ಮಾಮ್ಸ್‌ಪ್ರೆಸ್ಸೋ ಅಂತೊಂದು ವೆಬ್‌ಸೈಟ್ ಇದೆ. ಒಂದಿಷ್ಟು ಜನ ಅಮ್ಮಂದಿರು ತಾಯ್ತನದ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಕೆಲವು ದಿನಗಳ ಹಿಂದೆ ಇಲ್ಲೊಂದು ಚಿಕ್ಕ ಅನುಭವ ಕಥೆನ ಬಂತು. ನೋಯ್ಡಾದ ಸಾಕ್ಷಿ ಎಂಬಾಕೆ ಬರೆದದ್ದು ಆ ಬರಹ ಹೀಗಿದೆ...
ನಾನು ಮದುವೆಯಾಗಿದ್ದು 18ನೇ ವಯಸ್ಸಿಗೆ. ನಮ್ಮದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಆ ಹೊತ್ತಿಗೆ ನನ್ನ ಹುಡುಗನ ಜೊತೆಗೆ ಒಂದು ಒಪ್ಪಂದ ಮಾಡಿಕೊಂಡಿದ್ದೆ, ಮದುವೆಯ ನಂತರವೂ ನನ್ನ ಓದು ಮುಂದುವರಿಸುತ್ತೇನೆ ಅಂತ. ಅತ್ತೆ, ನಾದಿನಿ, ಸಂಬಂಧಿಕರ ವಿರೋಧದ ನಡುವೆ ಗಂಡನ ಸಪೋರ್ಟ್‌ನಲ್ಲಿ ಓದು ಮುಂದುವರಿಸಿದೆ. ಮುಂದೆ
ಕೆಲಸಕ್ಕೂ ಸೇರಿದೆ. ಈ ನಡುವೆ ನನ್ನ ಪ್ರೆಗ್ನೆನ್ಸಿ ವಿಳಂಬವಾಯ್ತು, ಇದಕ್ಕೂ ಹೆಚ್ಚಾಗಿ ಹೇಳಬೇಕೆಂದರೆ ನಾವು ಮಗುವಿನ ಬಗ್ಗೆ ನಿರ್ಧಾರ ಮಾಡಿರಲಿಲ್ಲ.
ಅಮ್ಮ, ನೀನೇ ಅರ್ಥ ಮಾಡಿಕೊಳ್ಳದಿದ್ರೆ ಮತ್ಯಾರು ಮಾಡ್ಕೋತಾರೆ?
ಈ ನಡುವೆ ನನಗೆ ಪಿಸಿಓಡಿ ಹಾಗೂ ಥೈರಾಯ್ಡ್ ಕಾಣಿಸಿಕೊಂಡವು. (ಪಿಸಿಓಡಿ ಅಂದರೆ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್- ಇದು ಹೆಚ್ಚಾಗಿ ಲೈಫ್‌ಸ್ಟೈಲ್‌ನಿಂದ ಬರುವ ಸಮಸ್ಯೆ. ಋತುಚಕ್ರದಲ್ಲಿ ಏರುಪೇರಾಗುವುದು ಮುಖ್ಯಲಕ್ಷಣ. ಸ್ಥೂಲಕಾಯ, ಥೈರಾಯ್ಡ್ ಇದಕ್ಕೆ ಜೊತೆಯಾಗಿ ಗರ್ಭ ಧರಿಸಿದರೆ ಗರ್ಭಪಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ) ಆ ಸಮಯದಲ್ಲಿ ನಾನು ಗರ್ಭ ನಿರೋಧಕ ಸೇವಿಸುತ್ತಿದ್ದೆ. ಅದರಲ್ಲಿ ನನ್ನ ಪಿಸಿಓಡಿಯನ್ನು ನಿಯಂತ್ರಿಸುವ ಔಷಧಿಯೂ ಸೇರಿತ್ತು.
ಒಂದಿಷ್ಟು ವರ್ಷ ಕೆಲಸ ಮಾಡಿದ ಮೇಲೆ ಮಗು ಬೇಕು ಅನ್ನುವ ನಿರ್ಧಾರಕ್ಕೆ ನಾವಿಬ್ಬರೂ ಬಂದೆವು. ಅದರ ಮೊದಲ ಹೆಜ್ಜೆಯಾಗಿ ಗರ್ಭ ನಿರೋಧಕ ತಿನ್ನೋದನ್ನು ನಿಲ್ಲಿಸಿದೆ. ಯಾವಾಗ ಟ್ಯಾಬ್ಲೆಟ್ಸ್ ನುಂಗೋದನ್ನು ನಿಲ್ಲಿಸಿದೆನೋ ಆಗ ರಿಯಾಕ್ಷನ್ ಶುರುವಾಯ್ತು. ಚರ್ಮದಲ್ಲಿ ಗುಳ್ಳೆಗಳಾದವು, ಮುಖದ ಮೇಲೆಲ್ಲ ವಿಪರೀತ ಕೂದಲು ಬೆಳೆಯಲಾರಂಭಿಸಿತು. ತಲೆಕೂದಲು ವಿಪರೀತ ಉದುರಲಾರಂಭಿಸಿತು. ಗರ್ಭ ಧರಿಸಬೇಕೆಂದರೆ ಇದನ್ನೆಲ್ಲ ಅನುಭವಿಸೋದು ಅನಿವಾರ್ಯವಾಗಿತ್ತು.
ಅಮ್ಮನಾದ ಬಳಿಕದ ಸವಾಲುಗಳು ಸುಲಭವಿಲ್ಲ, ಆದರೆ ನೀವು ಒಂಟಿಯಲ್ಲ!
ಇಷ್ಟೆಲ್ಲ ಆಗಿ ನಾನು ಗರ್ಭವತಿಯಾಗಲು ಒಂದು ವರ್ಷ ಬೇಕಾಯ್ತು. ಅಬ್ಬಾ, ಸದ್ಯ ಹೇಗಾದ್ರೂ ಮುಗೀತಲ್ಲಾ, ಮುಂದಿನ ಹಾದಿ ಸುಗಮವಾಗಿರುತ್ತೆ ಅಂದುಕೊಂಡೆ. ಇದೆಲ್ಲ ಎಲ್ಲಿಯವರೆಗೆ ಅಂದರೆ ನನ್ನ ಐದನೇ ತಿಂಗಳ ಸ್ಕ್ಯಾನ್ ಆಗುವವರೆಗೆ. ಆ ಸ್ಕ್ಯಾನ್‌ನಲ್ಲಿ ಡಾಕ್ಟರ್ ಒಂದು ಶಾಕಿಂಗ್ ವಿಷಯ ಹೇಳಿದರು. ನನ್ನ ಹೊಟ್ಟೆಯೊಳಗಿರುವ ಮಗುವಿಗೆ Peri-cardial effusion ಪೆರಿ ಕಾರ್ಡಿಯಲ್ ಎಫ್ಯೂಜನ್ ಆಗಿದೆ ಅಂತ. ಈ ಸಮಸ್ಯೆಯಲ್ಲಿ ಮಗುವಿನ ಹೃದಯ ಹಾಗೂ ಅದರ ಸುತ್ತ ದ್ರವ ಅಥವಾ ಫ್ಲುಯಿಡ್ ತುಂಬಿಕೊಂಡಿದ್ದು ಮಗುವಿನ ಎದೆ ಬಡಿತ ಕ್ಷೀಣಿಸುತ್ತಾ ಹೋಗುತ್ತದೆ. ‘ನಿಮ್ ಮುಂದೆ ಎರಡು ಆಯ್ಕೆಗಳಿವೆ, ಮೊದಲನೆಯದು ಅಬಾರ್ಶನ್ ಮಾಡಿಸಿಕೊಳ್ಳೋದು, ಎರಡನೆಯದು ಮಗು ಹುಟ್ಟಿದ ಕೂಡಲೇ ಓಪನ್ ಹಾರ್ಟ್ ಸರ್ಜರಿ
ಮಾಡಿ ಸಮಸ್ಯೆ ಸರಿ ಪಡಿಸಿಕೊಳ್ಳೋದು’ ಅಂದರು ಡಾಕ್ಟರ್.
ನಾನು ಗರ್ಭಪಾತಕ್ಕೆ ಒಪ್ಪಲಿಲ್ಲ. ಹಾಗಂತ ನನ್ನ ಮಗು ರೋಗಗ್ರಸ್ಥನಾಗಿ ಹುಟ್ಟಿ ಬದುಕಿಡೀ ನರಳುವುದೂ ನನಗೆ ಬೇಕಿರಲಿಲ್ಲ. ನನಗೆ ಆ ಕಂದ ಬದುಕಿಡೀ ನಗುವುದು ಬೇಕಿತ್ತು. ಅದಕ್ಕೆ ನಾನು ಬದಲಾಗಲು ನಿರ್ಧರಿಸಿದೆ. ನನ್ನ ಸುತ್ತಲಿನ ನೋವು, ದುಃಖ, ಅಸಹನೆ ಎಂಬೆಲ್ಲ ಕಸವನ್ನು ಮನಸ್ಸಿನಾಚೆ ಸರಿಸಿದೆ. ಏನು ಬಂದರೂ ಎದುರಿಸುವೆ ಅಂತ ಧೈರ್ಯವಾಗಿ ನಿಂತೆ. ನಾನು ಯಾರ ಜೊತೆಗಿದ್ದರೆ ಹೆಚ್ಚು ಖುಷಿಯಿಂದಿರುವೆನೋ ಅಂಥವರ ಜೊತೆಗೆ ಹೆಚ್ಚೆಚ್ಚು ಸಮಯ ಕಳೆಯತೊಡಗಿದೆ. ಸದಾ ಮನಸ್ಸನ್ನು ಸಂತೋಷವಾಗಿಯೇ ಇಡುತ್ತಿದ್ದೆ. ಪಾಸಿಟಿವ್ ಎನರ್ಜಿ
ನನ್ನನ್ನು ಹಗುರವಾಗಿಸಿತ್ತು. ಸಣ್ಣ ಅಸಂತೋಷವೂ ಹತ್ತಿರ ಸುಳಿಯಗೊಡುತ್ತಿರಲಿಲ್ಲ.
ಕೋಪದಿಂದ ಸಿಡುಕಿ, ಮತ್ತೊಂದು ಕ್ಷಣ ಅಮ್ಮಾ ಅಂದರೆ ಮುಗುಳ್ನಗುತ್ತಾಳೆ!
ನಾನಾಗ 35 ವಾರಗಳ ತುಂಬು ಗರ್ಭವತಿಯಾಗಿದ್ದೆ. ಆಗ ಮತ್ತೊಮ್ಮೆ ಸ್ಕ್ಯಾನಿಂಗ್ ಆಯ್ತು. ಡಾಕ್ಟರ್ ಅಂದರು, ‘ಎರಡೆರಡು ಸಲ ಟೆಸ್ಟ್ ಮಾಡಿದ್ವಿ. ನಿಮ್ಮ ಮಗುವೀಗ ಫೆರಿ ಕಾರ್ಡಿಯಲ್ ಎಫ್ಯೂಶನ್‌ನಿಂದ ಹೊರಬಂದಿದೆ. ಉಳಿದ ಶಿಶುಗಳಂತೆ ನಾರ್ಮಲ್ ಆಗಿದೆ’. ನನ್ನ ಆ ಕ್ಷಣದ ಖುಷಿಯಲ್ಲಿ ಹೇಗೆ ವರ್ಣಿಸಲಿ.. ಆದರೆ ಆಗ ಒಂದು ವಿಷಯವಂತೂ ಸ್ಪಷ್ಟವಾಯ್ತು. ತಾಯಿಗ ವಿಶೇಷ ಗುಣವಿದೆ. ಎಂಥಾ ಕ್ಲಿಷ್ಟಕರ ಪರಿಸ್ಥಿತಿಯನ್ನೂ ನಿಭಾಯಿಸಿ ಪಾಸಿಟಿವ್ ರಿಸಲ್ಟ್ ಬರುವಂತೆ ಮಾಡುವ ಶಕ್ತಿಯದು. ಇಂಥದ್ದೊಂದು ಕ್ಲಿಷ್ಟಕರ ಜರ್ನಿಯ ಭಾಗ ನಾನಾಗಿದ್ದೆ ಅನ್ನುವುದು ನನಗೀಗ ಹೆಮ್ಮೆ.