
ಮಹಿಳೆ ಹಾಗೂ ಬಳೆಗೆ ಬಿಡಿಸಲಾಗದ ನಂಟಿದೆ. ಚೆಂದದ ಬಳೆ ಕಂಡಾಗ ಮಹಿಳೆಯರು ಆಕರ್ಷಿತರಾಗ್ತಾರೆ. ಡ್ರೆಸ್, ಸಾರಿಗೆ ತಕ್ಕಂತೆ ಬಳೆ ಧರಿಸೋದು ಅವರ ಫ್ಯಾಷನ್. ಈ ಬಳೆಗಳಲ್ಲಿ ಸಾಕಷ್ಟು ವಿಧಗಳಿವೆ. ಗಾಜಿನ ಬಳೆ, ಮಣ್ಣಿನ ಬಳೆ, ಪ್ಲಾಸ್ಟಿಕ್ ಬಳೆ ಹೀಗೆ ನಾನಾ ವಸ್ತುಗಳಿಂದ ಬಳೆಗಳನ್ನು ತಯಾರಿಸಲಾಗುತ್ತದೆ. ಅದ್ರಲ್ಲಿ ಲಹಟಿ ಬಳೆ ಕೂಡ ಒಂದು. ತನ್ನ ಸೌಂದರ್ಯದಿಂದಲೇ ಈ ಬಳೆ ಮಹಿಳೆಯರ ಗಮನ ಸೆಳೆಯುತ್ತದೆ. ಬಿಹಾರದ ದರ್ಭಾಂಗ ಮತ್ತು ಮುಜಫರ್‌ಪುರ ಲಹಟಿ ಬಳೆ ತಯಾರಿಸೋದ್ರಲ್ಲಿ ಹೆಸರುವಾಸಿ. ಆದ್ರೆ ಈಗ ಲಹಟಿ ಬಳೆ ತಯಾರಿಕೆ ಎಂದಾಗ ಭೋಜ್‌ಪುರದ ಕೊಯಿಲ್ವಾರ್ ಬ್ಲಾಕ್‌ನಲ್ಲಿರುವ ಮಿಶ್ರವಾಲಿಯಾ ಗ್ರಾಮದ ಹೆಸರು ಕೂಡ ಕೇಳಿಬರುತ್ತದೆ. ತನ್ನ ವಿಶಿಷ್ಟ ಸೌಂದರ್ಯದಿಂದ ಈ ಬಳೆ ಮಹಿಳೆಯರು, ಯುವತಿಯರ ಕೈ ಸೇರುತ್ತಿದೆ. ಲಹಟಿ ಬಳೆಗೆ ಮಿಶ್ರವಾಲಿಯಾ ಗ್ರಾಮ ಪ್ರಸಿದ್ಧಿ ಪಡೆಯಲು ಕಾರಣ ಗುಡ್ಡಿ ಮಿಶ್ರಾ. ಹತ್ತನೇ ತರಗತಿ ನಂತ್ರ ಮದುವೆಯಾದ್ರೂ ಛಲಬಿಡದ ಗುಡ್ಡಿ ಮಿಶ್ರಾ ಸಾಧಿಸಿ ತೋರಿಸಿದ್ದಾರೆ. ಗುಡ್ಡಿ ಮಿಶ್ರಾಗೆ ಅವರ ಪತಿ ಮಂಜಯ್ ಮಿಶ್ರಾ ಸಂಪೂರ್ಣ ಬೆಂಬಲ ಇದೆ. ಬರೀ ಇವರಿಬ್ಬರೇ ಅಲ್ಲ ಈ ಕೆಲಸದಲ್ಲಿ ಅನೇಕ ಸ್ಥಳೀಯ ಮಹಿಳೆಯರು ಕೈಜೋಡಿಸಿದ್ದಾರೆ. ಉತ್ತಮ ಮಾರುಕಟ್ಟೆ ಹೊಂದಿರುವ ಲಹಟಿ ಬಳೆ ತಯಾರಿ ಶುರುವಾಗಿದ್ದರ ಹಿಂದೆ ದೊಡ್ಡ ಕಥೆ ಇದೆ.
ಮೊದಲೇ ಹೇಳಿದಂತೆ ಗುಡ್ಡಿ ಮಿಶ್ರಾ ಓದಿದ್ದು ಹತ್ತನೆ ತರಗತಿಯವರೆಗೆ ಮಾತ್ರ. ಆ ನಂತ್ರ ಅವರ ಮದುವೆ (Marriage) ಯಾಯ್ತು. ಏನಾದ್ರೂ ಸ್ವಂತ ವ್ಯಾಪಾರ (Business) ಶುರು ಮಾಡಬೇಕೆಂಬ ಬಯಕೆ ಹೊಂದಿದ್ದ ಗುಡ್ಡಿ ಮಿಶ್ರಾ, ಲಹಟಿ (Lahathi) ತಯಾರಿಸಲು ಕೊಯಿಲ್ವಾರ್‌ನ ಆರ್‌ಎಸ್‌ಇಟಿಐನಲ್ಲಿ ತರಬೇತಿ ಪಡೆದರು. ಅವರಿಗೆ ಅವರ ಪತಿಯ ಸಂಪೂರ್ಣ ಬೆಂಬಲ ಸಿಕ್ಕಿತ್ತು. ಆ ನಂತ್ರ ಗುಡ್ಡಿ ಮಿಶ್ರಾ ಮನೆಯಲ್ಲೇ ಸಣ್ಣದಾಗಿ ಲಹಟಿ ತಯಾರಿ ಶುರು ಮಾಡಿದ್ದರು. ಈಗ ಅವರು ಗ್ರಾಮದಲ್ಲಿ ಒಂದು ಕಾರ್ಖಾನೆ ನಡೆಸುತ್ತಿದ್ದಾರೆ.
ಭಾರತದ ಅತ್ಯಂತ ಶ್ರೀಮಂತ ಮುಸ್ಲಿಂ ಮಹಿಳೆ ಈಕೆ; 27,773 ಕೋಟಿ ಮೌಲ್ಯದ ಕಂಪನಿ ಒಡತಿ!
ಲಹಟಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಒಬ್ಬರೇ ಬೇಡಿಕೆ ಪೂರೈಸಲು ಸಾಧ್ಯವಾಗದ ಕಾರಣ ಗುಡ್ಡಿ ಮಿಶ್ರಾ ಸ್ಥಳೀಯ ಮಹಿಳೆಯರಿಗೆ ತರಬೇತಿ ನೀಡಿ ಅವರನ್ನು ಸ್ವಾವಲಂಬಿಯನ್ನಾಗಿಸಿದ್ದಾರೆ. ಅವರಿಗೆ ಅಗತ್ಯವಿರುವ ಪದಾರ್ಥಗಳನ್ನು ನೀಡ್ತಾರೆ. ಅವರು ಮನೆಯಲ್ಲಿ ಲಹಟಿ ತಯಾರಿಸಿ ಗುಡ್ಡಿ ಮಿಶ್ರಾಗೆ ನೀಡುತ್ತಾರೆ. ಸುಮಾರು 15 -20 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ.
ಲಹಟಿ ಸಾಂಪ್ರದಾಯಿಕ ಹಿನ್ನಲೆ ಹೊಂದಿದೆ. ಮದುವೆ ಸಮಯದಲ್ಲಿ ಇದಕ್ಕೆ ಬೇಡಿಕೆ ಹೆಚ್ಚು. ಇದಲ್ಲದೆ ತೀಜ್ ಮತ್ತು ಇತರ ಹಬ್ಬಗಳಲ್ಲಿ ಮಹಿಳೆಯರು ಲಹಟಿ ಖರೀದಿ ಮಾಡುತ್ತಾರೆ. ಹುಡುಗಿಯರು ತಮ್ಮ ಆಯ್ಕೆ ಪ್ರಕಾರ ಆರ್ಡರ್ ಮಾಡ್ತಾರೆ. 20 ದಿನಗಳಲ್ಲಿ ಅವರಿಗೆ ಲಹಟಿ ನೀಡಲಾಗುತ್ತದೆ. ಜಯಮಾಲಾ ಸೆಟ್ ಮತ್ತು ಬ್ರೈಡಲ್ ಸೆಟ್ ಲಹಟಿ 2500 ರೂಪಾಯಿಯಿಂದ 8 ಸಾವಿರ ರೂಪಾಯಿವರೆಗೂ ಮಾರಾಟವಾಗುತ್ತದೆ. ಅದು ಅವರು ನೀಡುವ ಡಿಸೈನ್ ಅವಲಂಭಿಸಿದೆ. ಗಿಡ್ಡಾ ಮಿಶ್ರಾ ತಯಾರಿಸುವ ಲಹಟಿಗೆ ಅವರು 150ರಿಂದ 8 ಸಾವಿರ ರೂಪಾಯಿವರೆಗೆ ಚಾರ್ಜ್ ಮಾಡುತ್ತಾರೆ.
'ಎಕ್ಸ್' ಬಳಕೆದಾರರಿಗೆ ಶಾಕ್; ಪೋಸ್ಟ್ ,ರಿಪ್ಲೈ, ಲೈಕ್ಸ್ ಗೂ ಹಣ ಪಾವತಿಸಬೇಕು; ಹೊಸ ನಿಯಮ ಜಾರಿ ದೃಢಪಡಿಸಿದ ಮಸ್ಕ್
ಗುಡ್ಡಿ ಮಿಶ್ರಾ ಪತಿ ಮಂಜಯ್ ಮಿಶ್ರಾ ಕೂಡ ಇದೇ ಕೆಲಸದಲ್ಲಿದ್ದಾರೆ. ಮಾರ್ಕೆಟಿಂಗ್ ಜವಾಬ್ದಾರಿಯನ್ನು ಮಂಜಯ್ ಮಿಶ್ರಾ ನೋಡಿಕೊಳ್ತಿದ್ದಾರೆ. ಕೊರೊನಾ ಸಮಯದಲ್ಲಿ ಸ್ವಲ್ಪ ಸಮಸ್ಯೆಯಾಗಿದ್ರೂ ಈಗ ಮತ್ತೆ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದೆ ಎನ್ನುತ್ತಾರೆ ಗುಡ್ಡಿ ಮಿಶ್ರಾ. ಕೇವಲ ಹತ್ತನೇ ತರಗತಿ ಅಭ್ಯಾಸ ಮಾಡಿ, ಹಳ್ಳಿಯಲ್ಲಿ ಸ್ವಂತ ಕಾರ್ಖಾನೆ ನಡೆಸುತ್ತಿರುವ ಗುಡ್ಡಿ ಮಿಶ್ರಾ, ಅನೇಕ ಮಹಿಳೆಯರಿಗೆ ನೆರವಾಗಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.