'ಧಕ್‌ ಧಕ್‌' ಹಾಡಿಗೆ ಡ್ಯಾನ್ಸ್ ಮಾಡಿ ಪಡ್ಡೆ ಹುಡುಗರ ಹಾರ್ಟ್‌ಬೀಟ್ ಹೆಚ್ಚಿಸಿದ ಯುವತಿ

By Suvarna NewsFirst Published Jul 28, 2023, 3:43 PM IST
Highlights

ಇತ್ತೀಚಿಗೆ ಎಲ್ಲರೂ ಇನ್‌ಸ್ಟಾಗ್ರಾಂ ರೀಲ್ಸ್ ಮಾಡಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅದರಲ್ಲೂ ಹಳೆಯ ಫಿಲ್ಮ್ ಸಾಂಗ್‌ಗಳು ಇಂಥಾ ಡ್ಯಾನ್ಸ್ ವಿಡಿಯೋಗಳಿಂದ ವೈರಲ್ ಆಗುತ್ತವೆ. ಹಾಗೆಯೇ ಮಹಿಳೆಯೊಬ್ಬಳು ಬಾಲಿವುಡ್‌ನ ಹಲವರ ಫೇವರಿಟ್‌ ಹಿಟ್‌ ಸಾಂಗ್‌ ಧಕ್ ಧಕ್ ಕರನೇ ಲಗಾ ಹಾಡಿಗೆ ಸ್ಟೆಪ್ ಹಾಕಿ ಪಡ್ಡೆ ಹುಡುಗರ ಹಾರ್ಟ್‌ ಬೀಟ್ ಹೆಚ್ಚಿಸಿದ್ದಾಳೆ.

ಈಗ ಏನಿದ್ರೂ ಸೋಷಿಯಲ್ ಮೀಡಿಯಾಗಳ ಕಾಲಘಟ್ಟ. ಫೇಸ್‌ಬುಕ್‌, ವಾಟ್ಸಾಪ್‌, ಇನ್‌ಸ್ಟಾಗ್ರಾಂಗಳ ಹಾವಳಿ. ಅದರಲ್ಲೂ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗೋಕೆ ಜನ್ರು ನಾನಾ ರೀತಿಯ ವಿಡಿಯೋ ಮಾಡ್ತಾನೆ ಇರ್ತಾರೆ.  ಅದರಲ್ಲೂ ಹಳೆಯ ಫಿಲ್ಮ್ ಸಾಂಗ್‌ಗಳು ಇಂಥಾ ಡ್ಯಾನ್ಸ್ ವಿಡಿಯೋಗಳಿಂದ ವೈರಲ್ ಆಗುತ್ತವೆ. ಹಾಗೆಯೇ ಮಹಿಳೆಯೊಬ್ಬಳು ಬಾಲಿವುಡ್‌ನ ಹಲವರ ಫೇವರಿಟ್‌ ಹಿಟ್‌ ಸಾಂಗ್‌ ಧಕ್ ಧಕ್ ಕರನೇ ಲಗಾ ಹಾಡಿಗೆ ಸ್ಟೆಪ್ ಹಾಕಿ ಪಡ್ಡೆ ಹುಡುಗರ ಹಾರ್ಟ್‌ ಬೀಟ್ ಹೆಚ್ಚಿಸಿದ್ದಾಳೆ ಅನಾಮಿಕಾ ಎಂಬ ಬಳಕೆದಾರರು ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.

ವೀಡಿಯೊದಲ್ಲಿನ ಯುವತಿ ಅಟ್ರ್ಯಾಕ್ಟಿವ್ ಸೀರೆ ಧರಿಸಿ ಸಲೀಸಾಗಿ ಧಕ್ ಧಕ್ ಹಾಡಿಗೆ ಹೆಜ್ಜೆ ಹಾಕುತ್ತಾಳೆ. ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದೆ.  43,000 ಲೈಕ್ಸ್ ಗಳಿಸಿದ್ದು, ಜನರು ಹಾರ್ಟ್‌ ಎಮೋಜಿಗಳನ್ನು ಕಳುಹಿಸಿದ್ದಾರೆ. ನೆಟಿಜನ್‌ಗಳು ಮಹಿಳೆಯ ಅದ್ಭುತ ಪ್ರದರ್ಶನವನ್ನು ಸಂಪೂರ್ಣವಾಗಿ ಆನಂದಿಸಿದ್ದಾರೆ ಮತ್ತು ಕಾಮೆಂಟ್‌ಗಳ ವಿಭಾಗದಲ್ಲಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. 'ವಾವ್, ಇದು ಅದ್ಭುತವಾಗಿದೆ' ಎಂದು ಒಬ್ಬ ಬಳಕೆದಾರರು ಹೇಳಿದ್ದಾರೆ. ಇನ್ನೊಬ್ಬರು 'ನೃತ್ಯ ತುಂಬಾ ಮಾದಕವಾಗಿದೆ' ಎಂದು ಕಾಮೆಂಟ್ ಮಾಡಿದ್ದಾರೆ.

Latest Videos

ಬಾರ್ಬಿ ಹಾಡಿಗೆ ನೀರೊಳಗೆಯೇ ಮಸ್ತ್ ಡಾನ್ಸ್ ಮಾಡಿದ ಯುವತಿ: ನೆಟ್ಟಿಗರಿಂದ ಭಾರಿ ಮೆಚ್ಚುಗೆ

ಮೂರನೇ ವ್ಯಕ್ತಿ, 'ಸುಂದರವಾದ ಸಾಂಗ್‌ಗೆ ಅತೀ ಸುಂದರವಾಗಿ ಡ್ಯಾನ್ಸ್ ಮಾಡಿದ್ದೀರಿ' ಎಂದು ತಿಳಿಸಿದ್ದಾರೆ. ವೀಡಿಯೊವನ್ನು ವೀಕ್ಷಿಸುವಾಗ ಖುಷಿಯಾಯಿತು ಎಂಬುದನ್ನು ಸಹ ತಿಳಿಸಿದ್ದಾನೆ.. ಇನ್ನೊಬ್ಬ ವ್ಯಕ್ತಿ, 'ಅದ್ಭುತ ನೃತ್ಯ' ಎಂದು ಹೇಳಿದ್ದಾನೆ. ಅನೇಕರು ಮಹಿಳೆಯ ಅಸಾಧಾರಣ ಕೌಶಲ್ಯಗಳನ್ನು ಮೆಚ್ಚಿಕೊಂಡು ಆಕರ್ಷಕ ಪ್ರದರ್ಶನಕ್ಕಾಗಿ ಅವಳನ್ನು ಶ್ಲಾಘಿಸಿದರು.

ಅಡುಗೆ ಮನೆಯಲ್ಲಿ ಸೀರೆಯುಟ್ಟು ಬೋಲ್ಡ್ ಆಗಿ ಡ್ಯಾನ್ಸ್ ಮಾಡಿದ ಮಹಿಳೆ
ಡಿಜಿಟಲ್ ಯುಗದಲ್ಲಿ, ಇನ್‌ಸ್ಟಾಗ್ರಾಂ, ಯೂಟ್ಯೂಬ್‌ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳ ವ್ಯಾಪಕ ಜನಪ್ರಿಯತೆಯ ಮೂಲಕ ನೃತ್ಯದ ಪ್ರಭಾವವನ್ನು ಹೆಚ್ಚಿಸಲಾಗಿದೆ. ಉತ್ಸಾಹಿ ವ್ಯಕ್ತಿಗಳು ತಮ್ಮ ನೃತ್ಯ ವೀಡಿಯೊಗಳನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳಲು ಅವಕಾಶವನ್ನು ಪಡೆದುಕೊಳ್ಳುತ್ತಾರೆ, ಇದು ಅಸಂಖ್ಯಾತ ವೀಕ್ಷಕರ (Viewers) ಕಲ್ಪನೆಯನ್ನು ಸೆರೆಹಿಡಿಯುವ ವೈರಲ್ ಸಂವೇದನೆಗಳ ಸೃಷ್ಟಿಗೆ ಕಾರಣವಾಗುತ್ತದೆ. ಹಾಗೆಯೇ ಗೃಹಿಣಿಯೊಬ್ಬಳು (Homemaker) ಅಡುಗೆಮನೆಯೊಳಗೆ (Dance) ಸೀರೆಯುಟ್ಟುಕೊಂಡು ಮೈ ಚಳಿ ಬಿಟ್ಟು ಡ್ಯಾನ್ಸ್ ಮಾಡಿರೋ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು 'ಕ್ಯಾ ಮುಜೆ ಪ್ಯಾರ್ ಹೈ'ಯ ಹಾಡಿಗೆ ಮಹಿಳೆ ಡ್ಯಾನ್ಸ್ ಮಾಡಿದ್ದಳು 

ಸೆರಗು ಜಾರಬಾರದು ಅಂತಾನೇ ಸೇಫ್ಟಿ ಪಿನ್ ಇರೋದು, ರಾಖಿಗೆ ನೆಟ್ಟಿಗರ ಫ್ಯಾಷನ್ ಪಾಠ

ಗಾಯತ್ರಿ ವರ್ಮಾ ಎಂಬವರು ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದರು. ಡ್ಯಾನ್ಸ್‌ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, 76,000 ಲೈಕ್ಸ್‌ಗಳನ್ನು ಪಡೆದುಕೊಂಡಿತ್ತು. ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದರು. ಕೆಲವರು ಗೃಹಿಣಿಯ ಡ್ಯಾನ್ಸ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಅಡುಗೆ ಕೋಣೆಯಲ್ಲಿ ಇಂಥಾ ಅಶ್ಲೀಲ ನೃತ್ಯ ಮಾಡಿದ್ದಾಗಿ ಮಹಿಳೆಯನ್ನು ಟೀಕಿಸಿದ್ದರು. ಒಬ್ಬ ಬಳಕೆದಾರ, 'ಮದುವೆಯಾದ ಮಹಿಳೆಯರು ಯಾಕೆ ಹೀಗೆ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ' ಎಂದು ಹೇಳಿದ್ದರು.

 
 
 
 
 
 
 
 
 
 
 
 
 
 
 

A post shared by Anamika (@fiercelyfemi9)

click me!