ನವ ವಧು ವರರನ್ನು ಮನೆ ತುಂಬಿಸಿಕೊಳ್ಳುವ ಶಾಸ್ತ್ರ ನೋಡಿದ್ದೇವೆ. ಆದರೆ ಇದೇ ಶಾಸ್ತ್ರದಲ್ಲಿ ತಲೆ ಸ್ಪರ್ಶಿಸುವ ಸಂಪ್ರದಾಯ ಕೇಳಿದ್ದೀರಾ? ಈ ರೀತಿಯ ಸಂಪ್ರದಾಯವಿದೆ. ಆದರೆ ಈ ಸಂಪ್ರದಾಯ ಆಚರಣೆ ವೇಳೆ ವಧುವಿನ ತಲೆಗೆ ತೀವ್ರಗಾಯವಾಗಿದೆ. ಈ ಘಟನೆ ಕುರಿತು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಮಹಿಳಾ ಆಯೋಗ ತನಿಖೆಗೆ ಆದೇಶಿಸಿದೆ.
ಪಾಲಕ್ಕಾಡ್(ಜೂ.30) ಮದುವೆ ಮಹೋತ್ಸವ ಮುಗಿದಿದೆ. ಮನಗೆ ನವ ವಧು ವರರು ಆಗಮಿಸಿದ್ದಾರೆ. ಇನ್ನು ವಧುವನ್ನು ಮನೆ ತುಂಬಿಸಿಕೊಳ್ಳುವ ಶಾಸ್ತ್ರ. ಇದಕ್ಕಾಗಿ ಕುಟಂಬಸ್ಥರು ಎಲ್ಲಾ ಸಿದ್ದತೆ ಮಾಡಿದ್ದಾರೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮನೆ ತುಂಬಿಸಿಕೊಳ್ಳುವ ಶಾಸ್ತ್ರದಲ್ಲಿ ವಧು ಸೇರು ಒದ್ದು ಮನೆಯೊಳಗೆ ಪ್ರವೇಶಿಸುವುದನ್ನು ಹೆಚ್ಚಾಗಿ ನೋಡಿರುತ್ತೇವೆ. ಕೇಳಿರುತ್ತೇವೆ. ಆದರೆ ಕೇರಳದಲ್ಲಿ ಈ ಶಾಸ್ತ್ರ ಭಿನ್ನವಾಗಿದೆ. ಇಲ್ಲಿ ತಲೆ ಸ್ಪರ್ಶಿಸುವ ಸಂಪ್ರದಾಯ. ಮನೆಯೊಳಗೆ ಪ್ರವೇಶಿರುವ ವಧು ಹಾಗೂ ವರರು ತಲೆ ತಲೆ ಸ್ಪರ್ಶಿಸಬೇಕು. ಬಳಿಕ ಒಳ ಪ್ರವೇಶಿಸಬೇಕು. ಗಂಡನ ಮನೆ ಪ್ರವೇಶಿಸುವಾಗ ವಧು ಅಳುತ್ತಾ ಪ್ರವೇಶ ಮಾಡಿದರೆ ಒಳ್ಳೆಯದು ಅನ್ನೋ ಸಂಪ್ರದಾಯ. ಹೀಗೆ ನವ ವಧು-ವರರು ಮನೆಯೊಳಗೆ ಪ್ರವೇಶಿಸುವಾಗ ಕಟುಂಬಸ್ಥರು ಒತ್ತಾಯಪೂರ್ವಕವಾಗಿ ವಧು ಹಾಗೂ ವರನ ತಲೆಯನ್ನು ಬಲವಾಗಿ ತಾಗಿಸಿದ ಘಟನೆ ನಡೆದಿದೆ. ಪಾಲಕ್ಕಾಡ್‌ನ ಈ ಸಂಪ್ರದಾಯದಿಂದ ವಧು ತೀವ್ರವಾಗಿ ಗಾಯಗೊಂಡಿದ್ದಾಳೆ. ಈ ಘಟನೆ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಮಹಿಳಾ ಆಯೋಗ ತನಿಖೆಗೆ ಆದೇಶಿಸಿದೆ.
ಸಚಿನ್ ಹಾಗೂ ಸಜ್ಲಾ ಮದುವೆ ಅದ್ದೂರಿಯಾಗಿ ನಡೆದಿದೆ. ಪಾಲಕ್ಕಾಡ್ ಸಂಪ್ರದಾಯದಿಂದ ವಧುವನ್ನು ಮನೆ ತುಂಬಿಸಿಕೊಳ್ಳುವಾಗ ಕುಟುಂಬಸ್ಥರು ಅಥವಾ ಹಿರಿಯರು ವಧು ಹಾಗೂ ವರರ ತಲೆಯನ್ನು ಸ್ಪರ್ಶಿಸುವಂತೆ ಮಾಡುತ್ತಾರೆ. ಮದುವೆ ಮುಗಿಸಿ ಸಚಿನ್ ಹಾಗೂ ಸಜ್ಲಾ ಮನೆಗೆ ಆಗಮಿಸಿದ್ದಾರೆ. ಪಾಲಕ್ಕಾಡ್ ತಲೆ ಸ್ಪರ್ಶಿಸುವ ಸಂಪ್ರದಾಯ ಕುರಿತು ಸಚಿನ್, ಸಜ್ಲಾಗೆ ಮಾಹಿತಿ ನೀಡಿದ್ದಾನೆ.
ಗಾಂಜಾ ಗುಂಗಿನಲ್ಲಿ ಸ್ನೇಹಿತರು ಪತ್ನಿಯ ಸೆರಗು ಎಳೆದ್ರೂ ಗಂಡ ಸೈಲೆಂಟ್, ಪ್ರೀತಿಸಿ ಮದುವೆಯಾಗಿದ್ದಕ್ಕೆ ಬಾಳು ನರಕ!
ನಯವಾಗಿ ಹಾಗೂ ಮೆಲ್ಲನೆ ತಲೆ ಸ್ಪರ್ಶಿಸುವ ಸಂಪ್ರದಾಯಕ್ಕೆ ನಾನ್ಯಾಕೆ ಅಡ್ಡಿ ಪಡಿಸಲಿ ಎಂದು ಮರು ಮಾತಿಲ್ಲದೆ ಮನೆ ಪ್ರವೇಶಿಸಲು ಸಜ್ಜಾಗಿದ್ದಾಳೆ. ಆದರೆ ಕುಟುಂಬಸ್ಥರು ಸಚಿನ್ ಹಾಗೂ ಸಜ್ಲಾ ತಲೆಯನ್ನು ಹಿಡಿದು ಬಲವಂತವಾಗಿ ಸ್ಪರ್ಶಿಸಿದ್ದಾರೆ. ಜೋರಾಗಿ ಬಡಿದ ಕಾರಣ ಸಜ್ಲಾ ತೀವ್ರವಾಗಿ ಗಾಯಗೊಂಡಿದ್ದಾಳೆ. ಸಂಭ್ರಮದಿಂದ ಮನೆ ಪ್ರವೇಶಿಸುವ ಬದಲು ಅಳುತ್ತಾ ಎಲ್ಲಾ ಸಂಭ್ರಮ ಅಂತ್ಯಗೊಂಡಿದೆ.
ಪತಿ ಜೊತೆ ಮನೆ ಪ್ರವೇಶಿಸುವ ಉತ್ತಮ ಘಳಿಗೆ ಅತ್ಯಂತ ಕೆಟ್ಟ ಘಳಿಗೆಯಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಜ್ಲಾ ಕೆಟ್ಟ ಅನುಭವ ಹಂಚಿಕೊಂಡಿದ್ದಾಳೆ. ನವ ವಧುವಿನ ಪೋಸ್ಟ್ ಭಾರಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ವ್ಯಕ್ತವಾಗಿದೆ. ಈ ಘಟನೆ ಕುರಿತು ಚರ್ಚೆಗಳು ಆರಂಭಗೊಂಡಿದೆ. ಇದರ ಬೆನ್ನಲ್ಲೇ ಕೇರಳ ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆಗೆ ಆದೇಶ ನೀಡಿದೆ.
ಮೇಷದಿಂದ ಕಟಕದವರೆಗೆ; ಅತ್ತೆಯನ್ನು ಮೆಚ್ಚಿಸೋ ಅದ್ಬುತ ಸೊಸೇರಿವರು!
ಕೊಲ್ಲಂಗೊಡು ಪೊಲೀಸ್ ಠಾಣೆಗೆ ತನಿಖೆ ಮಾಡುವಂತೆ ಮಹಿಳಾ ಆಯೋಗ ಸೂಚಿಸಿದೆ. ಬಲವಂತವಾಗಿ ಹಾಗೂ ಅಪಾಯಕಾರಿ ರೀತಿಯಲ್ಲಿ ಸಂಪ್ರದಾಯ ಆಚರಿಸಲಾಗಿದೆ. ಈ ಸಂಪ್ರದಾಯ ಕೇರಳದಲ್ಲಿ ಇಲ್ಲ. ಕೆಲವರು ಸೃಷ್ಟಿಸಿದ ಸಂಪ್ರದಾಯವಾಗಿದೆ. ಈ ರೀತಿ ವಧುವನ್ನು ಹಿಂಸಿಸುವ ಸಂಪ್ರದಾಯಕ್ಕೆ ಅವಕಾಶ ನೀಡುವುದಿಲ್ಲ ಎಂದು ಮಹಿಳಾ ಆಯೋಗ ಹೇಳಿದೆ.