ಮುಸ್ಲಿಂ ಶ್ರೀಮಂತರೇ ಈ ಟೀಚರ್​ ಟಾರ್ಗೆಟ್​: 9ನೇ ಮದ್ವೆಗೆ ರೆಡಿಯಾಗಿ ಸಿಕ್ಕಿಬಿದ್ದ ಸುಂದ್ರಿಯ ರೋಚಕ ಸ್ಟೋರಿ

Published : May 06, 2026, 12:31 PM IST
Robber Bride

ಸಾರಾಂಶ

ನಾಗ್ಪುರದಲ್ಲಿ ಶಿಕ್ಷಕಿಯೊಬ್ಬಳು 8 ಮಂದಿಯನ್ನು ಮದುವೆಯಾಗಿ, ಲಕ್ಷಾಂತರ ರೂಪಾಯಿ ವಂಚಿಸಿ 9ನೇ ಮದುವೆಗೆ ಸಿದ್ಧಳಾಗಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ವೈವಾಹಿಕ ಜಾಲತಾಣಗಳ ಮೂಲಕ ಶ್ರೀಮಂತ, ವಿವಾಹಿತ ಪುರುಷರನ್ನು ಗುರಿಯಾಗಿಸಿಕೊಂಡು, ತನ್ನ ಕಣ್ಣೀರಿನ ಕಥೆ ಹೇಳಿ ಬ್ಲ್ಯಾಕ್‌ಮೇಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದಳು.

ಹಲವಾರು ಮಂದಿಯನ್ನು ಮೋಸ ಮಾಡಿ ಮದುವೆಯಾದರು ಎಂದಾಕ್ಷಣ ಪುರುಷರಷ್ಟೇ ನೆನಪಾಗುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಬರೋಬ್ಬರಿ 8 ಮಂದಿಯನ್ನು ಮದ್ವೆಯಾಗಿ ಇದೀಗ 9ನೇ ಮದ್ವೆಯಾಗುವ ಸಂಭ್ರಮದಲ್ಲಿರುವಾಗಲೇ ಪೊಲೀಸರು ಎಳೆದುಕೊಂಡು ಹೋಗಿರುವ ಘಟನೆ ನಡೆದಿದೆ. ಇದು ನಡೆದಿರುವುದು ಮಹಾರಾಷ್ಟ್ರದ ನಾಗ್ಪುರದಲ್ಲಿ. ದರೋಡೆಕೋರ ವಧು ಎಂದು ಈಕೆಗೆ ಹೆಸರು ಇಡಲಾಗಿದೆ. ಏಕೆಂದರೆ, ಈಕೆ ಎಂಟು ಮಂದಿಯನ್ನು ಮದುವೆಯಾಗಿ ಅವರಿಂದ ಲಕ್ಷ ಲಕ್ಷ ಹಣವನ್ನು ಲೂಟಿ ಮಾಟಿ 9ನೇ ಮದ್ವೆಗೆ ರೆಡಿಯಾಗಿದ್ದಳು!

ಒಬ್ಬನಿಗೆ ದೂರು

ಅಂದಹಾಗೆ ಈಕೆಯ ಹೆಸರು ಸಮೀರಾ ಫಾತಿಮಾ. ಎಂಟು ಮಂದಿಯಲ್ಲಿ ಒಬ್ಬಾತ ಧೈರ್ಯ ಮಾಡಿ ಕಂಪ್ಲೇಂಟ್​ ಕೊಟ್ಟಾಗ ಪ್ರಕರಣ ಬಯಲಿಗೆ ಬಂದಿದೆ. ಆ ಸಮಯದಲ್ಲಿ ಇವಳು 9ನೇ ಬಕ್ರಾನನ್ನು ಹುಡುಕುತ್ತಿದ್ದಳು ಎನ್ನುವುದು ತಿಳಿದಿದೆ. ಪ್ರಾಥಮಿಕ ಪೊಲೀಸ್ ತನಿಖೆಯಲ್ಲಿ ಸಮೀರಾ, ತನ್ನ ಗಂಡಂದಿರನ್ನು ಬ್ಲ್ಯಾಕ್‌ಮೇಲ್ ಮಾಡುವ ಮೂಲಕ ಹಣ ಸುಲಿಗೆ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪೊಲೀಸ್ ತನಿಖೆಯಲ್ಲಿ ಸಮೀರಾ ಫಾತಿಮಾ ತನ್ನ ವಿವಿಧ ಗಂಡಂದಿರಿಂದ ಹಣ ಸುಲಿಗೆ ಮಾಡಲು ಒಂದು ಗ್ಯಾಂಗ್‌ನೊಂದಿಗೆ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.

ವೃತ್ತಿಯಲ್ಲಿ ಶಿಕ್ಷಕಿ

ವಿಚಿತ್ರ ಎಂದರೆ ಈಕೆ ವಿದ್ಯಾವಂತೆ ಮಾತ್ರವಲ್ಲದೇ ವೃತ್ತಿಯಲ್ಲಿ ಶಿಕ್ಷಕಿ ಕೂಡ. ಕಳೆದ 15 ವರ್ಷಗಳಿಂದ ಮುಸ್ಲಿಂ ಸಮುದಾಯದ ಶ್ರೀಮಂತ, ವಿವಾಹಿತ ಪುರುಷರನ್ನು ಗುರಿಯಾಗಿಸಿಕೊಂಡು ಆಕೆ ಹಲವಾರು ಪುರುಷರನ್ನು ವಂಚಿಸಿದ್ದಾರೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಆಕೆಯ ಗಂಡನೊಬ್ಬ ದೂರು ನೀಡಿದಾಗ ವಿಷಯ ಬೆಳಿಕೆಗೆ ಬಂದಿದೆ. ಒಬ್ಬನಿಂದ 50 ಲಕ್ಷ ರೂ ಮತ್ತು ಮತ್ತೊಬ್ಬನಿಂದ 15 ಲಕ್ಷ ನಗು ಮಾತ್ರವಲ್ಲದೇ, ಹಲವು ಲಕ್ಷ ರೂಪಾಯಿಗಳನ್ನು ವಿವಿಧ ಪತಿಯಂದಿರಿಂದ ಬ್ಯಾಂಕ್ ವರ್ಗಾವಣೆ ಮೂಲಕ ಸುಲಿಗೆ ಮಾಡಿದ್ದಾಳೆ ಎನ್ನುವುದು ತಿಳಿದಿದೆ. ಅಷ್ಟೇ ಅಲ್ಲದೇ ರಿಸರ್ವ್ ಬ್ಯಾಂಕ್ ಅಧಿಕಾರಿಯನ್ನೂ ವಂಚಿಸಿದ್ದಾಳೆ ಎಂದು ಆರೋಪಿಸಲಾಗಿದೆ.

ನೋವಿನ ಸ್ಟೋರಿ ಹೇಳ್ಕೊಂಡು ಮರುಳು

ಸಮೀರಾ ಬಕ್ರಾಗಳನ್ನು ಗುರುತಿಸಲು ಮತ್ತು ಆಮಿಷವೊಡ್ಡಲು ವೈವಾಹಿಕ ವೆಬ್‌ಸೈಟ್‌ಗಳು ಮತ್ತು ಫೇಸ್‌ಬುಕ್ ಅನ್ನು ಬಳಸುತ್ತಿದ್ದರು ಎಂದು ತನಿಖಾಧಿಕಾರಿಗಳು ಮತ್ತಷ್ಟು ಬಹಿರಂಗಪಡಿಸಿದ್ದಾರೆ. ಅವರು ಫೇಸ್‌ಬುಕ್ ಅಥವಾ ವಾಟ್ಸಾಪ್ ಕರೆಗಳ ಮೂಲಕ ಅವರನ್ನು ಸಂಪರ್ಕಿಸುತ್ತಿದ್ದರು ಮತ್ತು ಅವರಿಗೆ ತನ್ನ ಕಣ್ಣೀರ ಕಥೆ ಹೇಳಿ ಮರುಳು ಮಾಡುತ್ತಿದ್ದಳು. ಅಸಹಾಯಕ ವಿಚ್ಛೇದಿತ ಮತ್ತು ಮಗುವಿನ ತಾಯಿಯಾಗಿ ನಟಿಸುವ ಮೂಲಕ, ಅವರು ಸಹಾನುಭೂತಿ ಮತ್ತು ವಿಶ್ವಾಸವನ್ನು ಗಳಿಸುತ್ತಿದ್ದಳು. ಹಿಂದಿನ ಪ್ರಕರಣವೊಂದರಲ್ಲಿ, ಗರ್ಭಿಣಿ ಎಂದು ಸುಳ್ಳು ಹೇಳಿಕೊಳ್ಳುವ ಮೂಲಕ ಬಂಧನದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಳು. ಕೊನೆಗೂ ಈಗ ಸಿಕ್ಕಿಬಿದ್ದಿದ್ದಾಳೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Ganesh Chaturthi Special: ಗೌರಿ-ಗಣೇಶ ಹಬ್ಬಕ್ಕೆ ಬಾಯಲ್ಲಿ ನೀರೂರಿಸುವ ಸಿಹಿ ಹಬೆ ಕಡುಬು ಮಾಡುವ ಸುಲಭ ವಿಧಾನ
Rani Haar: ಸೀರೆ ಮೇಲೆ ಈ ಒಂದು ರಾಣಿಹಾರ ಹಾಕಿದ್ರೆ ಸಾಕು, ಲುಕ್ಕೇ ಬದಲಾಗುತ್ತೆ: ಇಲ್ಲಿವೆ ಡಿಸೈನ್ಸ್!