ಆಕೆಯ ಮುಖ ನೋಡಿ ಟ್ರಾಫಿಕ್‌ ರೂಲ್ಸ್‌ ಬ್ರೇಕ್ ಮಾಡಿದ ಕಾರನ್ನು ಹೋಗಲು ಬಿಟ್ಟ ಪೊಲೀಸರು..!

ತನ್ನದೇ ಅರಿಶಿಣ ಶಾಸ್ತ್ರಕ್ಕೆ ಹೋಗುತ್ತಿದ್ದ ವಧುವಿನ ಕಾರನ್ನು ಸಂಚಾರ ನಿಯಮ ಉಲ್ಲಂಘನೆಯ ಕಾರಣಕ್ಕೆ ಪೊಲೀಸರು ತಡೆದಿದ್ದಾರೆ. ಈ ವೇಳೆ ವಧು ಪೊಲೀಸರಿಗೆ ಮಾಡಿದ ಮನವಿ ಹಾಗೂ ಅವರ ಪ್ರತಿಕ್ರಿಯೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

Punjab Traffic police's sweet response to brides request viral

ತನ್ನದೇ ಅರಿಶಿಣ ಶಾಸ್ತ್ರಕ್ಕೆ ಹೋಗುತ್ತಿದ್ದ ವಧುವಿನ ಕಾರನ್ನು ಸಂಚಾರ ನಿಯಮ ಉಲ್ಲಂಘನೆಯ ಕಾರಣಕ್ಕೆ ಪೊಲೀಸರು ತಡೆದಿದ್ದಾರೆ. ಈ ವೇಳೆ ವಧು ಪೊಲೀಸರಿಗೆ ಮಾಡಿದ ಮನವಿ ಹಾಗೂ ಅವರ ಪ್ರತಿಕ್ರಿಯೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್‌ ಅಂಚಲ್ ಆರೋರಾ ಅವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ತಮ್ಮದೇ ಮದುವೆ ದಿನ ಅರಿಶಿಣ ಶಾಸ್ತ್ರ ನಡೆಯುವ ಸ್ಥಳಕ್ಕೆ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಸಂಚಾರ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಅವರನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ವಧು ಪೊಲೀಸರ ಜೊತೆ ನಗುನಗುತ್ತಾ ಮಾತನಾಡಿ ನೈಸ್ ಮಾಡಿದ್ದು, ಅವರ ಮನವೊಲಿಸಿ ಕಾರನ್ನು ಬಿಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ. 

ವೈರಲ್ ಆದ ವೀಡಿಯೋದಲ್ಲಿ ಅಂಚಲ್ ಅವರು ಟ್ರಾಫಿಕ್ ಪೊಲೀಸರ ಬಳಿ ಇಂದು ನನ್ನ ಅರಿಶಿಣ ಶಾಸ್ತ್ರದ ಕಾರ್ಯಕ್ರಮವಿದೆ ಹೋಗಲು ಬಿಡಿ ಎಂದು ಮನವಿ ಮಾಡಿದ್ದಾರೆ. ವಧುವಿನ ಮುದ್ದಾದ ಬೇಡಿಕೆಗೆ ಕರಗಿದ ಟ್ರಾಫಿಕ್ ಪೊಲೀಸರು ಆಕೆಗೆ ಹೋಗಲು ಬಿಟ್ಟಿದ್ದು, ಚಲನ್ ಇಶ್ಯು ಮಾಡಿ ಹಣ ಕಟ್ಟಿಸಿಕೊಳ್ಳುವ ಬದಲು, 'ಬಾಯಿ ಸಿಹಿ ಮಾಡಿ ಹೋಗಿ' ಎಂದು ಮನವಿ ಮಾಡಿದ್ದಾರೆ. ಈ ದೃಶ್ಯವನ್ನು ಕಾರಿನ ಮೊದಲ ಸೀಟಿನಲ್ಲಿ ಕುಳಿತಿರುವ ವಧುವಿನ ಸಂಬಂಧಿಗಳು ಯಾರೋ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ವೈರಲ್ ಆಗಿದೆ. 

Latest Videos

ಇದೇ ವೇಳೆ ಕಾರಿನ ಚಾಲಕ ಸಿಹಿಯ ಪೊಟ್ಟಣವನ್ನು ಪಕ್ಕ ತರುವುದಾಗಿ ಪೊಲೀಸರಿಗೆ ಭರವಸೆ ನೀಡುತ್ತಿರುವುದು ಕೇಳಿಸುತ್ತಿದೆ. ಇದರ ಜೊತೆಗೆ ಅಂಚಲ್ ಕೂಡ ಹಳದಿ ಕಾರ್ಯಕ್ರಮ ಮುಗಿಸಿ ಬರುತ್ತಿದ್ದಂತೆ ಸಿಹಿ ನೀಡುವುದಾಗಿ ಪೊಲೀಸರಿಗೆ ಭರವಸೆ ನೀಡಿದ್ದಾರೆ. ಈ ವೀಡಿಯೋ ನೋಡಿದ ನೆಟ್ಟಿಗರು ಅಂಚಲ್‌ಗೆ ಶುಭ ಹಾರೈಸುವುದರ ಜೊತೆಗೆ ಟ್ರಾಫಿಕ್ ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಬಹುಶಃ ಪೊಲೀಸರು ಟ್ರಾಫಿಕ್ ರೂಲ್ಸ್ ಫಾಲೋ ಮಾಡದೇ ಸಿಕ್ಕಿ ಬಿದ್ದವರನ್ನು ಹಣ ಪಡೆಯದೇ ಇದೇ ಮೊದಲ ಬಾರಿಗೆ ಹಾಗೆಯೇ ಬಿಟ್ಟಿದ್ದಾರೆ ಅನಿಸುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇಲ್ಲಿ ಲಿಂಗವನ್ನು(ಹುಡುಗಿ ಬದಲು ಹುಡುಗ) ಬದಲಾಗಿದ್ದರೆ ಕತೆ ಬೇರೆ ಇರುತ್ತಿತ್ತು ಎಂದು ಕಾಮೆಂಟ್ ಮಾಡಿದ್ದಾರೆ.  ಪೊಲೀಸರು ಹುಡುಗಿಯರಿಗೊಂದು ಹುಡುಗರಿಗೊಂದು ರೂಲ್ಸ್ ಮಾಡ್ತಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಂದು ವೇಳೆ ಹುಡುಗನಾಗಿರುತ್ತಿದ್ದರೆ, ಈ ಪೊಲೀಸರು ಆತನನ್ನು ಮೊದಲ ರಾತ್ರಿಯವರೆಗೂ ಬಿಡುತ್ತಿರಲಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಸಖತ್ ವೈರಲ್ ಆಗಿದ್ದು, ಈ ವೀಡಿಯೋ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.

 
 
 
 
 
 
 
 
 
 
 
 
 
 
 

A post shared by Aanchal Arora (@aanchal.19)

 

click me!