ಲಿ ನಿಧನರಾದರು.



 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವೇದಿಕೆಯಲ್ಲಿ ವಧು ಸದ್ದಿಲ್ಲದೆ ಮಾಡಿದ ಅದೊಂದು ಕೆಲಸ ಇಂಟರ್‌ನೆಟ್‌ನಲ್ಲಿ ಫುಲ್ ವೈರಲ್ ಆಯ್ತು..
ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?