ಹೆಣ್ಣು ಮಕ್ಕಳಿಗೆ ಪ್ರಿಯಾಂಕಾ ಚೋಪ್ರಾ ಹೇಳಿದ 12 ಪಾಠಗಳು

By Suvarna News  |  First Published Apr 8, 2022, 6:23 PM IST

ಬಾಲಿವುಡ್‌ ನಟಿ (Bollywood Actress) ಹಾಗೂ ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ (Priyanka Chopra) ಪ್ರಸ್ತುತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮಹಿಳೆ (Women). ಕಠಿಣ ಸಮಸ್ಯೆಗಳನ್ನು ಎದುರಿಸಿ ಜೀವನ (Life)ದಲ್ಲಿ ಯಶಸ್ವಿಯಾಗಿರುವ ಪ್ರಿಯಾಂಕ ಚೋಪ್ರಾ, ಮಹಿಳೆಯದ ಸಾಧನೆಗೆ ಪ್ರೇರಕವಾಗುವ ಕೆಲವೊಂದು ಪಾಠಗಳನ್ನು ಹೇಳಿಕೊಟ್ಟಿದ್ದಾರೆ. ಅವು ಯಾವುವೆಲ್ಲಾ ?


ಬಾಲಿವುಡ್‌ ನಟಿ (Bollywood Actress) ಹಾಗೂ ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ Priyanka Chopra). ತಮಿಳು ಚಿತ್ರವೊಂದರ ಮೂಲಕ ನಟನೆಯನ್ನು ಆರಂಭಿಸಿದ ಪ್ರಿಯಾಂಕ ಚೋಪ್ರಾ ಬಳಿಕ ಹಿಂದಿ ಸಿನಿಮಾಗಳಲ್ಲಿ ನಟಿಸಿ, ಮಾಡೆಲ್ ಆಗಿ  ವಿಶ್ವ ಸುಂದರಿ ಪಟ್ಟವನ್ನೂ ಪಡೆದುಕೊಂಡರು. ಭಾರತ ಸರ್ಕಾರದಿಂದ ನಾಲ್ಕನೇ ಅತ್ಯುನ್ನತ ಪದ್ಮಶ್ರೀ, ಪ್ರಶಸ್ತಿಯನ್ನು ಪಡೆದುಕೊಂಡಿರುವ ಹೆಗ್ಗಳಿಕೆಯೂ ಅವರದು. ಸದ್ಯ ಪ್ರಿಯಾಂಕಾ ಚೋಪ್ರಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಯನ್ನು ಪಡೆದಿದ್ದಾರೆ. ನಟಿ, ಹಾಡುಗಾರ್ತಿ, ಲೇಖಕಿಯಾಗಿ ಗುರುತಿಸಿಕೊಂಡಿದ್ದಾರೆ. 

ಆದರೆ ಪಿಗ್ಗಿಯ ಸಾಧನೆಯ ಹಾದಿ ಸುಲಭದ್ದಾಗಿರಲ್ಲಿಲ್ಲ. ಪ್ರಿಯಾಂಕ ಚೋಪ್ರಾ ತಮ್ಮ ಚರ್ಮದ ಬಣ್ಣಕ್ಕಾಗಿ ಟೀಕೆಯನ್ನು ಎದುರಿಸಿದ್ದರು. ಸ್ಕೂಲ್‌ಗೆ ಹೋಗುತ್ತಿದ್ದ ಸಂದರ್ಭ ಟೀಕೆಗೆ ಬೆದರಿ ಬಾತ್‌ರೂಮ್‌ನಲ್ಲಿ ತಮ್ಮ ಲಂಚ್‌ಬಾಕ್ಸ್ ತೆರೆದು ಊಟ ಮಾಡಿದ್ದರು. ಈ ಎಲ್ಲಾ ಕಠಿಣ ಹಂತಗಳು, ಟೀಕೆ-ಅವಮಾನಗಳನ್ನು ದಾಟಿ ಪ್ರಿಯಾಂಕ ಛೋಪ್ರಾ ಅಂತಾರಾಷ್ಟ್ತೀಯ ಪ್ರತಿಭೆಯಾಗಿ ಬೆಳೆದಿದ್ದಾರೆ. ಮಹಿಳೆಯರ (Women)) ಸಾಧನೆಗೆ ಪ್ರೇರಕವಾಗುವ ಕೆಲವೊಂದು ಪಾಠಗಳನ್ನು ಪ್ರಿಯಾಂಕ ಹೇಳಿಕೊಟ್ಟಿದ್ದಾರೆ.

Tap to resize

Latest Videos

ಮೊದಲು ನಿಮ್ಮನ್ನು ನೀವು ಗುರುತಿಸಿಕೊಳ್ಳಿ
ಸಾಧನೆ ಮಾಡಲು ಅತೀ ಮುಖ್ಯವಾದುದು ನಮ್ಮನ್ನು ನಾವು ಯಾರೆಂದು ಗುರುತಿಸಿಕೊಳ್ಳುವುದು. ನಮ್ಮ ನಿಜವಾದ ಪ್ರತಿಭೆಯೇನು, ನಾವೇನು ಮಾಡಬಲ್ಲೆವು ಎಂಬುದನ್ನು ಅರಿತುಕೊಳ್ಳುವುದು. ಈ ಪ್ರಪಂಚದಲ್ಲಿ ನಿಮ್ಮಂತೆ ನೀವು ಒಬ್ಬರೇ ಇದ್ದೀರಿ. ಎಷ್ಟೋ ಬಾರಿ ನಾವು ಬಿಯಾಂಡ್ ಬಾಕ್ಸ್ ಯೋಚಿಸಲು ಇಷ್ಟಪಡುವುದಿಲ್ಲ. ನಮ್ಮಿಂದ ಇದು ಸಾಧ್ಯವೇ ಎಂದು ಯೋಚಿಸಲು ಸಹ ಹೋಗುವುದಿಲ್ಲ. ಕಂಫರ್ಟ್‌ ಝೋನ್‌ನಿಂದ ಹೊರಬಂದು ಬದಲಾವಣೆ ಮಾಡಲು ನಾವು ಭಯಪಡುತ್ತೇವೆ. ಈ ಭಯವೇ ಹಲವಾರು ಬಾರಿ ನಮ್ಮ ಸಾಧನೆಗೆ ಅಡ್ಡಿಯಾಗುತ್ತದೆ. ನನ್ನಿಂದ ಏನೂ ಸಾಧ್ಯವಿಲ್ಲ ಎಂಬುದನ್ನು ಬಿಟ್ಟುಬಿಡಿ. ಜೀವನದಲ್ಲಿ ಬದಲಾವಣೆಯನ್ನು ತರಲು ನಂಗೆ ವಯಸ್ಸಾಯಿತು, ಆ ಬಗ್ಗೆ ಅನುಭವವಿಲ್ಲ ಎಂಬುದು ಯಾವುದೂ ಅಡ್ಡಿಯಾಗುವುದಿಲ್ಲ ಎಂದು ಪಿಗ್ಗಿ ಹೇಳುತ್ತಾರೆ. 

ಮೊಮ್ಮಗು ನೋಡುವ ತವಕದಲ್ಲಿ ಮಧು ಚೋಪ್ರಾ; ಮಗಳ ಜೊತೆ ಭಾರತಕ್ಕೆ ಬರ್ತಾರಾ ಪ್ರಿಯಾಂಕಾ?

ನಿಮ್ಮ ಕನಸುಗಳನ್ನು ಸಾಕಾರಗೊಳಿಸಿ
ಯಾವುದೇ ಕನಸು ಕಾಣುವಾಗಲೂ ಆ ಕನಸುಗಳನ್ನು ಸಾಕಾರಗೊಳಿಸಲು ನಿರಂತರವಾಗಿ ಪ್ರಯತ್ನಿಸಿ. ಸಾಧನೆ ಮಾಡಲು ಹೊರಟಾಗ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಅವುಗಳನ್ನು ಎದುರಿಸಿ ಮುಂದುವರಿಯಿರಿ. ನಿಮ್ಮ ಕನಸುಗಳಿಗೆ ರೆಕ್ಕೆ ಕೊಡಿ. ಭಯಭೀತರಾಗದೆ ನಂಗೇನು ಬೇಕು, ನಾನೇನು ಆಗಬೇಕು ಎಂಬುದರ ಬೆನ್ನು ಬೀಳಿ. 

ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ
ಜೀವನದಲ್ಲಿ ಬರುವ ಅವಕಾಶಗಳು ತುಂಬಾ ಮುಖ್ಯ. ಯಾವಾಗಲೂ ನಿಮ್ಮ ಜೀವನದಲ್ಲಿ ಅನಿರೀಕ್ಷಿತವಾಗಿ ಬರಯುವ ಅವಕಾಶಗಳನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಿ. ಮುಖ್ಯವಾಗಿ ಅವಕಾಶಗಳನ್ನು ಗುರುತಿಸಿಕೊಳ್ಳುವುದು ತುಂಬಾ ಮುಖ್ಯ. ಅವಕಾಶಗಳು ತುಂಬಾ ಸಂದಿಗ್ಧ ಪರಿಸ್ಥಿತಿಯಲ್ಲಿ ನಿಮ್ಮ ಮುಂದೆ ಇರುತ್ತವೆ. ಅವು ಕೈ ತಪ್ಪದಂತೆ ಎಚ್ಚರಿಕೆ ವಹಿಸಿ. ಅವಕಾಶಗಳನ್ನು ಸಂಪೂರ್ಣ ಸದುಪಯೋಗಪಡಿಸಿಕೊಳ್ಳಿ ನಿಮ್ಮ 100 ಪರ್ಸೆಂಟ್‌ ಶ್ರಮವನ್ನು ಅದಕ್ಕೆ ನೀಡಿ

ಜೀವನದಲ್ಲಿ ಅತಿ ಆಸೆಪಡಿ
ಜೀವನದಲ್ಲಿ ಎಲ್ಲರೂ ಎಲ್ಲವೂ ಬೇಕೆಂದು ಬಯಸುತ್ತಾರೆ. ಹಾಗೆಯೇ ಜೀವನದಲ್ಲಿ ಎಲ್ಲವನ್ನೂ ಗಳಿಸಲು ಪ್ರಯತ್ನಿಸಿ. ಎಲ್ಲಿಯವರೆಗೆ ನಾವು ತಪ್ಪು ಮಾಡುತ್ತಿಲ್ಲವೋ, ಯಾರಿಗೂ ತೊಂದರೆ ಪಡುತ್ತಿಲ್ಲವೋ ಅಲ್ಲಿಯವರೆಗೆ ನಾವು ಅತಿಯಾಸೆ ಪಡುವುದು ತಪ್ಪಲ್ಲ. ಅತಿಯಾದ ಆಸೆ ನಮ್ಮನ್ನು ಇನ್ನಷ್ಟು ಸಾಧನೆ ಮಾಡಲು ಪ್ರೇರೇಪಿಸುತ್ತದೆ. ಯಾರಾದರೂ ನನ್ನಿಂದ ಅದೆಲ್ಲವೂ ಸಾಧ್ಯವಾಗುವುದಿಲ್ಲ ಎಂದು ಹೇಳುವುದು ನನಗೆ ಇಷ್ಟವಾಗುವುದಿಲ್ಲ. ನಾವು ಪ್ರಯತ್ನಪಟ್ಟರೆ ಎಲ್ಲವೂ ಸಾಧ್ಯವಾಗುತ್ತದೆ ಎಂದು ಪ್ರಿಯಾಂಕ ಹೇಳುತ್ತಾರೆ.

ಕರ್ನಾಟಕದ ವ್ಯಕ್ತಿಗೆ ತನ್ನ ದುಬಾರಿ ಕಾರನ್ನ ಮಾರಿದ ಪ್ರಿಯಾಂಕಾ ಚೋಪ್ರಾ

ಕಾಂಪ್ರಮೈಸ್ ಆಗಬೇಡಿ
ಜೀವನದಲ್ಲಿ ಯಾವುದೂ ಆಗುದಿಲ್ಲವೆಂದು ಕಾಂಪ್ರಮೈಸ್ ಆಗಬೇಡಿ. ನಿರಂತರವಾಗಿ ಪ್ರಯತ್ನ ಪಡುತ್ತಲೇ ಇರಿ. ನೀವು ಯಾರು, ನಿಮ್ಮಿಂದ ಏನು ಸಾಧ್ಯ ಎಂಬುದನ್ನು ಮತ್ತೊಬ್ಬರು ನಿರ್ಣಯಿಸಲು ಬಿಡಬೇಡಿ. ನಿಮ್ಮ ಗುರಿಯನ್ನು ಸಾಧಿಸಲು ನೀವೇ ನಿರಂತರವಾಗಿ ಪ್ರಯತ್ನ ಪಡಬೇಕು. ನಿಮಗಾಗಿ ಅದನ್ನು ಮತ್ಯಾರೋ ಮಾಡುವುದಿಲ್ಲ. 

ತಪ್ಪುಗಳಿಂದ ಪಾಠ ಕಲಿಯಿರಿ
ಸೋಲುವುದು ಯಾರಿಗೂ ಇಷ್ಟವಿರುವುದಿಲ್ಲ. ಆದರೆ ಜೀವನದಲ್ಲಿ ಪ್ರತಿಯೊಬ್ಬರೂ ಒಂದೊಂದು ಹಂತದಲ್ಲಿ ಸೋಲುತ್ತಾರೆ. ಸೋಲುವುದು ತಪ್ಪೇನಲ್ಲ. ಆದರೆ ಇಂಥಾ ಸೋಲಿನಿಂದ ಸರಿಯಾದ ರೀತಿಯಲ್ಲಿ ಪಾಠವನ್ನು ಕಲಿಯುವುದು ಮುಖ್ಯ. ಸೋತಾ ಕೂಡಲೇ ಅಲ್ಲಿಗೆ ಎಲ್ಲವೂ ಮುಗಿಯುವುದಿಲ್ಲ. ಅಲ್ಲಿಂದ ನಂತರ ನೀವೇನು ಮಾಡುತ್ತೀರಿ ಎಂಬುದು ನಿಮ್ಮ ಯಶಸ್ಸನ್ನು ನಿರ್ಧರಿಸುತ್ತದೆ. ಸೋತಾಗ ಅಳುವುದನ್ನು ಬಿಟ್ಟು ಆ ತಪ್ಪುಗಳಿಂದ ಪಾಠಗಳನ್ನು ಕಲಿತು ಮುಂದೆ ಹೋಗಲು ಕಲಿಯಿರಿ. ಸೋಲಿನ ಕಹಿ ರುಚಿಯ ಅನುಭವವಾಗದಿದ್ದರೆ, ನಿಮಗೆ ಯಶಸ್ಸೆಂಬ ಸಿಹಿಯ ರುಚಿ ಸಿಗುವುದು ಅಸಾಧ್ಯ.+

ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳಿ
ಜೀವನದಲ್ಲಿ ಯಾವಾಗಲೂ ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯಬೇಡಿ. ರಿಸ್ಕ್‌ ತೆಗೆದುಕೊಳ್ಳದೆ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಏನಾಗುತ್ತದೋ, ಹೀಗೆ ಮಾಡಿದರೆ ಏನಾಗುತ್ತದೋ ಎಂಬ ಭಯವನ್ನು ಬಿಟ್ಟು ಬಿಡಿ. ನಾನು ನಟನೆಯ ಆರಂಭದ ದಿನಗಳಲ್ಲಿ ಅತ್ರಾಜ್‌, ಫ್ಯಾಷನ್ ಸಿನಿಮಾಗಳನ್ನು ಮಾಡಿದಾಗ ಎಲ್ಲರೂ ನನ್ನನ್ನು ಟೀಕಿಸಿದರು. ಇಂಥಾ ಪಾತ್ರಗಳನ್ನು ಮಾಡಿದರೆ ನಿನಗೆ ಮುಂದೆ ಅವಕಾಶಗಳೇ ಸಿಗವುದು ಕಷ್ಟ ಎಂದರು. ಆದರೆ ನಾನು ರಿಸ್ಕ್ ತೆಗೆದುಕೊಳ್ಳಲು ಸಿದ್ಧಳಿದ್ದೆ ಮತ್ತು ಯಶಸ್ಸನ್ನು ಗಳಿಸಿದೆ.

ಸಜ್ಜನರ ಸಂಪರ್ಕದಲ್ಲಿರಿ
 ನಮ್ಮ ಸುತ್ತಮುತ್ತಲಿರುವ ಜನರು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಹೀಗಾಗಿ ನಿಮ್ಮ ಕುಟುಂಬ, ಸಹೋದ್ಯೋಗಿಗಳು, ಫ್ರೆಂಡ್ಸ್ ಬಗ್ಗೆ ತಿಳಿದುಕೊಳ್ಳಿ. ಸರಿಯಾದ ಜನರನ್ನು ನಿಮ್ಮ ಜೀವನದಲ್ಲಿ ಮಾತ್ರ ಆಯ್ಕೆ ಮಾಡಿಕೊಳ್ಳಿ. ಯಾವಾಗಲೂ ನಿಮ್ಮನ್ನು ಬೆಂಬಲಿಸುವ, ಪ್ರೋತ್ಸಾಹಿಸುವ, ಸಾಧನೆಯ ಬಗ್ಗೆ ಒಳ್ಳೆಯ ಮಾತನಾಡುವ ಜನರ ಸಂಪರ್ಕದಲ್ಲಿರಿ.  ಬೆನ್ನ ಹಿಂದೆಯಿಂದ ಮಾತನಾಡುವವರು, ಹೀಗಳೆಯುವವರಿಂದ ದೂರವಿದಿ. ಇವರೇ ನಿಮ್ಮ ಸಾಧನೆಗೆ ಅಡ್ಡಿಯಾಗುತ್ತಾರೆ.

ಯಾವಾಗಲೂ ಎಲ್ಲರಲ್ಲೂ ಖುಷಿಪಡಿಸಲು ಹೋಗಬೇಡಿ
ಸೋಷಿಯಲ್‌ ಮೀಡಿಯಾ ಇತ್ತಿಚಿನ ದಿನಗಳಲ್ಲಿ ವ್ಯಕ್ತಿತ್ವವನ್ನೇ ಅಲ್ಲಾಡಿಸುವ ಮಟ್ಟಿಗೆ ಪ್ರಭಾವಿತವಾಗಿದೆ. ಹೀಗಾಗಿ ಎಂದಿಗೂ ಸೋಷಿಯಲ್ ಮೀಡಿಯಾಗಳ ಕಾಮೆಂಟ್‌ನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ನೀವು ಜೀವನದಲ್ಲಿ ಎಷ್ಟೇ ಸಾಧನೆ ಮಾಡಿದರೂ ನಿಮ್ಮನ್ನು ಹೀಗಳೆಯುವವರಿರುತ್ತಾರೆ. ಇಂಥವರ ಮಾತನ್ನು ಕಡೆಗಣಿಸಿ. ನಿಮ್ಮ ಮಾತುಗಳಿಂದ ನೀವು ಎಲ್ಲರನ್ನೂ ಸಮಾಧಾನಪಡಿಸಬೇಕಾಗಿಲ್ಲ. ಖುಷಿಪಡಿಸಬೇಕಾಗಿಲ್ಲ. 

ಎಲ್ಲಾ ಸಂದರ್ಭಗಳಲ್ಲೂ ಖುಷಿಯಾಗಿ
ಎಂಥಾ ಸಂದರ್ಭದಲ್ಲೂ ಖುಷಿಯಾಗಿರಲು ಕಲಿಯಿರಿ. ಜೀವನದಲ್ಲಿ ಸಮಸ್ಯೆಗಳು ಸಾವಿರಾರು ಬರುತ್ತವೆ. ಇಷ್ಟಕ್ಕೇ ಎಲ್ಲವೂ ಮುಗಿಯಿತು ಎಂದು ಅಂದುಕೊಳ್ಳಬೇಡಿ. ಜೀವನದ ಪ್ರತಿ ಕ್ಷಣವನ್ನೂ ಎಂಜಾಯ್ ಮಾಡುತ್ತಾ ಬದುಕಿ.

ಮಾನವೀಯತೆಯನ್ನು ಉಳಿಸಿಕೊಳ್ಳಿ
ಎಲ್ಲರ ಬಗ್ಗೆಯೂ ದಯೆ ಉಳ್ಳವರಾಗಿ. ಯಾರ ಜೀವನದ ಬಗ್ಗೆಯೂ, ಅವರು ಎದುರಿಸಿರುವ ಸಮಸ್ಯೆಗಳ ಬಗ್ಗೆಯೂ ನಮಗೆ ಗೊತ್ತಿಲ್ಲ. ಹೀಗಾಗಿ ಒಬ್ಬ ವ್ಯಕ್ತಿಯನ್ನು ನೋಡಿದ ತಕ್ಷಣವೇ ಅವರು ಹೀಗೆಯೇ ಎಂದು ನಿರ್ಧರಿಸಲು ಹೋಗಬೇಡಿ. ನಾವು ನಾವೇ ದುರಾದೃಷ್ಟವಂತರು, ನಮಗೇನು ಇಲ್ಲ ಎಂದುಕೊಳ್ಳುತ್ತೇವೆ. ಆದರೆ ನಮಗಿಂತ ದಯನೀಯ ಸ್ಥಿತಿಯಲ್ಲಿ ಅದೆಷ್ಟೋ ಮಂದಿಯಿರುತ್ತಾರೆ. ಹೀಗಾಗಿ ಯಾವತ್ತೂ ಮತ್ತೊಬ್ಬರ ಕಷ್ಟಕ್ಕೆ ನೆರವಾಗುವುದನ್ನು ಮರೆಯಬೇಡಿ. ಹೀಗಾಗಿಯೇ ನಾನು ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಾನೆ. ಗಿವ್ ಬ್ಯಾಕ್‌ ನಿಮ್ಮ ಜೀವನದಲ್ಲಿ ಮುಖ್ಯವಾಗಿರಲಿ.

ನೀವು ಎಲ್ಲಿಂದ ಬಂದಿದ್ದೀರಿ ಎಂಬುದನ್ನು ಮರೆಯದಿರಿ
ಜೀವನದಲ್ಲಿ ಎಷ್ಟು ಎತ್ತರಕ್ಕೇರಿದರೂ ನೀವು ಎಲ್ಲಿಂದ ಬಂದಿದ್ದೀರಿ ಎಂಬುದನ್ನು ಮರೆಯಬೇಡಿ. ನಿಮ್ಮ ಅಚೀವ್‌ಮೆಂಟ್‌ ನಿಮ್ಮ ಬಂದಿರುವ ದಾರಿಯನ್ನೇ ಮರೆಯುವಂತೆ ಮಾಡದಿರಲಿ. ನಿಮ್ಮ ಜೀವನದಲ್ಲಿ ಅನುಭವಿಸಿದ ಖುಷಿ, ದುಃಖ, ಕಷ್ಟದ ಸಮಯಗಳೇ ನಿಮ್ಮನ್ನು ರೂಪಿಸುತ್ತವೆ. ನೀವು ಇಂದು ಏನಾಗಿದ್ದೀರೋ ಅದಕ್ಕೆಲ್ಲಾ ನೀವು ಎಲ್ಲಿಂದ ಬಂದಿದ್ದೀರಿ ಎಂಬುದು ಕಾರಣವಾಗಿದೆ. ಹೀಗಾಗಿ ನೀವು ಬಂದಿರುವ ದಾರಿ ಮನಸ್ಸಿನಿಂದ ಮರೆಯಾಗದಿರಲಿ ಎಂದು ಪ್ರಿಯಾಂಕ ಚೋಪ್ರಾ ಹೇಳುತ್ತಾರೆ.

click me!