ಮಹಿಳೆಯರಿಗೆ ಪ್ರಧಾನಿ ಬಂಪರ್ ಯೋಜನೆ: ಮಾಸಿಕ 7 ಸಾವಿರ-ಉದ್ಯೋಗಕ್ಕೆ ದಾರಿ; ಅರ್ಜಿ ಸಲ್ಲಿಕೆ ಹೀಗಿದೆ

By Suchethana D  |  First Published Dec 10, 2024, 1:35 PM IST

ಮಹಿಳೆಯರು ಆರ್ಥಿಕವಾಗಿ ಸಬಲರಾಗುವ ನಿಟ್ಟಿನಲ್ಲಿ ಪ್ರಧಾನಿ ಬಂಪರ್ ಯೋಜನೆ ಆರಂಭಿಸಿದ್ದಾರೆ. ಮಾಸಿಕ 7 ಸಾವಿರ-ಉದ್ಯೋಗಕ್ಕೆ ದಾರಿ ಒದಗಿಸಿಕೊಡಲಿದೆ. ಅರ್ಜಿ ಸಲ್ಲಿಕೆ ಸಂಪೂರ್ಣ ವಿವರ ಇಲ್ಲಿದೆ...
 


ಕೇಂದ್ರ ಸರ್ಕಾರದ ವತಿಯಿಂದ ಇದಾಗಲೇ ಜನೋಪಯೋಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಉದ್ಯೋಗಕ್ಕೆ ನೆರವಾಗುವ, ಅದರಲ್ಲಿಯೂ ಮಹಿಳಾ ಕೇಂದ್ರೀಕೃತ ಯೋಜನೆಗಳು ಹಲವಾರಿವೆ. ಕೃಷಿ ಕ್ಷೇತ್ರದಲ್ಲಿನ ಮಹಿಳೆಯರಿಗೆ ಸೇರಿದಂತೆ ಸ್ವಸಹಾಯ ಗುಂಪುಗಳ ಮಹಿಳೆಯರವರೆಗೆ ಇದಾಗಲೇ ಹಲವು ಯೋಜನೆಗಳು ಜಾರಿಯಲ್ಲಿವೆ. ಇದೀಗ ಮಹಿಳೆಯನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ನಿಟ್ಟಿನಲ್ಲಿ ಹೊಸ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದ್ದು, ಅದಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದಾರೆ. ಈ ಯೋಜನೆಯ ಹೆಸರು ಬಿಮಾ ಸಖಿ ಯೋಜನೆ. 
ಎಲ್‌ಐಸಿ ಅಂದ  ಭಾರತೀಯ ಜೀವ ವಿಮಾ ನಿಗಮ ಯೋಜನೆ ಇದಾಗಿದೆ. ಈ ಯೋಜನೆ ಮೂಲಕ ಆರಂಭದಲ್ಲಿ 35 ಸಾವಿರ ಮಹಿಳೆಯರು ಉದ್ಯೋಗಗಕ್ಕೆ ತರಬೇತಿ ಪಡೆಯುವುದರ ಜೊತೆಗೆ ಮಾಸಿಕ ಏಳು ಸಾವಿರ ರೂಪಾಯಿಗಳ ಸ್ಟೈಪೆಂಡ್‌ ಕೂಡ ಪಡೆಯಬಹುದಾಗಿದೆ.  ಮಹಿಳೆಯರು ಎಲ್​ಐಸಿ ಏಜೆಂಟ್​ಗಳಾಗಲು ಈ ಯೋಜನೆ ಅವಕಾಶ ಕಲ್ಪಿಸಿದೆ.  ಈ ಯೋಜನೆಯ ಮುಖ್ಯ ಉದ್ದೇಶ, ಮಹಿಳೆಯರು ವಿಮಾ ಪಾಲಿಸಿ ಮಾಡುವ ಮೂಲಕ ಭವಿಷ್ಯದ ಭದ್ರತೆಯನ್ನು ಕಲ್ಪಿಸಿಕೊಳ್ಳುವುದು ಆಗಿದೆ ಎಂದಿದ್ದಾರೆ ಪ್ರಧಾನಿ. ಗ್ರಾಮೀಣ ಪ್ರದೇಶಗಳಲ್ಲಿ  ವಿಮೆಗಳು ಅಂದರೆ ಇನ್ಷೂರೆನ್ಸ್ ಇದುವರೆಗೂ ಜನರಿಗೆ ತಲುಪುತ್ತಿಲ್ಲ. ಇದೇ ಕಾರಣಕ್ಕೆ  ಗ್ರಾಮೀಣ ಪ್ರದೇಶಗಳ ಮಹಿಳೆಯರಿಗೆ ಆದ್ಯತೆ ನೀಡುವ ಯೋಜನೆ ಇದಾಗಿದೆ.

ಮೇಲೆ ಹೋಗುವ ಗುಟುಕು ನೀರನ್ನೂ ಹಾರಿಯೇ ಕುಡಿಯಬೇಕು: ಬಾಹ್ಯಾಕಾಶದಿಂದ ಸುನಿತಾ ವಿಲಿಯಮ್ಸ್‌ ವಿಡಿಯೋ ವೈರಲ್‌

Tap to resize

Latest Videos

ಈ ಯೋಜನೆಯ ಅಡಿ ತರಬೇತಿ ಪಡೆಯುವ ಮಹಿಳೆಯರು ಕನಿಷ್ಠ ಹತ್ತನೇ ಕ್ಲಾಸ್ ಓದಿರಬೇಕು. 18 ವರ್ಷದಿಂದ 70 ವರ್ಷ ವಯೋಮಾನದ ಎಲ್ಲಾ ಮಹಿಳೆಯರಿಗೂ ವಿಮಾ ಸಖಿಯರಾಗಲು ಅಂದರೆ ವಿಮಾ ಏಜೆಂಟ್‌ ಆಗಲು ಅರ್ಹರಾಗಿರುತ್ತಾರೆ.  ಬಿಮಾ ಸಖಿಯಾಗಲು ಇಚ್ಛಿಸುವ ಮಹಿಳೆಯರಿಗೆ ಮೂರು ವರ್ಷಗಳ ತರಬೇತಿ ನೀಡಲಾಗುತ್ತದೆ.  ಆ ಬಳಿಕ ಅವರನ್ನು ಎಲ್​ಐಸಿ ಏಜೆಂಟ್​ಗಳನ್ನಾಗಿ ಮಾಡಲಾಗುತ್ತದೆ. ಗ್ರಾಮೀಣ ಪ್ರದೇಶಗಳ ಹೆಚ್ಚು ಜನರಿಗೆ ವಿಮಾ ಸೌಲಭ್ಯ ತಲುಪಿಸುವ ಗುರಿ ಸರ್ಕಾರದ್ದಾಗಿರುವ ಹಿನ್ನೆಲೆಯಲ್ಲಿ, ಈ ತರಬೇತಿಗೂ ಗ್ರಾಮೀಣ ಮಹಿಳೆಯರಿಗೇ ಆದ್ಯತೆ ನೀಡಲಾಗುತ್ತದೆ.  
   
ಮೂರು ವರ್ಷಗಳ ತರಬೇತಿ ಅವಧಿ ಇದಾಗಿರುತ್ತದೆ.  ಮೊದಲ ವರ್ಷ ತಿಂಗಳಿಗೆ 7,000 ರೂಪಾಯಿ ಸ್ಟೈಪೆಂಡ್ ನೀಡಲಾಗುತ್ತದೆ. ಎರಡನೇ ವರ್ಷದಲ್ಲಿ 6,000 ಹಾಗೂ ಮೂರನೇ ವರ್ಷದಲ್ಲಿ 5,000 ರೂ ಮಾಸಿಕ ಸ್ಟೈಪೆಂಡ್ ನಿಡಲಾಗುತ್ತದೆ. ಇದರ ನಿಯಮ ಏನೆಂದರೆ, ಮೊದಲ ವರ್ಷದಲ್ಲಿ ಹೇಳಿಕೊಡಲಾಗುವ ಪಾಲಿಸಿಗಳಲ್ಲಿ ಶೇಕಡಾ 65ಕ್ಕೂ ಹೆಚ್ಚು ಭಾಗವನ್ನು ಅಭ್ಯರ್ಥಿಗಳು ಕಲಿತಿದ್ದರೆ ಎರಡನೇ ವರ್ಷದಲ್ಲಿ ಸ್ಟೈಪೆಂಡ್ ಸಿಗುತ್ತದೆ. ಹಾಗೆಯೇ, ಎರಡನೇ ವರ್ಷದಲ್ಲಿ ಕೂಡ ಈ ನಿಯಮ ಅನ್ವಯ ಆಗುತ್ತದೆ. ಶೇಕಡಾ 65ಕ್ಕೂ ಹೆಚ್ಚು ಪಾಲಿಸಿಗಳ ಬಗ್ಗೆ ತಿಳಿದಿದ್ದರೆ ಮಾತ್ರ ಮೂರನೇ ವರ್ಷದಲ್ಲಿ ಸ್ಟೈಪೆಂಡ್ ಸಿಗುತ್ತದೆ. ಮೂರೂ ವರ್ಷಗಳನ್ನು ಯಶಸ್ವಿಯಾಗಿ ತರಬೇತಿ ಪಡೆದು  ನಿಗದಿತ ಗುರಿಯಷ್ಟು ಪಾಲಿಸಿಗಳನ್ನು ಮಾರುವ ಅಭ್ಯರ್ಥಿಗಳಿಗೆ ಕಮಿಷನ್ ಕೂಡ ಸಿಗುತ್ತದೆ. ಮುಂದಿನ ದಿನಗಳಲ್ಲಿ  50 ಸಾವಿರ ಮಹಿಳೆಯರನ್ನು ಬಿಮಾ ಸಖಿಗಳಾಗಿ ನೇಮಿಸಿಕೊಳ್ಳುವ ಉದ್ದೇಶ ಇದೆ.

ಅಪ್ಪು ಬಣ್ಣ ಕಪ್ಪು ಎಂದವರಿಗೆ ಡಾ.ರಾಜ್‌ ಹೇಳಿದ್ದೇನು? ಕುತೂಹಲದ ಹಳೆಯ ವಿಡಿಯೋ ವೈರಲ್‌
 

ಅಧಿಕೃತ LIC ಇಂಡಿಯಾ ವೆಬ್‌ಸೈಟ್‌ಗೆ ಭೇಟಿ ನೀಡಿ. ಬಿಮಾ ಸಖಿಗಾಗಿ   ಕ್ಲಿಕ್ ಮಾಡಿ. ಇಲ್ಲವೇ ನೇರವಾಗಿ ಈ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ... https://agencycareer.licindia.in/agt_req/New_Lead_Sakhi_Candidate_Data_entry_For_NewWeb.php
ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ (ಹೆಸರು, ಹುಟ್ಟಿದ ದಿನಾಂಕ, ಸಂಪರ್ಕ ಮಾಹಿತಿ, ಇತ್ಯಾದಿ). ಸಬ್‌ಮಿಟ್‌ ಮಾಡಿ. 
 

click me!