ಹುತ್ತಕ್ಕೂ, ಹಾಲಿಗೂ, ಸಂತಾನಕ್ಕೂ ಇದೆ ವೈಜ್ಞಾನಿಕ ಸಂಬಂಧ: ಆಯುರ್ವೇದ ವೈದ್ಯೆ ಡಾ. ಗೌರಿ ಮಾತು ಕೇಳಿ

By Suchethana D  |  First Published Jan 1, 2025, 12:13 PM IST

ಹುತ್ತದ ಮಣ್ಣಿಗೂ  ಸಂತಾನ ಭಾಗ್ಯಕ್ಕೂ ಇರುವ ಸಂಬಂಧವೇನು ಎಂಬ ಬಗ್ಗೆ ವಿವರಿಸಿದ್ದಾರೆ ಖ್ಯಾತ ಆಯುರ್ವೇದ ವೈದ್ಯೆ ಡಾ.ಗೌರಿ ಸುಬ್ರಹ್ಮಣ್ಯ.  
 


ನಾಗಪಂಚಮಿಯ ದಿನ ಹುತ್ತಕ್ಕೆ ಹಾಲೆರೆಯುವ ಸಂಪ್ರದಾಯವಿದೆ. ಹುತ್ತಕ್ಕೆ ಹಾಲನ್ನೆರೆದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ತಲೆತಲಾಂತರಗಳಿಂದ ಬಂದಿದ್ದಿದೆ. ಆದರೆ ಆ ಸಂಪ್ರದಾಯವೇನು? ಇದರ ಹಿಂದಿದ್ದ ವೈಜ್ಞಾನಿಕ ಕಾರಣವೇನು? ಆದರೆ ಈಗ ಆಗುತ್ತಿರುವುದೇನು ಎನ್ನುವುದನ್ನು ನೋಡಿದರೆ ಸಂಪ್ರದಾಯದ ಹೆಸರಿನಲ್ಲಿ ಜನರು ತಿಳಿದೋ, ತಿಳಿಯದೆಯೋ ಮಾಡುತ್ತಿರುವ ಪದ್ಧತಿಯಿಂದ ಎಷ್ಟು ತೊಂದರೆ ಅನುಭವಿಸುತ್ತಿದ್ದಾರೆ, ಸರಿಯಾಗಿ ತಿಳಿದುಕೊಳ್ಳದೇ ಹುತ್ತಕ್ಕೆ  ಲೀಟರ್​ಗಟ್ಟಲೆ ಹಾಲು ಎರೆಯುವ ಮೂಲಕ ಹೇಗೆ ತಮ್ಮ ಕುಟುಂಬಕ್ಕೆ ಸಮಸ್ಯೆ ತಂದುಕೊಳ್ಳುತ್ತಿದ್ದಾರೆ ಎನ್ನುವುದನ್ನು ಖ್ಯಾತ ಆಯುರ್ವೇದ ತಜ್ಞರೂ ಆಗಿರುವ  ಡಾ.ಗೌರಿ ಸುಬ್ರಹ್ಮಣ್ಯ ವಿವರಿಸಿದ್ದಾರೆ.

ಅಷ್ಟಕ್ಕೂ ಹಾವಿಗೂ, ಮನುಷ್ಯನಿಗೂ ಇರುವ ಸಂಬಂಧದ ಬಗ್ಗೆ ಅಗೆದಷ್ಟೂ ಬಗೆದಷ್ಟೂ ರಹಸ್ಯವೇ ಇದೆ. ಸರ್ಪವನ್ನು ಕೊಂದರೆ ಅಥವಾ ಇನ್ನಾವುದೋ ಕಾರಣಕ್ಕೆ ಬರುವ ಸರ್ಪದೋಷದಿಂದ ಬಳಲುವವರು ಅದೆಷ್ಟೋ ಮಂದಿ. ಸರ್ಪದೋಷ, ಸರ್ಪಶಾಪ... ಇವುಗಳ ಬಗ್ಗೆ ವಿಭಿನ್ನ ನಿಲುವುಗಳು ಇದ್ದರೂ, ಸರ್ಪದೋಷಕ್ಕೆ ಜ್ಯೋತಿಷಾಶ್ತ್ರದಲ್ಲಿ ವೈಜ್ಞಾನಿಕ ಕಾರಣವನ್ನೇ ನೀಡಲಾಗುತ್ತದೆ. ಪೂರ್ವಜರು ಯಾರೇ ಆಗಿದ್ದರೂ ನಾಗರಹಾವನ್ನು ಕೊಂದಿದ್ದರೆ ಅದು ಅವರ ಭವಿಷ್ಯದ ಪೀಳಿಗೆಯ ಮೇಲೂ ಪರಿಣಾಮ ಬೀರುತ್ತದೆ. ಸಂತಾನವೇ ಇಲ್ಲದ ಸ್ಥಿತಿ, ಗಂಡು ಸಂತಾನಕ್ಕೆ ಮರಣ ಇಲ್ಲವೇ ಮದುವೆಯಾಗದೇ ಇರುವುದು... ಹೀಗೆ ಹಲವಾರು ಕಾರಣಗಳಿಗೆ ಸರ್ಪದೋಷವೇ ಮುಖ್ಯ ಕಾರಣ ಎನ್ನುವುದು ಇದೆ. ಅದರ ಬಗ್ಗೆಯೇ ರೇಡಿಯೋಸಿಟಿ ಚಾನೆಲ್​ನಲ್ಲಿ ಡಾ.ಗೌರಿ ಅವರು ವಿವರಣೆ ನೀಡಿದ್ದಾರೆ.

Tap to resize

Latest Videos

ಸರ್ಪ ದೋಷ ಎಂದರೇನು? ಯಾರಿಗೆ ಬರುತ್ತದೆ? ಖ್ಯಾತ ಜ್ಯೋತಿಷಿ ಡಾ. ಗೌರಿ ಸುಬ್ರಹ್ಮಣ್ಯ ಮಾಹಿತಿ...

ಹುತ್ತಕ್ಕೆ ಹಾಲನ್ನು ಎರೆದರೆ, ಸಂತಾನಪ್ರಾಪ್ತಿಯಾಗುವುದು ನಿಜವೇ. ಅದೇ ಕಾರಣಕ್ಕೆ ಹಿಂದಿನಿಂದ ಈ ಪದ್ಧತಿ ಬಂದಿದೆ. ಆದರೆ ಅದು ಹೇಗೆ ಎನ್ನುವುದನ್ನು ಮಾತ್ರ ತಿಳಿದುಕೊಳ್ಳದೇ ಎಷ್ಟೋ ಜನ ಸರ್ಪಹತ್ಯಾ ದೋಷಕ್ಕೆ ಒಳಗಾಗುತ್ತಿದ್ದಾರೆ ಎನ್ನುತ್ತಾರೆ ಡಾ.ಗೌರಿ. ಹುತ್ತಕ್ಕೆ ಹಾಲನ್ನೆರಯಬೇಕು ಎನ್ನುವ ಕಾರಣಕ್ಕೆ ಲೀಟರ್​ಗಟ್ಟಲೆ ಹಾಲನ್ನು ತಂದು ಹುತ್ತದಲ್ಲಿರುವ ರಂಧ್ರಕ್ಕೆ ಎರೆಯುತ್ತಾರೆ. ಒಂದು ವೇಳೆ ಹಾವು ಒಳಗೆ ಇದ್ದರೆ, ಅದು ಉಸಿರುಗಟ್ಟಿ ಸಾಯುತ್ತದೆ. ಆಗ ತಿಳಿಯದೇ ಸರ್ಪದೋಷಕ್ಕೆ ಒಳಗಾಗುವ ಸಾಧ್ಯತೆಯೇ ಹೆಚ್ಚು ಎಂದಿರುವ ಡಾ.ಗೌರಿ ಅವರು, ಸರಿಯಾದ ರೀತಿಯನ್ನು ಅರಿತರೆ ಸಂತಾನ ಇಲ್ಲದವರಿಗೆ ಇದೇ ಹುತ್ತದ ಮಣ್ಣು ಹೇಗೆ ಸಂತಾನ ಭಾಗ್ಯವನ್ನು ಕರುಣಿಸಬಲ್ಲದು ಎನ್ನುವುದನ್ನು ತಿಳಿಸಿದ್ದಾರೆ.

ಹಾಲನ್ನು ಸಮರ್ಪಣೆ ಮಾಡಿ ಎನ್ನುವುದು ಮೂರೇ ಮೂರು ಉದ್ಧರಣೆ ಅಂದರೆ ಚಿಟಿಕೆಯಷ್ಟು ಹಾಲನ್ನು ಹುತ್ತದ ಮೇಲೆ ಹಾಕಬೇಕು.  ಒಳಗೆ ಇರುವ ಹಾವು ಓಡಾಡುತ್ತಿರುತ್ತದೆ. ಆ ಸಮಯದಲ್ಲಿ ಅಲ್ಲಿರುವ ಮಣ್ಣಿಗೆ ಹಾವಿನ ಚರ್ಮದಲ್ಲಿ ಇರುವ ಕೆಲವು ಅಂಶಗಳು ಸೇರ್ಪಡೆಯಾಗಿರುತ್ತವೆ. ಈ ಹಾಲು ಅದರ ಮೇಲೆ ಬಿದ್ದಾಗ ಒಂದು ರೀತಿಯ ಪರಿಮಳ ಹೊರಕ್ಕೆ ಬರುತ್ತದೆ. ಆ ಹಾಲುನ್ನು ಹಾಕಿ ಪ್ರದಕ್ಷಿಣೆ ಮಾಡುವುದು ರೂಢಿ. ಇಂಥ ಸಂದರ್ಭದಲ್ಲಿ ಆ ಪರಿಮಳವನ್ನು ಆಘ್ರಾಣಿಸಿಕೊಳ್ಳುವ ಭಾಗ್ಯ ಪ್ರದಕ್ಷಿಣೆ ಹಾಕುವ ಸಮಯದಲ್ಲಿ ಸಿಗುತ್ತದೆ. ಅಂಥ ಸಂದರ್ಭದಲ್ಲಿ ಗರ್ಭದೋಷದಲ್ಲಿರುವ ಸಮಸ್ಯೆ ಪರಿಹಾರವಾಗುತ್ತದೆ. ಹುತ್ತದ ಮಣ್ಣನ್ನು ಚಿಟಿಕೆಯಷ್ಟು ತೆಗೆದುಕೊಂಡು ಹಾಲಿನಲ್ಲಿ ಸೇರಿಸಿ ಕುಡಿದರೆ ಗರ್ಭ ಸಮಸ್ಯೆ ನಿವಾರಣೆಯಾಗುತ್ತದೆ.  ಆದರೆ ಕೆಲವರು ಈ ಬಗ್ಗೆ  ವಿತ್ತಂಡ ವಾದ ಮಾಡ್ತಾರೆ, ಮತ್ತೆ ಕೆಲವರು ಲೀಟರ್​ಗಟ್ಟಲೆ ಹಾಲು ಸುರಿಯುತ್ತಾರೆ ಎಂದಿರುವ ವೈದ್ಯೆ, ಹುತ್ತಕ್ಕೆ ಮತ್ತು ಹಾವಿಗೆ ತೊಂದರೆ ಮಾಡಿದರೆ ಸರ್ಪಶಾಪಕ್ಕೆ ಗುರಿಯಾಗಬೇಕಾಗುತ್ತದೆ ಎಚ್ಚರಿಕೆ ಎಂದಿದ್ದಾರೆ. 

ಶ್ವಾಸಕೋಶದ ಸಮಸ್ಯೆ ಮುಕ್ತಿಗೆ, ಮಕ್ಕಳಾಗೋದಕ್ಕೆ ಅರಳಿ ಮರನೇ ಯಾಕೆ? ಡಾ. ಗೌರಿಯಮ್ಮನವರ ಮಾತು ಕೇಳಿ...


click me!