
ಇತ್ತೀಚಿನ ದಿನಗಳಲ್ಲಿ ದಂಪತಿಗಳು ಒಂದು ಅಥವಾ ಎರಡು ಮಕ್ಕಳ ಯೋಜನೆಗೆ ಆದ್ಯತೆ ನೀಡುತ್ತಾರೆ. ಕುಟುಂಬದ ಗಾತ್ರವನ್ನು ಆಯ್ಕೆ ಮಾಡುವುದು ದಂಪತಿಗಳ ಸ್ಥಿತಿ, ಆರೋಗ್ಯ, ಆರ್ಥಿಕ ಸಾಮರ್ಥ್ಯ ಮತ್ತು ಅವರ ಆಯ್ಕೆಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುತ್ತದೆ. ಪೋಷಕರು ಮಗುವಿಗೆ ಉತ್ತಮ ಸಮಯ, ಶಿಕ್ಷಣ ಮತ್ತು ಭಾವನಾತ್ಮಕ ಬೆಂಬಲವನ್ನು ಒದಗಿಸಲು ಸಾಧ್ಯವಾದರೆ, ಆ ಕುಟುಂಬವು ಪರ್ಫೆಕ್ಟ್ ಆಗಿದೆ. ಆದರೆ, ಎರಡು ಮಕ್ಕಳನ್ನು ಹೊಂದಲು ಪ್ಲ್ಯಾನ್ ಮಾಡುತ್ತಿರುವ ದಂಪತಿಗಳಿಗೆ ಅನೇಕ ಪ್ರಯೋಜನಗಳಿವೆ. ಮಗುವಿಗೆ ಸಹೋದರ ಅಥವಾ ಸಹೋದರಿಯ ರೂಪದಲ್ಲಿ ಭಾವನಾತ್ಮಕ ಬೆಂಬಲ ಸಿಗುತ್ತದೆ, ಆದರೆ ಎರಡು ಮಕ್ಕಳ ಬಗ್ಗೆ ಪ್ಲಾನಿಂಗ್ ಮಾಡುವ ಮುನ್ನ ಈ ವಿಷ್ಯಗಳು ತಿಳಿದಿರಲಿ.
ಗರ್ಭಧಾರಣೆಗೆ ಮುನ್ನ ಪುರುಷರು ಮತ್ತು ಮಹಿಳೆಯರು ಇಬ್ಬರೂ ತಮ್ಮ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಬೇಕು. ಇದರಲ್ಲಿ ಇವು ಸೇರಿವೆ:
20 ರಿಂದ 35 ವರ್ಷಗಳ ನಡುವಿನ ವಯಸ್ಸನ್ನು ಸಾಮಾನ್ಯವಾಗಿ ಮಹಿಳೆಯರು ಗರ್ಭಧರಿಸಲು ಸೂಕ್ತವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ಫಲವತ್ತತೆ ಹೆಚ್ಚಾಗಿರುತ್ತದೆ. 35 ವರ್ಷಗಳ ನಂತರ, ಗರ್ಭಧಾರಣೆಯು ಹೆಚ್ಚಿನ ಅಪಾಯಗಳೊಂದಿಗೆ ಸಂಬಂಧ ಹೊಂದಿರಬಹುದು, ಉದಾಹರಣೆಗೆ:
ಪ್ರೆಗ್ನೆನ್ಸಿ ಪ್ಲಾನ್ ಮಾಡುವ ಮೊದಲು ದಂಪತಿಗಳು ತಮ್ಮ ಜೀವನಶೈಲಿಯನ್ನು ಸುಧಾರಿಸಿಕೊಳ್ಳಬೇಕು. ಮಹಿಳೆಯರು ತಮ್ಮ ವೈದ್ಯರ ಸಲಹೆಯಂತೆ ಫೋಲಿಕ್ ಆಸಿಡ್ ಸಪ್ಲಿಮೆಂಟ್ ತೆಗೆದುಕೊಳ್ಳಲು ಪ್ರಾರಂಭಿಸಬೇಕು, ಏಕೆಂದರೆ ಇದು ಮಗುವಿನ ಆರಂಭಿಕ ಬೆಳವಣಿಗೆಗೆ ನಿರ್ಣಾಯಕವಾಗಿದೆ.
ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಎರಡು ಮಕ್ಕಳ ನಡುವಿನ ಸೂಕ್ತ ಅಂತರವು ಮುಖ್ಯವಾಗಿದೆ. ವೈದ್ಯರು ಸಾಮಾನ್ಯವಾಗಿ ಮೊದಲ ಮಗುವಿನ ಜನನದ ನಂತರ ಸುಮಾರು 18 ರಿಂದ 24 ತಿಂಗಳ ಅಂತರವನ್ನು ಶಿಫಾರಸು ಮಾಡುತ್ತಾರೆ, ಇದರಿಂದ ತಾಯಿಯ ದೇಹವು ಮೊದಲ ಗರ್ಭಧಾರಣೆ ಮತ್ತು ಹೆರಿಗೆಯಿಂದ ಚೇತರಿಸಿಕೊಳ್ಳಬಹುದು ಮತ್ತು ಪೌಷ್ಠಿಕಾಂಶದ ಕೊರತೆಯನ್ನು ತುಂಬಬಹುದು. ಎರಡನೇ ಮಗುವಿಗೆ ಮತ್ತು ಮೊದಲ ಮಗುವಿಗೆ ಸಾಕಷ್ಟು ಸಮಯ ಮತ್ತು ಆರೈಕೆಗಾಗಿ ತಾಯಿಯು ಮಾನಸಿಕವಾಗಿ ಸಿದ್ಧಳಾಗಿರಬೇಕು. ತುಂಬಾ ಕಡಿಮೆ ಅಂತರ ಇದ್ದರೆ ತಾಯಿಯ ದೌರ್ಬಲ್ಯ, ರಕ್ತಹೀನತೆ ಮತ್ತು ಎರಡನೇ ಗರ್ಭಧಾರಣೆಗೆ ಸಂಬಂಧಿಸಿದ ಇತರ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಯೋಚನೆ ಮಾಡಿ ನಿರ್ಧಾರ ಮಾಡಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.