ಜೀವನವನ್ನು ಸರಿಯಾದ ರೀತಿಯಲ್ಲಿ ಬದುಕಲು ಪ್ರತಿಯೊಬ್ಬರಿಗೂ ಉತ್ತಮ ಜೀವನ ಸಂಗಾತಿಯ ಅಗತ್ಯವಿದೆ ಎಂದು ಹೇಳಲಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಒಂಟಿಯಾಗಿ ವಾಸಿಸಲು ಇಷ್ಟಪಡುವ ಹುಡುಗಿಯರ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ಕಾರಣವೇನು ಎಂಬುದನ್ನು ತಿಳಿಯೋಣ.
ಜಗತ್ತು ಇಷ್ಟು ಬೆಳೆದರೂ ಸಹ ಈ ಸಮಾಜವು ಪುರುಷರು ಸಿಂಗಲ್ ಆಗಿ ವಾಸಿಸುವುದನ್ನು ಒಪ್ಪಿಕೊಳ್ಳುತ್ತದೆ. ಆದರೆ ಹುಡುಗಿ ಮದುವೆಯಾಗದೆ ತನ್ನ ಜೀವನವನ್ನು ಏಕಾಂಗಿಯಾಗಿ ಕಳೆಯಲು ಬಯಸಿದಾಗ, ಜನರು ಹತ್ತು ರೀತಿಯ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸುತ್ತಾರೆ. ಹುಡುಗಿಯರಲ್ಲೇ, ನ್ಯೂನತೆಗಳು ಕೊರತೆಯನ್ನು ತೆಗೆದುಹಾಕಲು ಪ್ರಾರಂಭಿಸುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಹುಡುಗಿಯರು ಹೆಚ್ಚಾಗಿ ಒಂಟಿಯಾಗಿರಲು ಇಷ್ಟಪಡುತ್ತಿದ್ದಾರೆ. ಆಧುನಿಕ ಹೆಣ್ಣು ಮಕ್ಕಳು ಒಂಟಿಯಾಗಿ ಇರಲು ಬಯಸುತ್ತಿದ್ದಾರೆ. ಮಕ್ಕಳನ್ನು ಪಡೆದುಕೊಳ್ಳುವುದರಿಂದ ಹಿಂದೆ ಸರಿಯುತ್ತಿದ್ದು ಬಾಡಿಗೆ ತಾಯಿಯಿಂದ ಮಗು ಬಯಸುತ್ತಿದ್ದಾರೆ ಎಂದು ಕರ್ನಾಟಕದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕೆಲ ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಅದಕ್ಕೇನು ಕಾರಣ ತಿಳ್ಕೊಳ್ಳೋಣ.
1. ಹುಡುಗಿಯರು ಏಕಾಂಗಿಯಾಗಿ ಸಮಯ ಕಳೆಯುವುದನ್ನು ಆನಂದಿಸುತ್ತಾರೆ
ಪುರುಷರಿಗಿಂತ ಹುಡುಗಿಯರು (Woman) ಏಕಾಂಗಿಯಾಗಿ ಸಮಯ ಕಳೆಯುವುದನ್ನು ಆನಂದಿಸುತ್ತಾರೆ. ಜರ್ಮನಿಯಲ್ಲಿ, ಬಿರ್ಕ್ ಹಗೆಮೆಯರ್ ಮತ್ತು ಅವರ ಸಹೋದ್ಯೋಗಿಗಳು ಏಕಾಂಗಿಯಾಗಿ (Alone) ಸಮಯ ಕಳೆಯುವ ಬಗ್ಗೆ ಜನರ ಭಾವನೆಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಇದರಲ್ಲಿ ಜನರು ಎರಡು ವಾರಗಳ ವರೆಗೆ ಪ್ರತಿದಿನ ತಮ್ಮ ಅನುಭವಗಳನ್ನು ವರದಿ ಮಾಡಿದರು. ಈ ಅಧ್ಯಯನದಲ್ಲಿ ಹುಡುಗಿಯರು ಹೆಚ್ಚಾಗಿ ಏಕಾಂಗಿಯಾಗಿ ಸಮಯ ಕಳೆಯಲು ಇಷ್ಟಪಡುತ್ತಾರೆ ಎಂಬುದು ತಿಳಿದುಬಂತು. ಒಂಟಿಯಾಗಿರಲು ಇಷ್ಟಪಡುವುದಕ್ಕೆ ಹುಡುಗಿಯರು ಕಾರಣಗಳನ್ನು (Reason) ಸಹ ನೀಡಿದ್ದಾರೆ. ಒಂಟಿಯಾಗಿದ್ದಾಗ ಒತ್ತಡ (Pressure)ವೆಲ್ಲಾ ಕಳೆದು ಹೋಗಿ ರಿಲ್ಯಾಕ್ಸ್ ಆದ ಅನುಭವವಾಗುತ್ತದೆ. ಒಂಟಿಯಾಗಿದ್ದಾಗ ಕಂಫರ್ಟೆಬಲ್ ಆಗಿರಲು ಸಾಧ್ಯವಾಗುತ್ತದೆ ಎಂದು ಹಲವು ಹುಡುಗಿಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Relationship Tips: ಸಿಂಗಲ್ಲಾ? ಸಂಗಾತಿ ಹುಡುಕಾಟದಲ್ಲಿ ಹತಾಶರಾಗ್ಬೇಡಿ
2. ಒಂಟಿಯಾಗಿ ವಾಸಿಸುವ ಹುಡುಗಿಯರು ಸ್ನೇಹವನ್ನು ಸರಿಯಾಗಿ ನಿಭಾಯಿಸುತ್ತಾರೆ
ಸ್ನೇಹದಲ್ಲಿ ಉತ್ತಮವಾಗಿರುವುದರಿಂದ ಏಕಾಂಗಿಯಾಗಿ ಬದುಕಲು ಸುಲಭವಾಗುತ್ತದೆ ಮತ್ತು ಪ್ರತ್ಯೇಕತೆಯನ್ನು ಅನುಭವಿಸುವುದಿಲ್ಲ. ಇತರ ಸಂಶೋಧನೆಗಳು ಸೂಚಿಸುವ ಪ್ರಕಾರ, ಹುಡುಗಿಯರು ಬದ್ಧವಾದ ಪ್ರಣಯ ಸಂಬಂಧ ಅಥವಾ ಮದುವೆ (Marriage)ಯಲ್ಲಿದ್ದರೂ ಸಹ ಕೆಲವೊಮ್ಮೆ ಒಂಟಿಯಾಗಿ ಬದುಕಲು ಬಯಸುತ್ತಾರೆ, ಏಕೆಂದರೆ ಅವರು ಮೊದಲು ತಮ್ಮ ಪಾಲುದಾರರ ಬದಲು ತಮ್ಮ ಸ್ನೇಹಿತರೊಂದಿಗೆ ಭೇಟಿಯಾಗಲು ಮುಕ್ತವಾಗಿ ಇರಲು ಬಯಸುತ್ತಾರೆ. ಅವರು ತಮ್ಮ ಎಲ್ಲಾ ಸಾಮಾಜಿಕ ಯೋಜನೆಗಳಲ್ಲಿ ತಮ್ಮ ಪ್ರಣಯ ಸಂಗಾತಿ (Partner)ಯನ್ನು ಸೇರಿಸಿಕೊಳ್ಳಲು ಬಾಧ್ಯತೆ ಹೊಂದಲು ಬಯಸುವುದಿಲ್ಲ.
3. ಒಂಟಿಯಾಗಿ ವಾಸಿಸುವ ಹುಡುಗಿಯರು ಹವ್ಯಾಸಗಳನ್ನು ಮುಂದುವರಿಸುತ್ತಾರೆ
ಬಿಝಿ ಜೀವನಶೈಲಿಯಲ್ಲಿ ಯಾರಿಗೂ ತಮ್ಮ ನೆಚ್ಚಿನ ಹವ್ಯಾಸಗಳನ್ನು ಮುಂದುವರಿಸಲು ಸಮಯ ಸಿಗುವುದಿಲ್ಲ. ಮುಖ್ಯವಾಗಿ ಹುಡುಗಿಯರು ಮದುವೆ, ಮಕ್ಕಳು ಎಂಬ ಜವಾಬ್ದಾರಿ (Responsibility)ಯಿಂದಾಗಿ ತಮ್ಮ ವೈಯುಕ್ತಿಕ ಜೀವನದತ್ತ ಗಮನಹರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿಯೇ ತಮ್ಮ ಜೀವನವನ್ನು ತಮ್ಮಿಷ್ಟದಂತೆಯೇ ಬದುಕಲು ಹೆಚ್ಚಿನ ಹುಡುಗಿಯರು ಒಂಟಿಯಾಗಿರಲು ಇಷ್ಟಪಡುತ್ತಾರೆ.
ಮದ್ವೆ ಆದವರಿಗಿಂತ ಸಿಂಗಲ್ ಮಹಿಳೆಯರು ತುಂಬಾನೆ ಹ್ಯಾಪಿಯಾಗಿರ್ತಾರಂತೆ!
4. ತಾವೇ ಜವಾಬ್ದಾರಿ ತೆಗೆದುಕೊಳ್ಳಬೇಕೆಂದು ಮಹಿಳೆಯರು ಒಂಟಿಯಾಗಿರುತ್ತಾರೆ
ದಂಪತಿಗಳು ಸಮಾನವಾಗಿ ಕೆಲಸ ಮಾಡಬೇಕು ಎಂಬ ವಿಚಾರದ ಬಗ್ಗೆ ಆಗಾಗ ಚರ್ಚೆ ನಡೆಯುತ್ತಿದ್ದರೂ ಅದು ಪ್ರವೃತ್ತಿಗೆ ಬಂದಿಲ್ಲ. ದಾಂಪತ್ಯದಲ್ಲಿ ಹೋಮ್ ಮೇಕರ್ ಆಗಿ ಮಹಿಳೆಯೇ ಹೆಚ್ಚು ಜವಾಬ್ದಾರಿ ನಿರ್ವಹಿಸಬೇಕಾಗುತ್ತದೆ. ಹೀಗಾಗಿ ಹೆಚ್ಚಿನ ಮಹಿಳೆಯರು ಇಂಥಾ ಜವಾಬ್ದಾರಿಯ ರಗಳೆಯೇ ಬೇಡವೆಂದು ಒಂಟಿಯಾಗಿರೋಣ ಎಂಬ ನಿರ್ಧಾರಕ್ಕೆ ಬರುತ್ತಾರೆ.
5. ಎಲ್ಲರ ಬಗ್ಗೆ ಕಾಳಜಿ ವಹಿಸಿದರೂ, ಮಹಿಳೆಯ ಬಗ್ಗೆ ಕಾಳಜಿ ವಹಿಸುವವರಿಲ್ಲ
ಎಲ್ಲಾ ಸಂಬಂಧಗಳಲ್ಲೂ ಮಹಿಳೆ ಎಲ್ಲರ ಬಗ್ಗೆಯೂ ಅತಿಯಾದ ಕಾಳಜಿ (Care) ವಹಿಸುವುದನ್ನು ನೋಡಬಹುದು. ಇನ್ನೊಬ್ಬರ ಆರೋಗ್ಯ, ಆಹಾರದ ಬಗ್ಗೆ ಮಹಿಳೆ ಯಾವಾಗಲೂ ಹೆಚ್ಚು ಕನ್ಸರ್ನ್ ತೋರುತ್ತಾಳೆ. ಪ್ರತಿಯಾಗಿ ಹುಡುಗಿಯರಲ್ಲಿ ಈ ಕನ್ಸರ್ನ್ ಕಂಡುಬರುವುದಿಲ್ಲ. ಮಹಿಳೆ ಹುಷಾರು ತಪ್ಪಿದಾಗ ಆರೈಕೆ ಮಾಡುವ ಬಗ್ಗೆ ಯಾರೂ ಸಹ ಗಮನಹರಿಸುವುದಿಲ್ಲ. ಇದು ಹೆಚ್ಚಿನ ಮಹಿಳೆಯರಿಗೆ ಬೇಸರವನ್ನುಂಟು ಮಾಡುವ ವಿಷಯವಾಗಿದೆ. ಹೀಗಾಗಿಯೇ ಒಂಟಿಯಾಗಿರುವುದು ಉತ್ತಮ ಎಂದು ಅವರು ಅಂದುಕೊಳ್ಳುತ್ತಾರೆ,